ನಮ್ಮ ಎಲ್ಲಾ ಸೇನಾನೆಲೆಗಳು, ಯುದ್ಧೋಪಕರಣಗಳು ಮುಂದಿನ ಕಾರ್ಯಾಚರಣೆಗೆ ಸನ್ನದ್ಧ: ವಾಯುಪಡೆ ಮುಖ್ಯಸ್ಥರ ಮಹತ್ವದ ಹೇಳಿಕೆ
ಪಾಕಿಸ್ತಾನದ ವಿರುದ್ದ ಆರಂಭಿಸಿರುವ ಆಪರೇಷನ್ ಸಿಂದೂರ್‌ನ ಚಟುವಟಿಕೆಗಳು ಮುಂದುವರಿಯಲಿವೆ. ನಮೆಲ್ಲಾ ಪಡೆಗಳು ಸನ್ನದ್ದವಾಗಿರಲಿವೆ ಎಂದಿರುವ ಸೇನಾಧಿಕಾರಿಗಳು, ಭಾರತದ ರಕ್ಷಣಾ ಪ್ರಯೋಗಗಳು ಹೇಗಿದೆ ಎನ್ನುವ ಕುರಿತು ರಕ್ಷಣಾ ಪಡೆಗಳ ಪ್ರಮುಖರು ವಿವರಿಸಿದರು.

ದೆಹಲಿ: ಯಾವುದೇ ಕಾರಣಕ್ಕೂ ನಮ್ಮ ಸೇನಾಪಡೆಗಳ ಕಾರ್ಯಾಚರಣೆ ನಿಲ್ಲೋದಿಲ್ಲ. ನಮ್ಮ ಎಲ್ಲಾ ಸೇನಾನೆಲೆಗಳು, ಯುದ್ಧೋಪಕರಣಗಳು ಮುಂದಿನ ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಈಗಾಗಲೇ ಒಂದು ವಾರದಿಂದಲೂ ಸೇನಾ ಪಡೆಗಳು ಪಾಕಿಸ್ತಾನದ ಭಯೋತ್ಪಾದಕರ ಚಟುವಟಿಕೆ ವಿರುದ್ದ ಕಾರ್ಯಾಚರಣೆವನ್ನು ಮುಂದುವರೆಸುತ್ತೇವೆ. ಈಗಾಗಲೇ ಆಪರೇಷನ್ ಸಿಂದೂರ್ ಸಹಿತ ಎಲ್ಲಾ ರೀತಿಯ ಸೇನಾ ಕಾರ್ಯಾಚರಣೆಗಳು ಮುಂದುವರೆಸುವ ನಿರ್ಧಾರ ಆಗಿರುವುದರಿಂದ ಎಲ್ಲರೂ ಸಕ್ರಿಯರಾಗಿ ಭಾಗಿಯಾಗಲಿದ್ದಾರೆ. ಈಗಾಗಲೇ ಎಲ್ಲಾ ರಕ್ಷಣಾ ಪಡೆಗಳಿಗೂ ಸೂಚನೆ ನೀಡಲಾಗಿದೆ. ಪಾಕಿಸ್ತಾನದ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಭಾರತ ಸರ್ವಸನ್ನದ್ದವಾಗಿದೆ. ಇದಕ್ಕಾಗಿ ಅತ್ಯಾಧುನಿಕ ಕ್ಷಿಪಣಿ, ವ್ಯವಸ್ಥಿತ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದು ಭಾರತದ ಸೇನಾ ಪಡೆಗಳ ಮುಖ್ಯಸ್ಥರ ಸ್ಪಷ್ಟನುಡಿ.ಈಗಾಗಲೇ ಅಮೆರಿಕಾದ ಮಧ್ಯಸ್ಥಿಕೆ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ನಡುವೆಯೂ ಪಾಕಿಸ್ತಾನ ದಾಳಿ ಮುಂದುವರಿಸಿದ್ದು. ಭಾರತ ತಿರುಗೇಟು ನೀಡುತ್ತಿದೆ. ಭಾರತ ತನ್ನ ಕದನವನ್ನು ನಿಲ್ಲಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಸೋಮವಾರ ನೀಡಿದೆ.
ಏರ್ ಚೀಫ್ ಮಾರ್ಷಲ್ ಎ.ಕೆ.ಬಾತ್ರಾ, ಸೇನಾ ಕಾರ್ಯಾಚರಣೆ ಮಹಾನಿರ್ದೇಶಕ (ಡಿಜಿಎಂಒ) ರಾಜೀವ್ ಘಾಯ್, ನೌಕಾದಳದ ಮುಖ್ಯಸ್ಥ ಪ್ರಮೋದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಂತರ ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರ ನೀಡಿದರು.
ನಮ್ಮ ಎಲ್ಲಾ ಸೇನಾನೆಲೆಗಳು, ಯುದ್ಧೋಪಕರಣಗಳು ಮುಂದಿನ ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಈ ಸಂದೇಶವನ್ನು ಈಗಾಗಲೇ ಎಲ್ಲಾ ಸೇನಾಪಡೆಗಳು.ಗಡಿ ಭಾಗದಲ್ಲಿ ಕಾರ್ಯೋನ್ಮುಖವಾಗಿರುವ ಎಲ್ಲರಿಗೂ ಈ ಸಂದೇಶ ರವಾನೆಯಾಗಿದೆ. ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಭಯೋತ್ಪಾದನೆ ವಿರುದ್ದ ನಮ್ಮ ಈ ಹೋರಾಟ ನಿಲ್ಲಿಸುವುದಿಲ್ಲ. ಪಾಕಿಸ್ತಾನದ ಎಂತ ದಾಳಿಗೂ ನಾವು ಸೂಕ್ತ ಉತ್ತರವನ್ನು ಈಗಾಗಲೇ ನೀಡಿದ್ದೇವೆ.ಮುಂದೆಯೂ ನೀಡುತ್ತೇವೆ ಎನ್ನುವುದು ಏರ್ ಚೀಫ್ ಮಾರ್ಷಲ್ ಎ.ಕೆ.ಬಾತ್ರಾ ನುಡಿ.
ನಮ್ಮ ಎಲ್ಲಾ ಸೇನಾನೆಲೆಗಳು, ಯುದ್ಧೋಪಕರಣಗಳು ಮುಂದಿನ ಕಾರ್ಯಾಚರಣೆಗೆ ಸನ್ನದ್ಧವಾಗಿವೆ. ಈ ಸಂದೇಶವನ್ನು ಈಗಾಗಲೇ ಎಲ್ಲಾ ಸೇನಾಪಡೆಗಳು.ಗಡಿ ಭಾಗದಲ್ಲಿ ಕಾರ್ಯೋನ್ಮುಖವಾಗಿರುವ ಎಲ್ಲರಿಗೂ ಈ ಸಂದೇಶ ರವಾನೆಯಾಗಿದೆ. ಪಾಕಿಸ್ತಾನದ ಭಯೋತ್ಪಾದಕರು ಹಾಗೂ ಭಯೋತ್ಪಾದನೆ ವಿರುದ್ದ ನಮ್ಮ ಈ ಹೋರಾಟ ನಿಲ್ಲಿಸುವುದಿಲ್ಲ. ಪಾಕಿಸ್ತಾನದ ಎಂತ ದಾಳಿಗೂ ನಾವು ಸೂಕ್ತ ಉತ್ತರವನ್ನು ಈಗಾಗಲೇ ನೀಡಿದ್ದೇವೆ.ಮುಂದೆಯೂ ನೀಡುತ್ತೇವೆ ಎನ್ನುವುದು ಸೇನಾ ಕಾರ್ಯಾಚರಣೆ ಮಹಾನಿರ್ದೇಶಕ (ಡಿಜಿಎಂಒ) ರಾಜೀವ್ ಘಾಯ್ ವಿವರಣೆ.
ನಮ್ಮ ದಾಳಿ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ದವೇ ಹೊರತು ಪಾಕಿಸ್ತಾನದ ಸೇನೆ ವಿರುದ್ದವಾಗಲಿ. ಪಾಕಿಸ್ತಾನದ ಇತರೆ ಯಾವುದೇ ಸಂಸ್ಥೆ, ನಾಗರೀಕರ ವಿರುದ್ದ ಅಲ್ಲವೇ ಅಲ್ಲ. ಆದರೆ ಪಾಕಿಸ್ತಾನವು ಉಗ್ರರ ವಿರುದ್ದ ನಡೆಯುತ್ತಿರುವ ಭಾರತದ ಆಪರೇಷನ್ ಸಿಂದೂರವನ್ನು ಬೆಂಬಲಿಸುವ ಬದಲು ಭಾರತದ ಮೇಲೆ ನಿರಂತರ ದಾಳಿ ಮಾಡುತ್ತಿದೆ ಎಂದು ಸ್ಪಷ್ಪಪಡಿಸಿದರು.
ಭಾರತವು ಅತ್ಯಾಧುನಿಕ ಸೇನಾ ವ್ಯವಸ್ಥೆಯೊಂದಿಗೆ ದಾಳಿ ಮಾಡುತ್ತಿದೆ. ಆಕಾಶದಂತಹ ದೇಶಿಯ ಉತ್ಪನ್ನಗಳ ಮೂಲಕವೇ ನಾವು ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ. ಪಾಕಿಸ್ತಾನವು ಭಾರತದ ಮೇಲೆ ಪ್ರಯೋಗಿಸಿದ ಹಲವು ಕ್ಷಿಪಣಿಗಳನ್ನು ನಾವು ಹೊಡದು ಉರಳಿಸಿದ್ದೇವೆ. ಇದರಲ್ಲಿ ಪ್ರಮುಖ ಕ್ಷಿಪಣಿಗಳೂ ಸೇರಿವೆ. ಅದರಲ್ಲೂ ಚೀನಾದಿಂದ ಪಡೆದ ಡ್ರೋಣ್‌ಗಳನ್ನು ಪ್ರಯೋಗಿಸಿದ್ದು ಅವುಗಳನ್ನು ಉರುಳಿಸಿ ಹಾಕಿದ್ದೇವೆ. ಹಲವು ವಾಯುನೆಲೆಗಳನ್ನು ನಾವು ಧ್ವಂಸ ಮಾಡಿದ್ದೇವೆ ಎಂದರು.
ನೌಕಾದಳವು ಗಡಿಯುದ್ದಕ್ಕೂ ಸನ್ನದ್ದವಾಗಿರುವ ರೀತಿಯನ್ನು ಅಡ್ಮಿರಲ್ ಎ.ಕೆ.ಪ್ರಮೋದ್ ಅವರು ವಿವರಿಸಿದರು.
ಸೇನಾ ಕಾರ್ಯಾಚರಣೆ ಮಹಾನಿರ್ದೇಶಕ (ಡಿಜಿಎಂಒ) ರಾಜೀವ್ ಘಾಯ್ ಅವರು ಎಪತ್ತರ ದಶಕದಲ್ಲಿ ನಡೆದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯಾಟದ ಕ್ಷಣಗಳನ್ನು ಈಗಿನ ಸನ್ನಿವೇಶಕ್ಕೆ ಪೂರಕವಾಗಿದೆ ಎಂದು ಉದಾಹರಣೆ ನೀಡಿದ್ದು ಗಮನ ಸೆಳೆಯಿತು.
ವಿಭಾಗ