PM Kisan 2025: ಈ ವರ್ಷ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ 3 ಕಂತು ಬಿಡುಗಡೆ ಯಾವಾಗ? ರೈತರಿಗೆ ಸಿಗಲಿದೆ 6 ಸಾವಿರ ರೂಪಾಯಿ
PM Kisan 2025: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಹೆಸರು ನೋಂದಾಯಿಸಿರುವ ಭಾರತೀಯ ರೈತರಿಗೆ ಈ ವರ್ಷ 19ನೇ, 20ನೇ ಮತ್ತು 21ನೇ ಕಂತುಗಳು ಬಿಡುಗಡೆಯಾಗಲಿವೆ. ಜನವರಿ/ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಮೂರು ಕಂತಿನಲ್ಲಿ ಒಟ್ಟು 6 ಸಾವಿರ ರೂಪಾಯಿ ದೊರಕಲಿದೆ.
PM Kisan 2025: ಭಾರತ ಸರಕಾರವು ಅರ್ಹ ರೈತರಿಗೆ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂರು ಕಂತುಗಳು ಈ ವರ್ಷವೂ ರೈತರಿಗೆ ದೊರಕಲಿದೆ. ಹೊಸದಾಗಿ ಈ ಯೋಜನೆಯಡಿ ಹಣಕಾಸು ಪ್ರಯೋಜನಗಳನ್ನು ಪಡೆಯಲು ಬಯಸುವವರು ಕೆವೈಸಿ ದೃಢೀಕರಣ, ಆಧಾರ್ ಲಿಂಕಿಂಗ್, ಭೂಮಿಯ ದೃಢೀಕರಣ ಇತ್ಯಾದಿ ಪ್ರಕ್ರಿಯೆಗಳನ್ನು ತಕ್ಷಣ ಮಾಡಬಹುದು. ಈ ವರ್ಷ ಮೂರು ಕಂತುಗಳಲ್ಲಿ ರೈತರಿಗೆ ಆರು ಸಾವಿರ ರಪಾಯಿ ದೊರಕಲಿದೆ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ 19ನೇ, 20ನೇ ಮತ್ತು 21ನೇ ಕಂತುಗಳು ನೇರವಾಗಿ ಬೀಳಲಿವೆ.
ಮೊದಲ ಕಂತು ಯಾವಾಗ?
ಈ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೊದಲ ಕಂತು ರೈತರಿಗೆ ದೊರಕುವ ನಿರೀಕ್ಷೆಯಿದೆ. ಈ ಕುರಿತು ಸರಕಾರು ಅಧಿಕೃತ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಈ ವರ್ಷದ ಮೊದಲ ಕಂತು ರೈತರಿಗೆ ದೊರಕುವ ಕುರಿತು ಸರಕಾರವು ಸದ್ಯದಲ್ಲಿಯೇ ವಿವರ ನೀಡಲಿದೆ.
ಪಿಎಂ ಕಿಸಾನ್ ಎರಡನೇ ಕಂತು
2025ರ ಜೂನ್ ತಿಂಗಳಲ್ಲಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ದೊರಕಿದೆ. ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಮೂಲಕ ಅರ್ಹ ರೈತರ ಬ್ಯಾಂಕ್ ಖಾತೆಗೆ ಹಣ ಜಮಾಗೊಳ್ಳಲಿದೆ.
ಅಕ್ಟೋಬರ್‌ನಲ್ಲಿ ಮೂರನೇ ಕಂತು
ರೈತರಿಗೆ ಮೂರನೇ ಕಂತು ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ದೊರಕುವ ಸೂಚನೆಯಿದೆ. ಈ ಕುರಿತು ನಿಖರ ದಿನಾಂಕವನ್ನು ಸರಕಾರ ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.
ಏನಿದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭಾರತದಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಯೋಜನೆಯಾಗಿದೆ. ದ ಸಾರ್ವಜನಿಕ ಕಲ್ಯಾಣ ಯೋಜನೆಯಡಿ ರೈತರಿಗೆ ಹಣ ನೀಡಲಾಗುತ್ತಿದೆ. ಈ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು 4 ತಿಂಗಳ ಮೂರು ಕಂತುಗಳಲ್ಲಿ ಪ್ರತಿ ವರ್ಷ 6000 ರೂ. ನೀಡುವ ಭರವಸೆ ನೀಡಿತ್ತು. ವರ್ಷದಲ್ಲಿ ಮೂರು ಬಾರಿ ತಲಾ 2000 ರೂಪಾಯಿಯಂತೆ ರೈತರು ಆರು ಸಾವಿರ ರೂಪಾಯಿ ಪಡೆಯುತ್ತಾರೆ. ಭಾರತ ಸರ್ಕಾರದಿಂದ ಶೇ. 100 ಧನಸಹಾಯದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಅಂದರೆ, ಇದಕ್ಕೆ ರಾಜ್ಯ ಸರಕಾರಗಳು ಯಾವುದೇ ಕೊಡುಗೆ ನೀಡುವುದಿಲ್ಲ. ಫಲಾನುಭವಿ ರೈತ ಕುಟುಂಬಗಳನ್ನು ಗುರುತಿಸುವ ಸಂಪೂರ್ಣ ಜವಾಬ್ದಾರಿಯು ರಾಜ್ಯ ಸರ್ಕಾರಗಳ ಮೇಲಿದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು 2018 ಡಿಸೆಂಬರ್ 1ರಿಂದ ಜಾರಿಗೆ ಬಂದಿತ್ತು. ಮರು ವರ್ಷದ ಫೆಬ್ರವರಿಯಲ್ಲಿ ಮೊದಲ ಕಂತು ಬಿಡುಗಡೆಯಾಗಿತ್ತು. ಈವರೆಗೂ 18ನೇ ಕಂತು ಹಣ ಬಂದಿದೆ. ಈ ಯೋಜನೆಯಡಿಯಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿ ಆದಾಯ ಬೆಂಬಲವನ್ನು ದೇಶದಾದ್ಯಂತ ಎಲ್ಲಾ ರೈತ ಕುಟುಂಬಗಳಿಗೆ ನೀಡಲಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು, ಹಣ ದೊರಕಿರುವ ಕುರಿತು ಮಾಹಿತಿ ಪಡೆಯಲು pmkisan.gov.in ವೆಬ್‌ಸೈಟ್‌ಗೆ ಲಾಗಿನ್ ಆಗಬಹುದು.