ಗಮನಿಸಿ: ಸಿಮ್‌ ಖರೀದಿಗೆ ಪೇಪರ್‌ಲೆಸ್‌ ಕೆವೈಸಿ, ನಿಷ್ಕ್ರಿಯ ಯುಪಿಐ ಸ್ಥಗಿತ; ಜನವರಿ 1ರಿಂದ ಹೊಸ ನಿಯಮಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗಮನಿಸಿ: ಸಿಮ್‌ ಖರೀದಿಗೆ ಪೇಪರ್‌ಲೆಸ್‌ ಕೆವೈಸಿ, ನಿಷ್ಕ್ರಿಯ ಯುಪಿಐ ಸ್ಥಗಿತ; ಜನವರಿ 1ರಿಂದ ಹೊಸ ನಿಯಮಗಳು

ಗಮನಿಸಿ: ಸಿಮ್‌ ಖರೀದಿಗೆ ಪೇಪರ್‌ಲೆಸ್‌ ಕೆವೈಸಿ, ನಿಷ್ಕ್ರಿಯ ಯುಪಿಐ ಸ್ಥಗಿತ; ಜನವರಿ 1ರಿಂದ ಹೊಸ ನಿಯಮಗಳು

ಜನವರಿ 1ರಿಂದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನೇರ ಪರಿಣಾಮ ಬೀರುವಂತೆ ಒಂದಿಷ್ಟು ಬದಲಾವಣೆಗಳಾಗಲಿವೆ. ಸಿಮ್‌ಗಳಿಗೆ ಪೇಪರ್‌ಲೆಸ್‌ ಕೆವೈಸಿಯಿಂದ ಐಟಿ ರಿಟರ್ನ್ಸ್‌ವರೆಗೆ ಬದಲಾಗುವ ನಿಯಮಗಳಿವು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪ್ರತಿ ಹೊಸ ವರ್ಷ ಅಥವಾ ಹೊಸ ತಿಂಗಳಲ್ಲಿ ಒಂದಿಷ್ಟು ಬದಲಾವಣೆಗಳಾಗುವುದು ಸಹಜ. ಅಲ್ಲದೇ ತಿಂಗಳ ಆರಂಭದಿಂದಲೇ ಹೊಸ ನಿಯಮಗಳು ಜಾರಿಗೆ ಬರುತ್ತವೆ. ಇದು ಬದಲಾಗುವ ನಿಯಮಗಳು ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುವುದು ಸುಳ್ಳಲ್ಲ. ಇದೀಗ ಹೊಸ ತಿಂಗಳೊಂದಿಗೆ, ಹೊಸ ವರ್ಷ ಕೂಡ ಆರಂಭವಾಗುತ್ತಿದ್ದು, ಜನವರಿ 1ರಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಸಿಮ್‌ ಕಾರ್ಡ್‌ಗಳಿಗೆ ಪೇಪರ್‌ಲೆಸ್‌ ಕೆವೈಸಿ: ಹೊಸ ವರ್ಷ ಮೊದಲ ತಿಂಗಳ ಮೊದಲ ದಿನದಿಂದಲೇ ಸಿಮ್‌ ಕಾರ್ಡ್‌ ಖರೀದಿಗೆ ಪೇಪರ್‌ಲೆಸ್‌ ಕೆವೈಸಿ ನೀಡುವ ಕ್ರಮ ಜಾರಿಯಾಗಲಿದೆ. ಪೇಪರ್‌ ಆಧಾರಿತ ಕೆವೈಸಿ (Know Your Customer) ಬದಲು ಪೇಪರ್‌ ರಹಿತ ಕೆವೈಸಿ ಜಾರಿಯಾಗಲಿವೆ. ಈ ನಿಯಮ ಹೊಸ ಸಿಮ್‌ ಖರೀದಿದಾರರಿಗೆ ಮಾತ್ರ ಅನ್ವಯವಾಗಲಿದೆ.

ನಿಷ್ಕ್ರಿಯ ಯುಪಿಐ ಅಕೌಂಟ್‌ಗಳು ಸ್ಥಗಿತವಾಗಲಿವೆ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI) ಡಿಸೆಂಬರ್‌ 31ಕ್ಕೆ ಅನ್ವಯವಾಗುವಂತೆ 1 ವರ್ಷದಿಂದಲೂ ಹೆಚ್ಚು ಕಾಲದಿಂದ ಬಳಸದೇ ಇರುವ ಯುಪಿಐ ಐಡಿಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ಮಾಡಿದೆ.

ಇದನ್ನೂ ಓದಿ: PM Modi: ಅಯೋಧ್ಯೆಯಲ್ಲಿ ಮೀರಾ ಮಾಂಜಿ ಮನೆಗೆ ಪ್ರಧಾನಿ ಮೋದಿ ದಿಢೀರ್ ಭೇಟಿ, ಯಾರು ಈ ಮಹಿಳೆ

ಸಿಲಿಂಡರ್‌ ಬೆಲೆ ಕಡಿತ: ಇದು ರಾಜಸ್ಥಾನದಲ್ಲಿ ಮಾತ್ರ ಅನ್ವಯವಾಗುವ ನಿಯಮವಾಗಿದೆ. ಇಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಸಿಗುವ ಎಲ್‌ಪಿಜಿ ಸಿಲಿಂಡರ್‌ ಮೇಲೆ 50 ರೂ. ಕಡಿತವಾಗಲಿದೆ. ಸದ್ಯ 500 ರೂಪಾಯಿಗೆ ಸಿಲಿಂಡರ್‌ ಸಿಗುತ್ತಿದ್ದು, ಇನ್ನು ಮುಂದೆ 450 ರೂ.ಗೆ ಸಿಗಲಿದೆ.

ಇನ್‌ಕಮ್‌ ಟ್ಯಾಕ್ಸ್‌ ರಿರ್ಟನ್ಸ್‌: ಐಟಿ ರಿಟರ್ನ್ಸ್‌ ಮಾಡದೇ ಇರುವವರು ಹಾಗೂ ರಿವೈಸ್ಡ್‌ ಐಟಿಆರ್‌ಗಳಿಗೆ ಡಿಸೆಂಬರ್‌ 31 ಅಂದರೆ ನಾಳೆಯೇ ಕೊನೆಯ ದಿನಾಂಕವಾಗಿದೆ. ಇಂದು ವೇಳೆ ನೀವು ನಾಳೆಯೊಳಗೆ ಐಟಿ ರಿಟರ್ನ್ಸ್‌ ಮಾಡದೇ ಇದ್ದರೆ, 5000 ರೂ ದಂಡ ಪಾವತಿಸಬೇಕಾಗುತ್ತದೆ. ರಿವೈಸಡ್ಡ್‌ ಐಟಿಆರ್‌ಗಳಿಗೆ ಪ್ರೊಪೆಸಿಂಗ್‌ ಮೊತ್ತ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ ಲಾಕರ್‌ ಅಗ್ರಿಮೆಂಟ್‌: ಡಿಸೆಂಬರ್‌ 31ರ ಮೊದಲು ಗ್ರಾಹಕರು ರಿವೈಸ್ಡ್‌ ಬ್ಯಾಂಕ್‌ ಲಾಕರ್‌ ಅಗ್ರಿಮೆಂಟ್‌ಗೆ ಸಹಿ ಹಾಕಬೇಕು. ಒಂದು ವೇಳೆ ಹಾಕದೇ ಇದ್ದರೆ ಮರುದಿನ ಎಂದರೆ ಜನವರಿ 1ರಿಂದಲೇ ಲಾಕರ್‌ಗಳನ್ನು ಫ್ರೀಜ್‌ ಮಾಡಲಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.