Kerala News: ಕೇರಳದಲ್ಲಿ ಏರಿದ ಬಿಸಿಲು, 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌, ಬರಲಿವೆ ಹೀಟ್‌ ಕ್ಲಿನಿಕ್ಸ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala News: ಕೇರಳದಲ್ಲಿ ಏರಿದ ಬಿಸಿಲು, 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌, ಬರಲಿವೆ ಹೀಟ್‌ ಕ್ಲಿನಿಕ್ಸ್‌

Kerala News: ಕೇರಳದಲ್ಲಿ ಏರಿದ ಬಿಸಿಲು, 4 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌, ಬರಲಿವೆ ಹೀಟ್‌ ಕ್ಲಿನಿಕ್ಸ್‌

ಕೇರಳದಲ್ಲಿ ಈಗಾಗಲೇ ಬಿಸಿಲ ದಿನಗಳು ಶುರುವಾಗಿ ಜನ ಜೀವನಕ್ಕೂ ಅಡ್ಡಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲ ಪ್ರಮಾಣ ಹೆಚ್ಚುವ ಮುನ್ಸೂಚನೆಯನ್ನು ನೀಡಲಾಗಿದೆ.

ಕೇರಳದ ಕೆಲವೆಡೆ ಬಿಸಿಲಿನ ಪ್ರಖರತೆ ತೀವ್ರಗೊಂಡಿದೆ.
ಕೇರಳದ ಕೆಲವೆಡೆ ಬಿಸಿಲಿನ ಪ್ರಖರತೆ ತೀವ್ರಗೊಂಡಿದೆ.

ತಿರುವನಂತಪುರಂ: ಕೇರಳದಲ್ಲಿ ಫೆಬ್ರವರಿಯಲ್ಲಿಯೇ ಬಿಸಿಲಿನ ಅಬ್ಬರ ಜೋರಾಗಿದೆ. ಇನ್ನೂ ಚಳಿಗಾಲ ಮುಗಿಯದೇ ಕೆಲವು ಕಡೆ ಹಿಮದ ವಾತಾವರಣವಿದ್ದರೂ ದೇವರನಾಡು ಕೇರಳ ಆಗಲೇ ಭಾರೀ ಬಿಸಿಲನ್ನು ಅನುಭವಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಬಿಸಿಲಿನ ಪ್ರಭಾವ ಹೆಚ್ಚಾಗಿರುವ ನಾಲ್ಕು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಿಸಿದೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದೆ. ಆರೋಗ್ಯ ಇಲಾಖೆಯೂ ಹೀಟ್‌ ಕ್ಲಿನಿಕ್‌ಗಳನ್ನು ಆರಂಭಿಸಲು ಯೋಜಿಸುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಏನು ಕಾರಣ

ಕೇರಳ ಸಮುದ್ರ ತೀರಕ್ಕೆ ಹೊಂದಿಕೊಂಡ ರಾಜ್ಯ. ಬಹುತೇಕ ಜಿಲ್ಲೆಗಳಿಗೆ ಸಮುದ್ರದ ನಂಟಿದೆ. ಮತ್ತೊಂದು ಕಡೆ ಈ ಬಾರಿಯ ಮಳೆಗಾಲದಲ್ಲೂ ನಿರೀಕ್ಷೆಇತ ಮಳೆ ಕೇರಳದಲ್ಲಿ ಬೀಳಿಲಿಲ್ಲ. ಹವಾಮಾನ ವೈಪರಿತ್ಯದ ಕಾರಣದಿಂದ ಸಾಕಷ್ಟು ವ್ಯತ್ಯಯಗಳು ಆಗಿವೆ. ಈಗ ಅದರ ಪರಿಣಾಮ ಬೇಸಿಗೆಯಲ್ಲಿ ಆಗುತ್ತಿದೆ. ಆಗಲೇ ಕೇರಳ ರಾಜ್ಯ ವಿಪತ್ತು ನಿರ್ವ ಹಣಾ ಘಟಕವು(KSDMA) ಕಣ್ಣೂರು, ಅಲಪುಜ, ಕೊಟ್ಟಾಯಂ ಹಾಗೂ ಕೋಯಿಕ್ಕೋಡ್‌ ಜಿಲ್ಲೆಗಳಲ್ಲಿ ಭಾರೀ ಬಿಸಿಲಿನ ಕಾರಣಕ್ಕೆ ಯಲ್ಲೋ ಅಲರ್ಟ್‌ ಕೂಡ ಘೋಷಿಸಿದೆ. ಜನ ಮಧ್ಯಾಹ್ನದ ವೇಳೆ ಅನಗತ್ಯವಾಗಿ ಸಂಚಾರ ಮಾಡಬಾರದು. ಅನಿವಾರ್ಯವಿದ್ದರೆ. ತಲೆ, ದೇಹದ ಭಾಗಗಳು ಬಿಸಿಲಿಗೆ ತೆರೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

3 ರಿಂದ 4 ಡಿಗ್ರಿ ಏರಿಕೆ

ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಬಿಸಿಲಿನ ವಾತಾವರಣ ಕಂಡು ಬಂದಿದೆ. ಆದರೆ ಈ ಬಾರಿ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಫೆಬ್ರವರಿಯಲ್ಲಿಯೇ ತಾಪಮಾನ 38 ಡಿಗ್ರಿ ಆಸುಪಾಸಿನಲ್ಲಿದೆ. ಬೇಸಿಗೆ ಹೊತ್ತಿಗೆ ಇನ್ನೂ ಹೆಚ್ಚಬಹುದು. ಸಾಮಾನ್ಯ ತಾಪಮಾನಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್‌, ಅಲಪುಜ, ಕೋಯಿಕ್ಕೋಡ್‌ನಲ್ಲಿ 36 ಡಿಗ್ರಿ ಸೆಲ್ಸಿಯಸ್‌ ದಾಟಿದೆ ಎನ್ನುವುದು ನಿರ್ವಹಣಾ ಘಟಕದ ಅಧಿಕಾರಿಗಳು ನೀಡುವ ವಿವರಣೆ.

ನಮ್ಮಲ್ಲಿ ಇನ್ನೂ ಚಳಿಗಾಲವೇ ಮುಗಿದಿಲ್ಲ. ಬೆಳಿಗ್ಗೆ ಹೊತ್ತಿನಲ್ಲಿ ಎಲ್ಲೆಡೆ ಚಳಿಯ ವಾತಾವರಣವಿರುತ್ತದೆ. ಮಧ್ಯಾಹ್ನದ ಹೊತ್ತಿಗೆ ರಣಬಿಸಿಲು ಕಾಣಿಸುತ್ತಿದೆ. ಈ ಕಾರಣದಿಂದಲೇ ಜನರಿಗೆ ಈಗಿನಿಂದಲೇ ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಮಕ್ಕಳು. ಹಿರಿಯರ ಮೇಲೆ ನಿಗಾ ಇಡುವಂತೆ ತಿಳಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಹೀಟ್‌ ಕ್ಲಿನಿಕ್‌ಗೆ ತಯಾರಿ

ಕೇರಳದಲ್ಲಿ ಈಗಲೇ ಬಿಸಿಲಿನ ಝಳ ಹೆಚ್ಚಿನ ಜನರು ಚರ್ಮರೋಗ ಎದುರಿಸುವ ಮುನ್ನವೇ ಅತಿ ಬಿಸಿ ಇರುವ ಜಿಲ್ಲೆಗಳಲ್ಲಿ ಹೀಟ್‌ ಕ್ಲಿನಿಕ್‌ಗಳನ್ನು ಆರಂಭಿಸಲು ವಿಪತ್ತು ನಿರ್ವಹಣಾ ಘಟಕವು ಶಿಫಾರಸ್ಸು ಮಾಡಿದೆ. ಇದಕ್ಕಾಗಿಯೇ ಆರೋಗ್ಯ ಇಲಾಖೆ ಕೂಡ ಯೋಜನೆ ರೂಪಿಸುತ್ತಿದ್ದು, ಮುಂದಿನ ವಾರದ ಹೊತ್ತಿಗೆ ಹೀಟ್‌ ಕ್ಲಿನಿಕ್‌ಗಳು ಕೇರಳದಲ್ಲಿ ಆರಂಭಗೊಳ್ಳಲಿವೆ. ಇಲ್ಲಿ ಬಿಸಿಲಿನಿಂದ ಸುಸ್ತಾಗುವವರು, ನಿರ್ಜಲೀಕರಣಗೊಳ್ಳುವವರು. ಚರ್ಮರೋಗ ಇಲ್ಲವೇ ಇತರೆ ಸಮಸ್ಯೆಗೆ ಎದುರಾಗುವವರಿಗೆ ತುರ್ತು ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಕೇರಳ ಈಗಾಗಲೇ ಬಿಸಿಲು ಎದುರಿಸುವ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿಕೊಂಡು ಅದರಡಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.