Success Story: ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಯಶೋಗಾಥೆ, ಮೊದಲ ಪ್ರಯತ್ನದಲ್ಲಿಯೇ UPSC ಪಾಸ್‌, 22 ವಯಸ್ಸಿನಲ್ಲಿ ಸಕ್ಸಸ್‌, ಸ್ಪೂರ್ತಿದಾಯಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Success Story: ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಯಶೋಗಾಥೆ, ಮೊದಲ ಪ್ರಯತ್ನದಲ್ಲಿಯೇ Upsc ಪಾಸ್‌, 22 ವಯಸ್ಸಿನಲ್ಲಿ ಸಕ್ಸಸ್‌, ಸ್ಪೂರ್ತಿದಾಯಕ

Success Story: ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಯಶೋಗಾಥೆ, ಮೊದಲ ಪ್ರಯತ್ನದಲ್ಲಿಯೇ UPSC ಪಾಸ್‌, 22 ವಯಸ್ಸಿನಲ್ಲಿ ಸಕ್ಸಸ್‌, ಸ್ಪೂರ್ತಿದಾಯಕ

UPSC Success Story: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತನ್ನ 22ನೇ ವಯಸ್ಸಿನಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದ IAS Swati Meena Naik ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಸ್ಪೂರ್ತಿದಾಯಕ. ಇದೀಗ ಇವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕಿ. ಬನ್ನಿ ಅವರ ಯಶೋಗಾಥೆ ತಿಳಿಯೋಣ.

Success Story: ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಯಶೋಗಾಥೆ, ಮೊದಲ ಪ್ರಯತ್ನದಲ್ಲಿಯೇ UPSC ಪಾಸ್‌
Success Story: ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಯಶೋಗಾಥೆ, ಮೊದಲ ಪ್ರಯತ್ನದಲ್ಲಿಯೇ UPSC ಪಾಸ್‌

ಕೇಂದ್ರ ಸರಕಾರವು ಇತ್ತೀಚೆಗೆ ಸ್ವಾತಿ ಮೀನಾ ನಾಯ್ಕ್‌ ಎಂಬ ಐಎಎಸ್‌ ಅಧಿಕಾರಿಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಡಿ ಬರುವ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕಿಯಾಗಿ ನೇಮಕ ಮಾಡಲು ಅಂಗೀಕಾರ ನೀಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಸೆಂಟ್ರಲ್‌ ಸ್ಟಾಫಿಂಗ್‌ ಸ್ಕೀಮ್‌ ಮೂಲಕ ಇವರನ್ನು ಐದು ವರ್ಷದ ಅವಧಿಗೆ ನೇಮಕ ಮಾಡಿದೆ. ಐಎಎಸ್‌ ಅಧಿಕಾರಿಯೊಬ್ಬರ ಈ ನೇಮಕದಲ್ಲಿ ಏನು ವಿಶೇಷವಿದೆ ಎಂದು ಕೇಳುವಿರ. ಈಕೆ 2007ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಮಧ್ಯ ಪ್ರದೇಶ ಕೇಡರ್‌ನ ಸ್ವಾತಿ ಮೀನಾ ನಾಯ್ಕ್‌ ತನ್ನ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣಗೊಂಡಿದ್ದರು. ಆ ಬ್ಯಾಚ್‌ನಲ್ಲಿ ಈ ರೀತಿ ಉತ್ತೀರ್ಣಗೊಂಡ ಅತ್ಯಂತ ಕಿರಿಯ ಅಭ್ಯರ್ಥಿ ಇವರು. ಅಂದರೆ, ತನ್ನ 22 ವಯಸ್ಸಿನಲ್ಲಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯನ್ನು ಕ್ರ್ಯಾಕ್‌ ಮಾಡಿದ್ದಾರೆ. ಇಲ್ಲಿಯವರೆಗೆ ಇವರು ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಮುಂದೆ ಇವರು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಯುಪಿಎಸ್‌ಸಿ ಪರೀಕ್ಷೆಯನ್ನು ಪ್ರತಿವರ್ಷ 8-9 ಲಕ್ಷ ಅಭ್ಯರ್ಥಿಗಳು ಬರೆಯುತ್ತಾರೆ. ಅಂತಿಮವಾಗಿ ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದು ಸುಮಾರು ಎಂಟುನೂರು ಅಭ್ಯರ್ಥಿಗಳು ಮಾತ್ರ (ಲಭ್ಯವಿರುವ ಹುದ್ದೆಗಳಿಗೆ ತಕ್ಕಂತೆ). ಕೆಲವು ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಗಳಿಸುತ್ತಾರೆ. ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಪಡೆದ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಐಎಎಸ್‌ ಸ್ವಾತಿ ಮೀನಾ ನಾಯ್ಕ್‌ ಗಮನ ಸೆಳೆಯುತ್ತಾರೆ.

ಸ್ವಾತಿ ಮೀನಾ ನಾಯ್ಕ್‌ ಅವರು ಮಧ್ಯಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿ. ರಾಜಸ್ಥಾನದ ಶಿಕರ್‌ ಮೂಲದ ಇವರು 2007ರಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ತನ್ನ 22ನೇ ವಯಸ್ಸಿನಲ್ಲಿ ಉತ್ತೀರ್ಣರಾಗಿ ಗಮನ ಸೆಳೆದಿದ್ದರು. ಇವರು ಮೊದಲ ಪ್ರಯತ್ನದಲ್ಲಿಯೇ 260ನೇ ರಾಂಕ್‌ ಪಡೆದಿದ್ದರು. ಆಕೆಯ ಬ್ಯಾಚ್‌ನಲ್ಲಿ ಅತ್ಯಂತ ಕಿರಿಯ ಅಧಿಕಾರಿ. ಇವರು ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅತ್ಯಂತ ಸ್ಟ್ರಿಕ್ಟ್‌ ಅಧಿಕಾರಿ ಎಂಬ ಹೆಸರು ಪಡೆದಿದ್ದರು.

ವಿಶೇಷವೆಂದರೆ, ಸ್ವಾತಿ ಮೀನಾ ನಾಯ್ಕ್‌ ಅವರ ತಂದೆಯೂ ಸರಕಾರಿ ಉದ್ಯೋಗಿ. ರಾಜಸ್ಥಾನ ಆಡಳಿತ ಸೇವಾ ವಿಭಾಗದ ಅಧಿಕಾರಿಯಾಗಿದ್ದಾರೆ. ಇವರ ತಾಯಿ ಡಾ. ಸರೋಜಾ ಮೀನಾ ಅವರು ಪೆಟ್ರೋಲ್‌ ಪಂಪ್‌ ಮಾಲಕಿ. ಸ್ವಾತಿ ಅವರು ತನ್ನ ಶಿಕ್ಷಣವನ್ನು ಅಜ್ಮೀರ್‌ನಲ್ಲಿ ಪಡೆದರು ಎಂದು ಡಿಎನ್‌ಎ ವರದಿ ತಿಳಿಸಿದೆ. ಅಜ್ಮೀರ್‌ನ ಸೋಫಿಯಾ ಗರ್ಲ್ಸ್‌ ಕಾಲೇಜಿನಲ್ಲಿ ಪದವಿ ಪಡೆದರು. ಈಕೆಯ ಸಹೋದರಿ ಐಎಫ್‌ಎಸ್‌ ಅಧಿಕಾರಿ. 2021ರ ಬ್ಯಾಚ್‌ನಲ್ಲಿ ಇಂಡಿಯನ್‌ ಫಾರಿನ್‌ ಸರ್ವೀಸ್‌ಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಸಾಧನೆ ಮಾಡಿದ ಸ್ವಾತಿ ಈಗ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಠಿಣ ಪರಿಶ್ರಮ, ನಿಖರ ಗುರಿ ಇದ್ದರೆ ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆಯಬಹುದು ಎನ್ನುವುದನ್ನು ಇವರು ಸಾಧಿಸಿ ತೋರಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.