ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Election Result: ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯವ ನಿರೀಕ್ಷೆಯಲ್ಲಿ ಬಿಜೆಪಿ, ಮೊದಲ ನೂರು ದಿನದಲ್ಲಿ ಮೋದಿ ಮುಂದಿರುವ ಗುರಿಗಳು

Election Result: ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯವ ನಿರೀಕ್ಷೆಯಲ್ಲಿ ಬಿಜೆಪಿ, ಮೊದಲ ನೂರು ದಿನದಲ್ಲಿ ಮೋದಿ ಮುಂದಿರುವ ಗುರಿಗಳು

ಲೋಕಸಭಾ ಚುನಾವಣೆ 2024ರ ಎಕ್ಸಿಟ್‌ ಪೋಲ್‌ ಫಲಿತಾಂಶಗಳ ಪ್ರಕಾರ ಈ ಬಾರಿಯೂ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಈ ವಿಚಾರ ನಿಖರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಿಂದಿಂದ ಹಿಂದೆ ಒಟ್ಟು 7 ಮೀಟಿಂಗ್‌ಗಳನ್ನು ಕರೆದಿದ್ದರು ಮಾತ್ರವಲ್ಲ, ಅಧಿಕಾರ ವಹಿಸಿಕೊಂಡ ಮುಂದಿನ 100 ದಿನಗಳ ಗುರಿಯ ಬಗ್ಗೆಯೂ ವಿವರಣೆ ನೀಡಿದ್ದಾರೆ.

ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯವ ನಿರೀಕ್ಷೆಯಲ್ಲಿ ಬಿಜೆಪಿ, ಮೊದಲ 100 ದಿನಕ್ಕೆ ಪ್ರಧಾನಿ ಮೋದಿಯ ಪ್ರಮುಖ ಗುರಿಗಳು
ಮರಳಿ ಅಧಿಕಾರದ ಚುಕ್ಕಾಣಿ ಹಿಡಿಯವ ನಿರೀಕ್ಷೆಯಲ್ಲಿ ಬಿಜೆಪಿ, ಮೊದಲ 100 ದಿನಕ್ಕೆ ಪ್ರಧಾನಿ ಮೋದಿಯ ಪ್ರಮುಖ ಗುರಿಗಳು

ದೆಹಲಿ: 2024ರ ಲೋಕಸಭಾ ಚುನಾವಣೆ ಮುಗಿದಿದ್ದು, ಈ ಚುನಾವಣೆಯಲ್ಲಿ ಯಾವ ಪಕ್ಷ ಗೆಲುವು ಸಾಧಿಸಬಹುದು, ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೂ ಎಕ್ಸಿಟ್‌ ಪೋಲ್‌ಗಳು ಉತ್ತರ ನೀಡಿವೆ. ಕೇಂದ್ರದಲ್ಲಿ 3ನೇ ಬಾರಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ. ಇದರೊಂದಿಗೆ ಮತ್ತೊಮ್ಮೆ ಮೋದಿ ಗದ್ದುಗೆ ಏರಲು ಸಿದ್ಧರಾಗುತ್ತಿದ್ದಾರೆ. ಮೋದಿಯೇ ಈ ಬಾರಿಯೂ ಪ್ರಧಾನಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ಎರಡು ಅವಧಿಯಲ್ಲಿ ಹಲವಾರು ಗುರಿಗಳನ್ನು ಇರಿಸಿಕೊಂಡು ಆ ಗುರಿಗಳಂತೆ ಸಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೋಯುತ್ತಿರುವ ಮೋದಿ ಈ ಬಾರಿಯು ಮೊದಲ 100 ದಿನಗಳ ಗುರಿಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ. 

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಮೋದಿ 100 ದಿನಗಳ ಗುರಿ ಇರಿಸಿಕೊಂಡೇ ಅಧಿಕಾರ ಆರಂಭಿಸಿದ್ದರು. ಈ ಬಾರಿ ವಿಶೇಷವಾಗಿ 125 ದಿನಗಳ ಗುರಿಯನ್ನು ಇರಿಸಿಕೊಂಡಿದ್ದಾರೆ. ಅದರಲ್ಲಿ 25 ದಿನಗಳನ್ನು ವಿಶೇಷವಾಗಿ ಯುವಕರಿಗೆಂದೇ ಮೀಸಲಿಟ್ಟಿದ್ದಾರೆ. ಈ ಬಾರಿ ಅಧಿಕಾರಕ್ಕೆ ಬಂದ ಮುಂದಿನ 100 ದಿನಗಳಿಗೆ ಮೋದಿ ಏನೆಲ್ಲಾ ಯೋಜನೆಗಳನ್ನು ಹಾಕಿಕೊಂಡಿರಬಹುದು ಎನ್ನುವುದರ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಕಳೆದ ಬಾರಿಯಂತೆ ಈ ಬಾರಿಯೂ ಅತ್ಯುತ್ತಮ ಯೋಜನೆಗಳ ಮೂಲಕ ಮೊದಲ 100 ದಿನಗಳಿಗೆ ಯೋಜನೆ ರೂಪಿಸಿದ್ದಾರೆ. 

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಹಿಂದಿನ ಸಮರ್ಥನೆಗಳನ್ನು ಈ ಬಾರಿ ಪುನರುಚ್ಚರಿಸಿದ್ದಾರೆ ನರೇಂದ್ರ ಮೋದಿ. ಆ ಮೈಲಿಗಲ್ಲನ್ನ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ʼಎರಡು ವರ್ಷಗಳಿಂದ ನಾನು 2047 ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅದಕ್ಕಾಗಿ ನಾನು ದೇಶದಾದ್ಯಂತ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇನೆ, 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿರ ದೇಶಗಳ ಸಾಲಿನಲ್ಲಿ ಇರುತ್ತದೆʼ ಎಂದು ಮೋದಿ ಮತ್ತೆ ಹೇಳಿದ್ದಾರೆ.

ಮೋದಿ 3.0 ಆಡಳಿತ ಯೋಜನೆ

ಸಚಿವಾಲಯಗಳಾದ್ಯಂತ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಮುಂತಾದವರೊಂದಿಗೆ ಮೋದಿ ಮೀಟಿಂಗ್‌ ನಡೆಸಿದ್ದಾರೆ. 

ಮೊದಲ 100 ದಿನಗಳ ಕಾರ್ಯಸೂಚಿಯೊಂದಿಗೆ ಪ್ರಾರಂಭವಾಗುವ ಮೋದಿ 3.0 ಆಡಳಿತ ಯೋಜನೆಯು ಹೊಸ ಸರ್ಕಾರದ ಧ್ವನಿ ಮತ್ತು ಉದ್ದೇಶವನ್ನು ಸ್ಥಾಪಿಸಲು 50 ರಿಂದ 70 ಪ್ರಮುಖ ಗುರಿಗಳು ಮತ್ತು ಶಿಫಾರಸುಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇವುಗಳನ್ನು ಪ್ರಾಮುಖ್ಯತೆ ಮತ್ತು ಆದ್ಯತೆಯ ಕ್ರಮದಲ್ಲಿ ಜೋಡಿಸಲಾಗುವುದು ಎಂದು ಹೇಳಲಾಗುತ್ತಿದೆ. ಅವುಗಳಲ್ಲಿ ಕೆಲವು ಪ್ರಮುಖ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ. 

ಮೋದಿ 3.0; ಮೊದಲ ನೂರು ದಿನದ ಯೋಜನೆಗಳು

* 3ನೇ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳ ಯೋಜನೆಯಲ್ಲಿ ಏಕರೂಪ ನಾಗರೀಕ ಸಂಹಿತೆಯು ಪ್ರಮುಖವಾಗಿದೆ. ಈ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಇದನ್ನು ಜಾರಿಗೊಳಿಸುವ ವಿಚಾರದಲ್ಲಿ ಸಾಕಷ್ಟು ನೀತಿ ನಿರೂಪಣೆಗಳು ಬಾಕಿ ಇವೆ. ಹೀಗಾಗಿ ಇದನ್ನು ಜಾರಿಗೊಳಿಸಲು ಒತ್ತು ನೀಡಬಹುದು.

* ಯುಪಿಎಸ್‌ಸಿ ಪರೀಕ್ಷೆ ಹಾಗೂ ಕೋರ್ಸ್‌ಗಳ ವಿಚಾರದಲ್ಲಿ ಬದಲಾವಣೆ ತರುವುದು. ಹಲವಾರು ವರ್ಷಗಳಿಂದ ಹಳೆಯ ವಿಧಾನದಲ್ಲೇ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳು ನಡೆಯುತ್ತಿದ್ದು, ಇದರ ಬದಲಾವಣೆಗೆ ಒತ್ತು ನೀಡಬಹುದು.

* ಒಂದು ದೇಶ, ಒಂದು ಚುನಾವಣೆಯಡಿಯಲ್ಲಿ ದೇಶದಲ್ಲಿ ಏಕಕಾಲಕ್ಕೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ನಡೆಸುವ ಯೋಚನೆ ಎನ್‌ಡಿಎ ಸರ್ಕಾರದ್ದು. ಈ ಬಗ್ಗೆ ಮೊದಲಿನಿಂದಲೇ ಹೇಳುತ್ತಿರುವ ಬಿಜೆಪಿ ಸರ್ಕಾರ ಇದಕ್ಕೊಂದ ಸ್ವಷ್ಟ ರೂಪ ನೀಡಿಲ್ಲ. ಹಾಗಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ಗಮನ ನೀಡಬಹುದು.

* ನಾರಿಶಕ್ತಿ, ಯುವಶಕ್ತಿ ಹಾಗೂ ಕಿಸಾನ್‌ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮೋದಿ ಸರ್ಕಾರವು ಗಮನ ಹರಿಸಲಿದ್ದು, ಅದಕ್ಕಾಗಿ ನೂರು ದಿನಗಳಲ್ಲಿ ವಿಭಿನ್ನ ಯೋಜನೆಗಳನ್ನು ಗುರುತಿಸುವ ಸಾಧ್ಯತೆ ಇದೆ.

* ಸೇನೆಗೆ ನೂತನ ಮುಖ್ಯಸ್ಥರು ಆಯ್ಕೆ ಮಾಡುವ ಸಾಧ್ಯತೆಗಳಿವೆ.

* ಜುಲೈ ಮೊದಲ ವಾರ ಹೊಸ ಸರ್ಕಾರದ ಬಜೆಟ್‌ ಮಂಡನೆಯಾಗಲಿದೆ ಎಂಬುದನ್ನು ಕೂಡ ಹೇಳಲಾಗುತ್ತಿದೆ.

ಮೂರನೇ ಬಾರಿ ಅಧಿಕಾರ ವಹಿಸಿಕೊಳ್ಳಲಿರುವ ಪ್ರಧಾನಿ ಮೋದಿ ಈಗಾಗಲೇ ಮುಂದಿನ ಯೋಜನೆಗಳನ್ನು ಸಿದ್ಧಪಡಿಸಿದ್ದಾರೆ. ಅದಕ್ಕಾಗಿ ಅಧಿಕಾರಿ ಹಾಗೂ ವಿವಿಧ ಇಲಾಖೆಗಳು ಮುಖ್ಯಸ್ಥರುಗಳ ಜೊತೆ ಸಭೆ ನಡೆಸಿದ್ದು, ಈ 100 ದಿನಗಳ ಯೋಜನೆಗಳು ಫಲಿತಾಂಶ ಹೊರ ಬಂದು ಸರ್ಕಾರ ರಚನೆಯಾದ ದಿನದಿಂದಲೇ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳು ಕಾಣಿಸುತ್ತಿವೆ.

ಟಿ20 ವರ್ಲ್ಡ್‌ಕಪ್ 2024