ಕನ್ನಡ ಸುದ್ದಿ  /  Nation And-world  /  India Post Office Recruitment Online Form Education Age Limit And Other Details

Post Office Recruitment 2022: ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳ ನೇಮಕ, ಅರ್ಜಿ ಸಲ್ಲಿಕೆ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ

ಭಾರತದ ಅಂಚೆ ಇಲಾಖೆಯಲ್ಲಿ (India Post office Recruitment)ಉದ್ಯೋಗ ಪಡೆಯಲು ಬಯಸುವವರಿಗೆ ಸುವರ್ಣಾವಕಾಶ. ಕರ್ನಾಟಕ ಸೇರಿದಂತೆ ದೇಶಾದ್ಯಂತವಿರುವ ಅಂಚೆ ಇಲಾಖೆಯ ಸುಮಾರು 23 ವೃತ್ತಗಳಲ್ಲಿ ನೇಮಕಾತಿ ಕೈಗೊಳ್ಳಲು ನಿರ್ಧರಿಸಿದೆ. ಸದ್ಯ ಲಭ್ಯವಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮೆನ್‌, 1445 ಮೇಲ್‌ಗಾರ್ಡ್‌ ಮತ್ತು 37,539 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳಿವೆ. ಇದರೊಂದಿಗೆ ವೃತ್ತವಾರು ಸ್ಟೆನೊಗ್ರಾಫರ್‌ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.

ಅಂಚೆ ಇಲಾಖೆಯಲ್ಲಿ ಉದ್ಯೋಗ (Pic for representation)
ಅಂಚೆ ಇಲಾಖೆಯಲ್ಲಿ ಉದ್ಯೋಗ (Pic for representation) (HT_PRINT)

ಭಾರತದ ಅಂಚೆ ಇಲಾಖೆಯಲ್ಲಿ (India Post office Recruitment)ಉದ್ಯೋಗ ಪಡೆಯಲು ಬಯಸುವವರಿಗೆ ಸುವರ್ಣಾವಕಾಶ. ಕೇಂದ್ರ ಸರಕಾರವು ಇದಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಮಾಹಿತಿಯನ್ನು ನೀಡಿದೆ. ಈ ಹುದ್ದೆಗಳ ವಿವರ, ವಯೋಮತಿ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತವಿರುವ ಅಂಚೆ ಇಲಾಖೆಯ ಸುಮಾರು 23 ವೃತ್ತಗಳಲ್ಲಿ ನೇಮಕಾತಿ ಕೈಗೊಳ್ಳಲು ನಿರ್ಧರಿಸಿದೆ. ಸದ್ಯ ಲಭ್ಯವಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮೆನ್‌, 1445 ಮೇಲ್‌ಗಾರ್ಡ್‌ ಮತ್ತು 37,539 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳಿವೆ. ಇದರೊಂದಿಗೆ ವೃತ್ತವಾರು ಸ್ಟೆನೊಗ್ರಾಫರ್‌ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಎಷ್ಟು ಹುದ್ದೆಗಳಿವೆ?

ಅಂಚೆ ಇಲಾಖೆಯು ದೇಶಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕರ್ನಾಟಕ ವೃತ್ತದಲ್ಲಿ ಕೆಲವು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ 3887 ಪೋಸ್ಟ್‌ಮೆನ್‌, 90 ಮೇಲ್‌ಗಾರ್ಡ್‌, 1754 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ ಏನು?

ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವವರು ಕಡ್ಡಾಯವಾಗಿ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಕೆಲವೊಂದು ಹುದ್ದೆಗಳಿಗೆ ಇಂಟರ್‌ಮೀಡಿಯೇಟ್‌ ಅಥವಾ ಪಿಯುಸಿ ವಿದ್ಯಾರ್ಥತೆಯನ್ನೂ ಬಯಸಲಾಗಿದೆ.

ವಯೋಮಿತಿ ಏನು?

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಇಂಡಿಯಾ ಪೋಸ್ಟ್‌ ಇನ್ನೂ ನೀಡಿಲ್ಲ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಅಂಚೆ ಇಲಾಖೆಯ ವೆಬ್‌ಸೈಟ್‌ ನೋಡುತ್ತಿರಬಹುದು. ಇಂಡಿಯಾ ಪೋಸ್ಟ್‌ ಜಿಡಿಎಸ್‌ ವೆಬ್‌ಸೈಟ್‌ ಲಿಂಕ್‌ಗೆ ಇಲ್ಲಿ ಕ್ಲಿಕ್‌ ಮಾಡಿ. ವಿಸ್ತೃತ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟವಾಗುವ ನಿರೀಕ್ಷೆಯಿದೆ.

ವೃತ್ತವಾರು ಹುದ್ದೆಗಳ ಮಾಹಿತಿ

ಪೋಸ್ಟ್‌ಮೆನ್‌ ಹುದ್ದೆಗಳು

ಆಂಧ್ರಪ್ರದೇಶ : 2289 ಹುದ್ದೆಗಳು

ಅಸ್ಸಾಂ: 934 ಹುದ್ದೆಗಳು

ಬಿಹಾರ ವೃತ್ತ: 1851 ಹುದ್ದೆಗಳು

ಛತ್ತಿಸ್‌ಗಡ ವೃತ್ತ: 613 ಹುದ್ದೆಗಳು

ದೆಹಲಿ ವೃತ್ತ: 2903 ಹುದ್ದೆಗಳು

ಗುಜರಾತ್ ವೃತ್ತ: 4524 ಹುದ್ದೆಗಳು

ಹರಿಯಾಣ ವೃತ್ತ: 1043 ಹುದ್ದೆಗಳು

ಎಚ್.ಪಿ. ವೃತ್ತ: 423 ಹುದ್ದೆಗಳು

ಜಮ್ಮು ಮತ್ತು ಕಾಶ್ಮೀರ ವೃತ್ತ: 395 ಹುದ್ದೆಗಳು

ಜಾರ್ಖಂಡ್ ವೃತ್ತ: 889 ಹುದ್ದೆಗಳು

ಕರ್ನಾಟಕ ವೃತ್ತ: 3887 ಹುದ್ದೆಗಳು

ಕೇರಳ ವೃತ್ತ: 2930 ಹುದ್ದೆಗಳು

ಎಂ.ಪಿ. ವೃತ್ತ: 2062 ಹುದ್ದೆಗಳು

ಮಹಾರಾಷ್ಟ್ರ ವೃತ್ತ: 9884 ಹುದ್ದೆಗಳು

ಎನ್‌ಇ ವೃತ್ತ: 581 ಹುದ್ದೆಗಳು

ಒಡಿಶಾ ವೃತ್ತ: 1352 ಹುದ್ದೆಗಳು

ಪಂಜಾಬ್ ವೃತ್ತ: 1824 ಹುದ್ದೆಗಳು

ರಾಜಸ್ಥಾನ ವೃತ್ತ: 2135 ಹುದ್ದೆಗಳು

ತಮಿಳುನಾಡು ವೃತ್ತ: 6130 ಹುದ್ದೆಗಳು

ತೆಲಂಗಾಣ ವೃತ್ತ: 1553 ಹುದ್ದೆಗಳು

ಉತ್ತರಾಖಂಡ ವೃತ್ತ: 674 ಹುದ್ದೆಗಳು

ಉತ್ತರ ಪ್ರದೇಶ ವೃತ್ತ: 4992 ಹುದ್ದೆಗಳು

ಪಶ್ಚಿಮ ಬಂಗಾಳ ವೃತ್ತ: 5231 ಹುದ್ದೆಗಳು

ಮೇಲ್‌ಗಾರ್ಡ್‌ ಹುದ್ದೆಗಳು

ಆಂಧ್ರಪ್ರದೇಶ ವೃತ್ತ: 108 ಹುದ್ದೆಗಳು

ಅಸ್ಸಾಂ: 73 ಹುದ್ದೆಗಳು

ಬಿಹಾರ ವೃತ್ತ: 95 ಹುದ್ದೆಗಳು

ಛತ್ತೀಸ್‌ಗಡ ವೃತ್ತ: 16 ಹುದ್ದೆಗಳು

ದೆಹಲಿ ವೃತ್ತ: 20 ಹುದ್ದೆಗಳು

ಗುಜರಾತ್ ವೃತ್ತ: 74 ಹುದ್ದೆಗಳು

ಹರಿಯಾಣ ವೃತ್ತ: 24 ಹುದ್ದೆಗಳು

ಎಚ್.ಪಿ. ವೃತ್ತ: 07 ಹುದ್ದೆಗಳು

ಜಮ್ಮು ಮತ್ತು ಕಾಶ್ಮೀರ ವೃತ್ತ: 0 ಹುದ್ದೆಗಳು

ಜಾರ್ಖಂಡ್ ವೃತ್ತ: 14 ಹುದ್ದೆಗಳು

ಕರ್ನಾಟಕ ವೃತ್ತ: 90ಹುದ್ದೆಗಳು

ಕೇರಳ ವೃತ್ತ: 74 ಹುದ್ದೆಗಳು

ಎಂ.ಪಿ. ವೃತ್ತ: 52 ಹುದ್ದೆಗಳು

ಮಹಾರಾಷ್ಟ್ರ ವೃತ್ತ: 147 ಹುದ್ದೆಗಳು

ಎನ್‌ಇ ವೃತ್ತ: 0 ಹುದ್ದೆಗಳು

ಒಡಿಶಾ ವೃತ್ತ: 70 ಹುದ್ದೆಗಳು

ಪಂಜಾಬ್ ವೃತ್ತ: 29 ಹುದ್ದೆಗಳು

ರಾಜಸ್ಥಾನ ವೃತ್ತ: 63 ಹುದ್ದೆಗಳು

ತಮಿಳುನಾಡು ವೃತ್ತ: 128 ಹುದ್ದೆಗಳು

ತೆಲಂಗಾಣ ವೃತ್ತ: 82 ಹುದ್ದೆಗಳು

ಉತ್ತರಾಖಂಡ ವೃತ್ತ: 08 ಹುದ್ದೆಗಳು

ಯು.ಪಿ. ವೃತ್ತ: 116 ಹುದ್ದೆಗಳು

ಪಶ್ಚಿಮ ಬಂಗಾಳ ವೃತ್ತ: 155 ಹುದ್ದೆಗಳು

ಹುದ್ದೆಯ ಹೆಸರು: ಎಂಟಿಎಸ್‌ (MTS)

ಆಂಧ್ರ ವೃತ್ತ: 1166 ಹುದ್ದೆಗಳು

ಅಸ್ಸಾಂ: 747 ಹುದ್ದೆಗಳು

ಬಿಹಾರ ವೃತ್ತ: 1956 ಹುದ್ದೆಗಳು

ಛತ್ತೀಸ್‌ಘಡ ವೃತ್ತ: 346 ಹುದ್ದೆಗಳು

ದೆಹಲಿ ವೃತ್ತ: 2667 ಹುದ್ದೆಗಳು

ಗುಜರಾತ್ ವೃತ್ತ: 2530 ಹುದ್ದೆಗಳು

ಹರಿಯಾಣ ವೃತ್ತ: 818 ಹುದ್ದೆಗಳು

ಎಚ್.ಪಿ. ವೃತ್ತ: 383 ಹುದ್ದೆಗಳು

ಜಮ್ಮು ಮತ್ತು ಕಾಶ್ಮೀರ ವೃತ್ತ: 401 ಹುದ್ದೆಗಳು

ಜಾರ್ಖಂಡ್ ವೃತ್ತ: 600 ಹುದ್ದೆಗಳು

ಕರ್ನಾಟಕ ವೃತ್ತ: 1754 ಹುದ್ದೆಗಳು

ಕೇರಳ ವೃತ್ತ: 1424 ಹುದ್ದೆಗಳು

ಎಂ.ಪಿ. ವೃತ್ತ: 1268 ಹುದ್ದೆಗಳು

ಮಹಾರಾಷ್ಟ್ರ ವೃತ್ತ: 5478 ಹುದ್ದೆಗಳು

ಎನ್‌ಇ ವೃತ್ತ: 358 ಹುದ್ದೆಗಳು

ಒಡಿಶಾ ವೃತ್ತ: 881 ಹುದ್ದೆಗಳು

ಪಂಜಾಬ್ ವೃತ್ತ: 1178 ಹುದ್ದೆಗಳು

ರಾಜಸ್ಥಾನ ವೃತ್ತ: 1336 ಹುದ್ದೆಗಳು

ತಮಿಳುನಾಡು ವೃತ್ತ: 3361 ಹುದ್ದೆಗಳು

ತೆಲಂಗಾಣ ವೃತ್ತ: 878 ಹುದ್ದೆಗಳು

ಉತ್ತರಾಖಂಡ ವೃತ್ತ: 399 ಹುದ್ದೆಗಳು

ಯು.ಪಿ. ವೃತ್ತ: 3911 ಹುದ್ದೆಗಳು

ಪಶ್ಚಿಮ ಬಂಗಾಳ ವೃತ್ತ: 3744 ಹುದ್ದೆಗಳು

IPL_Entry_Point

ವಿಭಾಗ