ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ; 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ನೋಡಿ-india news only 6 lakh votes separated bjp from 272 seat mark in ls poll 2024 study finds check key points uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ; 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ನೋಡಿ

ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ; 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ನೋಡಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ತಪ್ಪಿಹೋಗಿದೆ. ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ, ಫಲಿತಾಂಶ ವಿಶ್ಲೇಷಣೆ ಮಾಡಿದಾಗ ಕಂಡುಬಂದ ಅಂಶಗಳು ಹಲವು. ಈ ಪೈಕಿ 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ಎಂಬ ಅಂಶ ಗಮನಸೆಳೆದಿದೆ. ಅದರ ವಿವರ ಇಲ್ಲಿದೆ.

ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ; 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ನೋಡಿ. (ಸಾಂಕೇತಿಕ ಚಿತ್ರ)
ಬಿಜೆಪಿಗೆ 272 ಮಿಸ್ ಆಗಿದ್ದು ಹೇಗೆ; 33 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 6 ಲಕ್ಷ ಮತ ಬಿದ್ದಿದ್ದರೆ ಸಾಕಿತ್ತು ನೋಡಿ. (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 8 ರಂದು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಆದಾಗ್ಯೂ, 543 ಸದಸ್ಯರ ವಿಧಾನಸಭೆಯಲ್ಲಿ 240 ಸ್ಥಾನಗಳೊಂದಿಗೆ, ಬಹುಮತದ ಮ್ಯಾಜಿಕ್ ಸಂಖ್ಯೆ 272 ತಲುಪಲು ವಿಫಲವಾಯಿತು.

ಇದರೊಂದಿಗೆ, ಜೆಪಿ ನಡ್ಡಾ ನೇತೃತ್ವದ ಬಿಜೆಪಿಗೆ ಸರಳ ಬಹುಮತ ಪಡೆದು ಹ್ಯಾಟ್ರಿಕ್ ದಾಖಲೆ ಬರೆದ ಏಕೈಕ ಪಕ್ಷ ಎಂಬ ಕೀರ್ತಿಗೆ ಭಾಜನವಾಗುವ ಸಂದರ್ಭವನ್ನು ಮಿಸ್ ಮಾಡಿಕೊಂಡಿತು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 293 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಬಹುಮತಕ್ಕಿಂತ (272) 21 ಹೆಚ್ಚಾಗಿದೆ.

ಚುನಾವಣಾ ಫಲಿತಾಂಶ ಬಂದ ಬಳಿಕ ವಿಶ್ಲೇಷಣೆಗಳು ನಡೆಯುತ್ತಿದ್ದು, ಒಂದು ಅಧ್ಯಯನ ಪ್ರಕಾರ, ಬಿಜೆಪಿ 272 ಸ್ಥಾನಗಳನ್ನು ತಲುಪದೇ ಇರಲು ಕೇವಲ 6 ಲಕ್ಷ ಮತಗಳು ಕಾರಣ ಎಂಬ ಅಂಶದ ಕಡೆಗೆ ಗಮನಸೆಳೆದಿದೆ. ಈ ಸಲದ ಚುನಾವಣೆಯಲ್ಲಿ 23.59 ಕೋಟಿ ಮತ (36.6% ಮತಗಳಿಕೆ) ಪಡೆದಿದ್ದ ಬಿಜೆಪಿಯು ಕಳೆದ ಚುನಾವಣೆಯಲ್ಲಿ 22.9 ಕೋಟಿ ಮತಗಳನ್ನು (37.3%) ಪಡೆದಿತ್ತು. ಆದರೂ 272 ಸ್ಥಾನಗಳನ್ನು ಗೆಲ್ಲುವುದಕ್ಕೆ ಬೇಕಾಗಿದ್ದ 6 ಲಕ್ಷ ಮತಗಳ ಕೊರತೆ ಕಾಡಿದೆ ಎಂದು ನ್ಯೂಸ್ 18 ವರದಿ ಹೇಳಿದೆ.

ಲೋಕಸಭಾ ಫಲಿತಾಂಶದ ವಿಶ್ಲೇಷಣೆ; ಬಿಜೆಪಿಗೆ 272 ತಲುಪದಂತೆ ಮಾಡಿದ ಕ್ಷೇತ್ರಗಳ ವಿವರ

(1) ಲೋಕಸಭಾ ಚುನಾವಣೆಯಲ್ಲಿ 33 ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ 609,639 ಹೆಚ್ಚುವರಿ ಮತಗಳಿಸಿದ್ದರೆ ಸಾಕಿತ್ತು ಬಿಜೆಪಿ 272 ಸ್ಥಾನಗಳನ್ನು ಪಡೆಯುತ್ತಿತ್ತು. ಕಡಿಮೆ ಅಂತರದಲ್ಲಿ ಬಿಜೆಪಿ ಸೋತ ಕ್ಷೇತ್ರಗಳಿವು. ಈ ಸ್ಥಾನಗಳು ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ.

(2) ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕೇವಲ 2509 ಮತಗಳಿಂದ ಸೋತಿದೆ. ಹಮೀರ್ ಪುರ್ (ಉತ್ತರ ಪ್ರದೇಶ; 2629 ಅಂತರ), ಸೇಲಂಪುರ್ (ಉತ್ತರ ಪ್ರದೇಶ; 3573), ಧುಲೆ (ಮಹಾರಾಷ್ಟ್ರ; 3831), ಧೌರಾಹ್ರಾ (ಉತ್ತರ ಪ್ರದೇಶ; 4449), ದಮನ್ ಮತ್ತು ದಿಯು (ದಮನ್ ಮತ್ತು ದಿಯು; 6225), ಅರಾಮ್ ಬಾಗ್ (ಪಶ್ಚಿಮ ಬಂಗಾಳ; 6399) ಮತ್ತು ಬೀಡ್ (ಮಹಾರಾಷ್ಟ್ರ; 6553) ನಲ್ಲಿ ಬಿಜೆಪಿಯು ಕಡಿಮೆ ಅಂತರದ ಸೋಲನ್ನು ಕಂಡಿದೆ.

(3) ಲುಧಿಯಾನ (ಪಂಜಾಬ್) ನಲ್ಲಿ ಕನಿಷ್ಠ 20,942 ಮತಗಳ ಅಂತರ, ಉತ್ತರ ಪ್ರದೇಶದ ಖೇರಿಯಲ್ಲಿ ಗರಿಷ್ಠ 34,329 ಮತಗಳ ತನಕ ಒಟ್ಟು 16 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು ಸಂಭವಿಸಿದೆ.

(4) ಬಿಜೆಪಿ 168 ಹಾಲಿ ಸಂಸತ್ ಸದಸ್ಯರನ್ನು (ಸಂಸದರು) ಆಯಾ ಸ್ಥಾನಗಳಲ್ಲಿ ಉಳಿಸಿಕೊಂಡಿದೆ, ಅವರಲ್ಲಿ 111 (66%) ಮರು ಆಯ್ಕೆಯಾದರು.

(5) ಮತ್ತೊಂದೆಡೆ, ಹಾಲಿ ಸಂಸದರು ಸೋತ ಸ್ಥಾನಗಳು (132) ಆಗಿದ್ದು, ಪಕ್ಷವು 95 (72%)ಗಳನ್ನಷ್ಟೇ ಕ್ಷೇತ್ರಗಳನ್ನು ಉಳಿಸಿಕೊಂಡಿದೆ. ಒಟ್ಟಾರೆಯಾಗಿ, ಅದು 441 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.