ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India Logo: ಇಂದಿನ ಮುಂಬೈ ಸಭೆಯಲ್ಲಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಲೋಗೋ ಅನಾವರಣ ಇಲ್ಲ

INDIA logo: ಇಂದಿನ ಮುಂಬೈ ಸಭೆಯಲ್ಲಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಲೋಗೋ ಅನಾವರಣ ಇಲ್ಲ

INDIA Mumbai meet: ಇಂದಿನ ಮುಂಬೈ ಸಭೆಯಲ್ಲಿ ಇಂಡಿಯಾ ಲೋಗೋ ಅನಾವರಣ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, ಮೈತ್ರಿಯಲ್ಲಿ ಲೋಗೋ ಬಹಳ ಮುಖ್ಯವಾದ ಭಾಗವಾಗಿದ್ದು, ನಮ್ಮ ಸಭೆಯಲ್ಲಿ ಚರ್ಚಿಸಲಾಗುವುದು ಆದರೆ ಇಂದು ಅನಾವರಣಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟದ ಮುಂಬೈ ಸಭೆ
‘ಇಂಡಿಯಾ’ ಮೈತ್ರಿಕೂಟದ ಮುಂಬೈ ಸಭೆ

ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಸೋಲಿಸಲು ಒಗ್ಗೂಡಿರುವ ವಿಪಕ್ಷಗಳು ಇಂದು ಮುಂಬೈನಲ್ಲಿ ಸಭೆ ಸೇರಿವೆ. ಆದರೆ ಇಂದು ‘ಇಂಡಿಯಾ’ ಮೈತ್ರಿಕೂಟದ ಲೋಗೋ ಅನಾವರಣ ಇಲ್ಲ ಎಂಬುದು ತಿಳಿದು ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಇಂದಿನ ಮುಂಬೈ ಸಭೆಯಲ್ಲಿ ಇಂಡಿಯಾ ಲೋಗೋ ಅನಾವರಣ ಮಾಡುವುದಾಗಿ ತಿಳಿಸಲಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, ಮೈತ್ರಿಯಲ್ಲಿ ಲೋಗೋ ಬಹಳ ಮುಖ್ಯವಾದ ಭಾಗವಾಗಿದ್ದು, ನಮ್ಮ ಸಭೆಯಲ್ಲಿ ಚರ್ಚಿಸಲಾಗುವುದು ಆದರೆ ಇಂದು ಅನಾವರಣಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ ‘ಇಂಡಿಯಾ’ದ ಮೊದಲ ಸಭೆ ನಡೆದಿತ್ತು. ಅಂದು 15 ಪ್ರತಿಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು. ನಂತರ ಕರ್ನಾಟಕದ ಬೆಂಗಳೂರಿನಲ್ಲಿ 2ನೇ ಸಭೆ ನಡೆದಿದ್ದು, 26 ಪ್ರತಿಪಕ್ಷಗಳು ಭಾಗಿಯಾಗಿದ್ದವು. ಇಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮತ್ತೆರೆಡು ಅಂದರೆ ಒಟ್ಟು 28 ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ.

ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್​ನಲ್ಲಿ ಸಭೆ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಮಹಾರಾಷ್ಟ್ರ ಮಾಜಿ ಮುಖ್ಯಂಮಂತ್ರಿ ಉದ್ಧವ್​ ಠಾಕ್ರೆ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಹಾರ ಸಿಎಂ ನಿತೀಶ್​ ಕುಮಾರ್​, ಪಶ್ಚಿಮ ಬಂಗಾರ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಸಭೆ ನಂತರ ಸುದ್ದಿಗೋಷ್ಟಿ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಪಕ್ಷಗಳ ಮಹತ್ವದ ಸಭೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 'ಇಂಡಿಯಾ' (INDIA) ಎಂದು ಹೆಸರಿಡಲಾಗಿತ್ತು. I.N.D.I. A ಎಂದರೆ Indian National Development Inclusive Alliance.

ಟಿ20 ವರ್ಲ್ಡ್‌ಕಪ್ 2024