ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಈ ದಾಖಲೆ ಮುರಿಯುವ ಅವಕಾಶ ಪ್ರಧಾನಿ ಮೋದಿ ಕೈ ತಪ್ಪಿತು ನೋಡಿ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಈ ದಾಖಲೆ ಮುರಿಯುವ ಅವಕಾಶ ಪ್ರಧಾನಿ ಮೋದಿ ಕೈ ತಪ್ಪಿತು ನೋಡಿ

ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಬಂದದ್ದೂ ಆಯಿತು. ಫಲಿತಾಂಶದ ವಿಶ್ಲೇಷಣೆಗಳು ನಡೆಯುತ್ತಿದ್ದು ಅನೇಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಅದರಲ್ಲಿ ಇದೂ ಒಂದು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಈ ದಾಖಲೆ ಮುರಿಯುವ ಅವಕಾಶ ಪ್ರಧಾನಿ ಮೋದಿ ಕೈ ತಪ್ಪಿತು ನೋಡಿ.

ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಈ ದಾಖಲೆ ಮುರಿಯುವ ಅವಕಾಶ ಪ್ರಧಾನಿ ಮೋದಿ ಕೈ ತಪ್ಪಿತು
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಈ ದಾಖಲೆ ಮುರಿಯುವ ಅವಕಾಶ ಪ್ರಧಾನಿ ಮೋದಿ ಕೈ ತಪ್ಪಿತು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿಗೆ ಸರಳ ಬಹುಮತ ಇಲ್ಲದೇ ಇದ್ದರೂ ಮೈತ್ರಿಗೆ ಬಹುಮತ ಇರುವ ಕಾರಣ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇರುವ ಈ ಹೊತ್ತಿನಲ್ಲಿ ಹಲವು ಅಂಶಗಳು ಗಮನಸೆಳೆಯುತ್ತಿವೆ. ಅವುಗಳ ಪೈಕಿ ಇದೂ ಒಂದು.

ಟ್ರೆಂಡಿಂಗ್​ ಸುದ್ದಿ

ಜವಾಹರಲಾಲ್ ನೆಹರೂ ನಂತರ ಸತತ ಮೂರು ಅವಧಿಗೆ ಅಧಿಕಾರಕ್ಕೆ ಬಂದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಆದಾಗ್ಯೂ, ನೆಹರೂ ಅವರನ್ನು ಸರಿಗಟ್ಟಲು ಮೋದಿ ವಿಫಲರಾದರು ಎಂಬುದು ಮತ್ತೊಂದು ಗಮನಿಸಬೇಕಾದ ಅಂಶ.

ಅಂದು 1962ರಲ್ಲಿ ನಡೆದ ಮೂರನೇ ಚುನಾವಣೆಯಲ್ಲಿ ನೆಹರು ಸಂಪೂರ್ಣ ಬಹುಮತ ಗಳಿಸಿದ್ದರು. ಅದಕ್ಕೆ ತುಲನೆ ಮಾಡಿದರೆ, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರ ಬಿಜೆಪಿ 240 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ಸರಳ ಬಹುಮತದ 272 ಸ್ಥಾನಗಳಿಗೆ 32 ಸ್ಥಾನಗಳ ಕೊರತೆಯಿದೆ. ಹೀಗಾಗಿ ಸ್ವಂತ ಪಕ್ಷವೇ ಬಹುಮತ ಪಡೆದು ಮೂರನೆ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದ ಪ್ರಧಾನಿ ಎಂಬ ದಾಖಲೆ ಸಮಗಟ್ಟುವ ಅವಕಾಶ ಮೋದಿ ಅವರ ಕೈ ತಪ್ಪಿದೆ.

ಬಿಜೆಪಿಗೆ ಮ್ಯಾಜಿಕ್ ಸಂಖ್ಯೆಯ ಕೊರತೆ ಇರುವುದರಿಂದ, ಪ್ರಧಾನಿ ಮೋದಿ ತನ್ನ ಮಿತ್ರಪಕ್ಷಗಳ ಬೆಂಬಲದೊಂದಿಗೆ ಮೈತ್ರಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಈಗಿನ ಲೆಕ್ಕಾಚಾರ ಪ್ರಕಾರ, ಲೋಕಸಭೆಯಲ್ಲಿ ಎನ್‌ಡಿಎ ಸದಸ್ಯಬಲ 293 ಇರಲಿದೆ.

ಜವಾಹರಲಾಲ್ ನೆಹರೂ ಅವರ ಕಾಲಘಟ್ಟ

ಜವಾಹರಲಾಲ್ ನೆಹರು ಅವರು 1947 ರಿಂದ 1964 ರವರೆಗೆ 16 ವರ್ಷ 286 ದಿನಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 1951-52 ಮತ್ತು ನಂತರ 1957 ಮತ್ತು 1962 ರಲ್ಲಿ ಕಾಂಗ್ರೆಸ್ ಪಕ್ಷವು ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ಗೆದ್ದ ನಂತರ ನೆಹರು ಪ್ರಧಾನಿಯಾಗಿ ಆಯ್ಕೆಯಾದರು.

1962 ರಲ್ಲಿ, ಮೂರನೇ ಲೋಕಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಭಾರತದಲ್ಲಿ ಫೆಬ್ರವರಿ 19 ಮತ್ತು 25 ರ ನಡುವೆ ಸಾರ್ವತ್ರಿಕ ಚುನಾವಣೆಗಳು ನಡೆದವು. ತನ್ನ ಮೂರನೇ ಚುನಾವಣೆಯಲ್ಲಿ, ನೆಹರು ನೇತೃತ್ವದ ಕಾಂಗ್ರೆಸ್ ಶೇಕಡಾ 44.7 ರಷ್ಟು ಮತಗಳನ್ನು ಮತ್ತು 494 ಚುನಾಯಿತ ಸ್ಥಾನಗಳಲ್ಲಿ 361 ಸ್ಥಾನಗಳನ್ನು ಗಳಿಸಿ ಪ್ರಚಂಡ ವಿಜಯವನ್ನು ಗಳಿಸಿತು. 1962ರಲ್ಲಿ ಬಹುಮತಕ್ಕೆ 248 ಸ್ಥಾನಗಳ ಅಗತ್ಯವಿತ್ತು. ಆದಾಗ್ಯೂ, ನೆಹರು ತಮ್ಮ ಮೂರನೇ ಅವಧಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಅದರ ನಡುವೆಯೇ, 1964ರ ಮೇ ತಿಂಗಳಲ್ಲಿ ನಿಧನರಾದರು.

ಲೋಕಸಭಾ ಚುನಾವಣೆ 2024 - ಫಲಿತಾಂಶದ ಕಡೆಗೆ ಒಂದು ನೋಟ

ಲೋಕಸಭಾ ಚುನಾವಣೆ 2024 ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ನಡೆಯಿತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 400 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿತ್ತು. ಆದರೆ ಅಂತಿಮವಾಗಿ ಕೇವಲ 293 ಸ್ಥಾನಗಳನ್ನು ಗೆಲ್ಲುವುದಕ್ಕಷ್ಟೆ ಸಫಲವಾಯಿತು.

2019 ರಲ್ಲಿ ಲೋಕಸಭೆಯಲ್ಲಿ 353 ಸ್ಥಾನಗಳನ್ನು ಗೆದ್ದ ಮೋದಿ ನೇತೃತ್ವದ ಮೈತ್ರಿಕೂಟಕ್ಕೆ ಸವಾಲೆಸೆದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಬ್ಲಾಕ್ 232 ಸ್ಥಾನಗಳನ್ನು ಗಳಿಸಿದೆ. ಇದರೊಂದಿಗೆ ಎನ್‌ಡಿಎ ಸಂಖ್ಯಾ ಬಲವನ್ನು ಈ ಸಲದ ಚುನಾವಣೆಯಲ್ಲಿ ಅದು ಕುಗ್ಗಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024