XPoSat Launch: ಕಪ್ಪುಕುಳಿಗಳ ಅಧ್ಯಯನಕ್ಕೆ ಹೊರಟ ಎಕ್ಸ್‌ಪೋಸ್ಯಾಟ್‌; ಇಸ್ರೋ 2024ರ ಮೊದಲ ಉಪಗ್ರಹ ಉಡಾವಣೆ ಯಶಸ್ವಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Xposat Launch: ಕಪ್ಪುಕುಳಿಗಳ ಅಧ್ಯಯನಕ್ಕೆ ಹೊರಟ ಎಕ್ಸ್‌ಪೋಸ್ಯಾಟ್‌; ಇಸ್ರೋ 2024ರ ಮೊದಲ ಉಪಗ್ರಹ ಉಡಾವಣೆ ಯಶಸ್ವಿ

XPoSat Launch: ಕಪ್ಪುಕುಳಿಗಳ ಅಧ್ಯಯನಕ್ಕೆ ಹೊರಟ ಎಕ್ಸ್‌ಪೋಸ್ಯಾಟ್‌; ಇಸ್ರೋ 2024ರ ಮೊದಲ ಉಪಗ್ರಹ ಉಡಾವಣೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮಹತ್ವಾಕಾಂಕ್ಷೆಯ ಕಪ್ಪು ಕುಳಿಗಳ ಮಾದರಿಯ ಆಕಾಶ ವಸ್ತುಗಳ ಅಧ್ಯಯನಕ್ಕೆ ಸಂಬಂಧಿಸಿದ ಎಕ್ಸ್‌ಪೋಸ್ಯಾಟ್ ಉಡಾವಣೆ ಯಶಸ್ವಿಯಾಗಿದೆ. ಪಿಎಸ್‌ಎಲ್‌ವಿ - ಸಿ58 ಈ ಉಪಗ್ರಹವನ್ನು ಕಕ್ಷೆಗೆ ಹೊತ್ತೊಯ್ದಿದೆ.

ಕಪ್ಪುಕುಳಿಗಳ ಅಧ್ಯಯನ ನಡೆಸುವುದಕ್ಕಾಗಿ ಇಸ್ರೋ ಸಿದ್ಧಪಡಿಸಿದ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಸಿ 58 ಉಡಾವಣೆ ಯಶಸ್ವಿ.
ಕಪ್ಪುಕುಳಿಗಳ ಅಧ್ಯಯನ ನಡೆಸುವುದಕ್ಕಾಗಿ ಇಸ್ರೋ ಸಿದ್ಧಪಡಿಸಿದ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ ಸಿ 58 ಉಡಾವಣೆ ಯಶಸ್ವಿ.

ಕಪ್ಪು ಕುಳಿಗಳಂತಹ ಆಕಾಶ ವಸ್ತುಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್‌-ರೇ ಪೋಲಾರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್‌ (XPoSat (X-ray Polarimeter Satellite)) ಅನ್ನು ಸೋಮವಾರ (ಜನವರಿ 1) ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಮೊದಲ ಹೆಜ್ಜೆ ಗುರುತು ಮೂಡಿಸಿದೆ.

ಇಸ್ರೋದ ಪಿಎಸ್‌ಎಲ್‌ವಿ ಸಿ 58 ಮಿಷನ್ ಎಕ್ಸ್‌ಪೋಸ್ಯಾಟ್‌ ಉಪಗ್ರಹವನ್ನು ಪೂರ್ವಭಾಗದಲ್ಲಿರುವ ಕೆಳಕಕ್ಷೆಯಲ್ಲಿ ಕೂರಿಸಲಿದೆ. ಎಕ್ಸ್‌ಪೋಸ್ಯಾಟ್ ಅನ್ನು ಕಕ್ಷೆಯಲ್ಲಿ ಕೂರಿಸಿದ ಬಳಿಕ ಪಿಎಸ್‌4 ಹಂತ ಎರಡು ಬಾರಿ ಮರುಚಾಲನೆಗೆ ಒಳಗಾಗುತ್ತದೆ. ಕಕ್ಷೆಯಲ್ಲಿನ ಚಲನೆಯ ವೇಗವನ್ನು 350 ಕಿ.ಮೀ. ವೃತ್ತಾಕಾರಕ್ಕೆ ಒಗ್ಗಿಸಿಕೊಂಡು 3 ಅಕ್ಷದ ಸ್ಥಿರ ಸ್ಥಿತಿಯಲ್ಲಿ ಪ್ರಯೋಗಗಳನ್ನು ನಿರ್ವಹಿಸಲು ಸಜ್ಜಾಗುತ್ತದೆ ಎಂದು ಇಸ್ರೋ ವಿವರಿಸಿದೆ.

ಪಿಎಸ್‌ಎಲ್‌ವಿ ಆರ್ಬಿಟಲ್ ಎಕ್ಸ್‌ಪೆರಿಮೆಂಟಲ್ ಮಾಡ್ಯೂಲ್-3 (ಪಿಒಇಎಂ-3) ಪ್ರಯೋಗವನ್ನು 10 ಗುರುತಿಸಲಾದ ಪೇಲೋಡ್‌ಗಳ ಉದ್ದೇಶವನ್ನು ಪೂರೈಸಲು ಕಾರ್ಯಗತಗೊಳಿಸಲಾಗುತ್ತದೆ. ಇದನ್ನು ಇಸ್ರೋ ಮತ್ತು ಇನ್-ಸ್ಪೇಸ್ ಪೂರೈಸುತ್ತದೆ. ಎಕ್ಸ್‌ಪೋಸ್ಯಾಟ್‌ ಎರಡು ವೈಜ್ಞಾನಿಕ ಪೇಲೋಡ್‌ಗಳನ್ನು ಭೂಮಿಯ ಕೆಳಕಕ್ಷೆಗೆ ಕೊಂಡೊಯ್ಯುತ್ತದೆ ಎಂದು ಇಸ್ರೋ ಹೇಳಿದೆ.

ಎರಡು ಪೇಲೋಡ್‌ಗಳ ಪೈಕಿ ಪ್ರಾಥಮಿಕ ಪೇಲೋಡ್ ಪೋಲಿಕ್ಸ್ (POLIX ಅಥವಾ ಎಕ್ಸ್-ಕಿರಣಗಳಲ್ಲಿನ ಪೋಲಾರಿಮೀಟರ್ ಉಪಕರಣ) ಖಗೋಳ ಮೂಲದ 8-30 keV ಫೋಟಾನ್‌ಗಳ ಮಧ್ಯಮ ಎಕ್ಸ್-ರೇ ಶಕ್ತಿಯ ಶ್ರೇಣಿಯಲ್ಲಿ ಧ್ರುವೀಯ ನಿಯತಾಂಕಗಳನ್ನು (ಪದರ ಮತ್ತು ಧ್ರುವೀಕರಣದ ಕೋನ) ಅಳೆಯುತ್ತದೆ. ಇನ್ನೊಂದು ಪೇಲೋಡ್‌ ಎಕ್ಸ್‌ಸ್ಪೆಕ್ಟ್ (XSPECT ಅಥವಾ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) 0.8-15 ಕೆವಿ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ ಎಂದು ಇಸ್ರೋ ವಿವರಿಸಿದೆ.

ಎಕ್ಸ್‌ಪೋಸ್ಯಾಟ್‌ ಉಪಗ್ರಹ ಯೋಜನೆಯ ಉದ್ದೇಶಗಳಿವು- 6 ಮುಖ್ಯ ಅಂಶಗಳು

1. ಸುಮಾರು 50 ಸಂಭಾವ್ಯ ಕಾಸ್ಮಿಕ್ ಮೂಲಗಳಿಂದ ಹೊರಹೊಮ್ಮುವ ಶಕ್ತಿ ಬ್ಯಾಂಡ್ 8-30keV ನಲ್ಲಿ X- ಕಿರಣಗಳ ಧ್ರುವೀಕರಣವನ್ನು ಪೊಲಿಕ್ಸ್ (POLIX) ಪೇಲೋಡ್ ಮೂಲಕ ಥಾಮ್ಸನ್ ಸ್ಕ್ಯಾಟರಿಂಗ್ ಮೂಲಕ ಅಳೆಯುವುದು

2. ಪೇಲೋಡ್‌ ಎಕ್ಸ್‌ಸ್ಪೆಕ್ಟ್ (XSPECT ಅಥವಾ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) 0.8-15 ಕೆವಿ ಶಕ್ತಿಯ ವ್ಯಾಪ್ತಿಯಲ್ಲಿ ಸ್ಪೆಕ್ಟ್ರೋಸ್ಕೋಪಿಕ್ ಮಾಹಿತಿಯನ್ನು ನೀಡುತ್ತದೆ.

3. ಕಾಸ್ಮಿಕ್ ಮೂಲಗಳಿಂದ ಎಕ್ಸ್-ರೇ ಹೊರಸೂಸುವಿಕೆಯ ಧ್ರುವೀಕರಣ ಮತ್ತು ಸ್ಪೆಕ್ಟ್ರೋಸ್ಕೋಪಿಕ್ ಮಾಪನಗಳನ್ನು ಸಾಮಾನ್ಯ ಶಕ್ತಿ ಬ್ಯಾಂಡ್‌ನಲ್ಲಿ ಕೈಗೊಳ್ಳುವ ಕೆಲಸವನ್ನು ಕ್ರಮವಾಗಿ ಪೊಲಿಕ್ಸ್‌ ಮತ್ತು ಎಕ್ಸ್‌ಪೆಕ್ಟ್‌ ಪೇಲೋಡ್‌ಗಳು ಮಾಡುತ್ತವೆ.

4. ಕಾಂತಕ್ಷೇತ್ರದ ವಿತರಣೆ, ಜ್ಯಾಮಿತೀಯ ವಿವರಗಳು, ದೃಷ್ಟಿ ರೇಖೆಗೆ ಸಂಬಂಧಿಸಿದ ಜೋಡಣೆ, ಧ್ರುವೀಕರಣದ ಮಟ್ಟ ಮತ್ತು ಅದರ ಕೋನವನ್ನು ಅಳೆಯುವ ಮೂಲಕ ಗ್ಯಾಲಕ್ಸಿಯ ಕಾಸ್ಮಿಕ್ ಎಕ್ಸ್-ರೇ ಮೂಲಗಳಲ್ಲಿನ ವೇಗವರ್ಧಕದ ಸ್ವರೂಪವನ್ನು ಅಧ್ಯಯನ ಮಾಡುವ ಉದ್ದೇಶ ಇದರದ್ದು.

5. ನ್ಯೂಟ್ರಾನ್ ನಕ್ಷತ್ರಗಳ ಆಯಸ್ಕಾಂತೀಯ ಕ್ಷೇತ್ರದ ರಚನೆ ಮತ್ತು ರೇಖಾಗಣಿತ, ಎಕ್ಸ್-ರೇ ಕಿರಣಗಳ ಕಾರ್ಯವಿಧಾನ ಮತ್ತು ಪ್ರಕಾಶಮಾನ ಮತ್ತು ಶಕ್ತಿಗೆ ಸಂಗ್ರಹಣೆ ದರದ ದ್ರವ್ಯರಾಶಿಯೊಂದಿಗೆ ಇರುವ ಸಂಬಂಧಗಳ ಅಧ್ಯಯನವೂ ನಡೆಯಲಿದೆ.

6. ಗ್ಯಾಲಕ್ಸಿಯ ಕಪ್ಪು ಕುಳಿ ಬೈನರಿ ಮೂಲಗಳ ತಿಳಿವಳಿಕೆ ಪಡೆಯುವುದು, ಎಕ್ಸ್-ಕಿರಣಗಳ ಉತ್ಪಾದನೆಯ ಬಗ್ಗೆ ಅಧ್ಯಯನ ಮತ್ತು ದೃಢೀಕರಣ ಮಾಡುವುದಲ್ಲದೆ, ನ್ಯೂಟ್ರಾನ್ ನಕ್ಷತ್ರದ ಧ್ರುವ ಕ್ಯಾಪ್ ಅಥವಾ ಪಲ್ಸರ್ ಮ್ಯಾಗ್ನೆಟೋಸ್ಪಿಯರ್ನ ಹೊರವಲಯದ ಅಧ್ಯಯನ, ಸೂಪರ್ನೋವಾ ಅವಶೇಷಗಳಲ್ಲಿ ಉಷ್ಣ ಹೊರಸೂಸುವಿಕೆಯ ಮೇಲೆ ಸಿಂಕ್ರೊಟ್ರಾನ್ ಕಾರ್ಯವಿಧಾನವನ್ನು ಪ್ರಬಲವಾಗಿ ಪ್ರತ್ಯೇಕಿಸುವ ಕುರಿತಾದ ಅಧ್ಯಯನಕ್ಕೆ ಈ ಯೋಜನೆ ಬಳಕೆಯಾಗಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.