Indian Army Ranks: ಲ್ಯಾನ್ಸ್‌ನಾಯಕ್ ಹಂತದಿಂದ ಜನರಲ್‌ವರೆಗೆ ಸೇನೆಯಲ್ಲಿದೆ ಹಲವು ರ‍್ಯಾಂಕ್‌ಗಳು, ಸೇನೆಯ ಅಭಿಮಾನಿಗಳು ತಿಳಿಯಬೇಕಾದ ಮಾಹಿತಿ
ಭಾರತೀಯ ಸೇನೆಯಲ್ಲಿರುವ ಲ್ಯಾನ್ಸ್‌ನಾಯಕ್ ಹಂತದಿಂದ ಜನರಲ್‌ವರೆಗೆ ಹಲವು ರ‍್ಯಾಂಕ್‌ಗಳಿವೆ. ಸೇನೆಯ ಅಭಿಮಾನಿಗಳಿಗಾಗಿ ಸೇನಾ ಹುದ್ದೆಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ಪ್ರತಿಯೊಬ್ಬ ಭಾರತೀಯನು ನೆಮ್ಮದಿಯಾಗಿ ಬದುಕುತ್ತಿದ್ದಾನೆ ಎಂದರೆ ಅದಕ್ಕೆ ಮುಖ್ಯ ಕಾರಣ ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ವೀರ ಯೋಧರು. ಶತ್ರುಗಳು ದೇಶದ ಗಡಿಯೊಳಕ್ಕೆ ನುಗ್ಗದಂತೆ ಹಗಲಿರುಳು ಕಾಯುತ್ತಿರುವ ಸೈನಿಕರು ಎಂದೆಂದೂ ನಮ್ಮ ಹೆಮ್ಮೆಯಾಗಿದ್ದಾರೆ.
ಸೇನೆಯಲ್ಲಿ ಲ್ಯಾನ್ಸ್‌ನಾಯಕ್ ಹಂತದಿಂದ ಜನರಲ್‌ವಗೆ ಹಲವು ರ‍್ಯಾಂಕ್‌ಗಳಿವೆ. ಸೇನಾಭಿಮಾನಿಗಳಾಗಿ ಇಲ್ಲಿನ ಹುದ್ದೆಗಳು, ಅಧಿಕಾರ, ಜವಾಬ್ದಾರಿ ಹಾಗೂ ನಾಯಕತ್ವದ ಮಟ್ಟದ ಮಾಹಿತಿಯನ್ನು ನಿಮಗಾಗಿ ಇಲ್ಲಿ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಭಾರತೀಯ ಸೇನೆಯಲ್ಲಿರುವ ಅತ್ಯುನ್ನತ ಹುದ್ದೆಯಾಗಿದೆ.
ಕಾವಲುಪಡೆ, ಶಸ್ತ್ರಾಸ್ತ್ರ ಪಡೆಗಳನ್ನ ಒಳಗೊಂಡಿರುವ ಸೈನಿಕರನ್ನು ಸಿಪಾಯಿಗಳೆಂದು ಕರೆಯಲಾಗುತ್ತದೆ. ಅಶ್ವದಳ, ರಕ್ಷಾಕವಚದಲ್ಲಿ ಇರುವ ಸೈನಿಕರನ್ನು ಸೋವರ್ ಎಂದು ಕರೆಯಲಾಗುತ್ತದೆ. ಇವರಿಗೆ ಯಾವುದೇ ರೀತಿಯ ಚಿಹ್ನೆಗಳು ಇರುವುದಿಲ್ಲ. ಸೇನೆಯಲ್ಲಿರುವ ರ‍್ಯಾಂಕ್, ಚಿಹ್ನೆಗಳಿಗೆ ಸೇರಿದಂತೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
ಪ್ರಶ್ನೆ 1. ಭಾರತೀಯ ಸೇನೆಯಲ್ಲಿ ಎಷ್ಟು ರ‍್ಯಾಂಕ್‌ಗಳು ಇವೆ?
ಉತ್ತರ: ಭಾರತೀಯ ಸೇನೆಯಲ್ಲಿ ಹಲವು ರ‍್ಯಾಂಕ್‌ಗಳು ಇದ್ದು, ಅವುಗಳನ್ನು ಮೂರು ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ
- ಕಮಿಷನ್ಡ್ ಆಫೀಸರ್
- ಜೂನಿಯರ್ ಕಮಿಷನ್ಡ್ ಆಫೀಸರ್
- ನಾನ್ ಕಮಿಷನ್ಡ್ ಆಫೀಸರ್
ಪ್ರಶ್ನೆ 2. ಸೇನೆಯಲ್ಲಿರುವ ರ‍್ಯಾಂಕ್‌ಗಳು ಯಾವುವು?
ಉತ್ತರ: ಭಾರತೀಯ ಸೇನೆಯಲ್ಲಿ ಕಮಿಷನ್ಡ್ ಆಫೀಸರ್ ಶ್ರೇಣಿಗಳಿವೆ
- ಲೆಫ್ಟಿನೆಂಟ್
- ಕ್ಯಾಪ್ಟನ್
- ಮೇಜರ್
- ಲೆಫ್ಟಿನೆಂಟ್ ಕರ್ನಲ್
- ಕರ್ನಲ್
- ಬ್ರಿಗೇಡಿಯರ್
- ಮೇಜರ್ ಜನರಲ್
- ಲೆಫ್ಟಿನೆಂಟ್ ಜನರಲ್
- ಜನರಲ್
- ಫೀಲ್ಡ್ ಮಾರ್ಷಲ್
ಪ್ರಶ್ನೆ 3. ಭಾರತೀಯ ಸೇನೆಯಲ್ಲಿರುವ ಕೊನೆಯ ರ‍್ಯಾಂಕ್ ಯಾವುದು?
ಉತ್ತರ: ಭಾರತೀಯ ಸೇನೆಯಲ್ಲಿರುವ ರ‍್ಯಾಂಕ್‌ಗಳಲ್ಲಿ ಜನರಲ್ ಕೊನೆಯ ಶ್ರೇಣಿಯಾಗಿದೆ. ಸೇನಾ ಸಿಬ್ಬಂದಿಯ ಮುಖ್ಯಸ್ಥರ ಹುದ್ದೆ ಇದಾಗಿದೆ.
ಪ್ರಶ್ನೆ 4. ಸೇನೆಯಲ್ಲಿ ಜೆಸಿಒ ಶ್ರೇಣಿ ಎಷ್ಟು?
ಜೆಸಿಒ ಎಂದರೆ ಜೂನಿಯರ್ ಕಮಿಷನ್ಡ್ ಆಫೀಸರ್. ಈ ಹುದ್ದೆ ಕನಿಷನ್ಡ್ ಆಫೀಸರ್ ಮತ್ತು ನಾನ್ ಕಮಿಷನ್ಡ್ ಆಫೀಸರ್ ನಡುವಿನ ಅಂತರವನ್ನು ಕಡಿಮೆ ಮಾಡುವ ಸ್ಥಾನ ಇದಾಗಿದೆ.
ಪ್ರಶ್ನೆ 5. ಭಾರತೀಯ ಸೇನಯಲ್ಲಿ ಅತ್ಯುನ್ನತ ಶ್ರೇಣಿ ಯಾವುದು?
ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಅತ್ಯುನ್ನತ ಶೇಣಿಯಾಗಿದೆ. ಇದು ಕಾರ್ಯಾಚರಣೆಯ ಶ್ರೇಣಿಯಲ್ಲ. ಆದರೆ ಪ್ರಾಥಮಿಕವಾಗಿ ವಿಧ್ಯುಕ್ತ ಶ್ರೇಣಿಯಾಗಿದೆ.
ಕಮಿಷನ್ಡ್ ಆಫೀಸರ್ (Commissioned Officer)
ಕಮಿಷನ್ಡ್ ಆಫೀಸರ್ ನಾಯಕತ್ವದ ಸ್ಥಾನವನ್ನು ಹೊಂದಿರುತ್ತಾರೆ. ಕಮಾಂಡಿಂಗ್, ಪಡೆಗಳನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿರುತ್ತದೆ. ಪ್ರಗತಿಯ ಮೂಲಕ ಅಧಿಕಾರಿಗಳ ಶ್ರೇಣಿ ಹೆಚ್ಚಾಗುತ್ತಿ ಅವರ ಜವಾಬ್ದಾರಿಗಳು ಹೆಚ್ಚಾಗುತ್ತಾ ಹೋಗುತ್ತವೆ. ಈ ಅಧಿಕಾರಿಗಳಿಗೆ ನಾಯಕತ್ವ, ತಂತ್ರಗಳು, ವಿಶೇಷ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತಿದೆ. ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವಲ್ಲಿ ಹಾಗೂ ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ನಿಯೋಜಿತ ಅಧಿಕಾರಿಗಳ ಹುದ್ದೆಗಳು
- ಲೆಫ್ಟಿನೆಂಟ್
- ಕ್ಯಾಪ್ಟನ್
- ಮೇಜರ್
- ಲೆಫ್ಟಿನೆಂಟ್ ಕರ್ನಲ್
- ಕರ್ನಲ್
- ಬ್ರಿಗೇಡಿಯರ್
- ಮೇಜರ್ ಜನರಲ್
- ಲೆಫ್ಟಿನೆಂಟ್ ಜನರಲ್
- ಜನರಲ್
- ಫೀಲ್ಡ್ ಮಾರ್ಷಲ್
ಜೂನಿಯರ್ ಕಮಿಷನ್ಡ್ ಆಫೀಸರ್ (Junior Commissioned Officer)
ಜೂನಿಯರ್ ಕಮಿಷನ್ಡ್ ಆಫೀಸರ್‌ಗಳನ್ನು ಜೆಸಿಒ ಅಂತಲೂ ಕರೆಯಲಾಗುತ್ತದೆ. ಇವರು ಕಮಿಷನ್ಡ್ ಆಫೀಸರ್ ಮತ್ತು ನಾನ್ ಕಮಿಷನ್ಡ್ ಆಫೀಸರ್ ನಡುವಿನ ಅಂತರವನ್ನು ಕಡಿಮೆ ಮಾಡುವ ಸ್ಥಾನವನ್ನು ಹೊಂದಿರುತ್ತಾರೆ. ನಾಯಕತ್ವ, ತಾಂತ್ರಿಕ ಪರಿಣತಿ ಎರಡಕ್ಕೂ ಜವಾಬ್ದಾರರಾಗಿರುತ್ತಾರೆ. ಜೆಸಿಒನಲ್ಲಿ ಬರುವಂತ ಹುದ್ದೆಗಳು
- ಸುಬೇದಾರ್ ಮೇಜರ್
- ಸುಬೇದಾರ್
- ನಾಯಕ್ ಸುಬೇದಾರ್
ನಾನ್ ಕಮಿಷನ್ಡ್ ಆಫೀಸರ್ (Non-Commissioned Officer)
ನಾನ್ ಕಮಿಷನ್ಡ್ ಆಫೀಸರ್‌ಗಳು ಭಾರತೀಯ ಸೇನೆಯ ಬೆನ್ನೆಲುಬು. ಅವರು ಅಧಿಕಾರದ ಸ್ಥಾನಗಳನ್ನು ಹೊಂದಿರುತ್ತಾರೆ. ತರಬೇತಿ, ಶಿಸ್ತು ಹಾಗೂ ಸೈನಿಕರ ಕಲ್ಯಾಣಕ್ಕೆ ಸಂಬಂಧಿಸಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
- ಸಿಕ್ಯೂಎಂಎಚ್
- ಹವಾಲ್ದಾರ್
- ನಾಯಕ್
- ಲ್ಯಾನ್ಸ್ ನಾಯಕ್
ಸೇನೆಯಲ್ಲಿ ಸೇವಾ ಅನುಭದ ಮೇಲೆ ಬಡ್ತಿಗಳ ಮೂಲಕ ಹುದ್ದೆಗಳು, ಶ್ರೇಯಾಂಕಗಳು ಬದಲಾಗುತ್ತಾ ಹೋಗುತ್ತವೆ.
ವಿಭಾಗ