Trekkers missing: ಉತ್ತರಾಖಂಡದಲ್ಲಿ ಚಾರಣಕ್ಕೆ ಹೋದ ಕರ್ನಾಟಕದ 4 ಮಂದಿ ಸಾವು, 11 ಚಾರಣಿಗರ ರಕ್ಷಣೆ-india news trekkers from karnataka missing in uttarakhand northkashi sahastra tal trek area rescue operation started kub ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Trekkers Missing: ಉತ್ತರಾಖಂಡದಲ್ಲಿ ಚಾರಣಕ್ಕೆ ಹೋದ ಕರ್ನಾಟಕದ 4 ಮಂದಿ ಸಾವು, 11 ಚಾರಣಿಗರ ರಕ್ಷಣೆ

Trekkers missing: ಉತ್ತರಾಖಂಡದಲ್ಲಿ ಚಾರಣಕ್ಕೆ ಹೋದ ಕರ್ನಾಟಕದ 4 ಮಂದಿ ಸಾವು, 11 ಚಾರಣಿಗರ ರಕ್ಷಣೆ

Karnataka Trekkers ಕರ್ನಾಟಕದಿಂದ ಉತ್ತರಾಖಂಡಕ್ಕೆ ಚಾರಣಕ್ಕೆಂದು ಹೋದವರು ಕಾಣೆಯಾಗಿದ್ದು. ಹುಡುಕಾಟ ನಡೆದಿದೆ.

ಉತ್ತರಕಾಂಡದಲ್ಲಿ ಚಾರಣಕ್ಕೆ ಹೋಗಿ ಸಿಲುಕಿದವರ ರಕ್ಷಣಾ ಕಾರ್ಯ ನಡೆದಿದೆ.
ಉತ್ತರಕಾಂಡದಲ್ಲಿ ಚಾರಣಕ್ಕೆ ಹೋಗಿ ಸಿಲುಕಿದವರ ರಕ್ಷಣಾ ಕಾರ್ಯ ನಡೆದಿದೆ.

ದೆಹಲಿ: ವಾರದ ಹಿಂದೆ ಕರ್ನಾಟಕದಿಂದ ಟ್ರಕ್ಕಿಂಗ್‌ಗೆಂದು ಉತ್ತರಾಖಂಡ ರಾಜ್ಯಕ್ಕೆ ತೆರಳಿದ್ದ 19 ಮಂದಿ ಚಾರಣಿಗರು ಹಾಗೂ ಮೂವರು ಮಾರ್ಗದರ್ಶಕರು ಹವಾಮಾನ ವೈಪರಿತ್ಯದಿಂದ ಕಾಣೆಯಾಗಿದ್ದಾರೆ. ಬುಧವಾರ ಬೆಳಿಗ್ಗೆಯಿಂದಲೇ ರಕ್ಷಣಾ ಕಾರ್ಯ ಚುರುಕುಗೊಂಡಿದ್ದು, ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ. ಈಗಾಗಲೇ 11 ಮಂದಿ ಇರುವುದು ಖಚಿತವಾಗಿದ್ದು. ಅವರ ರಕ್ಷಣಾ ಕಾರ್ಯ ನಡೆದಿದ. ಇನ್ನೂ ಹಲವರು ಕಾಣೆಯಾಗಿದ್ದು ಅವರ ಹುಡುಕಾಟ ನಡೆದಿದೆ. ಅತ್ಯಂತ ದುರ್ಗಮವಾದ ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್‌ನಲ್ಲಿ ಈ ದುರ್ಘಟನೆ ನಡೆದಿದೆ.. ಕರ್ನಾಟಕ ಸರ್ಕಾರವೂ ರಕ್ಷಣೆ ನಿಟ್ಟಿನಲ್ಲಿ ಈಗಾಗಲೇ ವಿಪತ್ತು ನಿರ್ವಹಣಾ ಆಯುಕ್ತ ಸುನೀಲ್‌ ಕುಮಾರ್‌ ಅವರನ್ನು ಡೆಹ್ರಾಡೂನ್‌ಗೆ ಕಳುಹಿಸಿದೆ. ಅವರು ಈಗಾಗಲೇ ಡೆಹ್ರಾಡೂನ್‌ ತಲುಪಿದ್ದು. ಸ್ಥಳೀಯ ಘಟಕಗಳ ಜತೆಗೆ ಸಂಪರ್ಕ ಸಾಧಿಸಿದ್ದಾರೆ.

ಉತ್ತರಾ ಖಂಡದಲ್ಲಿರುವ ಸಹಸ್ತ್ರ ತಾಲ್‌ ಚಾರಣಕ್ಕೆ ಹೆಸರುವಾಸಿ. ಪ್ರತಿ ವರ್ಷ ಸಹಸ್ರಾರು ಮಂದಿ ಪೂರ್ವಾನುಮತಿಯೊಂದಿಗೆ ಇಲ್ಲಿ ಚಾರಣಕ್ಕೆ ಹೋಗುತ್ತಾರೆ. ಕರ್ನಾಟಕದಿಂದಲೂ ಚಾರಣಕ್ಕೆ ಹೋಗುವವರು ಅಧಿಕ. ಈ ಬಾರಿ ಕರ್ನಾಟಕದ 18 ಚಾರಣಿಗರು ಮಹಾರಾಷ್ಟ್ರದ ಒಬ್ಬರೊಂದಿಗೆ ಸೇರಿಕೊಂಡು ಮೂವರು ಮಾರ್ಗದರ್ಶಕರನ್ನು ಕರೆದುಕೊಂಡು ಮೇ 29ರಂದು ಸಹಸ್ತ್ರತಾಲ್‌ಗೆ ಚಾರಣ ಹೋಗಿದ್ರು. ಅವರು ಜೂನ್‌ 7ರಂದು ಹಿಂದಿರುಗಬೇಕಿತ್ತು. ಆದರೆ ಚಾರಣ ಮುಗಿಸಿ ವಾಪಾಸ್‌ ಬರುವಾಗ ಜೂನ್‌ 4 ರಂದು ಕೆಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಡೆಹ್ರಾಡೂನ್‌ ತಲುಪುವ ಮುನ್ನ ರಾತ್ರಿ ಉಳಿದಿದ್ದಾಗ ಭಾರೀ ಮಂಜು ಕವಿದು ದುರ್ಘಟನೆ ಸಂಭವಿಸಿದೆ. ಇದರಲ್ಲಿ ಕೆಲವರು ಕಾಣೆಯಾಗಿದ್ಧಾರೆ. ಇದರಲ್ಲಿ ಕರ್ನಾಟಕದವರೇ ಹೆಚ್ಚು ಇದ್ದಾರೆ.

ಈಗಾಗಲೇ ರಕ್ಷಣಾ ಕಾರ್ಯ ನಡೆದಿದ್ದು. ನಾಲ್ವರು ಮೃತಪಟ್ಟಿರುವುದು ಖಚಿತವಾಗಿದೆ. ಅವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಕಾಣೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಸಹಸ್ತ್ರ ತಾಲ್‌ ಎಂಬ ಪ್ರದೇಶದಲ್ಲಿ ಪ್ರತಿಕೂಲ ವಾತಾವರಣದಲ್ಲಿ ಸಿಲುಕಿದೆ ಹಾಗೂ ಈ ತಂಡ ಪ್ರಸ್ತುತ ಅಪಾಯದಲ್ಲಿದೆ ಎಂಬ ಮಾಹಿತಿ ನಿನ್ನೆ ರಾತ್ರಿ ನಮಗೆ ತಿಳಿದುಬಂದಿದೆ. ಪ್ರಸ್ತುತ ಕೆಲವರು ಈಗ ಕೊಖ್ಲಿ ಶಿಬಿರದಲ್ಲಿದ್ದಾರೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಸಲುವಾಗಿ ನಾವು ಈಗಾಗಲೇ ಉತ್ತರಾಖಂಡ ಸರ್ಕಾರ ಮತ್ತು ಭಾರತ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಬುಧವಾರ ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಲಿದೆ. ಇದಲ್ಲದೆ, ಇಂದು ಬೆಳಿಗ್ಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಲು ಪ್ರಾರಂಭಿಸಿದೆ. ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದೆ ಎಂದು ಕರ್ನಾಟಕ ಕಂದಾಯ ಸಚಿವರ ಕಚೇರಿ ಮಾಹಿತಿ ನೀಡಿದೆ.

ಸಹಸ್ತ್ರ ತಾಲ್ ಸುಮಾರು 4,100-4,400 ಮೀಟರ್ ಎತ್ತರದಲ್ಲಿದೆ. ಘಟನೆಯ ಸ್ಥಳವು ಉತ್ತರಕಾಶಿ ಮತ್ತು ತೆಹ್ರಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿದೆ. ಮಾಹಿತಿ ಸಿಗುತ್ತಿದ್ದಂತೆ ಈಗಾಗಲೇ ರಕ್ಷಣಾ ಕಾರ್ಯವನ್ನು ಆರಂಭಿಸಿ ಕೆಲವರನ್ನು ರಕ್ಷಿಸಿದ್ದೇವೆ. ಹೆಲಿಕಾಪ್ಟರ್‌ ಕೂಡ ಹುಡುಕಾಟ ನಡೆಸಿದೆ. ರಕ್ಷಿಸಿದವರಿಗೆ ಡೆಹ್ರಾಡೂನ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೂಡ ಚಾರಣಕ್ಕೆ ಹೋಗಿ ತಪ್ಪಿಸಿಕೊಂಡಿರುವವರ ಪತ್ತೆಗೆ ತಂಡ ಕಳುಹಿಸಿದ್ದಾರೆ. ಪರಿಸ್ಥಿತಿಯ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.