Sabarimala Pilgrimage: ಶಬರಿಮಲೆ ಯಾತ್ರೆ 2023ಕ್ಕೆ ಚಾಲನೆ, ಅಯ್ಯಪ್ಪ ದೇವಸ್ಥಾನದಲ್ಲಿ 41 ದಿನಗಳ ಮಂಡಲ ಪೂಜೆ ಶುಕ್ರವಾರದಿಂದ ಶುರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sabarimala Pilgrimage: ಶಬರಿಮಲೆ ಯಾತ್ರೆ 2023ಕ್ಕೆ ಚಾಲನೆ, ಅಯ್ಯಪ್ಪ ದೇವಸ್ಥಾನದಲ್ಲಿ 41 ದಿನಗಳ ಮಂಡಲ ಪೂಜೆ ಶುಕ್ರವಾರದಿಂದ ಶುರು

Sabarimala Pilgrimage: ಶಬರಿಮಲೆ ಯಾತ್ರೆ 2023ಕ್ಕೆ ಚಾಲನೆ, ಅಯ್ಯಪ್ಪ ದೇವಸ್ಥಾನದಲ್ಲಿ 41 ದಿನಗಳ ಮಂಡಲ ಪೂಜೆ ಶುಕ್ರವಾರದಿಂದ ಶುರು

ಶಬರಿಮಲೆ (Sabarimala) ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಮಂಡಲ ಪೂಜೆ - ಮಕರವಿಳಕ್ಕು ಉತ್ಸವಕ್ಕೆ ಇಂದು ಚಾಲನೆ ಸಿಕ್ಕಿದೆ. ನಾಳೆ (ನ.17)ಯಿಂದ 41 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ.

ಮಂಡಲ ಪೂಜೆ, ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಇಂದು (ನ.16) ತೆರೆಯಲಾಗಿದೆ. ತಂತ್ರಿ ಕಂದರಾರು ಮಹೇಶ್ ಮೋಹನರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ಗರ್ಭಗುಡಿಯನ್ನು ತೆರೆಯಲಾಯಿತು.
ಮಂಡಲ ಪೂಜೆ, ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಇಂದು (ನ.16) ತೆರೆಯಲಾಗಿದೆ. ತಂತ್ರಿ ಕಂದರಾರು ಮಹೇಶ್ ಮೋಹನರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ಗರ್ಭಗುಡಿಯನ್ನು ತೆರೆಯಲಾಯಿತು. (ANI)

ಶಬರಿಮಲೆ: ಕೇರಳದ ಶಬರಿಮಲೆ (Sabarimala) ಯಲ್ಲಿ ವರ್ಷಂಪ್ರತಿ ನಡೆಯುವ ಮಂಡಲ ಪೂಜೆ - ಮಕರವಿಳಕ್ಕು ಯಾತ್ರೆ (Sabarimala Pilgrimage 2023) ಗುರುವಾರ ಶುರುವಾಗಿದೆ. ಈ ಯಾತ್ರೆಗಾಗಿ ಬೆಟ್ಟದ ದೇಗುಲದ ದ್ವಾರಗಳು ಗುರುವಾರ ಸಂಜೆ ತೆರೆಯುತ್ತಿದ್ದಂತೆ ನೂರಾರು ಭಕ್ತರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿದರು.

ಶಬರಿಮಲೆ ಅಯ್ಯಪ್ಪ ದೇವಸ್ಥಾನ (Sabarimala Ayyappa Temple)ದಲ್ಲಿ 41 ದಿನಗಳ ಮಂಡಲ ಪೂಜೆ ಶುಕ್ರವಾರ ಶುರುವಾಗುತ್ತಿದ್ದು, ನೂರಾರು ಭಕ್ತರು ಮೊದಲ ದಿನವೇ ಅಯ್ಯಪ್ಪ ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಮಲಯಾಳಂ ಕ್ಯಾಲೆಂಡರ್ ವರ್ಷದ ವೃಶ್ಚಿಕ ಮಾಸದ ಮೊದಲ ದಿನ ಮಂಡಲ ಪೂಜೆ ಶುರುವಾಗುತ್ತದೆ.

ಮಂಡಲಪೂಜೆಗಾಗಿ ಅಯ್ಯಪ್ಪ ದೇವಸ್ಥಾನದ ಗರ್ಭಗುಡಿ ತೆರೆದ ತಂತ್ರಿ ಮತ್ತು ಮೇಲ್‌ಶಾಂತಿ

ದೇವಾಲಯದ 'ತಂತ್ರಿ' (ಪ್ರಧಾನ ಅರ್ಚಕ) ಕಂದರಾರು ಮಹೇಶ್ ಮೋಹನರು ಅವರ ನೇತೃತ್ವದಲ್ಲಿ ಅಯ್ಯಪ್ಪ ದೇವರ ಗರ್ಭಗುಡಿಯನ್ನು ತೆರೆಯಲಾಯಿತು. 'ಮೇಲ್ಶಾಂತಿ' (ಮುಖ್ಯ ಅರ್ಚಕ) ಕೆ ಜಯರಾಮನ್ ನಂಬೂತಿರಿ ಧಾರ್ಮಿಕ ವಿಧಿಗಳನ್ನು ನಡೆಸಿದರು.

‘ಸನ್ನಿಧಾನಂ’ ಎಂಬ ದೇವಾಲಯದ ಮುಖ್ಯ ಸಂಕೀರ್ಣ ಮತ್ತು ಅದರ ಆವರಣವು 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂಬ ಘೋಷಣೆಗಳಿಂದ ಪ್ರತಿಧ್ವನಿಸಲ್ಪಟ್ಟವು. ಭಕ್ತರು ಪಂಪಾ ನದಿದಂಡೆಯ ಮೂಲ ಶಿಬಿರದಿಂದ ಬೆಟ್ಟದ ದೇಗುಲವನ್ನು ತಲುಪಲು ಸಾಂಪ್ರದಾಯಿಕ ಮಾರ್ಗದ ಮೂಲಕ ಗಂಟೆಗಳ ಕಾಲ ಪಾದಯಾತ್ರೆ ನಡೆಸಿದರು.

ಶಬರಿಮಲೆ ಮತ್ತು ಮಾಳಿಗಪ್ಪುರಂ ದೇವಸ್ಥಾನಗಳ ಹೊಸ 'ಮೇಲ್ಶಾಂತಿಗಳು' ಕ್ರಮವಾಗಿ. ಪಿ ಎನ್ ಮಹೇಶ್ ಮತ್ತು ಪಿ ಜಿ ಮುರಳಿ ಅವರು ನಾಳೆ ಅಧಿಕಾರ ಸ್ವೀಕರಿಸಲಿದ್ಧಾರೆ. ಅದಕ್ಕೂ ಮುನ್ನ ಇಂದು ಅಯ್ಯಪ್ಪ ದೇಗುಲ ಮತ್ತು ಮಾಳಿಗಪ್ಪುರಂ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಅಯ್ಯಪ್ಪ ದೇಗುಲದಲ್ಲಿ ಶುಕ್ರವಾರದಿಂದ ಮಂಡಲ-ಮಕರವಿಳಕ್ಕು ಉತ್ಸವ ಶುರು

ಮಂಡಲಂ-ಮಕರವಿಳಕ್ಕು ಯಾತ್ರೆಯ ಆರಂಭಕ್ಕೆ ಶುಕ್ರವಾರ ನಸುಕಿನಲ್ಲಿ ದೇಗುಲ ತೆರೆಯುವ ಮುನ್ನವೇ ಶಬರಿಮಲೆ ಮತ್ತು ಸುತ್ತಮುತ್ತ ಈಗಾಗಲೇ ಭಕ್ತರ ನೂಕುನುಗ್ಗಲು ಕಂಡುಬಂದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ದೇವಾಲಯವನ್ನು ತೆರೆಯುವ ಸಮಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಪಿ ಎಸ್ ಪ್ರಶಾಂತ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತೀರ್ಥೋದ್ಭವಕ್ಕೆ ಮುಂಚಿತವಾಗಿ ಭಕ್ತರನ್ನು ಬರಮಾಡಿಕೊಳ್ಳಲು ಸನ್ನಿಧಾನಂ ಮತ್ತು ಪಂಪಾದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಸುಗಮ ದರ್ಶನಕ್ಕಾಗಿ ಮೂಲ ಸೌಕರ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಪಿಎಸ್ ಪ್ರಶಾಂತ್ ತಿಳಿಸಿದರು.

ದೇವಸ್ವಂ ಸಚಿವರು ವಾರದ ಹಿಂದೆ ಹೇಳಿದ್ದೇನು

ವಾರದ ಹಿಂದೆ, ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಅವರು, ಎಲ್ಲ ಭಕ್ತರಿಗೆ ಸುರಕ್ಷಿತ ಮತ್ತು ಸುಗಮ ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ತಂತ್ರಜ್ಞಾನಗಳ ಬಳಕೆ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಈ ಸೀಸನ್‌ನಲ್ಲಿ ಸನ್ನಿಧಾನದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಡೈನಾಮಿಕ್ ಕ್ಯೂ-ಕಂಟ್ರೋಲ್ ಸಿಸ್ಟಮ್ ಅನ್ನು ಪರಿಚಯಿಸಲಾಗಿದೆ. ದಟ್ಟಣೆಯ ಬಗ್ಗೆ ಭಕ್ತರಿಗೆ ತಿಳಿಸಲು ನಿಲಕ್ಕಲ್, ಪಂಪಾ ಮತ್ತು ದೇವಾಲಯದ ಸಂಕೀರ್ಣದಲ್ಲಿ ವೀಡಿಯೊ ವಾಲ್ ಅನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಪಂಪಾ ಮತ್ತು ಸನ್ನಿಧಾನಂ ನಡುವಿನ ಮಾರ್ಗದ 15 ಸ್ಥಳಗಳಲ್ಲಿ ತುರ್ತು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.