Indian Railway: ವಂದೇ ಭಾರತ್‌ ರೈಲು ಆಗಮನದ ಬಳಿಕ ವಿಮಾನ ಪ್ರಯಾಣ ದರ ಶೇ 30ರಷ್ಟು ಇಳಿಕೆ, ವಿಮಾನ ಬಿಟ್ಟು ರೈಲು ಹತ್ತುತ್ತಿರುವ ಪ್ರಯಾಣಿಕರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indian Railway: ವಂದೇ ಭಾರತ್‌ ರೈಲು ಆಗಮನದ ಬಳಿಕ ವಿಮಾನ ಪ್ರಯಾಣ ದರ ಶೇ 30ರಷ್ಟು ಇಳಿಕೆ, ವಿಮಾನ ಬಿಟ್ಟು ರೈಲು ಹತ್ತುತ್ತಿರುವ ಪ್ರಯಾಣಿಕರು

Indian Railway: ವಂದೇ ಭಾರತ್‌ ರೈಲು ಆಗಮನದ ಬಳಿಕ ವಿಮಾನ ಪ್ರಯಾಣ ದರ ಶೇ 30ರಷ್ಟು ಇಳಿಕೆ, ವಿಮಾನ ಬಿಟ್ಟು ರೈಲು ಹತ್ತುತ್ತಿರುವ ಪ್ರಯಾಣಿಕರು

Vande Bharat trains: ಭಾರತೀಯ ರೈಲ್ವೆಯು ವಂದೇ ಭಾರತ್‌ ರೈಲುಗಳ ಬೇಡಿಕೆಯ ಕುರಿತು ಅವಲೋಕನ ನಡೆಸುತ್ತಿದೆ. ವಂದೇ ಭಾರತ್‌ ರೈಲುಗಳು ಲಾಂಚ್‌ ಆದ ಬಳಿಕ ಭಾರತದ ವಿವಿಧೆಡೆ ವಿಮಾನ ಪ್ರಯಾಣ ದರ ಸುಮಾರು ಶೇಕಡ 30ರಷ್ಟು ಇಳಿಕೆ ಕಂಡಿವೆ ಎಂದು ವರದಿಗಳು ತಿಳಿಸಿವೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

ಬೆಂಗಳೂರು: ಭಾರತೀಯ ರೈಲ್ವೆಯು ವಂದೇ ಭಾರತ್‌ ರೈಲುಗಳ ಬೇಡಿಕೆಯ ಮಾಹಿತಿ ಕಲೆ ಹಾಕಲು ಆರಂಭಿಸಿದೆ. ವಿಶೇಷವಾಗಿ ಪ್ರಯಾಣಿಕರ ಲಿಂಗ ಮತ್ತು ವಯೋಮಿತಿ ಆಧಾರದಲ್ಲಿ ಮಾಹಿತಿ ಕಲೆ ಹಾಕುತ್ತಿದೆ. ಅಂದರೆ, ವಂದೇ ಭಾರತ್‌ ರೈಲುಗಳಲ್ಲಿ ಪ್ರಯಾಣಿಸಿದ ಪುರುಷ ಪ್ರಯಾಣಿಕರು ಎಷ್ಟು?, ಮಹಿಳಾ ಪ್ರಯಾಣಿಕರು ಎಷ್ಟು? ಟ್ರಾನ್ಸ್‌ಜೆಂಡರ್‌ಗಳ ಪ್ರಮಾಣ ಎಷ್ಟು? ಮುಂಬೈಯಿಂದ ಶಿರಡಿಗೆ, ಗೋವಾ ಮತ್ತು ಸೊಲ್ಲಾಪುರಕ್ಕೆ ಈ ರೀತಿ ಪ್ರಯಾಣಿಸಿದ ಪ್ರಯಾಣಿಕರ ಮಾಹಿತಿಯನ್ನು ರೈಲ್ವೆಯು ಕಲೆಹಾಕುತ್ತಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮೂಲಕ ಮುಂಬೈಯಿಂದ 31-45 ವಯೋಮಿತಿಯ ಅತ್ಯಧಿಕ ಪ್ರಯಾಣಿಕರು ಪ್ರಯಾಣಿಸಿರುವುದನ್ನು ಭಾರತೀಯ ರೈಲ್ವೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. 15-30 ವಯೋಮಿತಿಯವರು ನಂತರದ ಸ್ಥಾನ ಪಡೆದಿದ್ದಾರೆ.

ಸೆಪ್ಟೆಂಬರ್‌ 15ರಿಂದ ಅಕ್ಟೋಬರ್‌ 13ರವರೆಗೆ ಈ ಮಾರ್ಗಗಳಲ್ಲಿ ಒಟ್ಟು 85,600 ಪುರುಷರು, 57,838 ಮಹಿಳೆಯರು ಮತ್ತು 26 ಟ್ರಾನ್ಸ್‌ಜೆಂಡರ್‌ಗಳು ಪ್ರಯಾಣಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಸಹೋದರಿ ವೆಬ್‌ತಾಣವಾದ ದಿ ಮಿಂಟ್‌ ವರದಿ ಮಾಡಿದೆ.

ವಂದೇ ಭಾರತ್‌ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣುತ್ತಿರುವುದನ್ನು ರೈಲ್ವೆ ಕಂಡುಕೊಂಡಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಆಕ್ಯಪೆನ್ಸಿ ಪ್ರಮಾಣವು ಶೇಕಡ 77ರಿಂದ ಶೇಕಡ 101ರಷ್ಟಿತ್ತು.

ಈ ಅವಧಿಯಲ್ಲಿ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸಿದ ಮಕ್ಕಳ ಪ್ರಮಾಣ (1-14 ವರ್ಷ) ಶೇಕಡ 5ರಷ್ಟಿತ್ತು. ಟ್ರಾನ್ಸ್‌ಜೆಂಡರ್‌ಗಳ ಪ್ರಮಾಣ ಶೇಕಡ 4.5ರಷ್ಟಿತ್ತು ಎಂದು ಸೆಂಟ್ರಲ್‌ ರೈಲ್ವೆಯ ಚೀಫ್‌ ಪಿಆರ್‌ಒ ಶಿವರಾಜ್‌ ಮನಸ್ಪುರೆ ಹೇಳಿದ್ದಾರೆ.

ಉದ್ಯಮದ ಅಂದಾಜುಗಳ ಪ್ರಕಾರ ವಂದೇ ಭಾರತ್‌ ರೈಲುಗಳನ್ನು ಪರಿಚಯಿಸಿದ ಬಳಿಕ ವಿಮಾನ ಪ್ರಯಾಣಿಕರ ಸಂಖ್ಯೆ ಶೇಕಡ 10-20ರಷ್ಟು ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ವಿಮಾನ ದರಗಳು ಶೇಕಡ 20-30ರಷ್ಟು ಇಳಿಕೆ ಕಂಡಿದೆ ಎಂದು ಮನಸ್ಪುರೆ ಹೇಳಿದ್ದಾರೆ.

ಈ ಸಣ್ಣ ಅಂಕಿಅಂಶವು ರೈಲ್ವೆಯ ಆದಾಯ ಸೃಷ್ಟಿಗೆ ಮಹತ್ವ ಕೊಡುಗೆ ನೀಡುವ ಸೂಚನೆಯಿದೆ ಎಂದು ಪಬ್ಲಿಕ್‌ ಪಾಲಿಸಿ ಅನಾಲಿಸ್ಟ್‌ (ಮೊಬಿಲಿಟಿ ಆಂಡ್‌ ಟ್ರಾನ್ಸ್‌ಪೋರ್ಟೇಷನ್‌) ಪರೇಶ್‌ ರಾವಲ್‌ ಹೇಳಿದ್ದಾರೆ.

"ಈ ಡೇಟಾವು ಪ್ರಯಾಣಿಕರ ಬೇಡಿಕೆ ಕುರಿತು ಉದ್ಯಮಕ್ಕೆ ತಿಳಿಸಲಿದೆ. ಭಾರತೀಯ ರೈಲ್ವೆಯು ತನ್ನ ಸೇವೆಗಳನ್ನು ಉತ್ತಮಪಡಿಸಿಲು ಈ ಅಧ್ಯಯನ ನೆರವಾಗಲಿದೆ" ಎಂದು ಅವರು ಹೇಳಿದ್ದಾರೆ.

ಕಾಶ್ಮೀರಕ್ಕೆ ಶೀಘ್ರದಲ್ಲಿ ವಂದೇ ಭಾರತ್‌ ರೈಲು ಪರಿಚಯಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಜಮ್ಮು ಮತ್ತು ಶ್ರೀನಗರ ದಾರಿಯಲ್ಲಿ ವಂದೇ ಭಾರತ್‌ ರೈಲುಗಳು ಪ್ರಯಾಣಿಸಲಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.