Explainer: ಪಾಕ್ ಧ್ವಜ ಹೊಂದಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ನಿಷೇಧ: ಹಡಗುಗಳು ತಮ್ಮ ಧ್ವಜಗಳನ್ನು ಹೇಗೆ ಆರಿಸಿಕೊಳ್ಳುತ್ತವೆ ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Explainer: ಪಾಕ್ ಧ್ವಜ ಹೊಂದಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ನಿಷೇಧ: ಹಡಗುಗಳು ತಮ್ಮ ಧ್ವಜಗಳನ್ನು ಹೇಗೆ ಆರಿಸಿಕೊಳ್ಳುತ್ತವೆ ?

Explainer: ಪಾಕ್ ಧ್ವಜ ಹೊಂದಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ನಿಷೇಧ: ಹಡಗುಗಳು ತಮ್ಮ ಧ್ವಜಗಳನ್ನು ಹೇಗೆ ಆರಿಸಿಕೊಳ್ಳುತ್ತವೆ ?

ಪಹಲ್ಗಾಮ್ ಉಗ್ರ ದಾಳಿ ನಂತರ ಪಾಕಿಸ್ತಾನಕ್ಕೆ ಭಾರತದ ಪ್ರತಿಕ್ರಿಯೆಯ ಭಾಗವಾಗಿ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DGS) ಇತ್ತೀಚೆಗಷ್ಟೇ ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ. (ಬರಹ: ಪರಿಣಿತಾ, ಬೆಂಗಳೂರು)

ಪಾಕ್ ಧ್ವಜ ಹೊಂದಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ನಿಷೇಧ: ಹಡಗುಗಳು ತಮ್ಮ ಧ್ವಜಗಳನ್ನು ಹೇಗೆ ಆರಿಸಿಕೊಳ್ಳುತ್ತವೆ ?
ಪಾಕ್ ಧ್ವಜ ಹೊಂದಿರುವ ಹಡಗುಗಳಿಗೆ ಭಾರತದ ಬಂದರುಗಳಲ್ಲಿ ನಿಷೇಧ: ಹಡಗುಗಳು ತಮ್ಮ ಧ್ವಜಗಳನ್ನು ಹೇಗೆ ಆರಿಸಿಕೊಳ್ಳುತ್ತವೆ ?

ಭಾರತ ಮತ್ತು ಪಾಕ್‌ ಗಡಿ ನಡುವೆ ಇದೀಗ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಏಪ್ರಿಲ್‌ 22ರಂದು ಕಾಶ್ಮೀರ ತಪ್ಪಲಿನ ಪಹಲ್ಗಾಮ್‌ನಲ್ಲಿನ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು, 26 ಜನರನ್ನು ಹತ್ಯೆ ಮಾಡಿದ್ದರು. ಇದರ ಪ್ರತೀಕಾರವಾಗಿ ಇದೀಗ ಭಾರತ, ಪಾಕ್‌ ಗಡಿಭಾಗದ ಉಗ್ರ ನೆಲೆಗಳನ್ನೇ ಗುರಿಯನ್ನಾಗಿಸಿ ದಾಳಿ ಮಾಡಿದೆ. ಈ ದಾಳಿ ಹಿನ್ನೆಲೆಯಲ್ಲಿ ಭಾರತದಲ್ಲಿ ಅದರಲ್ಲೂ ಉತ್ತರ ಭಾರತದ ಕಡೆ ಹಾರಾಡುವ ವಿಮಾನಗಳನ್ನು ವಿಮಾನ ಸಂಸ್ಥೆಗಳು ಕೆಲ ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಇದಷ್ಟೇ ಅಲ್ಲ ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ.

ಹೌದು, ಪಹಲ್ಗಾಮ್ ಉಗ್ರ ದಾಳಿ ನಂತರ ಪಾಕಿಸ್ತಾನಕ್ಕೆ ಭಾರತದ ಪ್ರತಿಕ್ರಿಯೆಯ ಭಾಗವಾಗಿ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DGS) ಇತ್ತೀಚೆಗಷ್ಟೇ ಭಾರತದ ಬಂದರುಗಳಲ್ಲಿ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ. "1958ರ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆಯ ಸೆಕ್ಷನ್ 411ರ ಮೂಲಕ ನೀಡಲಾದ ಅಧಿಕಾರ ಪ್ರಕಾರ ಈ ಕೆಳಗಿನ ನಿರ್ದೇಶನಗಳನ್ನು ನೀಡಲಾಗಿದೆ: ಪಾಕಿಸ್ತಾನದ ಧ್ವಜವನ್ನು ಹೊಂದಿರುವ ಹಡಗು ಯಾವುದೇ ಭಾರತೀಯ ಬಂದರಿಗೆ ಭೇಟಿ ನೀಡಲು ಅನುಮತಿಸಲಾಗುವುದಿಲ್ಲ. ಭಾರತೀಯ ಧ್ವಜದ ಹಡಗು ಪಾಕಿಸ್ತಾನದ ಯಾವುದೇ ಬಂದರಿಗೆ ಭೇಟಿ ನೀಡಬಾರದು" ಎಂದು ಕಡಲು ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ. ಅದೇ ರೀತಿ ಪಾಕಿಸ್ತಾನ ಕೂಡಾ ಭಾರತೀಯ ಧ್ವಜವನ್ನು ಹೊಂದಿರುವ ಹಡಗುಗಳು ತನ್ನ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ.

1958ರ ಕಾಯಿದೆಯು ವಿಶ್ವದ ಯಾವುದೇ ಭಾಗಗಳಲ್ಲಿ ಭಾರತದ ಧ್ವಜಗಳನ್ನು ಹೊಂದಿರುವ ಹಡಗುಗಳು ಮತ್ತು ಭಾರತದ ಕಡಲಿನಲ್ಲಿ ವಿದೇಶಿ ಧ್ವಜಗಳನ್ನು ಹೊಂದಿರುವ ಹಡಗುಗಳು "ಸಮುದ್ರದಲ್ಲಿ ಜೀವ ಸುರಕ್ಷತೆ ಮತ್ತು ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇರುವ ಕಾಯಿದೆಯಾಗಿದೆ.

  • ಹಡಗುಗಳಲ್ಲಿನ ಧ್ವಜಗಳು ಏನನ್ನು ಸೂಚಿಸುತ್ತವೆ?

ಹಡಗುಗಳಲ್ಲಿರುವ ಧ್ವಜಗಳು ಮುಖ್ಯವಾಗಿ ಹಡಗಿನ ಮಾಲೀಕರು ಅಥವಾ ಸಿಬ್ಬಂದಿಯ ರಾಷ್ಟ್ರೀಯತೆಗಿಂತ ಹೆಚ್ಚಾಗಿ ಯಾವ ದೇಶದಲ್ಲಿ ನೋಂದಾಯಿಸಲಾಗಿದೆ ಎಂಬುದನ್ನು ತೋರಿಸುತ್ತವೆ. ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ (IMO) ಪ್ರಕಾರ, "ಒಂದು ಹಡಗನ್ನು ಒಂದು ರಾಜ್ಯಕ್ಕೆ ಲಿಂಕ್ ಮಾಡುವ ಮೂಲಕ, ಹಡಗು ನೋಂದಣಿ ವ್ಯವಸ್ಥೆಯು ಆ ರಾಜ್ಯವು ಅಂತರರಾಷ್ಟ್ರೀಯ ಕಾನೂನಿನಲ್ಲಿ ಆ ಹಡಗನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ ಎಂದು ಸೂಚಿಸುತ್ತದೆ. ಹಡಗುಗಳು ಯಾವುದೇ ರಾಜ್ಯದ ವ್ಯಾಪ್ತಿಗೆ ಒಳಪಡದೇ ವಿವಿಧ ದೇಶಗಳ ಗಡಿ ದಾಟಿ ಸಮುದ್ರದಲ್ಲಿ ಚಲಿಸುವುದರಿಂದಲೂ ಈ ಗುರುತಿಸುವಿಕೆ ಅಗತ್ಯವಾಗುತ್ತದೆ.

ಅಂತರರಾಷ್ಟ್ರೀಯ ಕಾನೂನಿನ ಚೌಕಟ್ಟಿನ ಅಡಿಯಲ್ಲಿ, ಎಲ್ಲಾ ದೇಶಗಳು ಹಡಗುಗಳಿಗೆ ತಮ್ಮ ರಾಷ್ಟ್ರೀಯತೆಯನ್ನು ನೀಡುವ ಮತ್ತು ತಮ್ಮ ಧ್ವಜವನ್ನು ಹಾರಿಸುವ ಹಕ್ಕನ್ನು ನೀಡುವ ಷರತ್ತುಗಳನ್ನು ನಿಗದಿಪಡಿಸಬೇಕಾಗಿದೆ. ಆದಾಗ್ಯೂ, ಪ್ರಸ್ತುತ ನೋಂದಣಿ ಪ್ರಕ್ರಿಯೆಗೆ ಯಾವುದೇ ಸಾಮಾನ್ಯ, ಬದ್ಧ ಚೌಕಟ್ಟು ಇಲ್ಲ. ಡಿಜಿಎಸ್ ವೆಬ್‌ಸೈಟ್ ಪ್ರಕಾರ, ಈ ನೋಂದಣಿಯು ಹಡಗಿನ ಬಗ್ಗೆ ಪುರಾವೆಗಳನ್ನು ಒದಗಿಸುತ್ತದೆ.ಇದು ಹಡಗಿನ ಸಿಬ್ಬಂದಿಗಳಿಗೆ ಗಾಯ, ಪ್ರಾಣಹಾನಿ ಆದರೆ ಅಥವಾ ಸಾವುನೋವುಗಳ ಸಂದರ್ಭದಲ್ಲಿ ಭಾರತೀಯ ನ್ಯಾಯಾಲಯಗಳಲ್ಲಿ ಭಾರತೀಯ ಕಾಯಿದೆಗಳ ನಿಬಂಧನೆಗಳ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಸಹಕಾರಿಯಾಗಿವೆ

ದೇಶಗಳು ತಮ್ಮ ಧ್ವಜವನ್ನು ಹಾರಿಸುವ ಹಡಗುಗಳ ಮೇಲೆ ಆಡಳಿತಾತ್ಮಕ, ತಾಂತ್ರಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ತಮ್ಮ ನ್ಯಾಯವ್ಯಾಪ್ತಿ ಮತ್ತು ನಿಯಂತ್ರಣವನ್ನು ಚಲಾಯಿಸಬೇಕು. ಸುರಕ್ಷತೆ, ಮಾಲಿನ್ಯ ತಡೆಗಟ್ಟುವಿಕೆ ಮತ್ತು ಹಡಗಿನಲ್ಲಿರುವ ಸಿಬ್ಬಂದಿಗಳ ಬದುಕು ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಹಡಗುಗಳ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯೂ ಇದರಲ್ಲೇ ಬರುತ್ತದೆ.

  • ಯಾವುದೇ ಹಡಗು ಯಾವುದೇ ದೇಶದ ಧ್ವಜವನ್ನು ಹಾರಿಸಬಹುದೇ?

1982 ರ ವಿಶ್ವಸಂಸ್ಥೆಯ ಸಮುದ್ರ ಕಾನೂನು (UNCLOS) ಕಡಲ ಚಟುವಟಿಕೆಯ ಕುರಿತಾದ ಜಾಗತಿಕ ಒಪ್ಪಂದವಾಗಿದ್ದು, ರಾಜ್ಯ ಮತ್ತು ಅದರಲ್ಲಿ ನೋಂದಾಯಿಸಲಾದ ಹಡಗಿನ ನಡುವೆ "ನಿಜವಾದ ಸಂಪರ್ಕ" ಇರಬೇಕು ಎಂದು ಅದು ಹೇಳುತ್ತದೆ. ಆದರೆ ಅಂತಹ ಸಂಪರ್ಕದ ಬಗ್ಗೆ ಯಾವುದೇ ವ್ಯಾಖ್ಯಾನವಿಲ್ಲ.

ಕಾರ್ಡಿಫ್ ವಿಶ್ವವಿದ್ಯಾಲಯದ ಒಂದು ಅಧ್ಯಯನವು ಇದನ್ನು ಹಡಗುಗಳ ಮೇಲಿನ ನ್ಯಾಯವ್ಯಾಪ್ತಿ ಮತ್ತು ನಿಯಂತ್ರಣದ ಪರಿಣಾಮಕಾರಿ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಲಾಗಿದೆ ಎಂದಿದೆ. ಇದು ಹಡಗಿಗೆ ತನ್ನ ರಾಷ್ಟ್ರೀಯತೆಯನ್ನು ನೀಡಲು ಅಗತ್ಯವಾದ ಕಾರ್ಯವಿಧಾನಗಳನ್ನು ಸ್ಥಾಪಿಸುವ ದೇಶವನ್ನು ಒಳಗೊಂಡಿರಬಹುದು. ಉದಾಹರಣೆಗೆ ಹಡಗಿನ ಅಗತ್ಯ ಪರಿಶೀಲನೆ ಕೈಗೊಳ್ಳಲು, ಸಿಬ್ಬಂದಿಯ ಪ್ರಮಾಣೀಕರಣವನ್ನು ಪರಿಶೀಲಿಸಲು ಸೂಕ್ತ ಅರ್ಹ ಸಿಬ್ಬಂದಿಯನ್ನು ಹೊಂದಿರುವುದು ಇತ್ಯಾದಿ.

‘ನಿಜವಾದ ಸಂಪರ್ಕದ’ ಉದ್ದೇಶವೆಂದರೆ ಹಡಗು ಯಾವ ಧ್ವಜವನ್ನು ಹೊಂದಿದೆಯೋ ಆ ರಾಜ್ಯದ ಕರ್ತವ್ಯಗಳ ಹೆಚ್ಚು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು. ಕೆಲವೊಮ್ಮೆ, ಹಡಗುಗಳು ಧ್ವಜ ನೋಂದಣಿಯಲ್ಲಿಯೂ ವಂಚನೆಯನ್ನು ಎದುರಿಸುತ್ತವೆ. ಉದಾಹರಣೆಗೆ, 2017 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು (DRC) ಸುಮಾರು 73 ಹಡಗುಗಳು ತಮ್ಮ ಧ್ವಜವನ್ನು ವಂಚನೆಯಿಂದ ಬಳಸಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿವೆ ಎಂದು ಹೇಳಿತ್ತು.

  • ಹಡಗುಗಳು ಧ್ವಜಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತವೆ?

ಕೆಲವು ದೇಶಗಳು ದೇಶದೊಂದಿಗೆ ಸಂಬಂಧ ಹೊಂದಿರುವ ಹಡಗುಗಳನ್ನು ಮಾಲೀಕತ್ವ ಅಥವಾ ಸಿಬ್ಬಂದಿ ("ಮುಚ್ಚಿದ ನೋಂದಣಿಗಳು") ಮೂಲಕ ಮಾತ್ರ ನೋಂದಾಯಿಸುತ್ತವೆ. ಇತರ ದೇಶಗಳು ವಿದೇಶಿ ಒಡೆತನದ ಅಥವಾ ನಿಯಂತ್ರಿತ ಹಡಗುಗಳು "ಮುಕ್ತ ನೋಂದಣಿ" ಮೂಲಕ ತಮ್ಮ ಧ್ವಜವನ್ನು ಬಳಸಲು ಅನುಮತಿಸುತ್ತವೆ. ಇನ್ನೂ ಕೆಲವು ದೇಶಗಳು ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ತಮ್ಮ ಧ್ವಜವನ್ನು ಬಳಸಲು ಅನುಮತಿಸುವುದಿಲ್ಲ. ಮುಕ್ತ ನೋಂದಣಿಗಳನ್ನು ಈಗ ಪ್ರಪಂಚದಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ ಎಂದು ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ ಹೇಳಿದೆ.

2023 ರಲ್ಲಿ ದಿ ಡಿಪ್ಲೊಮ್ಯಾಟ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಹಡಗಿನಲ್ಲಿನ ಧ್ವಜವು ಹಡಗಿಗೆ ರಾಜ್ಯದಲ್ಲಿನ ನಿರ್ದಿಷ್ಟ ತೆರಿಗೆ ವಿನಾಯಿತಿ, ಪ್ರಮಾಣೀಕರಣ ಮತ್ತು ಭದ್ರತಾ ಕ್ರಮಗಳಿಗೆ ಪ್ರವೇಶವನ್ನು ನೀಡುತ್ತದೆ. ಇದನ್ನು "ಅನುಕೂಲಕತೆಯ ಧ್ವಜ" ಎಂದು ಕರೆಯಲಾಗುತ್ತದೆ. ಹಾಗಾಗಿ ಇಲ್ಲಿ ಹಡಗುಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುವ ರಾಜ್ಯಗಳನ್ನು ಆಯ್ಕೆ ಮಾಡುತ್ತವೆ. "ಆ ಉದ್ದೇಶಕ್ಕಾಗಿ, ಹೆಚ್ಚಿನ ವ್ಯಾಪಾರಿ ಹಡಗುಗಳನ್ನು ಕೆಲವೇ ದೇಶಗಳಲ್ಲಿ ನೋಂದಾಯಿಸಲಾಗಿದೆ. 2023ರಲ್ಲಿ ಅತೀ ಹೆಚ್ಚು ಹಡಗುಗಳು ಪನಾಮ, ಲೈಬೀರಿಯಾ, ಮಾರ್ಷಲ್ ದ್ವೀಪಗಳು, ಹಾಂಗ್ ಕಾಂಗ್, ಸಿಂಗಾಪುರ್, ಚೀನಾ, ಮಾಲ್ಟಾ ಮತ್ತು ಬಹಾಮಾಸ್ ಧ್ವಜಗಳನ್ನು ಹೊಂದಿವೆ ಎಂದು ಲೇಖನ ಉಲ್ಲೇಖಿಸಿದೆ.

(ಬರಹ: ಪರಿಣಿತಾ, ಬೆಂಗಳೂರು)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.