ಕೇಂದ್ರ ಬಜೆಟ್ 2025; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ನೇರ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ನೋಡಬಹುದು, ಇಲ್ಲಿದೆ ವಿವರ
Union Budget 2025 date time: ಕೇಂದ್ರ ಬಜೆಟ್ 2025ರ ಮಂಡನೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ಬಜೆಟ್ ಮಂಡನೆಯ ದಿನಾಂಕ, ಸಮಯ, ನೇರಪ್ರಸಾರದ ವಿವರಕ್ಕಾಗಿ ಹುಡುಕಾಡುತ್ತಿರಬಹುದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ನೇರ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.

Budget 2025 date and time, Live: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಶನಿವಾರ ಸತತ ಎಂಟನೇ ಬಜೆಟ್ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ (ಕೇಂದ್ರ ಬಜೆಟ್ 2025) ಇದಾಗಿದೆ. ಕೇಂದ್ರ ಮುಂಗಡಪತ್ರವನ್ನು 2021ರಿಂದ ಪೇಪರ್‌ಲೆಸ್ ಆಗಿ ಮಂಡಿಸಲಾಗುತ್ತಿದೆ. ಈ ಬಾರಿ ಕೂಡ ಕೇಂದ್ರ ಬಜೆಟ್ 2025-26 ಡಿಜಿಟಲ್ ರೂಪದಲ್ಲಿ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಜನವರಿ 31 ರಂದು ಸಂಸತ್‌ನ ಬಜೆಟ್ ಅಧಿವೇಶನ ಶುರುವಾಗುತ್ತಿದ್ದು, ಅಂದೇ ಆರ್ಥಕ ಸಮೀಕ್ಷೆಯೂ ಪ್ರಕಟವಾಗಲಿದೆ.
ಕೇಂದ್ರ ಬಜೆಟ್ ಎಂದರೇನು
ಕೇಂದ್ರ ಬಜೆಟ್ ಎಂಬುದು ಮುಂಬರುವ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 1 ರಿಂದ ಮಾರ್ಚ್ 31) ಭಾರತ ಸರ್ಕಾರದ ಖರ್ಚು ವೆಚ್ಚ ಮತ್ತು ಅದಾಯಗಳ ಪ್ರಸ್ತಾವನೆಯ ಕಡತ. ಸರಳವಾಗಿ ಹೇಳಬೇಕು ಎಂದರೆ ವಾರ್ಷಿಕ ಹಣಕಾಸು ಹೇಳಿಕೆ. 2019ರಿಂದ ಸರ್ಕಾರದ ಹಣಕಾಸಿನ, ಖರ್ಚು, ಆದಾಯ ಮತ್ತು ಆರ್ಥಿಕ ನೀತಿಗಳನ್ನು ಬಜೆಟ್ ಪ್ರತಿಯಲ್ಲಿ ಸೇರಿಸಲಾಗಿದೆ. ಇದನ್ನು ಬಹಿ-ಖಾತಾ ಎಂದು ಕರೆಯಲಾಗುತ್ತಿದೆ.
ಕೇಂದ್ರ ಬಜೆಟ್ 2025; ಮಂಡನೆ ದಿನಾಂಕ, ಸಮಯ ಮತ್ತು ಸ್ಥಳ
ಸಂಸತ್‌ನ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗುತ್ತಿದ್ದು, ಮೊದಲ ದಿನ ರಾಷ್ಟ್ರಪತಿಯವರು ಸಂಸತ್‌ನ ಉಭಯ ಸದನಗಳನ್ನು (ರಾಜ್ಯಸಭೆ ಮತ್ತು ಲೋಕಸಭೆ) ಉದ್ದೇಶಿಸಿ ಮಾತನಾಡುತ್ತಾರೆ. ಜಂಟಿ ಅಧಿವೇಶನದ ಬಳಿಕ ದೇಶದ ಆರ್ಥಿಕ ಸಮೀಕ್ಷೆ ಮಂಡನೆಯಾಗುತ್ತದೆ. ಮಾರನೇ ದಿನ ಅಂದರೆ ಫೆಬ್ರವರಿ 1 ರಂದು ಸಂಸತ್‌ನಲ್ಲಿ ಕೇಂದ್ರ ಬಜೆಟ್ 2025-26 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಾರೆ. ಲೋಕಸಭೆಯಲ್ಲಿ ಫೆ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
ಕೇಂದ್ರ ಬಜೆಟ್ ನೇರ ಪ್ರಸಾರ ನೋಡುವುದೆಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ನೇರ ಪ್ರಸಾರದ ಸಮಯ
- ಕೇಂದ್ರ ಬಜೆಟ್ ಮಂಡನೆಯನ್ನು ಸಂಸತ್‌ನ ಅಧಿಕೃತ ವಾಹಿನಿ ಸಂಸದ್ ಟಿವಿ ಮತ್ತು ಭಾರತ ಸರ್ಕಾರದ ದೂರದರ್ಶನ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ.
- ಇದಲ್ಲದೇ, ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲೂ ಕೇಂದ್ರ ಬಜೆಟ್ ಮಂಡನೆಯ ನೇರ ಪ್ರಸಾರ ಇರಲಿದೆ.
- ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡದ “ಕೇಂದ್ರ ಬಜೆಟ್ 2025” ಪುಟವನ್ನು ಗಮನಿಸಬಹುದು.
- ಕೇಂದ್ರ ಬಜೆಟ್ 2025; ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡದ “@htkannada” ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ನೋಡಬಹುದು.
ಕೇಂದ್ರ ಬಜೆಟ್ 2025; ಲೈವ್ ಅಪ್ಡೇಟ್, ಬಜೆಟ್ ಪ್ರತಿ ಪಡೆಯುವುದೆಲ್ಲಿ
ಕೇಂದ್ರ ಬಜೆಟ್ 2025-26ರ ಲೈವ್ ಅಪ್ಡೇಟ್ ಮತ್ತು ಕೇಂದ್ರ ಬಜೆಟ್ 2025-26ರ ಪಿಡಿಎಫ್ ಫೈಲ್ ಪಡೆಯುವುದಕ್ಕೆ ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ಗೆ ಭೇಟಿ ನೀಡಬಹುದು. ಸಂವಿಧಾನವು ಸೂಚಿಸಿದಂತೆ ವಾರ್ಷಿಕ ಹಣಕಾಸು ಹೇಳಿಕೆ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನದ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿಗಳು ಸೇರಿದಂತೆ ಎಲ್ಲಾ ಯೂನಿಯನ್ ಬಜೆಟ್ ದಾಖಲೆಗಳು'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ನಲ್ಲಿ ಲಭ್ಯವಿರುತ್ತವೆ. ಇದು ಉಚಿತವಾಗಿದ್ದು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪ್ರತಿಗಳಷ್ಟೆ ಲಭ್ಯವಿರುತ್ತದೆ.

ವಿಭಾಗ