ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಸಾಯಿ ಬಾಬಾ ಅವರ ಪುನರ್ಜನ್ಮದ ಕುರಿತು ನಾನಾ ಕಥೆಗಳಿವೆ. ಸಾಯಿ ಬಾಬಾ ಮತ್ತೊಮ್ಮೆ ಹುಟ್ಟಲಿದ್ದಾರೆ ಎಂಬ ಕಥೆಗಳು ಕಳೆದ ಹಲವು ವರ್ಷಗಳಿಂದ ಪುಟಪರ್ತಿ ಸಾಯಿ ಭಕ್ತವಲಯದಲ್ಲಿದೆ. ಇದೀಗ ಶುಕ್ರವಾರ (ಮೇ17) ಸೋಷಿಯಲ್ ಮೀಡಿಯಾದಲ್ಲಿರುವ ವಿಡಿಯೋ ಗಮನಿಸಿದ್ರೆ, ಸಾಯಿಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ? ಏನಿದು ವಿದೇಶೀಯರ ವರ್ತನೆ! ಎಂಬ ಅನುಮಾನ ಕಾಡದೇ ಇರದು.

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ ವೈರಲ್ ಆಗಿದೆ. ವಿಡಿಯೋದಿಂದ ತೆಗೆದ ಚಿತ್ರಗಳಿವು.
ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ ವೈರಲ್ ಆಗಿದೆ. ವಿಡಿಯೋದಿಂದ ತೆಗೆದ ಚಿತ್ರಗಳಿವು. (@qutuba)

ಬೆಂಗಳೂರು: ಶಿರಡಿ ಸಾಯಿ ಬಾಬಾ ಅವರ ಪುನರವತಾರ ಪುಟಪರ್ತಿ ಸಾಯಿ ಬಾಬಾ ಎಂಬ ಒಂದು ಕಥೆ ಬಹಳ ವರ್ಷ ಕಾಲ ಹರಿದಾಡಿತ್ತು. ಇದೇ ರೀತಿ ಪುಟಪರ್ತಿ ಸಾಯಿ ಬಾಬಾ ಅವರು ಪುನರ್ಜನ್ಮ ಪಡೆದು ಬರಲಿದ್ದಾರೆ ಎಂಬ ಕಥೆ ಬಹಳ ಕಾಲದಿಂದ ಸಾಯಿ ಭಕ್ತರ ನಡುವೆ ಹರಿದಾಡುತ್ತಲೇ ಇದೆ. ಶುಕ್ರವಾರ (ಮೇ 17) ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದು ಮತ್ತೆ ಸಾಯಿ ಬಾಬಾ ಅವರ ಪುನರ್ಜನ್ಮದ ಕಥೆಗೆ ಪುಷ್ಟಿ ನೀಡಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ ಗಮನಿಸಿದರೆ, ಅರೆ!, ಏನಿದು ವಿದೇಶೀಯರ ವರ್ತನೆ!, "ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ" ಎಂಬ ಸಂದೇಹ ಕಾಡದೇ ಇರದು. ಹಾಗಿದೆ ಆ ಸನ್ನಿವೇಶ. ವಿದೇಶೀಯರ ಮಾತುಗಳ ನಡುವೆ ಕನ್ನಡದ ಧ್ವನಿಯೂ ವಿಡಿಯೋದಲ್ಲಿ ಕೇಳಿಸುತ್ತಿದೆ. ಮನೆಯೊಂದರ ದೃಶ್ಯ ಇದಾಗಿದ್ದು, ಅಲ್ಲಿ ಪುಟಪರ್ತಿ ಸಾಯಿಬಾಬಾ ಅವರ ಫೋಟೋ ಕೂಡ ಇದೆ!

ಸೋಫಾದಲ್ಲಿ ಕಾಲು ಚಾಚಿ ವಿರಾಮ ಸ್ಥಿತಿಯಲ್ಲಿರುವ ಬಾಲಕನ ಕಾಲುಗಳನ್ನು ವಿದೇಶೀಯರು ನೀವುತ್ತಿರುವುದು ಕಂಡುಬರುತ್ತದೆ. ಬಾಲಕನೋ ಕಿಂಡರ್‌ಜಾಯ್‌ ಪೊಟ್ಟಣವನ್ನು ಕಚ್ಚಿ ತೆರೆದು ತಿನ್ನುವ ಸಾಹಸದಲ್ಲಿದ್ದಾನೆ. ಬಾಲಕನನ್ನು ನೋಡಿದರೆ ಏಳನೇ ಅಥವಾ ಎಂಟನೇ ತರಗತಿಯ ವಯೋಮಾನದವನಂತೆ ಕಾಣುತ್ತಿದ್ದು, ಪುಟಪರ್ತಿ ಸಾಯಿ ಬಾಬಾ ಅವರ ಬಾಲ್ಯದ ಕಥೆಗಳನ್ನು ಕೇಳಿದವರಿಗೆ, ಅಂದಿನ ಸನ್ನಿವೇಶಗಳು ನೆನಪಿನಂಗಳದಲ್ಲಿ ಜಾರಿ ಹೋದರೆ ಅಚ್ಚರಿಯೇನಿಲ್ಲ! ಹಾಗಿದೆ ಅಲ್ಲಿನ ಸನ್ನಿವೇಶ.

ಅವರು ಆ ಬಾಲಕನನ್ನು ಸಾಯಿ ಬಾಬಾ ಅವರ ಪುನರವತಾರ ಅಂದ್ಕೊಂಡಿದ್ದಾರೆ ನೋಡಿ..

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇದುವೇ ವೈರಲ್‌...

ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಒಬ್ಬರಾದ ನಂತರ ಒಬ್ಬರಂತೆ ಇದೇ ವಿಡಿಯೋ ಟ್ವೀಟ್ ಮಾಡುತ್ತಿದ್ದು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕ್ಯೂಟೂಬಾ (@qutuba) ಎಂಬ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ಕಾಣಿಸಿಕೊಂಡಿದ್ದು, "ಈ ಮಗು ಸಾಯಿಬಾಬಾರವರ ಪುನರ್ಜನ್ಮ ಎಂದು ಅವರು ನಂಬುತ್ತಾರೆ. ನಾನು ಹೇಳುತ್ತೇನೆ, ಆ ಮಗು ಟಿಕೆಟ್‌ ಖರೀದಿಸದೆಯೇ ವಿಶ್ವದ ಅತಿದೊಡ್ಡ ಲಾಟರಿ ಗೆದ್ದುಕೊಂಡಿದೆ" ಎಂದು ಪುಟ್ಟ ಸ್ಮೈಲಿ ಹಾಕಿದ್ದಾರೆ. ಅಂದರೆ ಲಘು ದಾಟಿಯಲ್ಲಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತುತಿ ಮಾಡಿದ್ದಾರೆ.

ಅವರು ಮೇ 17 ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಟ್ವೀಟ್ ಮಾಡಿದ್ದು,7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಾವಿರಕ್ಕೂ ಹೆಚ್ಚು ರೀಟ್ವೀಟ್‌, 500ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

ಸಾಯಿ ಬಾಬಾ ಚಿನ್ನ ಉಗುಳ್ತಾ ಇದ್ರು, ಈ ಬಾಲಕ ಕಿಂಡರ್‌ಜಾಯ್ ತಿಂತಾ ಇದ್ದಾನೆ! ಎಂದು ವೀರ್ ಎಂಬಾತ ಕಾಮೆಂಟ್ ಮಾಡಿದ್ದಾರೆ.

ಇದು ಇನ್ನೊಂದು “ಹಗರಣ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಏನೇ ಆದರೂ ಆ ಬಾಲಕ ಅದೃಷ್ಟವೋ ಅದೃಷ್ಟ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಇಷ್ಟು ಮುಂದುವರಿದ ಜಗತ್ತಿನಲ್ಲಿ ವಿಶೇಷವಾಗಿ ವಿದೇಶಿಯರು ಕೂಡ ಇಂಥವನ್ನೆಲ್ಲ ನಂಬುತ್ತಾರಾಲ್ಲ… ಪುನರವತಾರ, ಪುನರ್ಜನ್ಮದ ನಂಬಿಕೆ ಅಥವಾ ಇನ್ನೊಂದು ಹಗರಣವೇ ಇದು ಎಂದು ಇನ್ನು ಕೆಲವು ಪ್ರಶ್ನಿಸುತ್ತ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವಿಡಿಯೋವನ್ನು ಕೆಲವರು ಶೇರ್ ಮಾಡಿದ್ದು, ಎಲ್ಲದರಲ್ಲೂ ಒಂದು ರೀತಿಯ ಅಚ್ಚರಿ, ಶಂಕೆ, ಹಗರಣ ಮುಂತಾದ ನೋಟಗಳ ಅಭಿಪ್ರಾಯವೇ ಹೆಚ್ಚಾಗಿ ಕಂಡುಬಂದಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.