ನನ್ನ ಬದುಕಿನ ಪ್ರತಿಕ್ಷಣವನ್ನೂ ದೇಶಸೇವೆಗೆ ಮೀಸಲಿಡುತ್ತೇನೆ; ಕನ್ಯಾಕುಮಾರಿಯಲ್ಲಿ 45 ಗಂಟೆ ಧ್ಯಾನದ ಬಳಿಕ ಮೋದಿ ಸಂದೇಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನನ್ನ ಬದುಕಿನ ಪ್ರತಿಕ್ಷಣವನ್ನೂ ದೇಶಸೇವೆಗೆ ಮೀಸಲಿಡುತ್ತೇನೆ; ಕನ್ಯಾಕುಮಾರಿಯಲ್ಲಿ 45 ಗಂಟೆ ಧ್ಯಾನದ ಬಳಿಕ ಮೋದಿ ಸಂದೇಶ

ನನ್ನ ಬದುಕಿನ ಪ್ರತಿಕ್ಷಣವನ್ನೂ ದೇಶಸೇವೆಗೆ ಮೀಸಲಿಡುತ್ತೇನೆ; ಕನ್ಯಾಕುಮಾರಿಯಲ್ಲಿ 45 ಗಂಟೆ ಧ್ಯಾನದ ಬಳಿಕ ಮೋದಿ ಸಂದೇಶ

ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡಿ 45 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿರುವ ಪ್ರಧಾನಿ ಮೋದಿ, ಧ್ಯಾನ ಮುಗಿಸಿ ಅಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಸಂದೇಶವೊಂದನ್ನು ಬರೆದಿದ್ದಾರೆ. ಇದೀಗ ಅವರು ಬರೆದಿರುವ ಸಂದೇಶದ ಪ್ರತಿ ವೈರಲ್‌ ಆಗುತ್ತಿದ್ದು, ಅದರಲ್ಲಿ ಏನಿದೆ ನೋಡಿ.

ನನ್ನ ಬದುಕಿನ ಪ್ರತಿಕ್ಷಣವನ್ನೂ ದೇಶಸೇವೆಗೆ ಮೀಸಲಿಡುತ್ತೇನೆ (ಮೋದಿ ಬರೆದ ಸಂದೇಶ- ಬಲಚಿತ್ರ)
ನನ್ನ ಬದುಕಿನ ಪ್ರತಿಕ್ಷಣವನ್ನೂ ದೇಶಸೇವೆಗೆ ಮೀಸಲಿಡುತ್ತೇನೆ (ಮೋದಿ ಬರೆದ ಸಂದೇಶ- ಬಲಚಿತ್ರ) (PTI)

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣಾ ಪ್ರಚಾರಗಳನ್ನು ಮುಗಿಸಿ ನೇರವಾಗಿ ಕನ್ಯಾಕುಮಾರಿಗೆ ಭೇಟಿ ನೀಡಿದ್ದರು. ಇಲ್ಲಿನ ವಿವೇಕಾನಂದ ರಾಕ್‌ ಸ್ಮಾರಕದಲ್ಲಿ ಸುದೀರ್ಘ 45 ಗಂಟೆಗಳ ಧಾನ್ಯ ಮುಗಿಸಿದ್ದಾರೆ ಮೋದಿ. ನಂತರ ತಮಿಳು ಸಂತ ಕವಿ ತಿರುವಳ್ಳುವರ್‌ ಅವರಿಗೆ ಪುಷ್ಪಾ ನಮನ ಸಲ್ಲಿದ್ದಾರೆ. ವಿವೇಕಾನಂದ ಸ್ಮಾರಕದಲ್ಲಿ ಧ್ಯಾನ ಮಾಡಿದ ಬಳಿಕ ಮೋದಿ, ಅಲ್ಲಿದ್ದ ಸಂದರ್ಶಕರ ಪುಸ್ತಕದಲ್ಲಿ ಸಂದೇಶವೊಂದನ್ನು ಬರೆದಿದ್ದಾರೆ. ಅದರಲ್ಲಿ ʼನನ್ನ ಜೀವನದ ಪ್ರತಿ ಕ್ಷಣವನ್ನು ನಾನು ರಾಷ್ಟ್ರಸೇವೆಗೆ ಮೀಸಲಿಡುತ್ತೇನೆʼ ಎಂದು ಬರೆದಿದ್ದಾರೆ.

ʼಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್‌ ಸ್ಮಾರಕಕ್ಕೆ ಭೇಟಿ ನೀಡಿದ ನಾನು ಅಸಾಧಾರಣ ಶಕ್ತಿಯ ಹಾಗೂ ದೈವಿಕ ಭಾವವನ್ನು ಅನುಭವಿಸುತ್ತಿದ್ದೇನೆ. ಇದು ಪಾರ್ವತಿ ದೇವಿ ಹಾಗೂ ವಿವೇಕಾನಂದರು ತಪಸ್ಸು ಮಾಡಿದ ಜಾಗ. ನಂತರ ಏಕನಾಥ ರಾನಡೆ ಅವರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಈ ಸ್ಥಳಕ್ಕೆ ತರುವ ಮೂಲಕ ಇಲ್ಲಿ ಸ್ಮಾರಕವನ್ನು ನಿರ್ಮಿಸಿದ್ದರುʼ ಎಂದು ಮೋದಿ ಬರೆದಿದ್ದಾರೆ.

ಈ ಜಾಗದಲ್ಲಿ ಧಾನ್ಯ ಮಾಡಿದ್ದು ನನ್ನ ಪಾಲಿನ ಅದೃಷ್ಟ 

ʼಆಧಾತ್ಮಿಕ ಪುನರುಜ್ಜೀವನದ ಪ್ರವರ್ತಕರಾದ ಸ್ವಾಮಿ ವಿವೇಕಾನಂದರು ನನ್ನ ಸ್ಫೂರ್ತಿ. ಅವರು ನನ್ನ ಶಕ್ತಿಯ ಮೂಲ ಮತ್ತು ನನ್ನ ಆಧ್ಯಾತ್ಮ ಅಭ್ಯಾಸಗಳಿಗೆ ಅವರೇ ಅಡಿಪಾಯ. ಇಡೀ ದೇಶದಾದ್ಯಂತ ಸಂಚರಿಸಿದ ನಂತರ ವಿವೇಕಾನಂದರು ಈ ಸ್ಥಳದಲ್ಲಿ ಧಾನ್ಯಕ್ಕೆ ಕೂರುತ್ತಾರೆ. ಈ ಜಾಗದಲ್ಲಿ ಅವರು ಬದುಕಿಗೆ ಹೊಸ ದಿಕ್ಕುಗಳನ್ನು ಪಡೆಯುತ್ತಾರೆ. ಇದೀಗ ಹಲವು ವರ್ಷಗಳ ಬಳಿಕ ಈ ಜಾಗದಲ್ಲಿ ಕುಳಿತು ಧಾನ್ಯ ಮಾಡಿರುವುದು ನನ್ನ ಪಾಲಿನ ಅದೃಷ್ಟ, ಹಲವು ವರ್ಷಗಳ ನಂತರ ಸ್ವಾಮಿ ವಿವೇಕಾನಂದರ ಮೌಲ್ಯಗಳು ಮತ್ತು ಆದರ್ಶಗಳು ಅವರ ಕನಸಿನ ಭಾರತವನ್ನು ರೂಪಿಸುತ್ತಿರುವಾಗ, ಈ ಪವಿತ್ರ ಸ್ಥಳದಲ್ಲಿ ಧ್ಯಾನ ಮಾಡಲು ನನಗೆ ಅವಕಾಶ ಸಿಕ್ಕಿದೆʼ ಎಂದು ಪ್ರಧಾನಿ ಬರೆದಿದ್ದಾರೆ.

ʼಈ ಸ್ಮಾರಕದಲ್ಲಿ ಧಾನ್ಯದ ಮಾಡಿದ ಅನುಭವವು ನನ್ನ ಜೀವನದಲ್ಲೇ ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿದೆ. ಭಾರತಾಂಬೆಯ ಪಾದದ ಬಳಿ ಕುಳಿತು ಇಂದು ನಾನು ಮತ್ತೊಮ್ಮೆ ನನ್ನ ಸಂಕಲ್ಪವನ್ನು ಪುನರುಚ್ಚರಿಸುತ್ತೇನೆ. ನನ್ನ ಜೀವನದ ಪ್ರತಿಕ್ಷಣ, ನನ್ನ ದೇಹದ ಪ್ರತಿಯೊಂದು ಕಣವು ದೇಶಕ್ಕೆ ಸಮರ್ಪಿತವಾಗಿದೆ. ರಾಷ್ಟ್ರದ ಪ್ರಗತಿ ಮತ್ತು ಜನರ ಕಲ್ಯಾಣಕ್ಕಾಗಿ ಅವಕಾಶ ನೀಡಿದ ಭಾರತ ಮಾತೆಗೆ ನಾನು ಲೆಕ್ಕವಿಲ್ಲದಷ್ಟು ಬಾರಿ ನಮಸ್ಕರಿಸುತ್ತೇನೆʼ ಎಂದು ಸುದೀರ್ಘ ಸಂದೇಶವನ್ನು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ. 

ವಿವೇಕಾನಂದರಂತೆಯೇ ಕೇಸರಿ ಬಟ್ಟೆ ಧರಿಸಿ ಅವರ ಸ್ಮಾರಕ ಸ್ಥಳದಲ್ಲಿ ಧಾನ್ಯ ಮಾಡಿದ್ದ ಮೋದಿ ಧ್ಯಾನ ಮುಗಿದ ಬಳಿಕ, ಬಿಳಿ ಬಟ್ಟೆ ಧರಿಸಿ ಪಕ್ಕದಲ್ಲೇ ಇರುವ ತಿರುವಳ್ಳುವರ್‌ ಪ್ರತಿಮೆಗೆ ಭೇಟಿ ನೀಡಿದರು. ಸ್ಮಾರಕದಲ್ಲಿ ತಂಗಿದ್ದ ಸಮಯದಲ್ಲಿ, ಪ್ರಧಾನಮಂತ್ರಿಯವರು ಧ್ಯಾನದ ಜೊತೆಗೆ ಸೂರ್ಯೋದಯದ ಸಮಯದಲ್ಲಿ 'ಸೂರ್ಯ ಅರ್ಘ್ಯ'ವನ್ನು ಮಾಡಿದರು. 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.