ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌; ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್, 80455 ಕೋಟಿ ರೂ ವಿಮೆ ಬಾಕಿ

ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌; ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್, 80455 ಕೋಟಿ ರೂ ವಿಮೆ ಬಾಕಿ

ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌ ಬಾಕಿ ಇರುವ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್, 80455 ಕೋಟಿ ರೂ ವಿಮೆ ಬಾಕಿ ಇರುವುದು ಗಮನಸೆಳೆದಿದೆ. 5 ವರ್ಷಗಳ ದತ್ತಾಂಶ ಮತ್ತು ವರದಿ ಇಲ್ಲಿದೆ.

ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌ ಕುರಿತ ಆರ್‌ಟಿಐ ಮಾಹಿತಿ ಬಹಿರಂಗವಾಗಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಇತ್ಯರ್ಥವಾಗಿಲ್ಲ. ಇವುಗಳಲ್ಲಿ 80455 ಕೋಟಿ ರೂ ವಿಮೆ ಬಾಕಿ ಇದೆ. (ಸಾಂಕೇತಿಕ ಚಿತ್ರ)
ಭಾರತದಲ್ಲಿ ಅಪಘಾತ ವಿಮಾ ಕ್ಲೈಮ್‌ ಕುರಿತ ಆರ್‌ಟಿಐ ಮಾಹಿತಿ ಬಹಿರಂಗವಾಗಿದ್ದು, ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಇತ್ಯರ್ಥವಾಗಿಲ್ಲ. ಇವುಗಳಲ್ಲಿ 80455 ಕೋಟಿ ರೂ ವಿಮೆ ಬಾಕಿ ಇದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದಲ್ಲಿ 2018-19 ಮತ್ತು 2022-23ರ ನಡುವೆ 80,455 ಕೋಟಿ ರೂಪಾಯಿ ಮೌಲ್ಯದ 10,46,163 ಮೋಟಾರು ಅಪಘಾತ ಕ್ಲೇಮ್‌ಗಳು ಇತ್ಯರ್ಥವಾಗದೇ ಬಾಕಿ ಇವೆ. ಇದು ಪ್ರತಿನಿತ್ಯ ಏರುತ್ತಲೇ ಇದೆ ಎಂಬ ಮಾಹಿತಿ ಆರ್‌ಟಿಐ ಅರ್ಜಿಯ ಮೂಲಕ ಬಹಿರಂಗವಾಗಿದೆ. ಸುಪ್ರೀಂ ಕೋರ್ಟ್ ವಕೀಲ ಕೆ ಸಿ ಜೈನ್ ಅವರು ಏಪ್ರಿಲ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಆರ್‌ಟಿಐ ಮೂಲಕ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಗೆ ಈ ಮಾಹಿತಿಯನ್ನು ಒದಗಿಸಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದಲ್ಲಿ ಪ್ರತಿ ರಾಜ್ಯಗಳಲ್ಲಿ ಜಿಲ್ಲಾವಾರು ಬಾಕಿ ಇರುವ ಒಟ್ಟು ಮೋಟಾರು ವಾಹನ ಅಪಘಾತ ಕ್ಲೈಮ್‌ಗಳ ಸಂಖ್ಯೆ ಮತ್ತು ವಿಮಾ ಮೊತ್ತದ ವಿವರವನ್ನು ಅವರು ಕೋರಿದ್ದರು. ಇದರಂತೆ, ಇತ್ಯರ್ಥವಾಗದೇ ಬಾಕಿ ಉಳಿದಿರುವ ಅಪಘಾತ ಕ್ಲೈಮ್‌ಗಳ ಸಂಖ್ಯೆ ಮತ್ತು ವಿಮಾ ಮೊತ್ತದ ವಿವರ ಎಲ್ಲರ ಹುಬ್ಬೇರುವಂತೆ ಮಾಡಿದೆ.

5 ವರ್ಷದಲ್ಲಿ 80,455 ಕೋಟಿ ರೂಪಾಯಿ ಮೌಲ್ಯದ 10,46,163 ಕ್ಲೇಮ್‌ ಇತ್ಯರ್ಥವಾಗದೇ ಬಾಕಿ

ಕಳೆದ ಐದು ವರ್ಷಗಳ (2018-19 ರಿಂದ 2022-23ರ ತನಕ) ಅವಧಿಯಲ್ಲಿ ವಿಲೇವಾರಿ ಮಾಡಲಾದ ಮತ್ತು ಉಳಿದಿರುವ ಕ್ಲೈಮ್‌ಗಳ ವಾರ್ಷಿಕ ವಿಂಗಡಣೆ ಮತ್ತು ಮೋಟಾರು ಅಪಘಾತ ಕ್ಲೈಮ್‌ಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕೇಂದ್ರವು ಕೈಗೊಂಡ ಉಪಕ್ರಮಗಳ ಬಗ್ಗೆ ತಿಳಿದುಕೊಳ್ಳಲು ವಕೀಲ ಕೆ ಸಿ ಜೈನ್ ಪ್ರಯತ್ನಿಸಿದರು.

ಐಆರ್‌ಡಿಎ ಮಾಹಿತಿ ಪ್ರಕಾರ, ವರ್ಷದಿಂದ ವರ್ಷಕ್ಕೆ ವಿಮಾ ಕ್ಲೈಮ್ ಇತ್ಯರ್ಥವಾಗದೇ ಬಾಕಿ ಉಳಿದಿರುವ ಸಂಖ್ಯೆ ಏರಿಕೆಯಾಗುತ್ತ ಸಾಗಿದ್ದು, 2022-23ರಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ವಿಮಾ ಮೊತ್ತ 80,455 ಕೋಟಿ ರೂಪಾಯಿಯಿಷ್ಟಿದೆ.

ಅಪಘಾತ ವಿಮಾ ಕ್ಲೈಮ್ ಬಾಕಿ (2018-19 ರಿಂದ 2022-23ರ ತನಕ)

ವರ್ಷಅಪಘಾತ ಸಂಖ್ಯೆವಿಮಾ ಮೊತ್ತ (ಕೋಟಿ ರೂಪಾಯಿ)
2018-199,09,16652,713
2019-209,39,16061,051
2020-2110,08,33270,722
2021-2210,39,32374,718
2022-2310,46,16380,455

ಥರ್ಡ್‌ ಪಾರ್ಟಿ ಕ್ಲೈಮ್‌ ಮಾಹಿತಿ ಇಲ್ಲ; ಪರಿಹಾರ ವಿಳಂಬದ ವಿರುದ್ಧ ದಾವೆ

ಪ್ರಾದೇಶಿಕ ಮಟ್ಟದ ಮಾಹಿತಿಯ ವಿಂಗಡಣೆಯ ಪ್ರಶ್ನೆಗೆ ಉತ್ತರಿಸುತ್ತ ಐಆರ್‌ಡಿಎಐ, "ಥರ್ಡ್ ಪಾರ್ಟಿ ಕ್ಲೈಮ್‌ಗಳ ಜಿಲ್ಲಾವಾರು ಮತ್ತು ರಾಜ್ಯವಾರು ವಿವರಗಳು ಐಆರ್‌ಡಿಎಐ ಬಳಿ ಲಭ್ಯವಿಲ್ಲ. ಅಂತಹ ಮಾಹಿತಿಯನ್ನು ಐಆರ್‌ಡಿಎಐ ಸಂಗ್ರಹಿಸುವುದಿಲ್ಲ ಅಥವಾ ನಿರ್ವಹಿಸುವುದಿಲ್ಲ" ಎಂದು ಹೇಳಿದೆ.

ಬಾಕಿ ಇರುವ ಕ್ಲೈಮ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ವ್ಯಕ್ತಿಗಳ ಅವಲಂಬಿತರ ಕ್ಲೈಮ್‌ಗಳ ವಿಲೇವಾರಿಯಲ್ಲಿಯೂ ವಿಳಂಬವಾಗಿದೆ. ರಸ್ತೆ ಸುರಕ್ಷತಾ ಕಾರ್ಯಕರ್ತೆಯು ಕ್ಲೈಮ್ ಇತ್ಯರ್ಥಗಳ "ನಿಧಾನಗತಿಯ" ಬಗ್ಗೆ ಕಳವಳ ವ್ಯಕ್ತಪಡಿಸಿದ ಎಂದು ವಕೀಲ ಕೆ ಸಿ ಜೈನ್‌, ಸಂತ್ರಸ್ತರು ಆರ್ಥಿಕ ಪರಿಹಾರ ಪಡೆಯಲು ಸರಾಸರಿ 4 ವರ್ಷ ಕಾಯಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

"ನಾವು ಕ್ಲೈಮ್ ಇತ್ಯರ್ಥದ ವೇಗವನ್ನು ನೋಡಿದರೆ, 2022-23ರ ಆರ್ಥಿಕ ವರ್ಷದ ಆರಂಭದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 10,39,323 ಆಗಿತ್ತು. ಈ ವರ್ಷ ಸ್ವೀಕರಿಸಿದ ಹೊಸ ಕ್ಲೈಮ್‌ಗಳ ಸಂಖ್ಯೆ 4,54,944 ಆಗಿತ್ತು. ಹೀಗಾಗಿ, ಬಾಕಿ ಇರುವ ಒಟ್ಟು ಕ್ಲೈಮ್‌ಗಳ ಸಂಖ್ಯೆ 14,94,267, ಅದರಲ್ಲಿ ಕೇವಲ 4,48,104 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿದೆ. ಇದು ಒಟ್ಟು ಪ್ರಕರಣಗಳ ಶೇಕಡಾ 29 ರಷ್ಟು ಮಾತ್ರ. ಆದ್ದರಿಂದ, ಕ್ಲೈಮ್ ಅನ್ನು ನಿರ್ಧರಿಸಲು ಸರಾಸರಿ ನಾಲ್ಕು ವರ್ಷಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಮೋಟಾರು ಅಪಘಾತ ಕ್ಲೈಮ್ ಗಳ ತೀರ್ಪು ನೀಡುವಲ್ಲಿ ವಿಪರೀತ ವಿಳಂಬದ ಹಿನ್ನೆಲೆಯಲ್ಲಿ, ರಸ್ತೆ ಅಪಘಾತಗಳಲ್ಲಿ ನಿರ್ಧಾರ ಮತ್ತು ಪರಿಹಾರ ಪಾವತಿಯಲ್ಲಿನ ವಿಳಂಬವನ್ನು ಪರಿಗಣಿಸಿ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 164 ಎ ಅಡಿಯಲ್ಲಿ ಕೇಂದ್ರ ಸರ್ಕಾರವು ಮಧ್ಯಂತರ ಪಾವತಿ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿ ರಿಟ್ ಅರ್ಜಿ (ಸಿವಿಲ್) ಅಡಿಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದೇನೆ ಎಂದು ಕೆ ಸಿ ಜೈನ್ ಹೇಳಿದರು.

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ ದೋಷರಹಿತ ಹೊಣೆಗಾರಿಕೆಯ ಪ್ರಕಾರ, ಈ ಮೊತ್ತವು ಮಾರಣಾಂತಿಕ ಪ್ರಕರಣಗಳಿಗೆ ಕನಿಷ್ಠ 5,00,000 ರೂ ಮತ್ತು ಗಾಯದ ಪ್ರಕರಣಗಳಿಗೆ 2,50,000 ರೂ ಆಗಿರಬೇಕು ಎಂದು ಸೂಚಿಸಲಾಗಿದೆ.

ಟಿ20 ವರ್ಲ್ಡ್‌ಕಪ್ 2024