Chandrababu Naidu: ಆಗ ಮುಖ್ಯಮಂತ್ರಿ, ಈಗ ಅಸಹಾಯಕ; ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಎದುರು ಹತ್ತಾರು ಸವಾಲು
ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರಾಜಕೀಯವಾಗಿ ಅತ್ಯಂತ ಅಸಹಾಯಕ ಮತ್ತು ಹತಾಶ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆಡಳಿತ ಪಕ್ಷವನ್ನು ಹಣಿಯಲು ಹಾಕುವ ಪ್ಲಾನ್‌ಗಳು ಇವರಿಗೇ ತಿರುಮಂತ್ರವಾಯ್ತಾ? ಅಗೋಚರ ಶಕ್ತಿಗಳಿಂದ ಇವರಿಗೆ ಇಂಥ ಪರಿಸ್ಥಿತಿ ಬಂತಾ?

ವಿಶಾಖಪಟ್ಟಣಂ: ಆಂಧ್ರಪ್ರದೇಶ ಮತ್ತು ರಾಷ್ಟ್ರಮಟ್ಟದ ರಾಜಕೀಯದಲ್ಲಿ ತಮ್ಮದೇ ಆದ ಛಾವು ಮೂಡಿಸಿದ್ದ ಖ್ಯಾತ ನಟ ಎನ್‌ಟಿಆರ್ ಅವರ ಅಳಿಯ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (ChandraBabu Naidu) ಅವರು ರಾಜಕೀಯವಾಗಿ ಅತ್ಯಂತ ಹತಾಶ ಹಾಗೂ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಟ್ರೆಂಡಿಂಗ್ ಸುದ್ದಿ
ದೇಶದ ರಾಜಕೀಯದಲ್ಲಿ ತೊಡೆತಟ್ಟಿದ್ದ ನಾಯ್ಡು ಅವರ ಕಾಲುಗಳು ಈಗ ಒಂದಡಿ ಮುಂದೆ ಇಡೋಕು ನೂರು ಬಾರಿ ಯೋಚಿಸುವಂತೆ ಮಾಡುತ್ತಿದೆ. ಒಂದು ಕಾಲದಲ್ಲಿ ರಾಷ್ಟ್ರಮಟ್ಟದಲ್ಲೇ ಏಕಾಂಗಿಯಾಗಿ ಮೈತ್ರಿ ಕೂಟಗಳನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಇವರಿಗೆ ಈಗ ಯಾವುದೇ ಪಕ್ಷ ಬೆಂಬಲ ನೀಡಲು ಮುಂದೆ ಬರುತ್ತಿಲ್ಲ. ಹರೇ ಇಷ್ಟಕ್ಕೂ ಚಂದ್ರಬಾಬು ನಾಯ್ಡು ಅವರಿಗೆ ಯಾಕೆ ಹೀಗಾಯ್ತು ಅನ್ನೋದರ ವಿವರ ಇಲ್ಲಿದೆ.
ಪ್ರಧಾನಿ, ರಾಷ್ಟ್ರಪತಿ ಆಯ್ಕೆಯಲ್ಲಿ ಪ್ರಭಾವಿಯಾಗಿದ್ದ ರಾಜಕಾರಣಿ ಸ್ಥಿತಿ ಈಗ ಹೇಗಿದೆ?
ತೆಲುಗು ದೇಶಂ ಪಕ್ಷದ (TDP) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ರಾಜಕೀಯವಾಗಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಂತಿದೆ. ಮೈತ್ರಿಕೂಟ ರಚನೆ, ಪ್ರಧಾನಿ, ರಾಷ್ಟ್ರಪತಿಗಳ ನೇಮಕದಲ್ಲಿ ಪ್ರಭಾವಿಯಾಗಿದ್ದ ವ್ಯಕ್ತಿ ಇವತ್ತು ಜೈನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಕಳೆದ ಮೂರು ದಶಕಗಳಿಂದ ಆಂಧ್ರಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರಿಗೆ ಹೀಗೆ ಆಗಿದ್ದು ಯಾಕೆ? ಮುಂದೆ ಇವರ ರಾಜಕೀಯ ಭವಿಷ್ಯ ಏನಾಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ನಾಲ್ಕೂವರೆ ದಶಕಗಳ ರಾಜಕೀಯ ಅನುಭವ ಇದ್ದರೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇವರಿಗೆ ಸಿಕ್ಕ ಮನ್ನಣೆಯೇ ಬೇರೆ. ರಾಜಕೀಯ ನಾಯಕ ಎನ್ನುವುದಕ್ಕಿಂತಲೂ ತನ್ನನ್ನು ಸಿಇಒ ಎಂದು ತೋರಿಸಿಕೊಂಡ ವಿಷನರಿ ಬಾಬು ಕನಸಿನಲ್ಲೂ ಕೂಡ ಇಂಥ ಕಷ್ಟಗಳನ್ನು ಎದುರಿಸುತ್ತೇನೆಂದು ಅಂದುಕೊಂಡಿರಲಿಲ್ಲ.
ರಾಜಕೀಯ ಮರುಜನ್ಮಕ್ಕಾಗಿ ರಣತಂತ್ರ ರೂಪಿಸಿದ್ದ ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು ಅವರ ದೂರದೃಷ್ಟಿ ಯಾವಾಗಲೂ ಎರಡು ದಶಕಗಳ ಮುಂದೆ ಇರುತ್ತದೆ ಎಂದು ಹೇಳಲಾಗುತ್ತದೆ. ಆಂಧ್ರದ ಅಭಿವೃದ್ಧಿಗಾಗಿ ಹಿಂದೆಂದೂ ಕೇಳದ ಹತ್ತಾರು ಘೋಷಣೆಗಳನ್ನು ಮಾಡಿದ್ದರು. ಆದರೆ 2020ರಲ್ಲಿ ನಾಯ್ಡು ಅವರು ಅಧಿಕಾರದಿಂದಲೇ ಕೇಳಗೆ ಇಳಿಯಬೇಕಾಯಿತು. ಇಷ್ಟಕ್ಕೆ ಸುಮ್ಮನಾಗದ ಅವರು 2027 ಚುನಾವಣೆಗಾಗಿ ಮತ್ತೊಂದು ಕಹಳೆಯನ್ನು ಊದಿ ಮುಂದಿನ ರಾಜಕಾರಣ ತಮ್ಮದೇ ಅಂತ ಭವಿಷ್ಯವನ್ನು ನುಡಿದಿದ್ದರು. ಬರೀ ಮಾತಿಗಷ್ಟೇ ಸಮೀತವಾಗದೆ ಇದಕ್ಕಾಗಿ ತಂತ್ರ, ರಣತಂತ್ರಗಳನ್ನೇ ರೂಪಿಸಿದ್ದರು.
ಸ್ಕಿಲ್ ಡೆವಲಪ್‌ಮೆಂಟ್ ಪ್ರಕರಣದಲ್ಲಿ ಯಾವಾಗ ಚಂದ್ರಬಾಬು ನಾಯ್ಡು ಅವರು ಸಂಕಷ್ಟಕ್ಕೆ ಸಿಲುಕಿದರೋ ಅಂದಿನಿಂದ ಅವರ ಪ್ಲಾನ್‌ಗಳೇ ಉಲ್ಟಾ ಪಲ್ಟಾ ಆಗಿವೆ. ಇದೇ ಕೇಸ್‌ನಲ್ಲಿ ನಾಯ್ಡು ಅವರು ಜೈಲು ಸೇರಿದ್ದಾರೆ. ಅಕ್ಟೋಬರ್ 3ರವರೆಗೆ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ. ಕೋರ್ಟ್ ಯಾವಾಗ ವಿಚಾರಣೆ ನಡೆಸುತ್ತದೆ ಎಂಬುದನ್ನು ಕಾಯುವುದನ್ನು ಬಿಟ್ಟರೆ ಟಿಡಿಪಿಗೆ ಬೇರೆ ಮಾರ್ಗವೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಚಂದ್ರಬಾಬು ನಾಯ್ಡು ಅವರ ರಾಜಕೀಯ ಸಂಕಷ್ಟಕ್ಕೆ ಕಾರಣವೇನು ಎಂಬ ಚರ್ಚೆಗಳು ನಡೆಯುತ್ತಿವೆ.
ನಾಯ್ಡು ರಾಜಕೀಯ ಸಂಕಷ್ಟಕ್ಕೆ ಕಾರಣವೇನು?
ಚಂದ್ರಬಾಬು ಅವರ ಬಂಧನವಾಗಿರುವುದು ದ್ವೇಷದ ರಾಜಕಾರಣ ಎಂದು ಅವರ ಬೆಂಬಲಿಗರು ಆರೋಪ, ಟೀಕೆಗಳನ್ನು ಮಾಡುತ್ತಾ ತಿರುಗಾಡುತ್ತಿದ್ದಾರೆ. ಈ ಕ್ರಮದಲ್ಲಿ ಒಂದು ವಿಷಯವನ್ನು ಮುಖ್ಯವಾಗಿ ಗಮನಿಸಬೇಕು. ಟಿಡಿಪಿಯ ಈ ಎಲ್ಲಾ ಟೀಕೆ, ಆರೋಪಗಳ ಟಾರ್ಗೆಟ್ ವೈಎಸ್‌ಆರ್ ಕಾಂಗ್ರೆಸ್.
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ರಾಜಕೀಯ ಎದುರಾಳಿಗಳನ್ನು ಮಟ್ಟಹಾಕಲು ಹೀಗೆ ಮಾಡುತ್ತಿದ್ದಾರೆ ಎಂಬ ಅನುಮಾನಗಳೂ ಇವೆ. ಜಗನ್ ಅವರು ಟಿಡಿಪಿ ನಾಯಕರ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಹೀಗೆ ಮಾಡಿರಬಹುದು ಅಂತಲೂ ಹೇಳಲಾಗುತ್ತಿದೆ.
ಟಿಡಿಪಿ ನಾಯಕರ ಆರೋಪಗಳೇನು?
ರಾಜಕೀಯವಾಗಿ 40 ವರ್ಷಗಳ ಅನುಭವ, ಮುಖ್ಯಮಂತ್ರಿಯಾಗಿ ಸಾಕಷ್ಟು ಪ್ರಭಾವ, ತೆಲುಗು ದೇಶಂ ಪಕ್ಷದ ಮೂಲಕ ತಮ್ಮೇ ಆದ ಪಡೆಯನ್ನು ಕಟ್ಟಿಕೊಂಡಿದ್ದ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಹೀಗೆ ಮಾಡಲು ಧೈರ್ಯ ಯಾರಿಗಿದೆ? ರಾಜಕೀಯವಾಗಿ ಎದುರಿಸಲಾಗದೆ ಸಿಎಂ ಜಗನ್ ಅವರೇ ಹೀಗೆ ಮಾಡುತ್ತಿದ್ದಾರೆ ಎಂದು ಟಿಡಿಪಿ ನಾಯಕರು ಆರೋಪಿಸುತ್ತಿದ್ದಾರೆ.
ಚಂದ್ರಬಾಬು ನಾಯ್ಡು ರಾಜಕೀಯವಾಗಿ ಎದುರಿಸುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಗೆ ಜಗನ್ ಮೋಹನ್ ರೆಡ್ಡಿ ಅವರನ್ನು ದೂಷಿಸಲು ಟಿಡಿಪಿ ಮುಖಂಡರು ಪ್ರಯತ್ನಿಸುತ್ತಿದ್ದರೂ ಜಗನ್ ಅವರಿಗೆ ಇಷ್ಟು ಧೈರ್ಯ ಬರಲು ಯಾರು ಕಾರಣಕರ್ತರು ಅಂತ ಗೊತ್ತಿದ್ದರೂ ಈ ಬಗ್ಗೆ ಮಾತನಾಡಲು ತೆಲುಗು ದೇಶಂ ಪಕ್ಷದವರಗೆ ಧೈರ್ಯ ಸಾಲುತ್ತಿಲ್ಲ.
ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಹಿಂದಿರುವ ಶಕ್ತಿ ಯಾವುದು?
ಜಗನ್ ಮೋಹನ್ ರೆಡ್ಡಿ ಅವರು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೂ ಅದ್ಯಾವ ಅದೃಶ್ಯ ಶಕ್ತಿಗಳಿಂದ ಸಿಎಂ ಜಗನ್ ಅವರಿಗೆ ಇಷ್ಟೊಂದು ಶಕ್ತಿ ಬಂದಿದೆ ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ. ಚಂದ್ರಬಾಬು ನಾಯ್ಡು ಅವರ ಬಂಧನ ವಿಚಾರದಲ್ಲೂ ಕೆಲ ಅಗೋಚರ ಶಕ್ತಿಗಳ ಸಹಕಾರ ಸಾಕಷ್ಟಿದೆ ಎನ್ನುವುದು ಪ್ರಸ್ತುತ ಸನ್ನಿವೇಶಗಳು ಸಾಬೀತು ಮಾಡುತ್ತಿವೆ.
ಬಾಬು ಅವರ ರಾಜಕೀಯ ತಪ್ಪುಗಳು, ಸಮರ್ಥನೀಯವಲ್ಲದ ನಿರ್ಧಾರಗಳು, ಅವಕಾಶವಾದಿ ಹೇಳಿಕೆಗಳು ಹಾಗೂ ದುರಾಡಳಿತದ ತಂತ್ರಗಳಿಗೆ ಬೆಲೆ ತೆತ್ತಂತಿದೆ. ನಾಯ್ಡು ಅವರು ಯುಪಿಎ ಅಥವಾ ಎನ್‌ಡಿಎಗೆ ಹತ್ತಿರವಾಗಲು ಸಾಧ್ಯವಾಗಲಿಲ್ಲ. ವಿಶ್ವಾಸಾರ್ಹ ಪಾಲುದಾರರಾಗಿ ಯಾರೊಂದಿಗೂ ಉಳಿದಿಲ್ಲದ ಅವರ ರಾಜಕೀಯ ಜೀವನ ಸದ್ಯದ ಮಟ್ಟಕ್ಕೆ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿದೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟಕ್ಕೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಲೇಖನ