IRCTC Super App: ಸೂಪರ್‌ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ; ರೈಲ್‌ ಕನೆಕ್ಟ್‌, ಯುಟಿಎಸ್‌, ರೈಲ್‌ ಮದದ್‌ ಬದಲು ಒಂದೇ ಆ್ಯಪ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Irctc Super App: ಸೂಪರ್‌ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ; ರೈಲ್‌ ಕನೆಕ್ಟ್‌, ಯುಟಿಎಸ್‌, ರೈಲ್‌ ಮದದ್‌ ಬದಲು ಒಂದೇ ಆ್ಯಪ್

IRCTC Super App: ಸೂಪರ್‌ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ; ರೈಲ್‌ ಕನೆಕ್ಟ್‌, ಯುಟಿಎಸ್‌, ರೈಲ್‌ ಮದದ್‌ ಬದಲು ಒಂದೇ ಆ್ಯಪ್

IRCTC Super App: ಇದೇ ಡಿಸೆಂಬರ್‌ ತಿಂಗಳಲ್ಲಿ ಸೂಪರ್‌ ಆ್ಯಪ್ ಬಿಡುಗಡೆ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ. ರೈಲು ಟಿಕೆಟ್‌ ಬುಕ್ಕಿಂಗ್‌, ಪ್ಲಾಟ್‌ಫಾರ್ಮ್‌ ಪಾಸ್‌ಗಳು, ರೈಲುಗಳ ಕುರಿತು ಮಾಹಿತಿ, ಟ್ರ್ಯಾಕಿಂಗ್‌, ಕೇಟರಿಂಗ್‌ ಸೇವೆಗಳು, ಫೀಡ್‌ಬ್ಯಾಕ್‌ ನೀಡುವ ಸೌಕರ್ಯ ಇತ್ಯಾದಿಗಳು ಈ ಸೂಪರ್‌ ಆ್ಯಪ್‌ನಲ್ಲಿ ಇರಲಿವೆ.

IRCTC Super App: ಸೂಪರ್‌ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ
IRCTC Super App: ಸೂಪರ್‌ ಆ್ಯಪ್ ಬಿಡುಗಡೆ ಮಾಡಲಿದೆ ಐಆರ್‌ಸಿಟಿಸಿ

IRCTC Super App: ಭಾರತೀಯ ರೈಲ್ವೆಯು "ಐಆರ್‌ಸಿಟಿಟಿ ಸೂಪರ್‌ ಆ್ಯಪ್" ಎಂಬ ರೈಲು ಟಿಕೆಟ್‌ ಬುಕ್ಕಿಂಗ್‌ ಅಪ್ಲಿಕೇಷನ್‌ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಟ್ರೇನ್‌ಗಳಲ್ಲಿ ಪ್ರಯಾಣಿಸುವವರಿಗೆ ರೈಲ ಟಿಕೆಟ್‌ ಬುಕ್ಕಿಂಗ್‌ ಮಾಡಲು ಕಾರ್ಗೊ ಬುಕ್ಕಿಂಗ್‌ ಮಾಡಲು, ಫುಡ್‌ ಆರ್ಡರ್‌ ಮಾಡಲು, ರೈಲ್ವೆ ಪ್ಲಾಟ್‌ ಫಾರ್ಮ್‌ ಪಾಸ್‌ ಪಡೆಯಲು, ರೈಲು ಎಲ್ಲಿಗೆ ತಲುಪಿದೆ ಎಂದು ಟ್ರ್ಯಾಕ್‌ ಮಾಡುವುದು ಸೇರಿದಂತೆ ಹಲವು ಫೀಚರ್‌ಗನ್ನು ಈ ಸೂಪರ್‌ ಆ್ಯಪ್ ಹೊಂದಿರಲಿದೆ ಎನ್ನಲಾಗಿದೆ. ಸೆಂಟರ್‌ ಫಾರ್‌ ರೈಲ್ವೆ ಇನ್‌ಫಾರ್ಮೆಷನ್‌ ಸಿಸ್ಟಮ್ಸ್‌ (ಸಿಆರ್‌ಐಎಸ್‌) ಇದಕ್ಕಾಗಿ ಐಆರ್‌ಸಿಟಿಸಿ ಜತೆ ಪಾಲುದಾರಿಕೆ ಮಾಡಿಕೊಂಡಿದೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಸೇವೆಗಳನ್ನು ಒದಗಿಸುವ ಸೂಪರ್‌ ಆ್ಯಪ್ ಇದಾಗಿರಲಿದೆ.

ಐಆರ್‌ಸಿಟಿಸಿ ಸೂಪರ್‌ ಆ್ಯಪ್‌ನ ಫೀಚರ್‌ಗಳು

ಐಆರ್‌ಸಿಟಿಸಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಸೂಪರ್‌ ಆ್ಯಪ್‌ನಲ್ಲಿ ಹಲವು ಫೀಚರ್‌ಗಳು ಇರಲಿವೆಯಂತೆ. ವಿಶೇಷವಾಗಿ ಹಲವು ಅಪ್ಲಿಕೇಷನ್‌ಗಳು ಇದರಲ್ಲಿವೆ. ಭಾರತೀಯ ರೈಲ್ವೆಯ ಹಲವು ಅಪ್ಲಿಕೇಷನ್‌ಗಳು ಈಗ ಇವೆ. ಇವೆಲ್ಲವೂ ಒಂದೇ ಆಪ್‌ನಲ್ಲಿ ದೊರಕುವಂತಹ ಸೂಪರ್‌ ಆ್ಯಪ್ ಇದಾಗಿರಲಿದೆ. ರಿಸರ್ವ್‌ ಟಿಕೆಟ್‌ ಬುಕ್‌ ಮಾಡುವುದು, ಅನ್‌ರಿಸರ್ವ್ಡ್‌ ಟಿಕೆಟ್‌ ಬುಕ್‌ ಮಾಡುವುದು, ಪಿಎನ್‌ಆರ್‌ ಸ್ಟೇಟಸ್‌ ಪರಿಶೀಲನೆ, ಪ್ಲಾಟ್‌ಫಾರ್ಮ್‌ ಟಿಕೆಟ್‌ಗಳನ್ನು ಖರೀದಿಸುವುದು, ರಿಯಲ್‌ಟೈಮ್‌ನಲ್ಲಿ ರೈಲುಗಳನ್ನು ಟ್ರ್ಯಾಕ್‌ ಮಾಡುವುದು, ಕ್ಯಾಟರಿಂಗ್‌ ಸೇವೆಗಳನ್ನು ಪಡೆಯುವುದು, ಫೀಡ್‌ಬ್ಯಾಕ್‌ ಸೇವೆಗಳು ಇದರಲ್ಲಿವೆ. ಐಆರ್‌ಸಿಟಿಸಿ ರೈಲ್‌ ಕನೆಕ್ಟ್‌, ಯುಟಿಎಸ್‌, ರೈಲ್‌ ಮದದ್‌ ಮಂತಾದ ಹಲವು ಆ್ಯಪ್‌ಗಳ ಬದಲು ಒಂದೇ ಸೂಪರ್‌ ಆ್ಯಪ್‌ನಲ್ಲಿ ಎಲ್ಲಾ ಸೇವೆ ದೊರಕಲಿದೆ.

ಐಆರ್‌ಸಟಿಸಿ ಮತ್ತು ಸಿಆರ್‌ಐಎಸ್‌ ಎರಡೂ ಜತೆಯಾಗಿ ಕಾರ್ಯನಿರ್ವಹಿಸುವುದರಿಂದ ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಸಿಆರ್‌ಐಎಸ್‌ ಎನ್ನುವುದು ಭಾರತಯ ರೈಲ್ವೆಗೆ ಸಾಫ್ಟ್‌ವೇರ್‌ ಸೇವೆ ನೀಡುವಂತಹ ಸಂಸ್ಥೆಯಾಗಿದೆ. ಇದೇ ಸಂಸ್ಥೆಯು ಈ ಸೂಪರ್‌ ಆ್ಯಪ್ ಅಭಿವೃದ್ಧಿಪಡಿಸುತ್ತಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಡಿಜಿಟಲ್ ಅನುಭವವನ್ನು ಹೆಚ್ಚಿಸಲು ಭಾರತೀಯ ರೈಲ್ವೆಯ ಗುರಿಯೊಂದಿಗೆ ಸೂಪರ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ರೈಲ್ವೆ-ಸಂಬಂಧಿತ ಸೇವೆಗಳಿಗಾಗಿ ಹಲವು ಅಪ್ಲಿಕೇಶನ್‌ಗಳ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ.

ಈಗ ಯಾವೆಲ್ಲ ಅಪ್ಲಿಕೇಷನ್‌ಗಳು ಇವೆ?

ರೈಲ್ವೆ ಕನೆಕ್ಟ್‌: ಈಗ ರೈಲ್ವೆ ಕನೆಕ್ಟ್‌ ಎಂಬ ಅಪ್ಲಿಕೇಷನ್‌ ಮೂಲಕ ರಿಸರ್ವ್ಡ್‌ ರೈಲು ಟಿಕೆಟ್‌ಗಳನ್ನು ಬುಕ್ಕಿಂಗ್‌ ಮಾಡಬಹುದು. ಖಾಸಗಿ ರೈಲ್ವೆ ಟ್ರ್ಯಾಕಿಂಗ್‌ ಅಪ್ಲಿಕೇಷನ್‌ಗಳಂತೆ ಇದರಲ್ಲಿ ರಿಯಲ್‌ ಟೈಮ್‌ ಸ್ಟೇಟಸ್‌ ಇತ್ಯಾದಿಗಳು ದೊರಕುವುದಿಲ್ಲ.

ಐಆರ್‌ಸಿಟಿಸಿ ವೆಬ್‌ಸೈಟ್‌: ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲೂ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು.

ಯುಟಿಎಸ್‌: ಅನ್‌ರಿಸರ್ವ್ಡ್‌ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಲು ಇದು ಉಪಯುಕ್ತವಾಗಿದೆ. ಯುಟಿಎಸ್‌ ಅಂದರೆ Unreserved Ticketing System. ಲೋಕಲ್‌ ಟ್ರೈನ್‌ನಲ್ಲಿ ಪ್ರಯಾಣಿಸುವವರಿಗೆ ಇದು ಅತ್ಯುತ್ತಮ ಆಯ್ಕೆ.

ರೈಲ್‌ ಮದದ್‌: ರೈಲು ಪ್ರಯಾಣಕ್ಕೆ ಸಂಬಂಧಪಟ್ಟಂತೆ ಕುಂದುಕೊರತೆಗಳನ್ನು ಬಗೆಹರಿಸಲು, ದೂರು ನೀಡಲು ರೈಲ್‌ ಮದದ್‌ ಅಪ್ಲಿಕೇಷನ್‌ ಬಳಸಬಹುದು.

ಭಾರತೀಯ ರೈಲ್ವೆ ವೆಬ್‌ ಸೈಟ್‌ ಸೇರಿದಂತೆ ಹಲವು ವೆಬ್‌ಸೈಟ್‌ಗಳು, ಅಪ್ಲಿಕೇಷನ್‌ಗಳಲ್ಲಿ ರೈಲ್ವೆ ಸೇವೆಗಳನ್ನು ಈಗ ಪಡೆಯುತ್ತಿರಬಹುದು. ಐಆರ್‌ಸಿಟಿಸಿ ಸೂಪರ್‌ ಆ್ಯಪ್ ಆಗಮಿಸಿದ ನಂತರ ಇಂತಹ ಹಲವು ಅಪ್ಲಿಕೇಷನ್‌ಗಳ ಸೇವೆಗಳು ಒಂದೇ ಅಪ್ಲಿಕೇಷನ್‌ನಲ್ಲಿ ದೊರಕಲಿವೆ. ಇದರೊಂದಿಗೆ ರಿಯಲ್‌ ಟೈಮ್‌ ಸ್ಟೇಟಸ್‌ನಂತಹ ಹೊಸ ಫೀಚರ್‌ಗಳು ದೊರಕಲಿವೆ.

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.