ಕನ್ನಡ ಸುದ್ದಿ  /  Nation And-world  /  Indian Prime Minister In Australia Tour. Held Talks With Australian Prime Minister And Team Kub

ಆಸ್ಟ್ರೇಲಿಯಾದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್‌, ಕರಿ ನೆನಪು: ಅಲ್ಲಿನ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ

ಮೂರು ದಿನಗಳ ಪ್ರವಾಸದ ಭಾಗವಾಗಿ ಬುಧವಾರ ಆಸ್ಟ್ರೇಲಿಯಾ ಪ್ರಧಾನಿ ಹಾಗೂ ಅವರ ತಂಡದೊಂದಿಗೆ ಅಡ್ಮಿಲಾರಿಟಿ ಹೌಸ್‌ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ನರೇಂದ್ರ ಮೋದಿ

ಸಿಡ್ನಿಯಲ್ಲಿ ಬುಧವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋಣಿ ಆಲ್ಬೆನ್ಸ್‌ ಮತ್ತವರ ತಂಡದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಸಿಡ್ನಿಯಲ್ಲಿ ಬುಧವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋಣಿ ಆಲ್ಬೆನ್ಸ್‌ ಮತ್ತವರ ತಂಡದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಆಂಥೋಣಿ ಅಲ್ಬೆನ್ಸ್‌ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಿಡ್ನಿಯಲ್ಲಿ ಚರ್ಚೆ ನಡೆಸಿದರು.

ಮೂರು ದಿನಗಳ ಪ್ರವಾಸದ ಭಾಗವಾಗಿ ಬುಧವಾರ ಆಸ್ಟ್ರೇಲಿಯಾ ಪ್ರಧಾನಿ ಹಾಗೂ ಅವರ ತಂಡದೊಂದಿಗೆ ಅಡ್ಮಿಲಾರಿಟಿ ಹೌಸ್‌ ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು ಪರಸ್ಪರ ವಿಶ್ವಾಸ ಹಾಗೂ ನಂಬಿಕೆಯಿಂದ ಎರಡೂ ದೇಶಗಳು ಮುಂದುವರಿಯಬೇಕು ಎಂದು ಹೇಳಿದರು.

ತಂತ್ರಜ್ಞಾನ, ಕೌಶಲ್ಯ, ಸ್ವಚ್ಛ ಇಂಧನ ಸಹಿತ ಹಲವು ವಿಷಯಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಪರಸ್ಪರ ಒಪ್ಪಂದದೊಂದಿಗೆ ಅಭಿವೃದ್ದಿ ಹೊಂದುವ ಕುರಿತು ಚರ್ಚಿಸಲಾಯಿತು.

ಇದಕ್ಕೂ ಮೊದಲು ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರ ಸಭೆಯಲ್ಲಿ ಮಂಗಳವಾರ ರಾತ್ರಿ ಮಾತನಾಡಿದ ನರೇಂದ್ರ ಮೋದಿ, ಗೌರವ ಹಾಗೂ ನಂಬಿಕೆಯನ್ನು ಉಳಿಸಿಕೊಂಡು ಭಾರತೀಯರು ಪ್ರಗತಿ ಹೊಂದಬೇಕು. ಹಿಂದೆಲ್ಲಾ ಆಸ್ಟ್ರೇಲಿಯಾ ಹಾಗೂ ಭಾರತ ಎಂದರೆ ೩ ಸಿ ಅಂದರೆ ಕಾಮನ್‌ವೆಲ್ತ್‌ , ಕ್ರಿಕೆಟ್‌ ಹಾಗೂ ಕರಿ ವಿಚಾರಗಳಲ್ಲಿ ಚರ್ಚೆ ಗಳಾಗುತ್ತಿದ್ದವು. ಈಗ ಕಾಲ ಬದಲಾಗಿದೆ. ಈಗ ೩ ಇ ವಿಚಾರವಾಗಿ ಚರ್ಚಿಸುತ್ತಿದ್ದೇವೆ, ಶಿಕ್ಷಣ, ಇಂಧನ ಹಾಗೂ ಆರ್ಥಿಕತೆಯತ್ತ ಉಭಯ ದೇಶಗಳು ಹೆಜ್ಜೆ ಹಾಕುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು.

ಬಳಿಕ ಆಸ್ಟ್ರೇಲಿಯಾದ ಉದ್ಯಮಿಗಳೊಂದಿಗೂ ನರೇಂದ್ರ ಮೋದಿ ಸಂವಾದ ನಡೆಸಿ ಭಾರತದಲ್ಲಿ ತಂತ್ರಜ್ಞಾನ ಸಹಿತ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ವ್ಯಾಪಕ ಅವಕಾಶಗಳಿವೆ ಎಂದು ಹೇಳಿದರು.

ಪ್ರಧಾನಿ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಹಿತ ಹಲವರು ಪಾಲ್ಗೊಂಡಿದ್ದಾರೆ.

IPL_Entry_Point

ವಿಭಾಗ