ಎಟಿಎಂ ವಹಿವಾಟು ಶುಲ್ಕ ಹೆಚ್ಚಳ ಸೇರಿದಂತೆ ನಾಳೆಯಿಂದ ಜಾರಿಗೆ ಬರಲಿವೆ ಈ ಹೊಸ ನಿಯಮಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಎಟಿಎಂ ವಹಿವಾಟು ಶುಲ್ಕ ಹೆಚ್ಚಳ ಸೇರಿದಂತೆ ನಾಳೆಯಿಂದ ಜಾರಿಗೆ ಬರಲಿವೆ ಈ ಹೊಸ ನಿಯಮಗಳು

ಎಟಿಎಂ ವಹಿವಾಟು ಶುಲ್ಕ ಹೆಚ್ಚಳ ಸೇರಿದಂತೆ ನಾಳೆಯಿಂದ ಜಾರಿಗೆ ಬರಲಿವೆ ಈ ಹೊಸ ನಿಯಮಗಳು

ಗ್ರಾಮೀಣ ಬ್ಯಾಂಕುಗಳ ವಿಲೀನ, ಎಟಿಎಂ ವಹಿವಾಟಿನ ಶುಲ್ಕ ಹೆಚ್ಚಳ ಸೇರಿದಂತೆ ಮೇ 1 ರಿಂದ ಬ್ಯಾಂಕಿಂಗ್ ಹಾಗೂ ವ್ಯವಹಾರ ವಲಯದಲ್ಲಿ ಈ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ.

ಎಟಿಎಂ ವಹಿವಾಟು ಶುಲ್ಕ ಹೆಚ್ಚಳ ಸೇರಿದಂತೆ ನಾಳೆಯಿಂದ ಜಾರಿಗೆ ಬರಲಿವೆ ಈ ಹೊಸ ನಿಯಮಗಳು
ಎಟಿಎಂ ವಹಿವಾಟು ಶುಲ್ಕ ಹೆಚ್ಚಳ ಸೇರಿದಂತೆ ನಾಳೆಯಿಂದ ಜಾರಿಗೆ ಬರಲಿವೆ ಈ ಹೊಸ ನಿಯಮಗಳು

ನವದೆಹಲಿ: ಮೇ 1 ರಿಂದ ಜಾರಿಗೆ ಬರುವಂತೆ ದೇಶದಾದ್ಯಂತ ಕೆಲವು ಪ್ರಮುಖ ಆರ್ಥಿಕ ಬದಲಾವಣೆಗಳು ಜಾರಿಗೆ ಬರಲಿವೆ. ಪ್ರಾದೇಶಿಕ ಬ್ಯಾಂಕುಗಳನ್ನು ಕ್ರೋಢೀಕರಿಸುವ ಮೂಲಕ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲು ಸರ್ಕಾರವು ತನ್ನ ಹೆಜ್ಜೆಯನ್ನು ಮುಂದಿಡಲಿದೆ. ಎಟಿಎಂ ವಹಿವಾಟು ಶುಲ್ಕದಲ್ಲಿ ಏರಿಕೆಯಾಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಲು ಅನುಮೋದಿಸಿದ ನಂತರ, ಒಂದು ಬ್ಯಾಂಕ್ ತನ್ನ ಸೇವೆಗಳನ್ನು ಬಳಸುವುದಕ್ಕಾಗಿ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಮೊತ್ತ ಹೆಚ್ಚಾಗುತ್ತದೆ. ಈ ಕಾರಣದಿಂದ ಗ್ರಾಹಕರು ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ತಿಂಗಳಿಗೆ ನಿಗದಿಯಾಗಿರುವ ಎಟಿಎಂ ವಿತ್‌ ಡ್ರಾವಲ್ ಸಂಖ್ಯೆ ಮುಗಿದ ನಂತರ ಹೆಚ್ಚುವರಿ ವಹಿವಾಟಿಗೆ 23 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಈ ಹಿಂದೆ ಪ್ರತಿ ವಹಿವಾಟಿನ ಮೇಲೆ 21 ರೂ ಇದ್ದು, ಇನ್ನು ಮುಂದೆ 2 ರೂ ಹೆಚ್ಚು ಪಾವತಿಸಬೇಕಾಗುತ್ತದೆ.

* ಯಾವುದೇ ವ್ಯಕ್ತಿಗಳು ತಮ್ಮ ಖಾತೆ ಇರುವ ಬ್ಯಾಂಕಿನ ಎಟಿಎಂನಲ್ಲಿ ತಿಂಗಳಿಗೆ 5 ಉಚಿತ ವಹಿವಾಟು ನಡೆಸಬಹುದು.

* ಮೆಟ್ರೊ ಸಿಟಿಗಳಲ್ಲಿ ಇತರ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 3 ಬಾರಿ ಉಚಿತವಾಗಿ ಎಂಟಿಎಂನಿಂದ ಹಣ ವಿತ್ ಡ್ರಾ ಮಾಡಬಹುದು.

* ನಾನ್ ಮೆಟ್ರೊ ಸಿಟಿಗಳಲ್ಲಿ ಇತರ ಬ್ಯಾಂಕ್‌ಗಳಲ್ಲಿ ತಿಂಗಳಲ್ಲಿ 5 ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಬಹುದು.

ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ

ಏಪ್ರಿಲ್ ತಿಂಗಳ ಆರಂಭದಲ್ಲಿ ಹಣಕಾಸು ಸಚಿವಾಲಯವು 11 ರಾಜ್ಯಗಳಲ್ಲಿ 'ಒಂದು ರಾಜ್ಯ-ಒಂದು RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್)' ಅಭಿಯಾನವನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ 11 ರಾಜ್ಯಗಳ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಒಂದೇ ಆಗಿ ವಿಲೀನ ಮಾಡಲಾಗಿದೆ. ಈ ಯೋಜನೆ ಮೇ 1 ರಿಂದ ಜಾರಿಗೆ ಬರಲಿದ್ದು, ಉತ್ತಮ ಕಾರ್ಯಾಚರಣೆಯ ದಕ್ಷತೆ ಮತ್ತು ವೆಚ್ಚ ನಿರ್ವಹಣೆಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಈ ನಾಲ್ಕನೇ ಸುತ್ತಿನ ವಿಲೀನದೊಂದಿಗೆ, ಸಂಖ್ಯೆ ಅಸ್ತಿತ್ವದಲ್ಲಿರುವ 43 ರಿಂದ 28 ಕ್ಕೆ ಇಳಿಯುತ್ತದೆ.

ಉಳಿತಾಯ ಖಾತೆ ಮತ್ತು ಎಫ್‌ಡಿ ಬಡ್ಡಿದರಗಳು

ಮೇ 1 ರಿಂದ, ಆರ್‌ಬಿಎಲ್ ಬ್ಯಾಂಕಿನ ಉಳಿತಾಯ ಖಾತೆದಾರರು ತ್ರೈಮಾಸಿಕಕ್ಕೆ ಬದಲಾಗಿ ಮಾಸಿಕ ಬಡ್ಡಿ ಪಾವತಿಗಳನ್ನು ಪಡೆಯುತ್ತಾರೆ. ಬ್ಯಾಂಕಿನ ಇಮೇಲ್ ಪ್ರಕಾರ, ಅದರ ಉಳಿತಾಯ ಖಾತೆಯಲ್ಲಿ ಇರಿಸಲಾಗಿರುವ ಬ್ಯಾಲೆನ್ಸ್ ಅನ್ನು ಅವಲಂಬಿಸಿರುವ ಅತ್ಯಧಿಕ ಬಡ್ಡಿದರವು ಶೇಕಡಾ 7 ರಷ್ಟಿದೆ.

‘ನಿಮ್ಮ ಖಾತೆಯಲ್ಲಿನ ದಿನದ ಅಂತ್ಯದ ಬ್ಯಾಲೆನ್ಸ್ ಆಧರಿಸಿ, ಬಡ್ಡಿಯನ್ನು ಪ್ರತಿದಿನ ಲೆಕ್ಕಹಾಕಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ ಮತ್ತು ಮಾಸಿಕ ಆಧಾರದ ಮೇಲೆ ನಿಮ್ಮ ಖಾತೆಗೆ ಪಾವತಿಸಲಾಗುತ್ತದೆ/ಕ್ರೆಡಿಟ್ ಮಾಡಲಾಗುತ್ತದೆ‘ ಎಂದು ಬ್ಯಾಂಕ್ ತಿಳಿಸಿದೆ.

ಶ್ರೀರಾಮ್ ಗ್ರೂಪ್‌ನ ಅಡಿಯಲ್ಲಿ ಬರುವ ಎನ್‌ಬಿಎಫ್‌ಸಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (ಎಸ್‌ಎಫ್‌ಎಲ್) ತನ್ನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು ಪರಿಷ್ಕರಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್‌ನ ವರದಿ ತಿಳಿಸಿದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ವಾರ್ಷಿಕವಾಗಿ ಶೇಕಡಾ 0.50 ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ ಮತ್ತು ಮಹಿಳಾ ಠೇವಣಿದಾರರು ವಾರ್ಷಿಕವಾಗಿ ಶೇಕಡಾ 0.10 ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ. ನಾಳೆಯಿಂದ ಅಂದರೆ ಮೇ 1 ರಿಂದ ಈ ಎಲ್ಲಾ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿದೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.