ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್
ಶಿಕ್ಷಕರೊಬ್ಬರು ತರಗತಿಯಲ್ಲಿ ವಿದ್ಯಾರ್ಥಿಗೆ ಹೊಡೆದಿದ್ದರಿಂದ ಆತನ ಶ್ರವಣ ಹಾಳಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ( Uttar pradesh) ನಡೆದಿದೆ.

ಲಕ್ನೋ: ಆತ 10ನೇ ತರಗತಿ ವಿದ್ಯಾರ್ಥಿ. ಗಣಿತದ ತರಗತಿ ನಡೆಯುತ್ತಿತ್ತು. ಮೇಷ್ಟ್ರು ಪಾಠ ಮಾಡುತ್ತಿದ್ದರೂ ಸ್ನೇಹಿತನೊಂದಿಗೆ ಮಾತನಾಡುತ್ತಲೇ ಇದ್ದ. ಇದು ಗಣಿತ ತರಗತಿ ಮೊದಲೇ ಅರ್ಥವಾಗುವುದಿಲ್ಲ.ಮಾತು ಬಿಟ್ಟು ಪಾಠ ಕೇಳಿ ಎಂದು ಶಿಕ್ಷಕ ಮಾತನಾಡುತ್ತಿದ್ದವರಿಗೆ ಹೇಳಿದರು. ಆದರೂ ಮಾತು ನಿಲ್ಲಲಿಲ್ಲ. ಆ ವಿದ್ಯಾರ್ಥಿ ಮಾತು ಮುಂದುವರೆಸಿದ. ಎಷ್ಟು ಹೇಳಿದರೂ ಮಾತು ಕೇಳಲಿಲ್ಲ ಎಂದು ಹತ್ತಿರ ಬಂದ ಶಿಕ್ಷಕ ವಿದ್ಯಾರ್ಥಿಗೆ ಜೋರಾಗಿಯೇ ಬಾರಿಸಿದ. ಶಿಕ್ಷಕ ಹೊಡೆದ ಪರಿಣಾಮ ವಿದ್ಯಾರ್ಥಿಯ ಕಿವಿಯೇ ಕೇಳಿಸದ ಹಾಗೆ ಆಗಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಲಿಯಾ ಸಮೀಪದ ಪಿರ್ಪೌಲಿ ಬರ್ಹಾಗಾಂವ್‌ನ ಶಾಲೆಯಲ್ಲಿ. ಉಬಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಶಿಕ್ಷಕನ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ.
ಇದು ನಡೆದಿದ್ದು ಮೇ 13 ರಂದು. ಪಿರ್ಪೌಲಿ ಬರ್ಹಾಗಾಂವ್‌ನ ಖಾಸಗಿ ಶಾಲೆಯಲ್ಲಿ ತರಗತಿ ನಡೆಯುತ್ತಿತ್ತು. 10ನೇ ತರಗತಿಯಾಗಿದ್ದರಿಂದ ಶಿಕ್ಷಕರು ಗಣಿತ ವಿಷಯದ ಕುರಿತು ತಿಳಿ ಹೇಳುತ್ತಿದ್ದರು. ಅದೇ ತರಗತಿಯ ವಿದ್ಯಾರ್ಥಿ ಪ್ರತೀಕ್ ಎಂಬಾತ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದ.
ತರಗತಿಯಲ್ಲಿ ಮಾತನಾಡುವುದು ಬೇಡ. ಇದರಿಂದ ಇತರರಿಗೂ ಅಡಚಣೆಯಾಗಲಿದೆ ಎಂದು ಶಿಕ್ಷಕ ರಾಘವೇಂದ್ರ ಮನವರಿಕೆ ಮಾಡಿಕೊಟ್ಟರು. ಆದರೂ ಮಾತು ನಿಲ್ಲಿಸುವ ಸೂಚನೆ ಕಾಣಲಿಲ್ಲ.
ಇದರಿಂದ ಸಿಟ್ಟಿಗೆ ಒಳಗಾದ ರಾಘವೇಂದ್ರ ಅವರು ವಿದ್ಯಾರ್ಥಿ ಪ್ರತೀಕ್ ಬಳಿಯೇ ಹೋಗಿ ಚೆನ್ನಾಗಿ ಏಟು ಕೊಟ್ಟರು. ಏಟು ಕೊಟ್ಟಿದ್ದು ಕಿವಿಗೂ ತಾಗಿತ್ತು. ನೋವಾಗಿದ್ದರೂ ವಿದ್ಯಾರ್ಥಿ ತರಗತಿ ಮುಗಿಸಿ ಮನೆಗೆ ಹೋಗಿದ್ದ. ಎರಡು ದಿನ ನಂತರ ಆತನ ಕಿವಿ ಕೇಳಿಸದ ಸ್ಥಿತಿ ಕಂಡು ಬಂದಿತು.
ಮನೆಯವರಿಗೆ ಎರಡು ದಿನದ ಹಿಂದೆ ನಡೆದಿದ್ದ ಘಟನೆಯನ್ನು ವಿವರಿಸಿದ್ದ. ತಂದೆ ಪ್ರವೀಣ್‌ಕುಮಾರ್ ಮಧುರ್‌ಕರ್ ಅವರು ಶಾಲೆಗೆ ತೆರಳಿ ವಿವರಣೆ ಕೇಳಿದರು. ಶಿಕ್ಷಕರಿಂದ ಸಮರ್ಪಕ ಉತ್ತರ ಬಾರದೇ ಇದ್ದಾಗ ಶಾಲೆ ಮುಖ್ಯಸ್ಥರಿಗೂ ವಿಚಾರ ತಿಳಿಸಿದರು.
ಅಲ್ಲಿಯೂ ಸ್ಪಂದನೆ ಸಿಗದೇ ಇದ್ದಾಗ ಪ್ರವೀಣ್ ಕುಮಾರ್ ಅವರು ಠಾಣೆಗೆ ತೆರಳಿ ದೂರು ನೀಡಿದರು. ನನ್ನ ಮಗನ ಶ್ರವಣ ದೋಷವೇ ಹಾಳಾಗುವ ಹಾಗೆ ಹೊಡೆದಿದ್ದಾರೆ. ಆತನ ಭವಿಷ್ಯ ಹಾಳಾಗಿದೆ. ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಲೀ ಎಂದು ಮನವಿ ಮಾಡಿದ್ದರು. ಈಗ ಶಿಕ್ಷಕನ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ದೇಹದ ಭಾಗ ಊನ ಮಾಡಿದ್ದು ಹಾಗೂ ನೋವು ಉಂಟು ಮಾಡಿದ್ದರ ವಿರುದ್ದ ಮೊಕದ್ದಮೆ ದಾಖಲಿಸಲಾಗಿದೆ. ಈ ಕುರಿತು ಶಿಕ್ಷಕನನ್ನು ಕರೆಯಿಸಿ ವಿವರಣೆ ಕೇಳಲಾಗಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಠಾಣಾಧಿಕಾರಿ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ವಿಭಾಗ