ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪತ್ನಿ ಅಪಘಾತದಲ್ಲಿ ಸಾವು, ಪತಿಯೂ ಆತ್ಮಹತ್ಯೆಗೆ ಶರಣು, ಮದುವೆಯಾಗಿ 6 ತಿಂಗಳಲ್ಲೇ ಸಾವು ಕಂಡ ದಂಪತಿ

ಪತ್ನಿ ಅಪಘಾತದಲ್ಲಿ ಸಾವು, ಪತಿಯೂ ಆತ್ಮಹತ್ಯೆಗೆ ಶರಣು, ಮದುವೆಯಾಗಿ 6 ತಿಂಗಳಲ್ಲೇ ಸಾವು ಕಂಡ ದಂಪತಿ

ಉತ್ತರ ಪ್ರದೇಶದಲ್ಲಿ ನಡೆದಿರುವ ಮನಕಲಕುವ ಘಟನೆಯಿದು. ಪತ್ನಿ ಅಪಘಾತದಲ್ಲಿ ತೀರಿಕೊಂಡಿದ್ದರಿಂದ ಮನನೊಂದು ಪತಿಯೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನವವಿವಾಹಿತ ದಂಪತಿ ದುರಂತ ಸಾವು.
ನವವಿವಾಹಿತ ದಂಪತಿ ದುರಂತ ಸಾವು.

ಲಕ್ನೋ: ಕೆಲಸಕ್ಕೆ ಹೋಗುತ್ತಿದ್ದ ಪತ್ನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆಯಿತು. ತೀವ್ರ ವಾಗಿ ಗಾಯಗೊಂಡ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಳು. ಪತ್ನಿ ಅಗಲಿಕೆ ನೋವಿನಿಂದ ಪತಿಯೂ ಕೆಲವೇ ಹೊತ್ತಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಇಂತಹ ಹೃದಯವಿದ್ರಾವಕ ಘಟನೆ ನಡೆದಿರುವುದು ಉತ್ತರ ಪ್ರದೇಶದ ಹರ್ದೋಯಿ ಪಟ್ಟಣದಲ್ಲಿ. ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವದಂಪತಿ ಬದುಕು ದುರಂತ ಕಂಡಿದೆ. ಘಟನೆ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳಲ್ಲಿ ಆಕ್ರಂದನ ಕಂಡುಬಂದಿದೆ. ಸಂಬಂಧಿಕರು, ಜತೆಯಲ್ಲಿ ಕೆಲಸ ಮಾಡುತ್ತಿದ್ದವರು ಮಮ್ಮಲ ಮರುಗುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆಕೆಯ ಹೆಸರು ಮಣಿಕರ್ಣಿಕಾ ಕುಮಾರಿ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್‌. ಆತ ಯೋಗೇಶ್‌. ಹರ್ದೋಯಿಯಲ್ಲಿ ಶಿಕ್ಷಕ. ಆರು ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿ ಅನ್ಯೋನ್ಯವಾಗಿಯೇ ಇದ್ದರು.

ಮಣಿಕರ್ಣಿಕಾ ಅವರು ಕೆಲಸಕ್ಕೆ ಹೋಗುವಾಗ ಅಪರಿಚಿತ ವಾಹನವೊಂದು ಲಕ್ನೋ ಹರ್ದೋಯಿ ಹೆದ್ದಾರಿಯಲ್ಲಿ ಡಿಕ್ಕಿ ಹೊಡೆದಿದೆ. ಆಕೆ ತಡಿಯಾವಾನ ಎಂಬಲ್ಲಿಗೆ ಕೆಲಸಕ್ಕೆ ತೆರಳುತ್ತಿದ್ದಳು. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಳು. ಆಕೆಯ ಗುರುತಿನ ಚೀಟಿ ಆಧರಿಸಿ ಪತಿಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಆಸ್ಪತ್ರೆಗೆ ಧಾವಿಸಿದ ಪತಿ ಯೋಗೇಶ್‌ ಪತ್ನಿ ಶವ ಕಂಡು ಕಣ್ಣೀರಿಟ್ಟಿದ್ದಾನೆ.

ಮನೆಗೆ ಬಂದವನೇ ಪತ್ನಿ ಶವವನ್ನು ಇರಿಸಿ ಮನೆ ಕೊಠಡಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆರೆಹೊರೆಯವರು ಬಾಗಿಲು ಮುಗಿದು ಒಳ ನುಗ್ಗುವ ಹೊತ್ತಿಗೆ ಯೋಗೇಶ್‌ ಕೂಡ ಮೃತಪಟ್ಟಿರುವುದು ಕಂಡು ಬಂದಿತು.

ಪ್ರೀತಿಯ ಪತ್ನಿ ಇಷ್ಟು ಬೇಗ ಬಿಟ್ಟು ಹೋಗುತ್ತಾಳೆ ಎಂದುಕೊಂಡಿರಲಿಲ್ಲ. ಆಕೆ ಇಲ್ಲದೇ ಮೇಲೇ ನಾನೂ ಇರುವುದಿಲ್ಲ. ನಾವು ಒಟ್ಟಿಗೆ ಮದುವೆಯಾಗಿದ್ದೇವೆ. ಒಟ್ಟಿಗೆ ಇರುತ್ತೇವೆ ಎಂದು ಡೆತ್‌ ನೋಟ್ ಬರೆದಿದಿಟ್ಟು ಯೋಗೇಶ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಯೋಗೇಶ್‌ ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ನವವಿವಾಹಿತ ಜೋಡಿಯ ಅಂತ್ಯಕ್ರಿಯೆ ಜತೆಯಲ್ಲಿ ನೆರವೇರಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)\

IPL_Entry_Point

ವಿಭಾಗ