Kannada News  /  Nation And-world  /  India Will Soon Surpass Uk To Takeover As World's Third-largest Economy
India will surpass UK: ಇಂಗ್ಲೆಂಡ್‌ ಹಿಂದಿಕ್ಕಿ ಜಗತ್ತಿನ ಮೂರನೇ ಅಗ್ರ ಆರ್ಥಿಕತೆಯಾಗಲಿದೆ ಭಾರತ, ಜತೆಯಾಗಿ ಕೆಲಸ ಮಾಡೋಣ ಎಂದ ಇಂಗ್ಲೆಂಡ್‌ (ANI Photo)
India will surpass UK: ಇಂಗ್ಲೆಂಡ್‌ ಹಿಂದಿಕ್ಕಿ ಜಗತ್ತಿನ ಮೂರನೇ ಅಗ್ರ ಆರ್ಥಿಕತೆಯಾಗಲಿದೆ ಭಾರತ, ಜತೆಯಾಗಿ ಕೆಲಸ ಮಾಡೋಣ ಎಂದ ಇಂಗ್ಲೆಂಡ್‌ (ANI Photo) (Ayush Sharma)

India will surpass UK: ಇಂಗ್ಲೆಂಡ್‌ ಹಿಂದಿಕ್ಕಿ ಜಗತ್ತಿನ ಮೂರನೇ ಅಗ್ರ ಆರ್ಥಿಕತೆಯಾಗಲಿದೆ ಭಾರತ, ಜತೆಯಾಗಿ ಕೆಲಸ ಮಾಡೋಣ ಎಂದ ಇಂಗ್ಲೆಂಡ್‌

21 September 2022, 13:04 ISTPraveen Chandra B
  • Share on Twitter
  • Share on FaceBook
21 September 2022, 13:04 IST

ಈ ದಶಕದ ಅಂತ್ಯದ ವೇಳೆಗೆ ಭಾರತವು ಇಂಗ್ಲೆಂಡ್‌ ಅನ್ನು ಹಿಂದಕ್ಕೆ ಸರಿಸಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಲಿದೆ, ಹೀಗಾಗಿ, ದೆಹಲಿ ಮತ್ತು ಲಂಡನ್‌ ಜತೆಯಾಗಿ ಕೆಲಸ ಮಾಡಬೇಕು ಎಂದು ಭಾರತದಲ್ಲಿರುವ ಬ್ರಿಟನ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹೇಳಿದ್ದಾರೆ.

ನವದೆಹಲಿ: ಈ ದಶಕದ ಅಂತ್ಯದ ವೇಳೆಗೆ ಭಾರತವು ಇಂಗ್ಲೆಂಡ್‌ ಅನ್ನು ಹಿಂದಕ್ಕೆ ಸರಿಸಿ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಲಿದೆ, ಹೀಗಾಗಿ, ದೆಹಲಿ ಮತ್ತು ಲಂಡನ್‌ ಜತೆಯಾಗಿ ಕೆಲಸ ಮಾಡಬೇಕು ಎಂದು ಭಾರತದಲ್ಲಿರುವ ಬ್ರಿಟನ್‌ ಹೈಕಮಿಷನರ್‌ ಅಲೆಕ್ಸ್‌ ಎಲ್ಲಿಸ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಎರಡು ಆರ್ಥಿಕತೆಗಳು ಗಾತ್ರದಲ್ಲಿ ಸರಿಸುಮಾರು ಒಂದೇ ರೀತಿ ಇವೆ. ಭಾರತವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಬೃಹತ್‌ ಆರ್ಥಿಕತೆಯತ್ತ ಸಾಗಲು ದಾಪುಗಾಲಿಡುತ್ತಿದೆ. ಹೀಗಾಗಿ, ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕಿದೆʼʼ ಎಂದು ಅವರು ನಿನ್ನೆ ನಡೆದ ಭಾರತದ-ಯುಕೆ ವ್ಯಾಪಾರ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಯುಕೆ ಈಗ ಐರೋಪ್ಯ ಒಕ್ಕೂಟವನ್ನು ತೊರೆದಿರುವುದರಿಂದ, ಅತ್ಯುತ್ತಮ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಜತೆಗೆ ಕೆಲಸ ಮಾಡಲು ಇದು ಸಕಾಲʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ಈ ವರ್ಷದ ದೀಪಾವಳಿ ವೇಳಗೆ ಲಂಡನ್‌ ಮತ್ತು ನವದೆಹಲಿಗಳು ಮುಕ್ತ ಮಾರಾಟ ಒಪ್ಪಂದ (ಎಫ್‌ಟಿಎ) ಪೂರ್ಣಗೊಳಿಸಲು ಪ್ರಯತ್ನಿಸುತ್ತಿವೆ. ಎಫ್‌ಟಿಎಯು ಭಾರತದಲ್ಲಿ ಉದ್ಯೋಗ ಹೆಚ್ಚಿಸಲು ಮತ್ತು ಆರ್ಥಿಕ ಪ್ರಗತಿಗೆ ನೆರವಾಗಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ಮತ್ತು ಇಂಗ್ಲೆಂಡ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕ್ಕೆ ಸಂಬಂಧಪಟದ್ಟಂತೆ ಐದನೇ ಸುತ್ತಿನ ಮಾತುಕತೆಗಳು ಕಳೆದ ತಿಂಗಳು ಪೂರ್ಣಗೊಂಡಿದೆʼʼ ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

"ಭಾರತದಲ್ಲಿ ಸುಮಾರು 618 ಇಂಗ್ಲೆಂಡ್‌ ಕಂಪನಿಗಳಿದ್ದು, 4 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದೆ. ಇದು ಹಲವು ಶತಕೋಟಿ ಡಾಲರ್‌ ಆದಾಯವನ್ನೂ ಉಂಟು ಮಾಡುತ್ತಿವೆʼʼ ಎಂದು ಬ್ರಿಟನ್ಸ್‌ ಮೀಟ್ಸ್‌ ಇಂಡಿಯಾ (ಬಿಎಂಐ) ವರದಿ 2022 ತಿಳಿಸಿದೆ.

ಮುಕ್ತ ವ್ಯಾಪಾರ ಎಂದರೇನು?

• ದೇಶಗಳ ನಡುವೆ ನಡೆಯುವ ವ್ಯಾಪಾರ ವಹಿವಾಟು ಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲವಾದರೆ ಅದು ಮುಕ್ತ ವ್ಯಾಪಾರ ನೀತಿ ಯಾಗುತ್ತದೆ.

• ಈ ವ್ಯಾಪಾರ ನೀತಿಯಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸರಕುಗಳು ಯಾವುದೇ ಅಡತಡೆಗಳಿಲ್ಲದೇ ವರ್ಗಾವಣೆ ಮಾಡಲ್ಪಡುವ ಸನ್ನಿವೇಶವೇ ಮುಕ್ತ ವ್ಯಾಪಾರ ನೀತಿಯಾಗಿದೆ.

ಆ್ಯಡಂ ಸ್ಮಿತ್ ಪ್ರಕಾರ : ಸ್ವದೇಶಿ ಮತ್ತು ವಿದೇಶಿ ಸರಕುಗಳ ನಡುವೆ ಯಾವುದೇ ತಾರತಮ್ಯ ತೋರದ ವಾಣಿಜ್ಯ ನೀತಿಯೇ ಮುಕ್ತ ವ್ಯಾಪಾರ ನೀತಿಯಾಗಿದೆ.