Passport Seva 2.0: ಸುಧಾರಿತ ಇ ಪಾಸ್‌ಪೋರ್ಟ್‌ ಶೀಘ್ರ; ಪಾಸ್‌ಪೋರ್ಟ್‌ ಸೇವಾ 2.0ಕ್ಕೆ ಶೀಘ್ರ ಚಾಲನೆ ಎಂದ ವಿದೇಶಾಂಗ ಸಚಿವ ಜೈಶಂಕರ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Passport Seva 2.0: ಸುಧಾರಿತ ಇ ಪಾಸ್‌ಪೋರ್ಟ್‌ ಶೀಘ್ರ; ಪಾಸ್‌ಪೋರ್ಟ್‌ ಸೇವಾ 2.0ಕ್ಕೆ ಶೀಘ್ರ ಚಾಲನೆ ಎಂದ ವಿದೇಶಾಂಗ ಸಚಿವ ಜೈಶಂಕರ್‌

Passport Seva 2.0: ಸುಧಾರಿತ ಇ ಪಾಸ್‌ಪೋರ್ಟ್‌ ಶೀಘ್ರ; ಪಾಸ್‌ಪೋರ್ಟ್‌ ಸೇವಾ 2.0ಕ್ಕೆ ಶೀಘ್ರ ಚಾಲನೆ ಎಂದ ವಿದೇಶಾಂಗ ಸಚಿವ ಜೈಶಂಕರ್‌

Passport Seva 2.0: ಭಾರತವು ಶೀಘ್ರದಲ್ಲೇ ಎರಡನೇ ಹಂತದ ಪಾಸ್‌ಪೋರ್ಟ್‌ ಸೇವಾ (Passport Seva 2.0) ಕಾರ್ಯಕ್ರಮವನ್ನು ಪರಿಚಯಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಶನಿವಾರ ಹೇಳಿದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ (AFP)

ಹೊಚ್ಚ ಹೊಸ ಅಪ್‌ಗ್ರೇಡ್‌ ಮಾಡಿದ ಇ-ಪಾಸ್‌ಪೋರ್ಟ್‌ಗಳನ್ನು ಒದಗಿಸುವ ಪಾಸ್‌ಪೋರ್ಟ್‌ ಸೇವಾ 2.0 (India's Passport Seva 2.0) ಶೀಘ್ರದಲ್ಲೇ ಪರಿಚಯಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (India's Foreign Minister S Jaishankar) ಇಂದು (ಜೂ.24) ಘೋಷಿಸಿದರು.

ಅವರು ಪಾಸ್‌ಪೋರ್ಟ್‌ ಸೇವಾ ದಿವಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದು, ಭಾರತವು ಶೀಘ್ರದಲ್ಲೇ ಎರಡನೇ ಹಂತದ ಪಾಸ್‌ಪೋರ್ಟ್‌ ಸೇವಾ (Passport Seva 2.0) ಕಾರ್ಯಕ್ರಮವನ್ನು ಪರಿಚಯಿಸಲಿದೆ.

ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ 2.0 ಹೊಸ ಮತ್ತು ನವೀಕರಿಸಿದ ಇ-ಪಾಸ್‌ಪೋರ್ಟ್‌ಗಳನ್ನುಒದಗಿಸುವುದನ್ನು ಒಳಗೊಂಡಿರುತ್ತದೆ. ಸಕಾಲಿಕ, ವಿಶ್ವಾಸಾರ್ಹ, ಪಾರದರ್ಶಕ ವ್ಯವಸ್ಥೆಯಲ್ಲಿ ಶೀಘ್ರ ಲಭ್ಯವಾಗಬಹುದಾದ ರೀತಿಯಲ್ಲಿ" ಜನರಿಗೆ ಪಾಸ್‌ಪೋರ್ಟ್‌ಗಳು ಮತ್ತು ಸಂಬಂಧಿತ ಸೇವೆಗಳನ್ನು ಸಮರ್ಥವಾಗಿ ಒದಗಿಸುವ ಶಪಥ ಮಾಡಬೇಕು ಎಂದು ಪಾಸ್‌ಪೋರ್ಟ್‌ ಸೇವಾ ಸಂಬಂಧಿತ ಅಧಿಕಾರಿಗಳಿಗೆ ಅವರು ಕರೆ ನೀಡಿದರು.

ಪಾಸ್‌ಪೋರ್ಟ್‌ ಸೇವೆಗೆ EASE ಚಿಂತನೆಯ ಸ್ಪರ್ಶ

“ನಾವು ಶೀಘ್ರದಲ್ಲೇ ಹೊಸ ಮತ್ತು ನವೀಕರಿಸಿದ ಇ-ಪಾಸ್‌ಪೋರ್ಟ್‌ಗಳನ್ನು ಒಳಗೊಂಡಂತೆ ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್‌ಪಿ) ಆವೃತ್ತಿ 2.0 ಅನ್ನು ಪ್ರಾರಂಭಿಸುತ್ತೇವೆ. ನಾಗರಿಕರಿಗೆ 'ಈಸ್‌ ಆಫ್‌ ಲಿವಿಂಗ್‌ (Ease of Living)' ಅನ್ನು ಹೆಚ್ಚಿಸುವ ಪ್ರಧಾನಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ, ಈ ಉಪಕ್ರಮಗಳು ‘ಈಸ್‌(EASE) ’ ಎಂಬ ಹೊಸ ಮಾದರಿಯನ್ನು ಪರಿಚಯಿಸುತ್ತವೆ.

ಇಲ್ಲಿ ಇ ಎಂದರೆ ಎನ್‌ಹ್ಯಾನ್ಸ್ಡ್‌ ಪಾಸ್‌ಪೋರ್ಟ್‌ ಸರ್ವೀಸಸ್‌ ಟು ಸಿಟಿಜನ್‌ (ನಾಗರಿಕರಿಗೆ ಸುಧಾರಿತ ಪಾಸ್‌ಪೋರ್ಟ್‌ ಸೇವೆ ಒದಗಿಸುವುದು), ಎ ಎಂದರೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಚಾಲಿತ ಸೇವಾ ಪೂರೈಕೆ, ಎಸ್‌- ಸ್ಮೂದರ್‌ ಓವರ್‌ಸೀಸ್‌ ಟ್ರಾವೆಲ್‌ ಯೂಸಿಂಗ್‌ ಚಿಪ್‌ ಎನೇಬಲ್ಡ್‌ ಇ- ಪಾಸ್‌ಪೋರ್ಟ್‌ ಎಂದರೆ ಚಿಪ್‌ ಸಕ್ರಿಯಗೊಳಿಸಿದ ಪಾಸ್‌ಪೋರ್ಟ್‌ ಬಳಸಿಕೊಂಡು ಸರಾಗವಾಗಿ ಸಾಗರೋತ್ತರ ಪ್ರಯಾಣ ಮಾಡುವುದು, ಇನ್ನು ಇ ಎಂದೆ ಎನ್‌ಹ್ಯಾನ್ಸ್ಡ್‌ ಡೇಟಾ ಸೆಕ್ಯುರಿಟಿ" ಎಂದು ಎಸ್‌.ಜೈಶಂಕರ್‌ ಇದೇ ವೇಳೆ ವಿವರಿಸಿದರು.

ಪಾಸ್‌ಪೋರ್ಟ್‌ ಪೂರೈಕೆ 2021 ರಿಂದ ಶೇಕಡಾ 63 ರಷ್ಟು ಏರಿಕೆ

"ನಾಗರಿಕರಿಗೆ ಪಾಸ್‌ಪೋರ್ಟ್ ಮತ್ತು ಸಂಬಂಧಿತ ಸೇವೆಗಳನ್ನು ಸಮಯೋಚಿತವಾಗಿ, ವಿಶ್ವಾಸಾರ್ಹವಾಗಿ, ಸುಲಭವಾಗಿ ಲಭ್ಯವಾಗುವಂತೆ ಪಾರದರ್ಶಕ ಮತ್ತು ದಕ್ಷ ರೀತಿಯಲ್ಲಿ ಒದಗಿಸುವ ನಮ್ಮ ಶಪಥವನ್ನು ಅಪ್‌ಗ್ರೇಡ್‌ ಮಾಡುವುದಕ್ಕೆ ಭಾರತ ಮತ್ತು ವಿದೇಶದಲ್ಲಿರುವ ನಮ್ಮ ಎಲ್ಲಾ ಪಾಸ್‌ಪೋರ್ಟ್ ವಿತರಣಾ ಅಧಿಕಾರಿಗಳಿಗೆ ಕರೆ ನೀಡುತ್ತಿದ್ದೇನೆ " ಎಂದು ಸಚಿವರು ಹೇಳಿದರು.

ಸಚಿವಾಲಯವು 2022 ರಲ್ಲಿ ದಾಖಲೆಯ 13.32 ಮಿಲಿಯನ್ ಪಾಸ್‌ಪೋರ್ಟ್‌ಗಳು ಮತ್ತು ವಿವಿಧ ಸೇವೆಗಳನ್ನು ಪ್ರಕ್ರಿಯೆಗೊಳಿಸಿದೆ. ಇದು 2021 ರಿಂದ ಶೇಕಡಾ 63 ರಷ್ಟು ಏರಿಕೆಯಾಗಿದೆ. ಈ ಕಾರ್ಯಕ್ರಮವು 'ಡಿಜಿಟಲ್ ಇಂಡಿಯಾ' ಗುರಿಗೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ಸಚಿವರು ಹೇಳಿದರು.

ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಂ ಕೊಡುಗೆ ಗಣನೀಯ

"MPassport ಸೇವಾ ಮೊಬೈಲ್ ಆ್ಯಪ್, mPassport ಪೊಲೀಸ್ ಆ್ಯಪ್, ಡಿಜಿಲಾಕರ್‌ನೊಂದಿಗೆ ಪಾಸ್‌ಪೋರ್ಟ್‌ ಸೇವಾ ಪ್ರೋಗ್ರಾಂನ ಏಕೀಕರಣ ಮತ್ತು 'ಎಲ್ಲಿಂದಾದರೂ ಅಪ್ಲೈ ಮಾಡಿ' ಎಂಭ ಯೋಜನೆಯಂತಹ ಮೈಲಿಗಲ್ಲುಗಳೊಂದಿಗೆ ಡಿಜಿಟಲ್ ಇಂಡಿಯಾ ಉಪಕ್ರಮದ ಗುರಿಯತ್ತ ಪಿಎಸ್‌ಪಿ ಗಣನೀಯ ಕೊಡುಗೆ ನೀಡಿದೆ" ಎಂದು ಜೈಶಂಕರ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

“ದೇಶದಲ್ಲಿ 2014 ರ ವೇಳೆ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿದ್ದವು. ಈಗ ಈ ಸಂಖ್ಯೆ 7 ಪಟ್ಟು ಹೆಚ್ಚಾಗಿದ್ದು 523 ಆಗಿದೆ. ಈ ಸಾಧನೆಯ ಗೌರವಾನ್ವಿತ ಪಾಲುದಾರರಾಗಿ ಅಂಚೆ ಇಲಾಖೆ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳ ಪಾತ್ರವನ್ನು ನಾನು ಒಪ್ಪಿಕೊಳ್ಳಲು ಬಯಸುತ್ತೇನೆ”ಎಂದು ಅವರು ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.