ಕನ್ನಡ ಸುದ್ದಿ  /  Nation And-world  /  India News Indias First Underground Railway Station In West Bengal Teesta Bazar Connects Sikkim Sivok Rangpo Project Kub

Indian Railways: ಭಾರತದ ನೆಲದೊಳಗಿನ ಮೊದಲ ರೈಲ್ವೆ ನಿಲ್ದಾಣ, ಎಲ್ಲಿದೆ. ಏನಿದರ ವಿಶೇಷ

Under ground Railway Station ಈಶಾನ್ಯ ಭಾರತದ ಸಿಕ್ಕಿಂಗೆ ರೈಲ್ವೆ ಸಂಪರ್ಕ ಕಲ್ಪಿಸುವ ಸಿವೋಕ್‌ ರಾಂಗ್‌ ಪೋ ರೈಲು ಮಾರ್ಗ ಯೋಜನೆಯಡಿ ಪಶ್ಚಿಮ ಬಂಗಾಲದ ತೀಸ್ತಾ ಬಜಾರ್‌ನಲ್ಲಿ ದೇಶದ ಮೊದಲ ರೈಲ್ವೆ ನೆಲದೊಳಗಿನ ರೈಲ್ವೆ ನಿಲ್ದಾಣ ಸಿದ್ದವಾಗುತ್ತಿದೆ.

ತೀಸ್ತಾ ಬಜಾರ್‌ನಲ್ಲಿ ಸಿದ್ದವಾಗುತ್ತಿರುವ ನೆಲದೊಳಗಿನ ರೈಲ್ವೆ ನಿಲ್ದಾಣ,
ತೀಸ್ತಾ ಬಜಾರ್‌ನಲ್ಲಿ ಸಿದ್ದವಾಗುತ್ತಿರುವ ನೆಲದೊಳಗಿನ ರೈಲ್ವೆ ನಿಲ್ದಾಣ,

ಭಾರತೀಯ ರೈಲ್ವೆ ಶತಮಾನಕ್ಕೂ ಮಿಗಿಲಾಗಿ ಇತಿಹಾಸ ಇರುವ ಜನ ಸಂಪರ್ಕ ಮಾರ್ಗ. ಭಾರತದಲ್ಲಿ ರೈಲ್ವೆ ಸೇವೆ ಇಲ್ಲದೇ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನರ ಅವಲಂಬನೆ. ಈಗ ರೈಲ್ವೆ ಕೂಡ ಬದಲಾಗಿದೆ. ಭಾರತದ ಬಹುತೇಕ ಕಡೆ ಡಬಲ್‌ ಟ್ರಾಕ್‌. ವಿದ್ಯುತ್‌ ಮಾರ್ಗಗಳು ರೂಪುಗೊಂಡಿವೆ. ಹೊಸ ಹೊಸ ರೀತಿಯ ರೈಲುಗಳು ಕೂಡ ಸಂಚರಿಸುತ್ತಿವೆ. ಇದರ ಭಾಗವಾಗಿಯೇ ಭಾರತೀಯ ರೈಲ್ವೆ ನೆಲದೊಳಗಿನ ರೈಲ್ವೆ ನಿಲ್ದಾಣವೊಂದನ್ನು(underground railway station) ಭಾರತದಲ್ಲಿ ನಿರ್ಮಿಸುತ್ತಿದೆ. ಪಶ್ಚಿಮ ಬಂಗಾಲ ಹಾಗೂ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ಟೀಸ್ತಾ ಬಜಾರ್‌ ರೈಲ್ವೆ ನಿಲ್ದಾಣ ಸಂಪೂರ್ಣ ನೆಲಗೊಳದಿನ ನಿಲ್ದಾಣ ಎನ್ನುವ ಹೆಸರು ಪಡೆದಿದೆ.

ಸಿವೋಕ್‌ ರಾಂಗ್‌ ಪೋ ರೈಲು ಮಾರ್ಗ ಯೋಜನೆಯಡಿ(Sivok-Rangpo railway project) ನಡುವೆ ಈ ವಿಶಿಷ್ಟ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ. ಈಗಾಗಲೇ ನಿಲ್ದಾಣದ ಬಹುತೇಕ ಕಾರ್ಯ ಮುಗಿದಿದ್ದು, ಬಳಕೆಗೆ ಸಮರ್ಪಿಸಲು ಭಾರತೀಯ ರೈಲ್ವೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ಪಶ್ಚಿಮ ಬಂಗಾಲದ ಡಾರ್ಜಲಿಂಗ್‌ ಹಾಗೂ ಸಿಕ್ಕಿಂನ ಗ್ಯಾಂಗ್ಟಕ್‌ಗೆ ಸಂಪರ್ಕ ಕಲ್ಪಿಸುವ ಸಿವೋಕ್‌ ರಾಂಗ್‌ ಪೋ ರೈಲು ಮಾರ್ಗದ ಬಹುಪಾಲು ಸುರಂಗಗಳಿಂದಲೇ ಕೂಡಿದೆ. ದೇಶದಲ್ಲಿಯೇ ಇಷ್ಟು ಉದ್ದನೆಯ ಸುರಂಗ ಮಾರ್ಗ ಹಾಗೂ ಅದೇ ಸುರಂಗದೊಳಗೆ ಬರುವ ರೈಲ್ವೆ ನಿಲ್ದಾಣ ನಿರ್ಮಿಸುತ್ತಿರುವುದು ಇದೇ ಮೊದಲು.

ಸಪ್ತ ರಾಜ್ಯಗಳು ಅಥವಾ ಈಶಾನ್ಯ ರಾಜ್ಯಗಳು ಎಂದು ಕರೆಯಿಸಿಕೊಳ್ಳುವ ಎಲ್ಲಾ ಕಡೆಯೂ ರೈಲ್ವೆ ಮಾರ್ಗವಿದೆ. ಆದರೆ ಸಿಕ್ಕಿಂನಲ್ಲಿ ಮಾತ್ರ ರೈಲ್ವೆ ಮಾರ್ಗ ಇರಲಿಲ್ಲ. ಈ ರಾಜ್ಯಕ್ಕೂ ರೈಲ್ವೆ ಮಾರ್ಗ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಒಂದೂವರೆ ದಶಕದ ಹಿಂದೆಯೇ ಯೋಜನೆ ರೂಪಿಸಿ ಚಾಲನೆ ನೀಡಲಾಗಿತ್ತು. ಆದರೆ ಈ 44.96‌ ಕಿ.ಮಿ. ಸುರಂಗ ಮಾರ್ಗ, ಸೇತುವೆಗಳಿಂದಲೇ ಕೂಡಿದ ಮಾರ್ಗವಾಗಿತ್ತು. ಇದನ್ನು ರೂಪಿಸಿರುವುದು ದೊಡ್ಡ ಸವಾಲೇ ಆಗಿತ್ತು. 44.96 ಕಿ.ಮಿ ಮಾರ್ಗದಲ್ಲಿ 38.65 ಕಿ.ಮಿ. (ಶೇ.86) ಸಂಪೂರ್ಣ ಸುರಂಗ , 2.24 ಕಿ.ಮಿ (ಶೇ.5) ಸೇತುವೆಗಳು, 4.79 ಕಿ.ಮಿ (ಶೇ. 9) ಸ್ಟೇಷನ್‌ ಯಾರ್ಡ್‌ಗಳಿವೆ.

ಭಾರತದಲ್ಲೇ ಇಷ್ಟು ದೊಡ್ಡದಾದ ರೈಲ್ವೆ ಸುರಂಗ ಮಾರ್ಗವಿದು. ಇದು ರೂಪಿಸುವುದು ಸವಾಲಿನ ಕೆಲವೇ ಆಗಿತ್ತು. ಭಾರತದ ಎಂಜಿನಿಯರ್‌ಗಳ ಕೌಶಲ್ಯಕ್ಕೆ ಇದು ಸಾಕ್ಷಿ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ಈ ರೈಲ್ವೆ ನಿಲ್ದಾಣ ರೂಪಿಸಲಾಗಿದೆ. ಎನ್‌ಎಟಿಎಂ (New Austrian Tunnelling Method) ತಂತ್ರಜ್ಞಾನ ಇಲ್ಲಿ ಬಳಕೆಯಾಗಿರುವುದು ವಿಶೇಷ. ಅಂತರಾಷ್ಟ್ರೀಯ ತಜ್ಞರ ಸಲಹೆಗಳನ್ನು ಇದಕ್ಕಾಗಿ ಪಡೆಯಲಾಗಿದೆ. ಭಾರೀ ಎಚ್ಚರಿಕೆ ವಹಿಸಿ ಗುಣಮಟ್ಟದ ಕಾಮಗಾರಿ ನಡೆಸುತ್ತಿರುವುದರಿಂದ ವಿಶ್ವದಲ್ಲಿಯೇ ಗಮನ ಸೆಳೆಯಲಿದೆ ಎಂದು ಮುಖ್ಯ ಯೋಜನಾಧಿಕಾರಿ ಮೊಹಿಂದರ್‌ ಸಿಂಗ್‌ ವಿವರಿಸುತ್ತಾರೆ.

ಅದರಲ್ಲೂ ಟೀಸ್ತಾ ಬಜಾರ್‌ ರೈಲ್ವೆ ನಿಲ್ದಾಣ ನೆಲದೊಳಗೆ ರೂಪಿಸಲಾಗಿದೆ. ಸುರಂಗ ಮಾರ್ಗಗಳಲ್ಲಿ ರೈಲು ಸಂಚರಿಸಲಿದ್ದು ಇಲ್ಲಿಯೇ ನಿಲ್ದಾಣ ಬರಲಿದೆ. ಇಡೀ ಫ್ಲಾಟ್‌ ಫಾರಂನ ಉದ್ದ 620 ಮೀಟರ್‌ ಇದೆ. ಈ ಸುರಂಗ ಮಾರ್ಗ 650 ಮೀಟರ್‌ ಇದೆ. ಸಿವೋಕ್‌ ರಾಂಗ್‌ ಪೋ ರೈಲು ಮಾರ್ಗ ದ ಏಳನೇ ಸುರಂಗ ಮಾರ್ಗದಲ್ಲಿ ಈ ನಿಲ್ದಾಣವಿದೆ. ಪ್ರಯಾಣಿಕರ ಸುರಕ್ಷತೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುರ್ತುಪರಿಸ್ಥಿತಿ ನಿಭಾಯಿಸಲು ಸುರಂಗ ಮಾರ್ಗದಲ್ಲಿ ಎಲ್ಲಾ ವ್ಯವಸ್ಥೆಯಿದೆ ಎನ್ನುವುದು ಅವರ ಅಭಿಪ್ರಾಯ.

ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ರೈಲ್ವೆ ಯೋಜನೆಗಳಿಗೆ ಇನ್ನಿಲ್ಲದ ಒತ್ತು ನೀಡಿದ್ದಾರೆ. ಅದರಲ್ಲೂ ಹಿಂದೆ ಯೋಜಿಸಿ ಜಾರಿಯಾಗದೇ ಉಳಿದಿರುವ ಯೋಜನೆಗಳತ್ತ ಗಮನ ಹರಿಸಿ ಅನುದಾನ ನೀಡುತ್ತಿರುವುದದಿಂದ ಸಿವೋಕ್‌ ರಾಂಗ್‌ ಪೋ ರೈಲು ಮಾರ್ಗ ದಂತ ಮಾರ್ಗವೂ ಸಿದ್ದವಾಗುತ್ತಿದೆ. ರೈಲ್ವೆ ಟ್ರಾಕ್‌ ಅಳವಡಿಕೆಯಾದರೆ ಮಾರ್ಗ ಸಿದ್ದವಾಗಲಿದೆ ಎಂದು ತಿಳಿಸುತ್ತಾರೆ.