ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್, ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ

ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್, ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ

ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್ ಆಗಿದೆ. ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಎನ್‌ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಸಂಸದೀಯ ನಾಯಕರನ್ನಾಗಿ ಮಿತ್ರಪಕ್ಷಗಳೂ ಆಯ್ಕೆ ಮಾಡಿವೆ.

ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್, ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ನಿಗದಿಯಾಗಿದೆ.
ಮೋದಿ 3.0ರ ಪ್ರಮಾಣಕ್ಕೆ ದಿನಾಂಕ ಫಿಕ್ಸ್, ಜೂನ್ 9ರಂದು ಸಂಜೆ 6ಕ್ಕೆ 3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ನಿಗದಿಯಾಗಿದೆ. (ANI)

ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನೆ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ್ ಜೋಷಿ ಶುಕ್ರವಾರ (ಜೂನ್ 7) ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಜೋಶಿ, ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಎನ್‌ಡಿಎ ಸಂಸದರಲ್ಲದೆ ಮುಖ್ಯಮಂತ್ರಿಗಳು ಸೇರಿ ಹಿರಿಯ ಮೈತ್ರಿ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ನಾಯಕ ರಾಜನಾಥ ಸಿಂಗ್‌, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮೋದಿ ನಾಯಕತ್ವವನ್ನು ಬೆಂಬಲಿಸುವ ನಿರ್ಣಯವನ್ನು ಮಂಡಿಸುವ ನಿರೀಕ್ಷೆಯಿದೆ. ಇದನ್ನು ಮಿತ್ರಪಕ್ಷಗಳು ಮತ್ತು ಸಂಸದರು ಅನುಮೋದಿಸಿವೆ.

ಎನ್‌ಡಿಎ ನಾಯಕರಾಗಿ ಪ್ರಧಾನಿ ಮೋದಿ ಆಯ್ಕೆ

ಎನ್‌ಡಿಎ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೆ ಮಿತ್ರ ಪಕ್ಷಗಳು ಆಯ್ಕೆ ಮಾಡಿವೆ. ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸಂಸದೀಯ ನಾಯಕರಾಗಿ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್, ಶಿವಸೇನಾ ಮುಖ್ಯಸ್ಥ ಏಕನಾಥ ಶಿಂಧೆ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸೇರಿ ಎಲ್ಲ ಮಿತ್ರಪಕ್ಷಗಳ ನಾಯಕರೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬೆಂಬಲಿಸಿವೆ.

ಮೈತ್ರಿಕೂಟದ ನಾಯಕರಾದ ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ, ಅನುಪ್ರಿಯಾ ಪಟೇಲ್ ಮತ್ತು ಪವನ್ ಕಲ್ಯಾಣ್ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಮುಖ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 293 ಸಂಸದರನ್ನು ಹೊಂದಿರುವ ಎನ್‌ಡಿಎ 543 ಸದಸ್ಯರ ಲೋಕಸಭೆಯಲ್ಲಿ ಬಹುಮತದ ಮ್ಯಾಜಿಕ್ ನಂಬರ್‌ 272 ಅನ್ನು ಸ್ಪಷ್ಟವಾಗಿ ಸಾಧಿಸಿದೆ.

ಮೋದಿ ನಾಯಕತ್ವ ಯಾರು ಏನು ಹೇಳಿದರು

ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ, "ಮೂರನೇ ಅವಧಿಗೆ ಮತ್ತು ಮೂರನೇ ಅವಧಿಯ ಸರ್ಕಾರವಾಗಿ ಎನ್ಡಿಎ ಯಶಸ್ಸಿಗೆ ನಾನು ಈಗಾಗಲೇ ಅವರನ್ನು (ಪಿಎಂ ಮೋದಿ) ಅಭಿನಂದಿಸಿದ್ದೇನೆ" ಎಂದು ಹೇಳಿದರು.

ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದವರಲ್ಲಿ ಒಬ್ಬರಾದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ನಾವು ಗೋವಾದಲ್ಲಿ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಯಿತು. ನಾವು ಇನ್ನೊಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ ನನಗೆ" ಎಂದು ಅವರು ಹೇಳಿದರು.

ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ಗೆದ್ದಿದ್ದು, ಎನ್‌ಡಿಎ ಬೆಂಬಲ ನೀಡಿವೆ. ಹೊಸ ಸಂಸತ್ತಿನಲ್ಲಿ ಬಿಜೆಪಿ 234 ಸಂಸದರನ್ನು ಹೊಂದಿದ್ದರೆ, ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024