ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಛತ್ತೀಸಗಢದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಹಾಗೂ ಆಕೆಯ ಕುಟುಂಬದವರನ್ನು ಕೊಂದು ಯುವಕನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯಿದು.

ಕುಟುಂಬದ ಐವರು ಕೊಲೆಯಾ ನಿವಾಸ.
ಕುಟುಂಬದ ಐವರು ಕೊಲೆಯಾ ನಿವಾಸ.

ರಾಯಪುರ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯರನ್ನು ಕೊಲೆ ಮಾಡಿರುವ ಪ್ರತ್ಯೇಕ ಘಟನೆಗಳು ಕರ್ನಾಟಕದ ಹುಬ್ಬಳ್ಳಿಯಲ್ಲ ತಿಂಗಳೊಪ್ಪತ್ತಿನಲ್ಲಿ ನಡೆದಿರುವಂತೆಯೇ ಛತ್ತೀಸಗಢದಲ್ಲೂ ಇಂತದೇ ಪ್ರಕರಣದ ವರದಿಯಾಗಿದೆ. ಆದರೆ ಪ್ರೀತಿಸುತ್ತಿರುವ ಯುವಕ ತನ್ನ ಪ್ರಿಯತಮೆಯನ್ನು ಮಾತ್ರವಲ್ಲದೇ ಇಡೀ ಕುಟುಂಬದ ಸದಸ್ಯರನ್ನು ಕೊಂದು ಹಾಕಿದ್ಧಾನೆ. ಪ್ರಿಯತಮೆಯ ಅಕ್ಕ ಹಾಗೂ ಆಕೆಯ ಐದು ವರ್ಷದ ಮಗನನ್ನು ಕೊಂದು ಹಾಕಿ ದುಷ್ಕೃತ್ಯ ಮೆರೆದಿದ್ದಾನೆ. ಇಡೀ ಕುಟುಂಬದವನ್ನು ನಿರ್ನಾಮ ಮಾಡಿದ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಇಂತಹ ಭೀಕರ ಘಟನೆ ನಡೆದಿರುವುದು ಛತ್ತೀಸಗಢದಲ್ಲಿ. ಛತ್ತೀಸಗಢದ ಸಾರನ್‌ ಗರ್‌ ಹಾಗ ಬೈಲಾಗರ್‌ ಜಿಲ್ಲೆಯ ತಾರಾಗಾಂವ್‌ ಎನ್ನುವ ಗ್ರಾಮದಲ್ಲಿ ಇಂತಹ ದುರ್ಘಟನೆ ವರದಿಯಾಗಿದೆ.

ಗ್ರಾಮದ ಮನೋಜ್‌ ಸಾಹು ಎಂಬಾತ ಅದೇ ಗ್ರಾಮದ ಮೀರಾ ಸಾಹು ಎಂಬಾಕೆಯನ್ನು ಪ್ರೀತಿಸುತ್ತದ್ದ. ಆದರೆ ಆಕೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ಆಗಾಗ ಇಬ್ಬರ ನಡುವೆ ಸಂಘರ್ಷಗಳು ನಡೆದೇ ಇದ್ದವು. ಮನೆಯವರೂ ಕೂಡ ಇದಕ್ಕೆ ಒಪ್ಪಿರಲಿಲ್ಲ. ಆದರೂ ಮನೋಜ್‌ ತನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದಿದ್ದ. ಇದಕ್ಕೆ ಸಮಯ ಕೇಳಿದ್ದ ಮೀರಾ ಅನುಮತಿಯನ್ನಂತೂ ಕೊಟ್ಟಿರಲಿಲ್ಲ. ಮನೋಜ್‌ ಮಾತ್ರ ತನ್ನ ಹಠ ಮುಂದುವರೆಸಿದ್ದ.

ಇದರ ನಡುವೆ ಶನಿವಾರವೂ ಇಬ್ಬರ ನಡುವೆ ಜಗಳವಾಗಿತ್ತು.ಇದಾದ ಕೆಲ ಹೊತ್ತಿನಲ್ಲಿಯೇ ಮೀರಾ ಮನಗೆ ನುಗ್ಗಿದ್ದ ಮನೋಜ್‌ ಅಲ್ಲಿದ್ದ ಅಕೆಯ ತಂದೆ ಹೇಮಾಲಾಲ್‌ ಸಾಹು, ತಾಯಿ ಜಗಮೋತಿ ಲಾಲ್‌, ಸಹೋದರಿ ಮಮತಾ ಹಾಗೂ ಆಕೆಯ ಪುತ್ರ ಆಯುಷ್‌ ನನ್ನು ಭೀಕರವಾಗಿ ಹತ್ಯೆ ಮಾಡಿದ್ದ, ಬಳಿಕ ಅಲ್ಲಿಂದ ಪರಾರಿಯಾಗಿದ್ದ.

ಕುಟುಂಬದವರ ಕೂಗಾಟ, ಚೀರಾಟ ಕಂಡು ನೆರೆಹೊರೆವರು ಬಂದಾಗ ರಕ್ತದ ಮಡುವಿನಲ್ಲಿ ಐದು ಮಂದಿ ಬಿದ್ದಿದ್ದರು. ಕೂಡಲೇ ಪೊಲೀಸರಿಗೂ ಮಾಹಿತಿ ನೀಡಿದ್ದರಿಂದ ಸ್ಥಳೀಯ ಪೊಲೀಸರು ಆಗಮಿಸಿದ್ದರು. ಆಸ್ಪತ್ರೆಗೆ ಸಾಗಿಸಿದರೂ ಐವರು ಮೃತಪಟ್ಟಿದ್ದರು.

ಇದಾದ ಕೆಲ ಹೊತ್ತಿನಲ್ಲಿ ಸಮೀಪದಲ್ಲಿಯೇ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿತ್ತು. ಇವರನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವುದನ್ನು ಪೊಲೀಸರು ಊಹಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಪುಷ್ಕರ್‌ ಶರ್ಮ ಅವರ ಪ್ರಕಾರ, ಮನೋಜ್‌ ಸಾಹು ಈ ಕೃತ್ಯವನ್ನು ಎಸಗಿರುವುದು ಗೊತ್ತಾಗಿದೆ. ಐದು ಮಂದಿಯನ್ನು ಕತ್ತಿಯಿಂದ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆರೆ ಹೊರೆಯವರ ಹೇಳಿಕೆ, ಅಲ್ಲಿನ ಘಟನಾವಳಿಯ ಸಾಕ್ಷ್ಯಗಳನ್ನು ಸಂಗ್ರಹಿಸಿದಾಗ ಮೇಲ್ನೋಟಕ್ಕೆ ಇದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಮನೋಜ್‌ ಪ್ರೀತಿಸುತ್ತಿದ್ದ ವಿಚಾರ, ಯುವತಿ ನಿರಾಕರಿಸುತ್ತಿದ್ದುದು ನೆರೆಹೊರೆಯವರಿಗೂ ಗೊತ್ತಿತ್ತು. ಈ ವಿಚಾರದಲ್ಲಿ ಜಗಳಗಳೂ ಆಗಿದ್ದವು. ಆದರೆ ಈಗ ದ್ವೇಷದಿಂದ ಇಡೀ ಕುಟುಂಬದವನ್ನು ಬಲಿ ತೆಗೆದುಕೊಂಡು ತಾನೂ ಜೀವ ಕಳೆದುಕೊಂಡಿದ್ದಾನೆ ಎಂದು ಊರಿನವರು ಬೇಸರ ಹೊರ ಹಾಕಿದರು.

ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಂಡದ ತಜ್ಞರು ಬೀಡು ಬಿಟ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿಸಿ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆಯೂ ನಡೆದಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024

ವಿಭಾಗ