Election Result: ಛತ್ತೀಸಗಡ ಲೋಕಸಭಾ ಚುನಾವಣೆ: ಜಿದ್ದಾಜಿದ್ದಿ ಹೋರಾಟದ ನಡುವೆ ಬಿಜೆಪಿಗೆ ಅಭೂತಪೂರ್ವ ಗೆಲುವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Result: ಛತ್ತೀಸಗಡ ಲೋಕಸಭಾ ಚುನಾವಣೆ: ಜಿದ್ದಾಜಿದ್ದಿ ಹೋರಾಟದ ನಡುವೆ ಬಿಜೆಪಿಗೆ ಅಭೂತಪೂರ್ವ ಗೆಲುವು

Election Result: ಛತ್ತೀಸಗಡ ಲೋಕಸಭಾ ಚುನಾವಣೆ: ಜಿದ್ದಾಜಿದ್ದಿ ಹೋರಾಟದ ನಡುವೆ ಬಿಜೆಪಿಗೆ ಅಭೂತಪೂರ್ವ ಗೆಲುವು

ಛತ್ತೀಸಗಢ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಛತ್ತೀಸಗಢ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ 9 ಸ್ಥಾನ ಗಳಿಸಿದೆ. ಕಾಂಗ್ರೆಸ್‌ 1 ಸ್ಥಾನ ಗಳಿಸುವ ಮೂಲಕ ಸೋಲು ಕಂಡಿದೆ. ಒಟ್ಟು 11 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಛತ್ತೀಸಗಡ ಲೋಕಸಭಾ ಚುನಾವಣೆ: ಜಿದ್ದಾಜಿದ್ದಿ ಹೋರಾಟದ ನಡುವೆ ಬಿಜೆಪಿಗೆ ಗೆಲುವು
ಛತ್ತೀಸಗಡ ಲೋಕಸಭಾ ಚುನಾವಣೆ: ಜಿದ್ದಾಜಿದ್ದಿ ಹೋರಾಟದ ನಡುವೆ ಬಿಜೆಪಿಗೆ ಗೆಲುವು

ಛತ್ತೀಸ್‌ಗಢ: ಛತ್ತೀಸ್‌ಗಢದಲ್ಲಿ 11 ಲೋಕಸಭಾ ಕ್ಷೇತ್ರಗಳಿಗೆ 3 ಹಂತದಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಅಂದರೆ ಏಪ್ರಿಲ್ 19 ರಂದು ನಕ್ಸಲ್ ಪೀಡಿತ ಬಸ್ತಾರ್ ಕ್ಷೇತ್ರದಲ್ಲಿ ಮಾತ್ರ ಮತದಾನ ನಡೆದಿತ್ತು. ಎರಡನೇ ಹಂತದಲ್ಲಿ, ಏಪ್ರಿಲ್ 26 ರಂದು, ಮತದಾರರು ರಾಜನಂದಗಾಂವ್, ಮಹಾಸಮುಂಡ್ ಮತ್ತು ಕಂಕೇರ್ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಮೇ 7 ರಂದು ನಡೆದ ಮೂರನೇ ಹಂತದಲ್ಲಿ, ಸುರ್ಗುಜಾ, ರಾಯ್‌ಘರ್, ಜಾಂಜ್‌ಗೀರ್-ಚಂಪಾ, ಕೊರ್ಬಾ, ಬಿಲಾಸ್‌ಪುರ್, ದುರ್ಗ್ ಮತ್ತು ರಾಯ್‌ಪುರ ಎಂಬ ಏಳು ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಮೊದಲ ಹಂತದ ಮತದಾನದ ವೇಳೆ ಬಸ್ತಾರ್‌ನ 56 ಗ್ರಾಮಗಳ ಜನರು ತಮ್ಮ ಸ್ವಂತ ಗ್ರಾಮಗಳಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡಿದರು. 84.67 ರಷ್ಟು ಮತದಾನ ಈ ಹಂತದಲ್ಲಿ ನಡೆದಿತ್ತು.

ಜೂನ್‌ 1 ರಂದು ಹೊರಬಿದ್ದ ಚುನಾವಣಾ ಸಮೀಕ್ಷೆಗಳು ಬಿಜೆಪಿಗೆ ಗೆಲುವು ಎಂಬುದನ್ನು ಹೇಳಿದ್ದವು. ಎಕ್ಸಿಟ್‌ ಪೋಲ್‌ ಫಲಿತಾಂಶದಲ್ಲಿ ಬಿಜೆಪಿ 10 ಸ್ಥಾನ ಗಳಿಸುವ ಸಾಧ್ಯತೆಯನ್ನು ಹೇಳಿದ್ದವು. ಆ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ ಕೇವಲ 1 ಸ್ಥಾನ ಗಳಿಸಲಿದೆ. 2019ರಲ್ಲಿ ಬಿಜೆಪಿ 9 ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಚುನಾವಣೆಯ ಸಂದರ್ಭ ಕಾಂಗ್ರೆಸ್‌ ಪಕ್ಷವು ಕೇಸರಿ ಪಕ್ಷಕ್ಕಿಂತ ಹೆಚ್ಚು ಸ್ಥಾನ ಗಳಿಸುವುದಾಗಿ ಹೇಳಿಕೊಂಡಿತ್ತು. ಧಾನಸಭಾ ಚುನಾವಣೆಯ ಸೋಲಿನ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಗೆ ಹಿನ್ನಡೆಯಾಗಿದ್ದು ಬಿಜೆಪಿಗೆ ಲಾಭವಾಗಬಹುದು ಎಂದು ಅಂದಾಜಿಸಲಾಗಿತ್ತು.

ಛತ್ತೀಸ್‌ಗಢದ ರಾಜನಂದಗಾಂವ್ ಲೋಕಸಭಾ ಕ್ಷೇತ್ರವನ್ನು ವಿಐಪಿ ಸ್ಥಾನಗಳ ಪೈಕಿ ಎಣಿಕೆ ಮಾಡಲಾಗಿದೆ. ಈ ಕ್ಷೇತ್ರದಿಂದ ಹಾಲಿ ಸಂಸದ ಸಂತೋಷ್‌ ಪಾಂಡೆ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಒಲವು ಹೆಚ್ಚಿದ್ದು, ಪಾಂಡೆ ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕಣಕ್ಕಿಳಿಸಿತ್ತು.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.