Gold Silver Rate: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ, 10 ಗ್ರಾಂ ಹಳದಿ ಲೋಹದ ಬೆಲೆ 350 ರೂ. ಹೆಚ್ಚಳ, ಬೆಳ್ಳಿ ಬೆಲೆಯಲ್ಲಿ ಸ್ಥಿರತೆ
Gold Silver Rate:ಭಾರತದಲ್ಲಿ ಈ ವಾರವೂ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಹೆಚ್ಚಳವಾಗಿದೆ. ಆದರೆ ಬೆಳ್ಳಿ ದರದಲ್ಲಿ ಸ್ಥಿರತೆಯಿದೆ.

Gold Silver Rate: ಸತತವಾಗಿ ಏರುಮುಖದಲ್ಲಿರುವ ಚಿನ್ನದ ದರ ಮತ್ತಷ್ಟು ಏರಿಕೆ ಕಂಡಿದೆ. ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯನ್ನು ಕಂಡೇ ಇಲ್ಲ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಸೋಮವಾರವೂ ಏರಿಕೆ ಕಂಡಿದೆ. ಕಳೆದ ವಾರದಲ್ಲೂ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿತ್ತು. ಈ ವಾರದ ಆರಂಭದಲ್ಲೇ ಚಿನ್ನದ ಬೆಲೆ ಒಂದು ಗ್ರಾಮ್ಗೆ (22 ಕ್ಯಾರಟ್) 35 ರೂನಷ್ಟು ಏರಿಕೆ ದಾಖಲಿಸಿದೆ. ಅದೇ ರೀತಿ ಅಪರಂಜಿ ಚಿನ್ನದ ಬೆಲೆ ಗ್ರಾಂಗೆ 39 ರೂ ಹೆಚ್ಚಳವಾಗಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿಕೆ ಕಂಡೇ ಇಲ್ಲ. ಪಶ್ಚಿಮ ಏಷ್ಯಾದ ಇರಾನ್, ಸೌದಿ ಅರೇಬಿಯಾ ಸಹಿತ ಹಲವು ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿಲ್ಲ. ಈ ವಾರದಲ್ಲಿ ಬೆಳ್ಳಿ ದರದಲ್ಲಿ ಸ್ಥಿರತೆ ಯಥಾರೀತಿಯಲ್ಲೇ ಇದೆ.
ಭಾರತದ ಹಲವು ಭಾಗಗಳ ಮಾರುಕಟ್ಟೆಗಳಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,945 ರೂ ಇದ್ದದ್ದು 7,980 ರೂಗೆ ಹೆಚ್ಚಳವಾಗಿದೆ. ರಾಜಧಾನಿ ದೆಹಲಿ ಸಹಿತ ಇತರೆ ಕಡೆಗಳಲ್ಲಿ ಆಭರಣ ಚಿನ್ನದ ಬೆಲೆ ಗ್ರಾಂಗೆ 8,000 ರೂ ಗಡಿ ಸಮೀಪಿಸದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 79,800 ರುಪಾಯಿ ಇದ್ದರೆ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 87,060 ರುಪಾಯಿ ಆಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ 9,950 ರೂಪಾಯಿಯಷ್ಟಿದೆ.
ಈಗಾಗಲೇ ಏರುಗತಿಯಲ್ಲಿರುವ ಚಿನ್ನದ ಬೆಲೆ ಈ ವರ್ಷಾಂತ್ಯಕ್ಕೆ ಗರಿಷ್ಠ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ. ಹೂಡಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವೂ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಹೇಗಿದೆ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,060 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,800 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,060 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 79,800 ರೂ.
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,290 ರೂ.
ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ.
ಭಾರತದ ಪ್ರಮುಖ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ದೆಹಲಿ: 79,950 ರೂ
ಬೆಂಗಳೂರು: 79,800 ರೂ.
ಮುಂಬೈ: 79,800 ರೂ.
.ಚೆನ್ನೈ: 79,800 ರೂ.
ಕೋಲ್ಕತಾ: 79,800 ರೂ.
ಜೈಪುರ್: 79,950 ರೂ
ಕೊಚ್ಚಿ: 79,800 ರೂ.
ಭುವನೇಶ್ವರ್: 79,800 ರೂ.
ಅಹಮದಾಬಾದ್: 79,850 ರೂ.
ಲಕ್ನೋ: 79,950 ರೂ.
ಭಾರತದ ನಾನಾ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ದೆಹಲಿ: 9,950 ರೂ.
ಬೆಂಗಳೂರು: 9,950 ರೂ.
ಮುಂಬೈ: 9,950 ರೂ.
ಚೆನ್ನೈ: 10,700 ರೂ.
ಕೋಲ್ಕತಾ: 9,950 ರೂ.
ಜೈಪುರ್: 9,950 ರೂ.
ಕೊಚ್ಚಿ: 10,700 ರೂ.
ಅಹಮದಾಬಾದ್: 9,950 ರೂ.
ಪುಣೆ: 9,950 ರೂ.
ಲಕ್ನೋ: 9,950 ರೂ.
ಭುವನೇಶ್ವರ್: 10,700 ರೂ.


