ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ ತಂದುಕೊಟ್ಟ ಕ್ಯಾಟಮಾರನ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ ತಂದುಕೊಟ್ಟ ಕ್ಯಾಟಮಾರನ್‌

ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ ತಂದುಕೊಟ್ಟ ಕ್ಯಾಟಮಾರನ್‌

ಇನ್ಫೋಸಿಸ್‌ನ ನಾರಾಯಣ ಮೂರ್ತಿ-ಸುಧಾಮೂರ್ತಿ ಕುಟುಂಬದ ನೇತೃತ್ವದ ಹೂಡಿಕೆ ಸಂಸ್ಥೆಯಾದ ಕ್ಯಾಟಮಾರನ್‌ ಕ್ಲೌಡ್‌ಟೈಲ್‌ನಲ್ಲಿನ ತನ್ನ ಪಾಲನ್ನು ಅಮೆಜಾನ್‌ಗೆ ಮಾರಾಟ ಮಾಡಿದೆ. ಈ ಒಪ್ಪಂದದಿಂದ ಮೂರ್ತಿ ದಂಪತಿಗಳು ಭಾರಿ ಲಾಭ ಗಳಿಸಿದ್ದಾರೆ. ಅಲ್ಲದೇ, ತಮ್ಮ ಹೂಡಿಕೆಯ ಮೇಲೆ 3 ಪಟ್ಟು ಗಳಿಕೆ ಕಂಡಿದ್ದಾರೆ.

ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ
ಕ್ಲೌಡ್‌ಟೇಲ್‌-ಅಮೆಜಾನ್‌ ಡೀಲ್‌: ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾಮೂರ್ತಿಗೆ 915 ಕೋಟಿ ಗಳಿಕೆ

ದೇಶದ ಖ್ಯಾತ ಐಟಿ ಕಂಪನಿ ಇನ್ಫೋಸಿಸ್‌ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾಮೂರ್ತಿ ಅವರು ತಮ್ಮ ಹೂಡಿಕೆಯ ಸಂಸ್ಥೆಯನ್ನು ಇ-ಕಾಮರ್ಸ್‌ ಕಂಪನಿಯಾದ ಕ್ಲೌಡ್‌ಟೈಲ್‌ನಲ್ಲಿ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದು, ಇದರಿಂದ ಭಾರಿ ಲಾಭ ಗಳಿಸಿದ್ದಾರೆ. ಕಂಪನಿಯ ವರದಿಗಳ ಪ್ರಕಾರ ಮೂರ್ತಿ ಕುಟುಂಬದ ಒಡೆತನದ ಕ್ಯಾಟಮಾರನ್‌ ಕಂಪನಿಯ ಶೇ 76ರಷ್ಟು ಪಾಲನ್ನು 1,332 ಕೋಟಿ (160 ಮಿಲಿಯನ್‌ ಡಾಲರ್‌) ರೂಪಾಯಿಗೆ ಮಾರಾಟ ಮಾಡಿದೆ. ಈ ಕಂಪನಿಯಲ್ಲಿ ಮೂರ್ತಿ ದಂಪತಿಗಳ ಒಟ್ಟಿ ಹೂಡಿಕೆಯು 417 ಕೋಟಿ ರೂಪಾಯಿಯಾಗಿದೆ.

ಕ್ಲೌಡ್‌ಟೇಲ್‌ ಷೇರುಗಳನ್ನು ಮಾರಾಟ ಮಾಡಿರುವ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರಿಗೆ ಸುಮಾರು 915 ಕೋಟಿ ರೂ ಲಾಭ ತಂದುಕೊಟ್ಟಿದೆ. ಇದು ಇವರ ಎಂಟು ವರ್ಷದ ಹೂಡಿಕೆಯ ಮೇಲೆ 3 ಪಟ್ಟು ಲಾಭವನ್ನು ನೀಡಿದೆ.

ಕಳೆದೊಂದು ದಶಕದಲ್ಲಿ ಕ್ಯಾಟಮಾರನ್‌ ಕಂಪನಿಯ ಯಶಸ್ಸು ಹಾಗೂ ಅಸಾಧಾರಣ ಬೆಳವಣಿಗೆಯು ಈ ಭಾರಿ ಲಾಭಕ್ಕೆ ಕಾರಣವಾಗಿದೆ. ಹೋಬರ್ ಮ್ಯಾಲೋ ಟ್ರಸ್ಟ್‌ನ ಮೂಲಕ ಕ್ಲೌಡ್‌ಟೈಲ್‌ನಲ್ಲಿ ಕ್ಯಾಟಮಾರನ್‌ನ ಮಾಲೀಕತ್ವ ಪಡೆದಿದ್ದಾರೆ. ಅದರಲ್ಲಿ ಸುಧಾಮೂರ್ತಿ ಶೇ 80 ರಷ್ಟು ಷೇರುಗಳನ್ನು ಹೊಂದಿದ್ದರೆ, ನಾರಾಯಣ ಮೂರ್ತಿ ಉಳಿದ ಷೇರುಗಳನ್ನು ಹೊಂದಿದ್ದಾರೆ.

ಕ್ಲೌಡ್‌ಟೇಲ್ ಎಂಬುದು ಕ್ಯಾಟಮರನ್ ಮತ್ತು ಅಮೆಜಾನ್ ನಡುವಿನ ಜಂಟಿ ಉದ್ಯಮವಾಗಿದೆ, ಇದನ್ನು 2014 ರಲ್ಲಿ ಅಮೆಜಾನ್‌ನ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಾಗಿ ತರಬೇತಿ ಮತ್ತು ಆನ್‌ಬೋರ್ಡಿಂಗ್ ವ್ಯಾಪಾರಿಗಳ ಪ್ರಾಥಮಿಕ ಗುರಿಯೊಂದಿಗೆ ಸ್ಥಾಪಿಸಲಾಯಿತು.

ಇದನ್ನೂ ಓದಿ

ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ

ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.