Vande Bharat Express: ಭಾರತದ ಎಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸಂಚರಿಸುತ್ತಿವೆ; ಟಿಕೆಟ್ ದರ ಹಾಗೂ ಅಂತರದ ವಿವರ ಹೀಗಿದೆ
Full List of Vande Bharat Express trains: ಇಂದು ಐದು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸುತ್ತಿದ್ದಾರೆ. ಈ ಹಿಂದೆ 18 ಮಾರ್ಗಗಳಲ್ಲಿ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿತ್ತು. ಈ ಎಲ್ಲಾ ವಿವರ ಈ ಸುದ್ದಿಯಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಐದು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳಿಗೆ (Vande Bharat Express train) ಚಾಲನೆ ನೀಡಲಿದ್ದಾರೆ. ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಗೋವಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಇಂದು ಚಾಲನೆ ದೊರೆತಂತಾಗಿದೆ. ಆ ಮೂಲಕ ದೇಶದಲ್ಲಿ ಇಂದಿಗೆ ಒಟ್ಟು 23 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಸಂಚಾರ ಮಾಡಲಿವೆ. ಈಗಾಗಲೇ ಒಟ್ಟು 18 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದೇಶಕ್ಕೆ ಸಮರ್ಪಿಸಲಾಗಿದೆ. ಅವುಗಳ ವಿವರ ಇಲ್ಲಿದೆ.
ವಂದೇ ಭಾರತ್ ರೈಲು ಮಾರ್ಗಗಳು
1. ನವದೆಹಲಿ - ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್
2019ರ ಫೆಬ್ರವರಿ 15ರಂದು ದೇಶದ ಮೊದಲ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಾಯ್ತು. ನವದೆಹಲಿ- ಕಾನ್ಪುರ- ಅಲಹಾಬಾದ್-ವಾರಣಾಸಿ ಮಾರ್ಗದ ರೈಲಿನ ಮೂಲಕ ದೇಶದ ರೈಲ್ವೆಯಲ್ಲಿ ಹೊಸ ಮನ್ವಂತರ ಆರಂಭವಾಯ್ತು. ಇದು ಒಟ್ಟು 759 ಕಿಮೀ ದೂರ ಮಾರ್ಗವಾಗಿದೆ. ಈ ರೈಲಿನ ಎಸಿ ಸೀಟಿನ ಮೂಲ ದರ 1,287 ರೂ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,661 ರೂಪಾಯಿ ಆಗಿರುತ್ತದೆ.
2. ನವದೆಹಲಿ - ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ (ಜೆ&ಕೆ) ವಂದೇ ಭಾರತ್ ಎಕ್ಸ್‌ಪ್ರೆಸ್
ಈ ವಂದೇ ಭಾರತ್ ರೈಲು ನವದೆಹಲಿ ರೈಲ್ವೆ ನಿಲ್ದಾಣ ಮತ್ತು ಜಮ್ಮು ಕಾಶ್ಮೀರ ರಾಜ್ಯದ ಮಾತಾ ವೈಷ್ಣೋ ದೇವಿಯ ಬೇಸ್ ಕ್ಯಾಂಪ್ ಕತ್ರಾ ನಡುವೆ ಸಂಚರಿಸುತ್ತದೆ. ದೂರವನ್ನು ಎಂಟು ಗಂಟೆಗಳಲ್ಲಿ ಕ್ರಮಿಸುತ್ತದೆ. ಮಂಗಳವಾರ ಹೊರತುಪಡಿಸಿ ವಾರದ ಆರು ದಿನ ರೈಲು ಸಂಚರಿಸುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 1,154 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,375 ರೂಪಾಯಿ.
3. ಗಾಂಧಿನಗರ- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಅವರು 2022ರ ಸೆಪ್ಟೆಂಬರ್ 30ರಂದು ಚಾಲನೆ ನೀಡಿದರು. ರೈಲು ಭಾನುವಾರ ಹೊರತುಪಡಿಸಿ ಆರು ದಿನಗಳಲ್ಲಿ ಸಂಚರಿಸುತ್ತದೆ. 522 ಕಿಮೀ ದೂರ ಮಾರ್ಗದ ರೈಲಿನ ಎಸಿ ಚೇರ್ ಸೀಟ್‌ನ ಮೂಲ ದರ 974 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,018 ರೂ ಆಗಿದೆ.
4. ನವದೆಹಲಿ - ಹಿಮಾಚಲ ಪ್ರದೇಶದ ಅಂಬ್ ಅಂಡೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಶುಕ್ರವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ರೈಲು ಸಂಚರಿಸುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 832 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 1,708 ರೂಪಾಯಿ.
5. ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್
ದಕ್ಷಿಣ ಭಾರತದ ಮೊದಲ ವಂದೇ ಭಾರತ ರೈಲು, ನಮ್ಮ ರಾಜ್ಯದ ಮೈಸೂರು ನಗರವನ್ನು ನೆರೆಯ ಚೆನ್ನೈನೊಂದಿಗೆ ಸಂಪರ್ಕಿಸುತ್ತದೆ. ಈ ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಸಂಚರಿಸುತ್ತದೆ. ರೈಲು ಬೆಳಿಗ್ಗೆ 05:50ಕ್ಕೆ ಚೆನ್ನೈನಿಂದ ಹೊರಟು 401 ಕಿಮೀ ದೂರವನ್ನು ಕ್ರಮಿಸುವ ಮೂಲಕ ಮಧ್ಯಾಹ್ನ 12:20ಕ್ಕೆ ಮೈಸೂರು ಜಂಕ್ಷನ್‌ಗೆ ತಲುಪುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 922 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 1,884 ರೂಪಾಯಿ.
6. ನಾಗ್ಪುರ-ಬಿಲಾಸ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್ಪುರ್ ನಡುವೆ ಓಡುತ್ತದೆ. ಶನಿವಾರ ಹೊರತುಪಡಿಸಿ ವಾರದ ಆರು ದಿನ ರೈಲು ಓಡುತ್ತದೆ.
7. ಹೌರಾ - ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್
2022ರ ಡಿಸೆಂಬರ್ 30ರಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ರೈಲು ಚಲಿಸುತ್ತದೆ. 454 ಕಿಮೀ ದೂರ ಚಲಿಸುವ ರೈಲಿ ಎಸಿ ಚೇರ್ ಸೀಟ್‌ನ ಮೂಲ ದರ 1,044 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,142 ರೂಪಾಯಿ ಇದೆ.
8. ಸಿಕಂದರಾಬಾದ್-ವಿಶಾಖಪಟ್ಟಣ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ತೆಲಂಗಾಣದ ಸಿಕಂದರಾಬಾದ್ ಮತ್ತು ಆಂಧ್ರಪ್ರದೇಶದ ಬಂದರು ನಗರವಾದ ವಿಶಾಖಪಟ್ಟಣ ನಡುವೆ ಕಾರ್ಯನಿರ್ವಹಿಸುತ್ತದೆ. ಭಾನುವಾರ ಹೊರತುಪಡಿಸಿ ಆರು ದಿನಗಳಲ್ಲಿ ರೈಲು ಚಲಿಸುತ್ತದೆ. ಎಸಿ ಚೇರ್ ಸೀಟ್‌ನ ಮೂಲ ದರ 1,207 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,485 ರೂಪಾಯಿ ಆಗಿದೆ.
9. ಮುಂಬೈ- ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್
ಮುಂಬೈ ಮತ್ತು ಸೋಲಾಪುರ ನಡುವಿನ ಈ ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಚಲಿಸುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 859 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 1,766 ರೂಪಾಯಿ.
10. ಮುಂಬೈ- ಶಿರಡಿ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ವಂದೇ ಭಾರತ್ ರೈಲು ಮುಂಬೈ ಸಿಎಸ್‌ಟಿ ನಿಲ್ದಾಣ ಮತ್ತು ಸಾಯಿನಗರ ಶಿರಡಿ ನಡುವೆ ಚಲಿಸುತ್ತದೆ. ದೂರವನ್ನು ಐದು ಗಂಟೆ 20 ನಿಮಿಷಗಳಲ್ಲಿ ಕ್ರಮಿಸುತ್ತದೆ. ಮಂಗಳವಾರ ಹೊರತುಪಡಿಸಿ ಆರು ದಿನ ರೈಲು ಸಂಚರಿಸುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 694 ರೂ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 1,436 ರೂಪಾಯಿ.
11. ದೆಹಲಿಯ ಹಜರತ್ ನಿಜಾಮುದ್ದೀನ್- ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣ ವಂದೇ ಭಾರತ್ ಎಕ್ಸ್‌ಪ್ರೆಸ್
ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಿಂದ 11ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಏಪ್ರಿಲ್ 1ರಂದು ಧ್ವಜಾರೋಹಣ ಮಾಡಿದರು. ಈ ರೈಲು 700 ಕಿ.ಮೀ ದೂರವನ್ನು ಏಳು ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದು ಶನಿವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಭೋಪಾಲ್‌ನಿಂದ ಬೆಳಿಗ್ಗೆ 05:55ಕ್ಕೆ ಹೊರಟು ಮಧ್ಯಾಹ್ನ 01:45ಕ್ಕೆ ದೆಹಲಿ ತಲುಪುತ್ತದೆ. ಎಸಿ ಚೇರ್ ಸೀಟ್‌ನ ಮೂಲ ದರ 1,207 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,485 ರೂಪಾಯಿ.
12. ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೈದರಾಬಾದ್ ನಗರವನ್ನು ತಿರುಪತಿಯೊಂದಿಗೆ ಸಂಪರ್ಕಿಸುತ್ತದೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ. ಈ ರೈಲು ಎರಡು ನಗರಗಳ ನಡುವಿನ 660 ಕಿ.ಮೀ ದೂರವನ್ನು ಎಂಟು ಗಂಟೆ 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ರೈಲು ಸಿಕಂದರಾಬಾದ್‌ನಿಂದ ಬೆಳಿಗ್ಗೆ 06:00 ಗಂಟೆಗೆ ಹೊರಟು ಮಧ್ಯಾಹ್ನ 02:30 ಕ್ಕೆ ತಿರುಪತಿ ತಲುಪುತ್ತದೆ. ಇದು ಮಂಗಳವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಎಸಿ ಚೇರ್ ಸೀಟಿನ ಮೂಲ ದರ 1,168 ರೂಪಾಯಿ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 2,399 ರೂಪಾಯಿ ಆಗಿದೆ.
13. ಚೆನ್ನೈ-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್
ಈ ವಂದೇ ಭಾರತ್ ರೈಲು ಚೆನ್ನೈ ಮತ್ತು ಕೊಯಮತ್ತೂರು ನಡುವೆ ಆರು ಗಂಟೆ 10 ನಿಮಿಷಗಳಲ್ಲಿ 495 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.
14. ಅಜ್ಮೀರ್-ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಬುಧವಾರ ಹೊರತುಪಡಿಸಿ ಆರು ದಿನಗಳಲ್ಲಿ ಸಂಚರಿಸುತ್ತದೆ. ಒಟ್ಟು 454 ಕಿಮೀ ದೂರವನ್ನು ಐದು ಗಂಟೆ ಹದಿನೈದು ನಿಮಿಷಗಳಲ್ಲಿ ಕ್ರಮಿಸುತ್ತದೆ. ಇದು ಎತ್ತರದ ಓವರ್‌ಹೆಡ್ ಎಲೆಕ್ಟ್ರಿಕ್ (OHE) ಪ್ರದೇಶದಲ್ಲಿ ವಿಶ್ವದ ಮೊದಲ ಅರೆ ಅತಿವೇಗದ ಪ್ರಯಾಣಿಕ ರೈಲು ಆಗಿದೆ. ಎಸಿ ಚೇರ್ ಸೀಟಿನ ಮೂಲ ದರ 813 ರೂ ಆಗಿದ್ದರೆ, ಎಕ್ಸಿಕ್ಯೂಟಿವ್ ಚೇರ್ ಕಾರ್ ಟಿಕೆಟ್‌ನ ಬೆಲೆ 1,674 ರೂಪಾಯಿ.
15. ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್
ಕೇರಳ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾಜ್ಯ ರಾಜಧಾನಿ ತಿರುವನಂತಪುರಂನಿಂದ ಕಾಸರಗೋಡಿಗೆ ಸಂಪರ್ಕ ಕಲ್ಪಿಸುತ್ತದೆ. ರೈಲು ಗುರುವಾರ ಹೊರತುಪಡಿಸಿ ಆರು ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 586 ಕಿಮೀ ದೂರದ ಪ್ರಯಾಣವನ್ನು ಎಂಟು ಗಂಟೆ ಐದು ನಿಮಿಷಗಳಲ್ಲಿ ತಲುಪುತ್ತದೆ. 14 ರೈಲು ನಿಲ್ದಾಣಗಳಲ್ಲಿ ಸ್ಟಾಪ್ ಇದೆ.
16. ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
ಪ್ರಧಾನಿ ಮೋದಿಯವರು ಮೇ 19ರಂದು ಒಡಿಶಾದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು. ಈ ರೈಲು ಪುರಿ ಜಗನ್ನಾಥನ ನಗರದಿಂದ ಪಶ್ಚಿಮ ಬಂಗಾಳದ ಹೌರಾಕ್ಕೆ ಸಂಪರ್ಕಿಸುತ್ತದೆ. ಇದು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ (ಗುರುವಾರ ಹೊರತುಪಡಿಸಿ). ಆರು ಗಂಟೆ ನಲವತ್ತು ನಿಮಿಷಗಳಲ್ಲಿ 502 ಕಿಮೀ ದೂರವನ್ನು ಕ್ರಮಿಸುತ್ತದೆ.
17. ಡೆಹ್ರಾಡೂನ್- ದೆಹಲಿಯ ಆನಂದ್ ವಿಹಾರ್ ಟರ್ಮಿನಸ್ ವಂದೇ ಭಾರತ್ ಎಕ್ಸ್‌ಪ್ರೆಸ್
ಉತ್ತರಾಖಂಡದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮೇ 25ರಂದು ಪ್ರಾರಂಭಿಸಲಾಯಿತು. ಇದು ದೆಹಲಿ ಮತ್ತು ಡೆಹ್ರಾಡೂನ್ ನಗರಗಳನ್ನು ಸಂಪರ್ಕಿಸುತ್ತದೆ. ನಿಯಮಿತ ಕಾರ್ಯಾಚರಣೆಗಳು ಮೇ 29 ರಂದು ಪ್ರಾರಂಭವಾಯಿತು. ರೈಲು ನಾಲ್ಕು ಗಂಟೆ ನಲವತ್ತೈದು ನಿಮಿಷಗಳಲ್ಲಿ 302 ಕಿಮೀ ದೂರವನ್ನು ಕ್ರಮಿಸುತ್ತದೆ. ಇದು ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸುತ್ತದೆ.
18. ಗುವಾಹಟಿ-ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್
ಈಶಾನ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮೇ 29 ರಂದು ಪ್ರಾರಂಭಿಸಲಾಯಿತು. ಇದು ಅಸ್ಸಾಂನ ಗುವಾಹಟಿ ಮತ್ತು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುತ್ತದೆ. ರೈಲು ಐದು ಗಂಟೆ ಮೂವತ್ತು ನಿಮಿಷಗಳಲ್ಲಿ 409 ಕಿಮೀ ದೂರವನ್ನು ಕ್ರಮಿಸುತ್ತದೆ.
ಇಂದು ಒಟ್ಟು ಐದು ಮಾರ್ಗಗಳ ವಂದೇ ಭಾರತ್ ಲೈಲಿಗೆ ಹಸಿರು ನಿಶಾನೆ ತೋರಿಸಲಾಗುತ್ತಿದೆ. ಆ ಮಾರ್ಗಗಳು ಹೀಗಿವೆ.
1. ರಾಣಿ ಕಮಲಾಪತಿ (ಭೋಪಾಲ್)-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ರೈಲು ಮಧ್ಯಪ್ರದೇಶದ ಜಬಲ್‌ಪುರವನ್ನು ಭೋಪಾಲ್ ನಗರಕ್ಕೆ ಸಂಪರ್ಕಿಸುತ್ತದೆ. ಎರಡು ನಗರಗಳ ನಡುವೆ ಗಂಟೆಗೆ 130 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ವೇಗದ ರೈಲಿಗೆ ಹೋಲಿಸಿದರೆ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿರುತ್ತದೆ.
2. ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್
ಮಧ್ಯಪ್ರದೇಶದ ಮೂರನೇ ಸೆಮಿ-ಹೈ ಸ್ಪೀಡ್ ರೈಲು ರಾಜ್ಯದ ಮಾಲ್ವಾ ಪ್ರದೇಶ (ಇಂಧೋರ್), ಬುಂದೇಲ್‌ಖಂಡ್ ಪ್ರದೇಶ (ಖಜುರಾಹೊ) ಮತ್ತು ಭೋಪಾಲ್ ನಡುವೆ ಕಾರ್ಯನಿರ್ವಹಿಸುತ್ತದೆ.
3. ಮುಂಬೈ- ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್‌ಪ್ರೆಸ್
ಗೋವಾದ ಮೊದಲ ಸೆಮಿ-ಹೈ ಸ್ಪೀಡ್ ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ಕಾರ್ಯನಿರ್ವಹಿಸುತ್ತದೆ. ಶುಕ್ರವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಕಾರ್ಯನಿರ್ವಹಿಸಲಿದೆ.
4. ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ದಕ್ಷಿಣ ಭಾರತದ ಮೊದಲ ಮೈಸೂರು-ಚೆನ್ನೈ ನಡುವಿನ ರೈಲು ಸೇವೆ ಬಳಿಕ ರಾಜ್ಯದಲ್ಲಿ ಇದು ಎರಡನೇ ವಂದ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯಾಗಿದೆ. ಬೆಂಗಳೂರು-ಧಾರವಾಡ ಮಾರ್ಗದ ವಂದ್ ಭಾರತ್ ರೈಲು 8 ಕೋಚ್‌ಗಳನ್ನು ಹೊಂದಿದ್ದು, ಮಂಗಳವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ನಾಳೆಯಿಂದ (ಜೂನ್ 28, ಬುಧವಾರ) ಕಾರ್ಯನಿರ್ವಹಿಸಲಿದೆ. ಇದು ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು ಆಗಿದ್ದು, ಮೊದಲನೆಯದು ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಓಡುತ್ತದೆ.
5. ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್
ಈ ಸೆಮಿ-ಹೈ ಸ್ಪೀಡ್ ರೈಲು ಜಾರ್ಖಂಡ್ ಮತ್ತು ಬಿಹಾರದ ಮೊದಲ ವಂದೇ ಭಾರತ್ ರೈಲಾಗಿದೆ. ಈ ಮಾರ್ಗದಲ್ಲಿ ಪ್ರಸ್ತುತ ಇರುವ ಅತ್ಯಂತ ವೇಗದ ರೈಲಿಗೆ ಹೋಲಿಸಿದರೆ ಇದು ಸುಮಾರು ಒಂದು ಗಂಟೆ ಇಪ್ಪತ್ತೈದು ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸುವ ನಿರೀಕ್ಷೆಯಿದೆ.