SwaRail app: ಭಾರತೀಯ ರೈಲ್ವೆಯಿಂದ ಹೊಸ ಸೂಪರ್ ಆ್ಯಪ್, ಏನಿದು ಸ್ವಾರೈಲ್? ಇದರಿಂದ ಏನು ಉಪಯೋಗ
SwaRail app: ಭಾರತೀಯ ರೈಲ್ವೆ ಸಚಿವಾಲಯವು ತನ್ನ ಹೊಸ ಸೂಪರ್ ಆ್ಯಪ್ "ಸ್ವಾರೈಲ್" ಬಿಡುಗಡೆ ಮಾಡಿದೆ. ಇದು ಆಲ್‌ಇನ್ ಆ್ಯಪ್. ವಿವಿಧ ರೈಲು ಸೇವೆಗಳನ್ನು ಈ ಒಂದೇ ಆ್ಯಪ್‌ನಡಿ ಪಡೆಯಬಹುದು. ಸದ್ಯ ಬೀಟಾ ವರ್ಷನ್ ಲಾಂಚ್ ಆಗಿದೆ. ಸ್ವಾರೈಲ್ ಅಪ್ಲಿಕೇಷನ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

SwaRail app: ಭಾರತೀಯ ರೈಲ್ವೆ ಸಚಿವಾಲಯವು ತನ್ನ ಹೊಸ ಸೂಪರ್ ಆ್ಯಪ್ "ಸ್ವಾರೈಲ್" ಬಿಡುಗಡೆ ಮಾಡಿದೆ. ಇದು ಆಲ್‌ಇನ್ ಆ್ಯಪ್. ವಿವಿಧ ರೈಲು ಸೇವೆಗಳನ್ನು ಈ ಒಂದೇ ಆ್ಯಪ್‌ನಡಿ ಪಡೆಯಬಹುದು. ಈ ಮೊಬೈಲ್ ಅಪ್ಲಿಕೇಷನ್ ಅನ್ನು ಸೆಂಟರ್ ಫಾರ್ ರೈಲ್ವೆ ಇನ್‌ಫಾರ್ಮೆಷನ್ ಸಿಸ್ಟಮ್ಸ್ (ಸಿಆರ್‌ಐಎಸ್) ಅಭಿವೃದ್ಧಿಪಡಿಸಿದೆ.
ಈಗ ಈ ಮೊಬೈಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ "ಅರ್ಲಿ ಆಕ್ಸೆಸ್-ಆರಂಭಿಕ ಪ್ರವೇಶ" ಕಾರ್ಯಕ್ರಮಕ್ಕೆ ನೋಂದಾಯಿಸಿರುವ ಬಳಕೆದಾರರಿಗೆ ಬೀಟಾ ವರ್ಷನ್‌ನಲ್ಲಿ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಿರಲಿದೆ.
SwaRail app: ಸ್ವಾರೈಲ್ ಫೀಚರ್‌ಗಳು
ಈಗ ಪ್ರತ್ಯೇಕ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಭಾರತೀಯ ರೈಲ್ವೆ ಸೇವೆಗಳನ್ನು ಈ ಸೂಪರ್ ಅಪ್ಲಿಕೇಷನ್‌ನಲ್ಲಿ ಒಟ್ಟಿಗೆ ಪಡೆಯಬಹುದು.
- ರೈಲು ಟಿಕೆಟ್ ಬುಕಿಂಗ್‌ಗಳು
- ಕಾಯ್ದಿರಿಸದ ಟಿಕೆಟ್ (ಅನ್‌ರಿಸರ್ವಡ್ ಟಿಕೆಟ್) ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್(ಯುಟಿಎಸ್)
- ಪಾರ್ಸೆಲ್ ಮತ್ತು ಸರಕು ವಿಚಾರಣೆಗಳು
- ರೈಲು ಮತ್ತು ಪಿಎನ್ ಸ್ಟೇಟಸ್ ಪರಿಶೀಲನೆ
- ಆಹಾರ ಆರ್ಡರ್ ಸೇವೆಗಳು
- ದೂರು ನಿರ್ವಹಣೆಗಾಗಿ ರೈಲು ಮದದ್
ಈಗ ಇವುಗಳಿಗೆ ಪ್ರತ್ಯೇಕ ಆ್ಯಪ್‌ಗಳಿವೆ. ಇವೆಲ್ಲವನ್ನೂ ಸ್ವಾರೈಲ್ ಎಂಬ ಒಂದೇ ಅಪ್ಲಿಕೇಷನ್‌ನಲ್ಲಿ ಪಡೆಯಬಹುದು. ಟ್ರೇನ್‌ಗಳಲ್ಲಿ ಪ್ರಯಾಣಿಸುವವರಿಗೆ ರೈಲು ಟಿಕೆಟ್ ಬುಕ್ಕಿಂಗ್ ಮಾಡಲು ಕಾರ್ಗೊ ಬುಕ್ಕಿಂಗ್ ಮಾಡಲು, ಫುಡ್ ಆರ್ಡರ್ ಮಾಡಲು, ರೈಲ್ವೆ ಪ್ಲಾಟ್ ಫಾರ್ಮ್ ಪಾಸ್ ಪಡೆಯಲು, ರೈಲು ಎಲ್ಲಿಗೆ ತಲುಪಿದೆ ಎಂದು ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವು ಫೀಚರ್‌ಗಳನ್ನು ಈ ಆ್ಯಪ್ ಹೊಂದಿರಲಿದೆ.
ಐಆರ್‌ಸಿಟಿಸಿ ಮತ್ತು ಸಿಆರ್‌ಐಎಸ್ ಎರಡೂ ಜತೆಯಾಗಿ ಕಾರ್ಯನಿರ್ವಹಿಸುವುದರಿಂದ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಸಿಆರ್‌ಐಎಸ್ ಎನ್ನುವುದು ಭಾರತಯ ರೈಲ್ವೆಗೆ ಸಾಫ್ಟ್‌ವೇರ್ ಸೇವೆ ನೀಡುವಂತಹ ಸಂಸ್ಥೆಯಾಗಿದೆ. ಇದೇ ಸಂಸ್ಥೆಯು ಈ ಸೂಪರ್ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಇದೀಗ ಈ ಅಪ್ಲಿಕೇಷನ್ ಬೀಟಾ ಹಂತದಲ್ಲಿದೆ. ಶೀಘ್ರದಲ್ಲಿ ಮೊಬೈಲ್ ಅಪ್ಲಿಕೇಷನ್ ಸ್ಟೋರ್‌ಗಳಿಗೆ ಪ್ರವೇಶಿಸುವ ಸೂಚನೆ ಇದೆ.
ಭಾರತೀಯ ರೈಲ್ವೆಯ ಈ ಕೆಳಗಿನ ಸುದ್ದಿಗಳನ್ನು ಓದಿ
- IRCTC Super App: ಸೂಪರ್ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ; ರೈಲ್ ಕನೆಕ್ಟ್, ಯುಟಿಎಸ್, ರೈಲ್ ಮದದ್ ಬದಲು ಒಂದೇ ಆ್ಯಪ್
- UTS Mobile Ticket: ರೈಲು ಟಿಕೆಟ್ ಬುಕ್ಕಿಂಗ್‌ಗೆ ಯುಟಿಎಸ್ ಬೆಸ್ಟ್, ಟಿಕೆಟ್ ಚೆಕ್ ಮಾಡೋರಿಗೆ ಯುಟಿಎಸ್ ಟಿಕೆಟ್ ಹೀಗೆ ತೋರಿಸಿ
- ರಮಣೀಯ ದೃಶ್ಯವೈಭವ ತೋರಿಸುವ ಪ್ರಮುಖ 12 ವಿಸ್ಟಾಡೋಮ್ ರೈಲುಗಳಿವು, ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್‌ಗೆ ಎಷ್ಟನೇ ಸ್ಥಾನ
- ಕರ್ನಾಟಕದಲ್ಲಿ ಸಂಚರಿಸುವ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವಿವರ ತಿಳಿಯಿರಿ, ರೈಲು ಪ್ರಯಾಣಿಕರಿಗೆ ಉಪಯುಕ್ತ ಮಾಹಿತಿ
- Fastest Trains: ಜಗತ್ತಿನ ಅತಿವೇಗದ 10 ರೈಲುಗಳಿವು, ಗಂಟೆಗೆ ಎಷ್ಟು ಸ್ಪೀಡ್? ಯಾವ್ಯಾವ ದೇಶಗಳಲ್ಲಿದೆ? ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ
