ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Naxal Encounter: ಛತ್ತೀಸಗಢದಲ್ಲಿ ಎನ್‌ಕೌಂಟರ್‌ಗೆ ಮಹಿಳೆಯರೂ ಸೇರಿ 6 ನಕ್ಸಲರ ಬಲಿ

Naxal Encounter: ಛತ್ತೀಸಗಢದಲ್ಲಿ ಎನ್‌ಕೌಂಟರ್‌ಗೆ ಮಹಿಳೆಯರೂ ಸೇರಿ 6 ನಕ್ಸಲರ ಬಲಿ

Chhattisgarh ಛತ್ತೀಸಗಢ ರಾಜ್ಯದಲ್ಲಿ ನಕ್ಸಲರು( Naxals) ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಆರು ನಕ್ಸಲರು ಹತರಾಗಿದ್ದಾರೆ.

ಕಾರ್ಯಾಚರಣೆ ನಿರತ ಭದ್ರತಾ ಸಿಬ್ಬಂದಿ
ಕಾರ್ಯಾಚರಣೆ ನಿರತ ಭದ್ರತಾ ಸಿಬ್ಬಂದಿ

ರಾಯಪುರ: ನಕ್ಸಲ್‌ಪೀಡಿತ ಛತ್ತೀಸಗಢ ರಾಜ್ಯದಲ್ಲಿ ಸತತ ಮೂರು ದಿನಗಳಿಂದume ನಕ್ಸಲರು ಹಾಗೂ ಭದ್ರತಾ ಪಡೆಯ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ. ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ನಕ್ಸಲ್‌ ಸಮಸ್ಯೆಯಿಂದ ಬಾಧಿತವಾಗಿರುವ ಬಸ್ತಾರ್‌ ವಿಭಾಗದ ನಾರಾಯಣಪುರ ಜಿಲ್ಲೆಯಲ್ಲಿ ಶುಕ್ರವಾರದಿಂದ ನಡೆದಿದ್ದ ಘರ್ಷಣೆ ಭಾನುವಾರವೂ ಮುಂದುವರಿದಿದೆ. ಈ ವೇಳೆ ಭದ್ರತಾ ಸಿಬ್ಬಂದಿಯ ಗುಂಡೇಲಿಗೆ ಮೂವರು ಮಹಿಳಾ ನಕ್ಸಲ್‌ ಕಾರ್ಯಕರ್ತರೂ ಸೇರಿ ಆರು ಮಂದಿ ಹತರಾಗಿದ್ದಾರೆ. ಅವರ ದೇಹಗಳನ್ನು ಪಡೆಯಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದೆ.

ಟ್ರೆಂಡಿಂಗ್​ ಸುದ್ದಿ

ನಾರಾಯಣಪುರ ಜಿಲ್ಲೆಯ ಹಲವು ಭಾಗ ಅರಣ್ಯ ಪ್ರದೇಶದಿಂದ ಕೂಡಿದೆ. ಈ ಭಾಗದಲ್ಲಿ ಕೈಗೊಂಡಿರುವ ಗಣಿಗಾರಿಕೆ, ಅರಣ್ಯ ನಾಶ, ಗಿರಿಜನರ ಒಕ್ಕಲೆಬ್ಬಿಸುವಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಹೋರಾಟಗಳು ನಡೆದಿವೆ. ಆದರೆ ಪೀಪಲ್ಸ್‌ ಲಿಬರೇಷನ್‌ ಗೊರಿಲ್ಲಾ ಆರ್ಮಿ( PLGA) ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಇದು ನಕ್ಸಲ್‌ ಚಟುವಟಿಕೆ ತೀವ್ರಗೊಳ್ಳಲು ಕಾರಣವಾಗಿದೆ. ಆಗಾಗ ಸಂಘರ್ಷಗಳು ನಡೆದುಕೊಂಡು ಬಂದಿವೆ.

ಈ ನಡುವೆ ನಕ್ಸಲರು ನಾರಾಯಣಪುರ ಜಿಲ್ಲೆಯ ಗೋಬೆಲ್‌ ಹಾಗೂ ತುಲ್ತುಲಿ ಎಂಬ ಹಳ್ಳಿಗಳ ಸಮೀಪದಲ್ಲಿ ಹಣ ಹಾಗೂ ಶಸ್ತ್ರಾಸ್ತ ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿದ್ದರು. ಆರ್ಚಾ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಚುರುಕುಗೊಂಡಿತ್ತು. ಈ ವೇಳೆ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಹಾಗೂ ಸಿಆರ್‌ಪಿಎಫ್‌ನ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿತ್ತು. ನಕ್ಸಲ್‌ ತಂಡದವರು ದಾಳಿ ನಡೆಸಿದರೆ, ಪೊಲೀಸರು ಮರು ದಾಳಿ ಮಾಡಿದ್ದರು. ಅವರನ್ನು ಸೆರೆ ಹಿಡಿಯಲು ಎರಡು ದಿನದಿಂದ ಕಾರ್ಯಾಚರಣೆ ನಿರಂತರವಾಗಿ ನಡೆದಿತ್ತು. ಈ ವೇಳೆ ಭದ್ರತಾ ಪಡೆಗಳ ದಾಳಿಗೆ ಆರು ಮಂದಿ ಹತರಾಗಿದ್ದು. ಉಳಿದವರು ಅಲ್ಲಿಂದ ಪರಾರಿಯಾಗಿದ್ದಾರೆ. ಅವರು ಇದ್ದ ಸ್ಥಳದಲ್ಲಿ ರೈಫಲ್ಗಳು, ಬ್ಯಾರಲ್‌ ಗ್ರನೇಡ್‌ ಲಾಂಚರ್‌ ಗಳು, ಶೆಲ್‌ಗಳು, ಕುಕ್ಕರ್‌ ಬಾಂರ್‌, ಐದು ಬ್ಯಾಗ್‌ಗಳು, ಸ್ಪೋಟಕ ವಸ್ತುಗಳು, ಔಷಧಗಳು ಹಾಗೂ ದಿನಬಳಕೆ ವಸ್ತುಗಳು ಸಿಕ್ಕಿವೆ.

ಆ ಭಾಗದಲ್ಲಿ ದಾಳಿ ನಡೆದಿರುವುದರಿಂದ ಹಲವು ಕಡೆ ರಕ್ತದ ಕಲೆಗಳು ಕಂಡು ಬಂದಿವೆ. ಈ ಹಿಂದೆಯೂ ಇಲ್ಲಿ ಗುಂಡಿನ ದಾಳಿಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಸ್ತಾರ್‌ ವಲಯದ ಐಜಿಪಿ ಪಿ. ಸುಂದರರಾಜ್‌, ಈ ಭಾಗದಲ್ಲಿ ನಕ್ಸಲರು ಸಕ್ರಿಯವಾಗಿದ್ದಾರೆ. ಈ ಗಲೂ ಹಣ ಹಾಗೂ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ನಿಖರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ದಾಳಿ ನಡೆಸಿವೆ. ಈ ವೇಳೆ ಆರು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮೂರು ಮಂದಿ ಪೊಲೀಸರು ಗಾಯಗೊಂಡಿದೆ. ಕಾರ್ಯಾಚರಣೆ ಈ ಭಾಗದಲ್ಲಿ ಮೂರನೇ ದಿನವೂ ಮುಂದುವರಿದಿದೆ ಎಂದು ಹೇಳಿದ್ದಾರೆ.

ಭದ್ರತಾ ಸಿಬ್ಬಂದಿ ದಾಳಿ ಹಿನ್ನೆಲೆಯಲ್ಲಿ ಛತ್ತೀಸಗಢದ ಬಸ್ತಾರ್‌, ದಂತೇವಾಡ, ನಾರಾಯಣಪುರ, ಕೊಂಡಗಾಂವ್‌ ಸಹಿತ ಹಲವು ಭಾಗಗಳಲ್ಲಿ ಮರುದಾಳಿ ನಡೆಯಬಹುದು ಎನ್ನುವ ಕಾರಣಕ್ಕೆ ಭದ್ರತಾ ಪಡೆಗಳು ಸನ್ನದ್ದವಾಗಿವೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ