RBI policy: ಆರ್‌ಬಿಐ ವಿತ್ತೀಯ ನೀತಿ ಪ್ರಕಟ; ರೆಪೋ ದರ ಶೇಕಡ 6.5ರಲ್ಲಿ ಸ್ಥಿರ, ಉಳಿದ ವಿವರ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rbi Policy: ಆರ್‌ಬಿಐ ವಿತ್ತೀಯ ನೀತಿ ಪ್ರಕಟ; ರೆಪೋ ದರ ಶೇಕಡ 6.5ರಲ್ಲಿ ಸ್ಥಿರ, ಉಳಿದ ವಿವರ ಹೀಗಿದೆ

RBI policy: ಆರ್‌ಬಿಐ ವಿತ್ತೀಯ ನೀತಿ ಪ್ರಕಟ; ರೆಪೋ ದರ ಶೇಕಡ 6.5ರಲ್ಲಿ ಸ್ಥಿರ, ಉಳಿದ ವಿವರ ಹೀಗಿದೆ

RBI policy meeting: ಬ್ಯಾಂಕಿಂಗ್‌ ಕ್ಷೇತ್ರದ ರೆಪೋ ದರವನ್ನು ಶೇಕಡ 6.5ರಲ್ಲೇ ಮುಂದುವರಿಸಲು ಭಾರತೀಯ ರಿಸರ್ವ್‌ ಬ್ಯಾಂಕಿನ ವಿತ್ತೀಯ ನೀತಿ ಸಮಿತಿ ಸಭೆ ತೀರ್ಮಾನಿಸಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಇದರ ವಿವರ ಹೀಗಿದೆ.

ಹಿಂದಿನ ಅಂದರೆ ಏಪ್ರಿಲ್‌ 3 ರಿಂದ 6 ರವರೆಗೆ ನಡೆದ ಆರ್‌ಬಿಐ ವಿತ್ತೀಯ ನೀತಿ ಸಭೆಯಲ್ಲಿಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿಯು ರೆಪೊ ದರಗಳನ್ನು ಶೇಕಡ 6.5ರಲ್ಲೇ ಉಳಿಸಿಕೊಂಡಿತ್ತು.
ಹಿಂದಿನ ಅಂದರೆ ಏಪ್ರಿಲ್‌ 3 ರಿಂದ 6 ರವರೆಗೆ ನಡೆದ ಆರ್‌ಬಿಐ ವಿತ್ತೀಯ ನೀತಿ ಸಭೆಯಲ್ಲಿಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿಯು ರೆಪೊ ದರಗಳನ್ನು ಶೇಕಡ 6.5ರಲ್ಲೇ ಉಳಿಸಿಕೊಂಡಿತ್ತು. (Bloomberg)

ನವದೆಹಲಿ: ರೆಪೋದರ (Repo Rate) ಶೇಕಡ 6.5ರಲ್ಲೇ ಮುಂದುವರಿಸಲು ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿ (Shaktikanta Das led MPC) ತೀರ್ಮಾನಿಸಿದೆ. ಆರ್‌ಬಿಐನ ಮೂರನೇ ದ್ವೈಮಾಸಿಕ ವಿತ್ತೀಯ ನೀತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಆರ್‌ಬಿಐ ನೀತಿ ಸಮಿತಿ ಸಭೆಯ ಬಳಿಕ ವಿವರ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “ವಿತ್ತೀಯ ನೀತಿ ಸಮಿತಿಯು ಸರ್ವಾನುಮತದಿಂದ ರೆಪೊ ದರವನ್ನು 6.50 ಪ್ರತಿಶತದಲ್ಲಿ ಮುಂದುವರಿಸಲು ನಿರ್ಧರಿಸಿದೆ” ಎಂದು ಹೇಳಿದರು.

ಭಾರತದಲ್ಲಿ ಸೂಕ್ಷ್ಮ ಮತ್ತು ಸ್ಥೂಲ ಆರ್ಥಿಕ ಬೆಳವಣಿಗೆಯಲ್ಲಿ ಏರುಗತಿಯನ್ನು ಇರಿಸಿಕೊಳ್ಳಲು ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿ (Shaktikanta Das led MPC) ಸತತ ಮೂರನೇ ಸಭೆೆಯಲ್ಲಿ (RBI monetary policy meeting) ರೆಪೊ ದರವನ್ನು 6.50 ಪ್ರತಿಶತದಲ್ಲೇ ಮುಂದುವರಿಸಲು ಸರ್ವಾನುಮತದಿಂದ ನಿರ್ಧರಿಸಿತು. ಬಡ್ಡಿದರ ಹೆಚ್ಚಳದ ಬಗ್ಗೆ ಎಂಪಿಸಿ ತನ್ನ ಸಹಮತದ ನಿಲುವನ್ನು ಉಳಿಸಿಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪುನರುಚ್ಚರಿಸಿದರು.

ಭಾರತೀಯ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಜಾಗತಿಕ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಶೇಕಡಾ 15 ರಷ್ಟಿದೆ. ಜಾಗತಿಕ ಆರ್ಥಿಕತೆಯಲ್ಲಿನ ಸವಾಲುಗಳ ನಡುವೆ ಭಾರತವು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.

ಭಾರತೀಯ ಬ್ಯಾಂಕುಗಳು ವಿವಿಧ ಮೂಲಸೌಕರ್ಯ ಯೋಜನೆಗಳಿಗೆ (ಪೈಪ್‌ಲೈನ್ ಅಡಿಯಲ್ಲಿ ಮತ್ತು ನಡೆಯುತ್ತಿವೆ) ಸುಗಮ ಸಾಲದ ಲಭ್ಯತೆಯ ಸುಳಿವು ನೀಡುವ ಸುಂದರವಾದ ನಗದು ಮೀಸಲುಗಳಲ್ಲಿವೆ ಎಂದು ಅವರು ವಿವರಿಸಿದರು.

ಹಣಕಾಸು ವರ್ಷ 2024ರಲ್ಲಿ ಜಿಡಿಪಿ ಬೆಳವಣಿಗೆ; ಆರ್‌ಬಿಐ ಭವಿಷ್ಯ ಹೀಗಿದೆ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಭಾರತದ ಹಣದುಬ್ಬರವು ಹಣಕಾಸು ವರ್ಷ 2024ರ ಮೊದಲ ತ್ರೈಮಾಸಿಕದಲ್ಲಿ ಶೇಕಡ 6.4 ಇದ್ದು ನಿರೀಕ್ಷೆಗಳಿಗೆ ಅನುಗುಣವಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ತರಕಾರಿ ಬೆಲೆಗಳಲ್ಲೂ ಇಳಿಕೆಯಾಗಲಿದೆ. 2023-24ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಹಣದುಬ್ಬರವು ಶೇಕಡಾ 6.5 ರಷ್ಟಿರುವ ನಿರೀಕ್ಷೆಯಿದೆ ಎಂದು ಅವರು ಭವಿಷ್ಯ ನುಡಿದರು.

ಗ್ರಾಹಕ ದರ ಸೂಚ್ಯಂಕದ ಹಣದುಬ್ಬರ

ಜಾಗತಿಕ ಆರ್ಥಿಕತೆಯಲ್ಲಿನ ಗರಿಷ್ಠ ಬಡ್ಡಿದರದ ಸವಾಲುಗಳು ಭಾರತದ ಬೆಳವಣಿಗೆಯ ವಿಷಯದ ಮೇಲೆ ಒತ್ತಡವನ್ನುಂಟುಮಾಡುವ ನಿರೀಕ್ಷೆಯಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದರು. ಹಣಕಾಸು ವರ್ಷ 2024 ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಶೇಕಡ 5.40ರಲ್ಲಿ ಉಳಿಯುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಶೇಕಡ 5.1 ರಷ್ಟಿತ್ತು. ಆದ್ದರಿಂದ, ಹಣಕಾಸು ವರ್ಷ 2024 ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 5.4 ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಇದು ಶೇಕಡ 5.1 ಇತ್ತು.

ಹಣಕಾಸು ನೀತಿ ಸಮಿತಿಯ ಮೊದಲ ಎರಡು ದ್ವೈಮಾಸಿಕ ಸಭೆಯ ವಿವರ

ಆರ್‌ಬಿಐ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಹಣಕಾಸು ವರ್ಷ 2024 ರ ಮೊದಲ ದ್ವೈಮಾಸಿಕ ನೀತಿಯನ್ನು ಏಪ್ರಿಲ್ 6 ರಂದು ಘೋಷಿಸಿತು. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಎಂಪಿಸಿಯು, ಹಣಕಾಸು ನೀತಿಯನ್ನು ಪರಿಶೀಲಿಸಲು ಏಪ್ರಿಲ್ 3, 5 ಮತ್ತು 6 ರಂದು ಸಭೆ ನಡೆಸಿತು. ಈ ಆರ್‌ಬಿಐ ಎಂಪಿಸಿ ಸಭೆಯಲ್ಲಿ, ತಜ್ಞರು 25 ಬಿಪಿಎಸ್ ಬಡ್ಡಿ ದರವನ್ನು ಶೇಕಡಾ 6.75 ಕ್ಕೆ ಹೆಚ್ಚಿಸುವ ನಿರೀಕ್ಷೆಯಲ್ಲಿದ್ದರು. ಆದರೆ, ಎಂಪಿಸಿಯು ಬೇರೆ ರೀತಿಯಲ್ಲಿ ಯೋಚಿಸಿತು ಮತ್ತು ರೆಪೊ ದರವನ್ನು ಶೇಕಡ 6.50ರಲ್ಲೇ ಉಳಿಸಿತು. ನಂತರ ಜೂನ್ 2023 ರ ಸಭೆಯಲ್ಲಿ ಕೂಡ ರೆಪೊ ದರ ಶೇಕಡ 6.50ರಲ್ಲೇ ಸ್ಥಿರವಾಗಿಡಲು ನಿರ್ಧರಿಸಲಾಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.