ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

Sam Pitroda: ಜನಾಂಗೀಯ ಹೇಳಿಕೆ ವಿವಾದ ನಂತರ ಕಾಂಗ್ರೆಸ್‌ ಹುದ್ದೆ ತೊರೆದ ಪಿಟ್ರೋಡಾ

ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್‌ ಪಿಟ್ರೋಡಾ( Sam Pitroda) ಅವರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹುದ್ದೆ ತೊರೆದ ಸ್ಯಾಮ್‌ ಪಿಟ್ರೋಡಾ
ಕಾಂಗ್ರೆಸ್‌ ಪಕ್ಷದ ಹುದ್ದೆ ತೊರೆದ ಸ್ಯಾಮ್‌ ಪಿಟ್ರೋಡಾ

ದೆಹಲಿ: ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥರಾಗಿದ್ದ ಸ್ಯಾಮ್‌ ಪಿಟ್ರೋಡಾ(Sam Pitroda) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜನಾಂಗೀಯ ವಿರುದ್ದದ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಗುರಿಯಾಗಿದ್ದರು. ಪಕ್ಷಕ್ಕೆ ಹಾಗೂ ನಾಯಕರಿಗೆ ಮುಜುಗರ ಆಗದಿರಲಿ ಎನ್ನುವ ಕಾರಣಕ್ಕೆ ಪಕ್ಷದ ಹುದ್ದೆಯನ್ನು ಸ್ಯಾಮ್‌ ಪಿಟ್ರೋಡಾ ತೊರೆದಿದ್ದಾರೆ. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಜೈರಾಂ ರಮೇಶ್‌ ಅವರು ಎಕ್ಸ್‌ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪೂರ್ವ ಭಾರತೀಯರು ಚೀನಾದವರ ರೀತಿ ಹಾಗೂ ದಕ್ಷಿಣ ಭಾರತೀಯರು ಆಫ್ರಿಕಾದವರ ರೀತಿ ಕಣಿಸುತ್ತಾರೆ ಎಂದು ಸ್ಯಾಮ್‌ ಪಿಟ್ರೋಡಾ ಹೇಳಿಕೆ ನೀಡಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಜನಾಂಗೀಯ ದ್ವೇಷಕ್ಕೆ ಸ್ಯಾಮ್‌ ಪಿಟ್ರೋಡಾ ದಾರಿ ಮಾಡಿಕೊಡುತ್ತಿದ್ಧಾರೆ ಎಂದು ಆರೋಪಿಸಲಾಗಿತ್ತು.

ಇದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಬಲವಾಗಿ ವಿರೋಧಿಸಿದ್ದರು. ಹಲವು ಕಡೆಯೂ ಇದಕ್ಕೆ ವಿರೋಧದ ದನಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಪಕ್ಷದ ಹುದ್ದೆಯನ್ನು ತೊರೆದಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ದಿ ಸ್ಟೇಟ್ಸ್‌ಮನ್‌ಗೆ ಸಂದರ್ಶನ ನೀಡಿದ್ದ ಸ್ಯಾಮ್ ಪಿಟ್ರೋಡಾ, ವಿಭಿನ್ನ ಬಾಹ್ಯ ನೋಟಗಳನ್ನು ಹೊಂದಿರುವ ಜನರು ಸಾಮರಸ್ಯದಿಂದ ವಾಸಿಸುವ ಪ್ರಜಾಪ್ರಭುತ್ವ ನಾನು ಇಷ್ಟ ಪಡುವ ಭಾರತ ಎಂದು ಹೇಳಿದರು. ಅಲ್ಲದೆ, ಭಾರತದ ವೈವಿಧ್ಯವನ್ನು ಬಣ್ಣಿಸುವಾಗ, ಪೂರ್ವದ ಜನರು ಚೀನೀಯರಂತೆ ಕಾಣುತ್ತಾರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣುತ್ತಾರೆ, ಉತ್ತರದ ಜನರು ಬಿಳಿಯರಂತೆ ಕಾಣುತ್ತಾರೆ ಮತ್ತು ದಕ್ಷಿಣದ ಜನರು ಆಫ್ರಿಕನ್ನರಂತೆ ಕಾಣುತ್ತಾರೆ. ಆದಾಗ್ಯೂ, ನಾವೆಲ್ಲರೂ ಸೋದರ, ಸೋದರಿಯರು ಆಗಿರುವ ಕಾರಣ ಇದು ಅಪ್ರಸ್ತುತವಾಗುತ್ತದೆ" ಎಂದು ಹೇಳಿದ್ದರು.

ಸ್ಯಾಮ್‌ ಪಿಟ್ರೋಡಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಈ ಜನಾಂಗೀಯ ಮನಸ್ಥಿತಿಯನ್ನು ನಾವು ಸ್ವೀಕರಿಸುವುದಿಲ್ಲ. ನನ್ನನ್ನು ನಿಂದಿಸಿದರೆ ಅದನ್ನು ನಾನು ಸಹಿಸಬಲ್ಲೆ, ಆದರೆ, ಜನರನ್ನು ನಿಂದಿಸಿದರೆ, ಅವರ ಚರ್ಮದ ಬಣ್ಣವನ್ನು, ಆಕಾರವನ್ನು ಆಧರಿಸಿ ಹೇಳಿಕೆಗಳನ್ನು ನೀಡಿದರೆ ಅವುಗಳನ್ನು ಸಹಿಸಲಾಗದು. ಚರ್ಮದ ಬಣ್ಣವನ್ನು ಆಧರಿಸಿ ನಾವು ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸಬಹುದೇ? ನನ್ನ ಜನರನ್ನು ಈ ರೀತಿ ಕೀಳಾಗಿ ಕಾಣಲು ರಾಜಕುಮಾರನಿಗೆ ಅನುಮತಿ ನೀಡಿದವರು ಯಾರು? ಈ ಜನಾಂಗೀಯ ಮನಸ್ಥಿತಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ" ಎಂದು ಟೀಕಿಸಿದ್ದರು.

ಈ ಹೇಳಿಕೆಗಳಿಂದ ಕಾಂಗ್ರೆಸ್‌ ಕೂಡ ಅಂತರ ಕಾಯ್ದುಕೊಂಡಿತ್ತು. ಬಳಿಕ ಹುದ್ದೆ ಪಿಟ್ರೊಡಾ ತೊರೆದಿದ್ದಾರೆ ಎನ್ನಲಾಗಿದೆ.

IPL_Entry_Point

ವಿಭಾಗ