ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ, ಟಿಟಿಡಿ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ

Tirumala Darshan Tickets: ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ ಶುರುವಾಗಲಿದೆ. ಈ ಸಂಬಂಧ ಟಿಟಿಡಿ, ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟ ಮಾಡಿದೆ. ಅದರ ಪೂರ್ಣ ವಿವರ ಇಲ್ಲಿದೆ.

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ ಶುರುವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಟಿಟಿಡಿಯ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)
ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನದ ಆಗಸ್ಟ್‌ನ ಟಿಕೆಟ್ ಹಂಚಿಕೆ ಮೇ 18ಕ್ಕೆ ಶುರುವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಟಿಟಿಡಿಯ ಆನ್‌ಲೈನ್‌ ಕೋಟಾ ವೇಳಾಪಟ್ಟಿ ಪ್ರಕಟವಾಗಿದೆ. (ಸಾಂಕೇತಿಕ ಚಿತ್ರ)

ತಿರುಮಲ: ಜಗತ್ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಆಗಸ್ಟ್ ತಿಂಗಳ ಶ್ರೀವಾರಿ ದರ್ಶನಕ್ಕೆ ಟಿಕೆಟ್ ಕೋಟಾ ವೇಳಾಪಟ್ಟಿಯನ್ನು ಟಿಟಿಡಿ ಗುರುವಾರ (ಮೇ 8) ಬಿಡುಗಡೆ ಮಾಡಿದೆ. ತಿರುಮಲ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ (Tirumala Srivari Arjitha Seva Tickets 2024) ಕೋಟಾವನ್ನು ಮೇ 18 ರಂದು ಬಿಡುಗಡೆ ಮಾಡಲಾಗುವುದು. ಬೆಳಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಈ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಟಿಟಿಡಿ ಪ್ರಕಟಿಸಿದೆ.

ಈ ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಐಪಿ ರಿಜಿಸ್ಟ್ರೇಶನ್‌ (Electronic DIP Registration) ಮಾಡಲು ಮೇ 20ರ ಬೆಳಗ್ಗೆ 10 ಗಂಟೆ ತನಕ ಕಾಲಾವಕಾಶವಿದೆ. ಮೇ 20 ರಿಂದ 22ರ ಒಳಗೆ ಮಧ್ಯಾಹ್ನ 12 ಗಂಟೆ ಒಳಗೆ ಹಣ ಪಾವತಿ ಮಾಡಿದವರಿಗೆ ಲಕ್ಕಿಡಿಪ್‌ ಮೂಲಕ ಆಯ್ಕೆ ಮಾಡಿ ಟಿಕೆಟ್ ನೀಡಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ಶ್ರೀವಾರಿ ದೇವಸ್ಥಾನದಲ್ಲಿ ವಾರ್ಷಿಕ ಪವಿತ್ರೋತ್ಸವ ಆಗಸ್ಟ್ 15 ರಿಂದ 17 ರವರೆಗೆ ನಡೆಯಲಿದೆ. ಇದಕ್ಕೆ ಸಂಬಂಧಿಸಿ ಮೇ 21 ರಂದು ಬೆಳಿಗ್ಗೆ 10 ಗಂಟೆಗೆ ಸೇವಾ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಹೇಳಿದೆ.

ಯಾವಾಗ ಯಾವ ಟಿಕೆಟ್‌ ಆನ್‌ಲೈನ್‌ನಲ್ಲಿ ಬಿಡುಗಡೆ

ಮೇ 21 ರಂದು ವರ್ಚುವಲ್ ಸೇವೆಗಳ ಕೋಟಾ ಬಿಡುಗಡೆ

ವರ್ಚುವಲ್ ಸೇವೆಗಳ ಆಗಸ್ಟ್ ಕೋಟಾ ಮತ್ತು ಅವುಗಳ ವೀಕ್ಷಣೆ ಸ್ಲಾಟ್‌ಗಳು ಮೇ 21 ರಂದು ಲಭ್ಯವಿರುತ್ತವೆ. ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ.

ಮೇ 23 ರಂದು ಅಂಗಪ್ರದಕ್ಷಿಣೆ ಟೋಕನ್‌ಗಳು

ಆಗಸ್ಟ್ ತಿಂಗಳ ಅಂಗಪ್ರದಕ್ಷಿಣೆ ಟೋಕನ್‌ಗಳ ಕೋಟಾವನ್ನು ಮೇ 23 ರಂದು ಬಿಡುಗಡೆ ಮಾಡಲಾಗುತ್ತದೆ. 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಶ್ರೀವಾಣಿ ಟಿಕೆಟ್ ಆನ್‌ಲೈನ್ ಕೋಟಾ

ಆಗಸ್ಟ್ ತಿಂಗಳ ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಾಗಿ ಟಿಟಿಡಿ ಆನ್‌ಲೈನ್ ಕೋಟಾವನ್ನು ಮೇ 23 ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಿದೆ.

ವೃದ್ಧರು, ಅಂಗವಿಕಲರಿಗಾಗಿ ದರ್ಶನ ಕೋಟಾ

ವಯೋವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತಿರುಮಲ ಶ್ರೀವರ ದರ್ಶನಕ್ಕೆ ಅನುಕೂಲವಾಗುವಂತೆ ಆಗಸ್ಟ್ ತಿಂಗಳ ಉಚಿತ ವಿಶೇಷ ದರ್ಶನ ಟೋಕನ್‌ಗಳ ಕೋಟಾವನ್ನು ಮೇ 23 ರಂದು ಬಿಡುಗಡೆ ಮಾಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಟಿಟಿಡಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಿದೆ.

ಮೇ 24 ರಂದು ವಿಶೇಷ ಪ್ರವೇಶ ಭೇಟಿ ಟಿಕೆಟ್ ಕೋಟಾ ಬಿಡುಗಡೆ

ಆಗಸ್ಟ್ ತಿಂಗಳ ವಿಶೇಷ ಪ್ರವೇಶ ಭೇಟಿ ಟಿಕೆಟ್ ಕೋಟಾವನ್ನು ಮೇ 24 ರಂದು ಬೆಳಿಗ್ಗೆ 10 ಗಂಟೆಗೆ ಟಿಟಿಡಿ ಬಿಡುಗಡೆ ಮಾಡಲಿದೆ.

ತಿರುಮಲ ಮತ್ತು ತಿರುಪತಿಯಲ್ಲಿ ರೂಮ್ ಕೋಟಾ ಬಿಡುಗಡೆ

ತಿರುಮಲ ಮತ್ತು ತಿರುಪತಿಯಲ್ಲಿ ಆಗಸ್ಟ್ ತಿಂಗಳ ಕೊಠಡಿ ಕೋಟಾವನ್ನು ಟಿಟಿಡಿ ಮೇ 24 ರಂದು ಬಿಡುಗಡೆ ಮಾಡಲಿದೆ. ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದೆ.

ಶ್ರೀವಾರಿ ಸೇವಾ ಕೋಟಾ ಮೇ 27 ರಂದು ಬಿಡುಗಡೆ

ತಿರುಮಲ-ತಿರುಪತಿ ಶ್ರೀವಾರಿ ಸೇವಾ ಕೋಟಾ ಮೇ 27 ರಂದು ಬೆಳಿಗ್ಗೆ 11 ಗಂಟೆಗೆ, ನವನೀತ ಸೇವೆ ಮಧ್ಯಾಹ್ನ 12 ಗಂಟೆಗೆ, ಪರಕಾಮಣಿ ಸೇವೆಯನ್ನು ಮಧ್ಯಾಹ್ನ 1 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಶ್ರೀವಾರಿ ಆರ್ಜಿತ ಸೇವೆ ಮತ್ತು ದರ್ಶನ ಟಿಕೆಟ್‌ಗಳನ್ನು https://ttdevasthanams.ap.gov.in ವೆಬ್‌ಸೈಟ್ ಮೂಲಕ ಕಾಯ್ದಿರಿಸುವಂತೆ ಟಿಟಿಡಿ ಪ್ರಕಟಣೆಯಲ್ಲಿ ಕೋರಿದೆ.

ಶ್ರೀ ವೆಂಕಟೇಶ್ವರ ಸಂಗೀತ, ನೃತ್ಯ ಕಾಲೇಜು, ಎಸ್‌ವಿ ನಾದಸ್ವರಂ, ಡೋಲು ಪಾಠಶಾಲಾ ಟಿಟಿಡಿಯ ಆಶ್ರಯದಲ್ಲಿ 2024-25ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ನಿಯತ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಧಿಸೂಚನೆ ಪ್ರಕಟಿಸಿದೆ. ಮೇ 25 ರಿಂದ ಕಾಲೇಜುಗಳಲ್ಲಿ ಅರ್ಜಿಗಳನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಜೂನ್ 121 ಅಂತಿಮ ದಿನ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.