ಕನ್ನಡ ಸುದ್ದಿ  /  Nation And-world  /  India Sent Medicine To 150 Countries During Covid Crisis: Minister Mansukh Mandaviya

Mansukh Mandaviya: ವಸುದೈವ ಕುಟುಂಬಕಂ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ 150 ದೇಶಗಳಿಗೆ ಔಷಧ ನೀಡಿದ ಭಾರತ

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು 150 ದೇಶಗಳಿಗೆ ಔಷಧಿಗಳ ಬೆಲೆಯನ್ನು ಹೆಚ್ಚಿಸದೆ ಮತ್ತು ಔಷಧಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಔಷಧಿಗಳನ್ನು ಕಳುಹಿಸಿದೆ

Mansukh Mandaviya: ವಸುದೈವ ಕುಟುಂಬಕಂ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ 150 ದೇಶಗಳಿಗೆ ಔಷಧ ನೀಡಿದ ಭಾರತ (PTI)
Mansukh Mandaviya: ವಸುದೈವ ಕುಟುಂಬಕಂ, ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ 150 ದೇಶಗಳಿಗೆ ಔಷಧ ನೀಡಿದ ಭಾರತ (PTI) (MINT_PRINT)

ನವದೆಹಲಿ: ನೆರೆಹೊರೆಯ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚುವ ವಿಷಯದಲ್ಲಿ ಭಾರತ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ. ವಸುದೈವ ಕುಟುಂಬಕಂಗೆ ತಕ್ಕಂತೆ ಭಾರತವು ವರ್ತಿಸುತ್ತಿದೆ. ಇದಕ್ಕೆ ಪೂರಕವಾಗಿ ಭಾರತವು ಕೊರೊನಾ ಸಮಯದಲ್ಲಿ ಹಲವು ದೇಶಗಳಿಗೆ ನೆರವಿನ ಹಸ್ತ ಚಾಚಿದೆ. ಇದೀಗ ಬಂದ ಮಾಹಿತಿ ಪ್ರಕಾರ ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಭಾರತವು 150 ದೇಶಗಳಿಗೆ ವೈದ್ಯಕೀಯ ಸಹಾಯವನ್ನು ನೀಡಿದೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು 150 ದೇಶಗಳಿಗೆ ಔಷಧಿಗಳ ಬೆಲೆಯನ್ನು ಹೆಚ್ಚಿಸದೆ ಮತ್ತು ಔಷಧಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಔಷಧಿಗಳನ್ನು ಕಳುಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಶುಕ್ರವಾರ ದೆಹಲಿಯಲ್ಲಿ ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಬಳಿಕ ಸಚಿವರು ಈ ಮಾಹಿತಿ ನೀಡಿದ್ದಾರೆ.

ಸಾಂಕ್ರಾಮಿಕದ ಸಮಯದಲ್ಲಿ ಭಾರತವು 150 ಕ್ಕೂ ಹೆಚ್ಚು ಪೀಡಿತ ದೇಶಗಳಿಗೆ ಲಸಿಕೆಗಳು, ವೈದ್ಯಕೀಯ ಉಪಕರಣಗಳು ಮತ್ತು ಔಷಧಿಗಳ ರೂಪದಲ್ಲಿ ಬೆಂಬಲವನ್ನು ನೀಡಿದೆ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರು ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಅಧ್ಯಕ್ಷರ 26 ನೇ ಸಮ್ಮೇಳನದಲ್ಲಿ (CSPOC) ಹೇಳಿದ್ದರು.

ಜಗತ್ತಿನ ಲಸಿಕೆ ಅಗತ್ಯತೆಯ ಶೇಕಡ 65ರಷ್ಟನ್ನು ಭಾರತ ಪೂರೈಸುತ್ತದೆ ಎಂದು ಮಾಂಡವಿಯಾ ಹೇಳಿದ್ದಾರೆ. "ಇಂದು, ವಿಶ್ವದ ಯಾವುದೇ ದೇಶವು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದರೆ, ಅದು ಭಾರತವಾಗಿದೆ" ಎಂದು ಅವರು ಹೇಳಿದ್ದಾರೆ.

ಪ್ರಪಂಚದಾದ್ಯಂತದ ವಿವಿಧ ದೇಶಗಳಿಗೆ ಕೋವಿಡ್‌ 19 ಮೇಡ್-ಇನ್-ಇಂಡಿಯಾ ಲಸಿಕೆಗಳನ್ನು ಪೂರೈಸಲು ಭಾರತವು "ವ್ಯಾಸಿನ್‌ ಮೈತ್ರಿ" ಎಂಬ ವಿಶೇಷ ಉಪಕ್ರಮವನ್ನು ಕೈಗೊಂಡಿದೆ ಎಂದು ಹರಿವಂಶ್ ಹೇಳಿದ್ದಾರೆ. ಈ ಉಪಕ್ರಮದ ಅಡಿಯಲ್ಲಿ, ಡಿಸೆಂಬರ್ 2022 ರ ಮೊದಲ ವಾರದವರೆಗೆ ಭಾರತವು 101 ದೇಶಗಳು ಮತ್ತು ಎರಡು ಯುಎನ್ ಘಟಕಗಳಿಗೆ COVID-19ನ 282 ದಶಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಪೂರೈಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

"ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಆರಂಭವಾದ ಬಳಿಕ ಇಡೀ ಸರಕಾರ, ಇಡೀ ಸಮಾಜ ಪರಿಕಲ್ಪನೆಯಡಿ ಕಾರ್ಯನಿರ್ವಹಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಭಾರತವು ಹಲವು ಕಾನೂನುಗಳನ್ನು ಬದಲಾಯಿಸಿ ಮುಂದಡಿ ಇಟ್ಟಿದೆ. ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸಹಾಯ ಹಸ್ತ ಚಾಚದೆ ಇರಲಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. " ಸಾಂಕ್ರಾಮಿಕ ರೋಗಗಳ ಕಾಯಿದೆ, 1897 ಅನ್ನು ಸಂಸತ್ತು ತಿದ್ದುಪಡಿ ಮಾಡಲಾಗಿದೆ. ಸಾಂಕ್ರಾಮಿಕದ ಕಾಲದಲ್ಲಿ ಅಗತ್ಯ ವಸ್ತುಗಳು ದುಬಾರಿಯಾಗದಂತೆ 1955 ರ ಅಗತ್ಯ ವಸ್ತುಗಳ ಕಾಯಿದೆಗೆ ತಿದ್ದುಪಡಿ ಮಾಡಲಾಯಿತು. ಇಂತಹ ಹಲವು ಉಪಕ್ರಮಗಳನ್ನು ಆ ಸಮಯದಲ್ಲಿ ಭಾರತ ತೆಗೆದುಕೊಂಡಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

IPL_Entry_Point