UIDAI CEO: ಹಿರಿಯ ಐಎಎಸ್ ಅಧಿಕಾರಿ ಅಮಿತ್ ಅಗರ್‌ವಾಲ್ ಯುಐಡಿಎಐಗೆ ಹೊಸ ಸಿಇಒ; ಅವರ ಪರಿಚಯ ವಿವರ
UIDAI CEO: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಿರಿಯ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಅಮಿತ್ ಅಗರವಾಲ್ ಮಂಗಳವಾರ (ಜೂ.20) ಅಧಿಕಾರ ಸ್ವೀಕರಿಸಿದರು. ಅವರ ಕಿರುಪರಿಚಯ ಇಲ್ಲಿದೆ.
ಹಿರಿಯ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿ ಅಮಿತ್ ಅಗರವಾಲ್ (IAS Officer Amit Agarwal) ಅವರು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡರು. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಅಧಿಕಾರ ವರ್ಗ ವ್ಯವಸ್ಥೆಯ ಪುನರ್ರಚನೆಯ ಭಾಗವಾಗಿ ಅಗರ್‌ವಾಲ್ ಅವರ ನೇಮಕಾತಿ ನಡೆದಿದೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 13 ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಪೈಕಿ ಯುಐಡಿಎಐನ ಹೊಸ ಸಿಇಒ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
ಅಮಿತ್ ಅಗರವಾಲ್ ಬಗ್ಗೆ ನಮಗೆ ಗೊತ್ತಿರುವ 5 ಪ್ರಮುಖ ಅಂಶಗಳು
- ಅಮಿತ್ ಅಗರವಾಲ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಕಾನ್ಪುರದ ಹಳೆಯ ವಿದ್ಯಾರ್ಥಿ. ಛತ್ತೀಸ್‌ಗಢ ಕೇಡರ್‌ನ 1993 ಬ್ಯಾಚ್‌ನ IAS ಅಧಿಕಾರಿ.
- ಅವರು ಕೇಂದ್ರ ಮತ್ತು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸರ್ಕಾರದ ಕೆಲಸಗಳನ್ನು ನಿರ್ವಹಿಸಿದ್ದಾರೆ.
- ಯುಐಡಿಎಐನ ಸಿಇಒಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅಮಿತ್ ಅಗರವಾಲ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ (MeitY) ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ಅವರ ಅವಧಿಗೆ ಮೊದಲು, ಅಮಿತ್ ಅಗರವಾಲ್ ಅವರು ಹಣಕಾಸು ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿದ್ದರು.
- ಛತ್ತೀಸ್‌ಗಢದಲ್ಲಿ ಅವರು ಹಣಕಾಸು ಕಾರ್ಯದರ್ಶಿಯಾಗಿ ಮತ್ತು ರಾಜ್ಯ ಸರ್ಕಾರದಲ್ಲಿ ವಾಣಿಜ್ಯ ತೆರಿಗೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ಉಸ್ತುವಾರಿ ಕಾರ್ಯದರ್ಶಿಯಾಗಿ ಇತರ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದರು.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಎಂದರೇನು?
ಆಧಾರ್ ಕಾಯಿದೆ, 2016 ರ ಅಡಿಯಲ್ಲಿ ಸ್ಥಾಪಿತವಾದ UIDAI ದೇಶದ ಎಲ್ಲಾ ನಾಗರಿಕರಿಗೆ ಆಧಾರ್ ಎಂದು ಹೆಸರಿಸಲಾದ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ರಚಿಸಲು ಶಾಸನಬದ್ಧ ಸಂಸ್ಥೆಯಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ ಎಲ್ಲಾ ಆಧಾರ್ ದಾಖಲಾತಿಗಳು ಮತ್ತು ದೃಢೀಕರಣದ ಜವಾಬ್ದಾರಿಯನ್ನು ಸಂಸ್ಥೆ ಹೊಂದಿದೆ.
ಗಮನಿಸಬಹುದಾದ ಸುದ್ದಿಗಳು
Bengaluru Rain Today: ಬೆಂಗಳೂರಲ್ಲಿ ಭಾರಿ ಮಳೆ, ಸಂಚಾರ ಅಸ್ತವ್ಯಸ್ತ; ಮಳೆಯಲ್ಲೂ ಸಸಿಗಳಿಗೆ ನೀರುಣಿಸುತ್ತಿರುವ BBMP ಗುತ್ತಿಗೆ ಟ್ಯಾಂಕರ್