ರೈಲು ಪ್ರಯಾಣಿಕರ ಗಮನಕ್ಕೆ: ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೈಲು ಪ್ರಯಾಣಿಕರ ಗಮನಕ್ಕೆ: ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ

ರೈಲು ಪ್ರಯಾಣಿಕರ ಗಮನಕ್ಕೆ: ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ

Indian Railway: ಪೊಲೀಸರು ಸೇರಿದಂತೆ ಟಿಕೆಟ್ ಇಲ್ಲದೆ ಪ್ರಯಾಣಿಸುವವರ ಪತ್ತೆಗೆ ವಿಶೇಷ ಅಭಿಯಾನ ಪ್ರಾರಂಭಿಸುವಂತೆ 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ರೈಲ್ವೆ ಸಚಿವಾಲಯ ಪತ್ರ ಬರೆದಿದೆ. 1989ರ ರೈಲ್ವೆ ಕಾಯಿದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಕೋರಿದೆ.

ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ
ಪೊಲೀಸರು ಸೇರಿ ಟಿಕೆಟ್ ರಹಿತ ಪ್ಯಾಸೆಂಜರ್ಸ್ ಪತ್ತೆಗೆ ಚೆಕ್ ಡ್ರೈವ್ ಆರಂಭಿಸಿದ ರೈಲ್ವೆ

Ticketless Travellers in Trains: ಪೊಲೀಸರು ಸೇರಿದಂತೆ ಟಿಕೆಟ್ ಇಲ್ಲದೆಯೇ ಪ್ರಯಾಣ ಬೆಳೆಸುವವರ ಪತ್ತೆ ಹಚ್ಚಲು ಮತ್ತು ಪರಿಶೀಲಿಸಲು ಹಬ್ಬದ ಸಮಯದಲ್ಲಿ ಭಾರತದ ರೈಲ್ವೇಯು ವಿಶೇಷ ಟಿಕೆಟ್ ಚೆಕ್ ಡ್ರೈವ್ ಅಭಿಯಾನ ಪ್ರಾರಂಭಿಸಿದೆ. ಅಕ್ಟೋಬರ್ 1 ರಿಂದ 15 ಮತ್ತು ಅಕ್ಟೋಬರ್ 25 ರಿಂದ ನವೆಂಬರ್ 10 ರವರೆಗೆ ಟಿಕೆಟ್ ರಹಿತ ಮತ್ತು ಅನಧಿಕೃತ ಪ್ರಯಾಣಿಕರ ವಿರುದ್ಧ ವಿಶೇಷ ಅಭಿಯಾನ ಪ್ರಾರಂಭಿಸುವಂತೆ 17 ವಲಯಗಳ ಜನರಲ್ ಮ್ಯಾನೇಜರ್‌ಗಳಿಗೆ ಸಚಿವಾಲಯವು ಪತ್ರ ಬರೆದಿದೆ. 1989ರ ರೈಲ್ವೆ ಕಾಯಿದೆಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಕೋರಿದೆ.

ಹಬ್ಬದ ಸಮಯದಲ್ಲಿ ಜನಸಂದಣಿ ಹೆಚ್ಚಾಗಿರಲಿದೆ. ಸಾಮಾನ್ಯ ಜನರ ಜೊತೆಗೆ ಪೊಲೀಸರು ಸಹ ಟಿಕೆಟ್ ರಹಿತ ಪ್ರಯಾಣ ನಡೆಸುವವರಲ್ಲಿ ಒಬ್ಬರಾಗಿದ್ದಾರೆ ಎಂದು ವಿವಿಧ ರೈಲು ವಿಭಾಗಗಳಲ್ಲಿ ನಡೆಯುತ್ತಿರುವ ನಿಯಮಿತ ಡ್ರೈವ್‌ನ ಭಾಗವಾಗಿರುವ ರೈಲ್ವೇ ವಾಣಿಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಘಾಜಿಯಾಬಾದ್ ಮತ್ತು ಕಾನ್ಪುರ ನಡುವೆ ಸಂಚರಿಸಿದ ಎಕ್ಸ್‌ಪ್ರೆಸ್ ಸೇರಿದಂತೆ ವಿವಿಧ ರೈಲುಗಳಲ್ಲಿ ದಿಢೀರ್ ತಪಾಸಣೆ ನಡೆಸಿದ ವೇಳೆ ಯಾವುದೇ ಟಿಕೆಟ್ ಇಲ್ಲದೆ ವಿವಿಧ ಎಸಿ ಕೋಚ್‌ಗಳಲ್ಲಿ ನೂರಾರು ಪೊಲೀಸರು ಪ್ರಯಾಣಿಸಿದ್ದು ಕಂಡು ಬಂದಿದೆ ಎಂದು ಹೇಳಿದ್ದಾರೆ.

ಪೊಲೀಸರಿಂದಲೇ ದಂಡ ವಸೂಲಿ

ಪೊಲೀಸರಿಗೆ ದಂಡ ವಿಧಿಸಲು ಮುಂದಾದಾಗ ಪಾವತಿಸಲು ನಿರಾಕರಿಸಿದರು. ಅಲ್ಲದೆ ನಮಗೆ ಬೆದರಿಕೆ ಹಾಕಿದರು. ಆದರೆ ಕೊನೆಗೂ ದಂಡ ವಿಧಿಸಿದೆವು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೆ ಅಲ್ಲಿದ್ದ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಾವು ಧೈರ್ಯದಿಂದ ಉಳಿದು ಅವರಿಗೆ ಹಣ ನೀಡಿದ್ದೇವೆ. ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಂಡಿದ್ದನ್ನು ನೋಡಿ ಸಂತೋಷ ಮತ್ತು ಆಶ್ಚರ್ಯ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ. ಅನಧಿಕೃತ ಪ್ರಯಾಣಿಕರಿಂದ ಮಾನ್ಯ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸುವಾಗ ಸಿಕ್ಕಿಬಿದ್ದ ಪೊಲೀಸರ ಸಂಖ್ಯೆಯ ಬಗ್ಗೆ ಕೇಳಿದಾಗ, ಪ್ರಯಾಗರಾಜ್ ವಿಭಾಗದ ರೈಲ್ವೆ ವಕ್ತಾರರು ಹೇಳಿದ್ದಿಷ್ಟು.. ನಾವು ಪೊಲೀಸರಿಗೆ ಪ್ರತ್ಯೇಕ ಡೇಟಾ ನಿರ್ವಹಣೆ ಮಾಡುವುದಿಲ್ಲ. ಆದರೆ ಕಳೆದ ಮೂರು ತಿಂಗಳಲ್ಲಿ ಅಂದರೆ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ 1,17,633 ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಅವರಿಂದ ಪ್ರಯಾಗರಾಜ್ ವಿಭಾಗದಲ್ಲಿ 9,14,58,171 ರೂಪಾಯಿ ದಂಡ ವಸೂಲಿಯಾಗಿದೆ ಎಂದು ತಿಳಿಸಿದರು. ಪೊಲೀಸರು, ಟಿಕೆಟ್ ಪಡೆದ ಪ್ರಯಾಣಿಕರನ್ನು ಬೆದರಿಸಿ, ಕಿರುಕುಳ ನೀಡಿ ಜಾಗ ಪಡೆಯುತ್ತಾರೆ ಎಂದು ಹೇಳಿದ್ದಾರೆ.

‘ನಕಲಿ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕ್ತಾರೆ’

ಪೊಲೀಸರು ದರ್ಪ ಹೆಚ್ಚಾಗಿದ್ದು, ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರನ್ನು ಬೆದರಿಸಿ, ಬರ್ತ್​​ಗಳನ್ನು ಕಿತ್ತುಕೊಳ್ತಿದ್ದಾರೆ. ಪ್ರಯಾಣಿಕರು ಮಾತು ಕೇಳದಿದ್ದರೆ ಕಿರುಕುಳ ನೀಡುತ್ತಾರೆ. ಪೊಲೀಸರೊಂದಿಗೆ ವ್ಯವಹರಿಸುವುದು ನಿಜವಾಗಿಯೂ ಕಷ್ಟಕರ. ರೈಲ್ವೆ ಅಧಿಕಾರಿಗಳೊಂದಿಗೂ ಅನುಚಿತವಾಗಿ ವರ್ತಿಸುವುದು ಮಾತ್ರವಲ್ಲದೆ ಕಿರುಕುಳ ನೀಡುತ್ತಾರೆ. ನಕಲಿ ಕೇಸ್​ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಭಾರತೀಯ ರೈಲ್ವೆ ಟಿಕೆಟ್ ತಪಾಸಣೆ ಸಿಬ್ಬಂದಿ ಸಂಘಟನೆಯ (IRTCSO) ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಕೂಡ ಆಗಿವೆ.

2231 ಕೋಟಿ ದಂಡ ವಸೂಲಿ

2023-24ರ ಹಣಕಾಸು ವರ್ಷದಲ್ಲಿ ಟಿಕೆಟ್ ಇಲ್ಲದೆ ಅಥವಾ ಅನಧಿಕೃತವಾಗಿ ಪ್ರಯಾಣ ಬೆಳೆಸಿದದವರ ಸಂಖ್ಯೆ  361,045 ಲಕ್ಷ. ಅವರಿಂದ ಸಂಗ್ರಹವಾದ ದಂಡ 2231.74 ಕೋಟಿ. ಈ ಬಗ್ಗೆ ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ್ದ ಆರ್​ಟಿಐ ಅರ್ಜಿಯಲ್ಲಿ ಮಾಹಿತಿ ಬಹಿರಂಗಗೊಂಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.