ಭಾರತೀಯ ರೈಲ್ವೆ ಐಆರ್‌ಸಿಟಿಸಿ ನೆಟ್‌ವರ್ಕ್ ಡೌನ್, ಒಂದು ಗಂಟೆಯಿಂದ ರೈಲ್ವೆ ಇ ಟಿಕೆಟಿಂಗ್ ಸೇವೆ ಅಲಭ್ಯ, ಕಾರಣವಾದರೂ ಏನು
ಭಾರತೀಯ ರೈಲ್ವೆಯ ಪ್ರಮುಖ ಸೇವೆಗಳಲ್ಲಿ ಒಂದಾದ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ನೆಟ್‌ವರ್ಕ್ ಸಮಸ್ಯೆಯಿಂದಾಗಿ ಬುಕ್ಕಿಂಗ್ ಸಹಿತ ಎಲ್ಲಾ ಚಟುವಟಿಕೆಗಳಲ್ಲಿ ವ್ಯತ್ಯಯವಾಗಿದೆ.
ದೆಹಲಿ: ಭಾರತೀಯ ರೈಲ್ವೆಯ ಪ್ರಮುಖ ಆನ್‌ಲೈನ್ ಬುಕ್ಕಿಂಗ್ ಫ್ಲಾಟ್ ಫಾರ್ಮ್ ಆಗಿರುವ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ವೆಬ್‌ಸೈಟ್ ನೆಟ್‌ವರ್ಕ್‌ನಲ್ಲಿ ವ್ಯತ್ಯಯವಾಗಿದೆ. ಸೋಮವಾರ ಸತತ ಒಂದು ಗಂಟೆಯಿಂದ ನೆಟ್ ವರ್ಕ್ ಸಮಸ್ಯೆಯಾಗಿ ಯಾವುದೇ ಬುಕ್ಕಿಂಗ್‌ಗಳು ಭಾರತದಾದ್ಯಂತ ಆಗುತ್ತಿಲ್ಲ. ಐಆರ್‌ಸಿಟಿಸಿ ನೆಟ್‌ವರ್ಕ್ ಡೌನ್ ಇದೆ. ದಯವಿಟ್ಟು ನಂತರ ಪ್ರಯತ್ನಿಸಿ, ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ರೈಲ್ವೆ ಇ-ಟಿಕೆಟಿಂಗ್ ಸೇವೆ ಲಭ್ಯವಿಲ್ಲ ಎನ್ನುವ ಸಂದೇಶವು ಒಂದು ಗಂಟೆಯಿಂದಲೂ ತೋರಿಸುತ್ತಿದೆ. ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ಹಾಗೂ ರೈಲ್ವೆ ಸೌಲಭ್ಯ ಪಡೆಯಬಯಸುವವರಿಗೆ ತೊಂದರೆಯಾಗಿದ್ದು. ಆದಷ್ಟು ಬೇಗನೇ ಇದನ್ನು ಸರಿಪಡಿಸಲಾಗುತ್ತದೆ ಎಂದು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಹೇಳಿದೆ.
ಸೇವೆ ಬಂದ್
ಐಆರ್‌ಸಿಟಿಸಿಯ ಇ-ಟಿಕೆಟಿಂಗ್ ಪ್ಲಾಟ್‌ಫಾರ್ಮ್ ಸೋಮವಾರ ಒಂದು ಗಂಟೆ ನಿರ್ವಹಣೆಗಾಗಿದ್ದರಿಂದ ಸಾಕಷ್ಟು ತೊಂದರೆಯಾಯತು. ತಾಂತ್ರಿಕ ಸಮಸ್ಯೆಯಿಂದ ಒಂದು ಗಂಟೆ ಕಾಲ ಸೇವೆ ಬಂದ್ ಮಾಡಲಾಗಿತ್ತು.
ನಿರ್ವಹಣಾ ಚಟುವಟಿಕೆಯಿಂದಾಗಿ ಭಾರತೀಯ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಇ-ಟಿಕೆಟಿಂಗ್ ಸೇವೆಯು ಸೋಮವಾರ ಒಂದು ಗಂಟೆ ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿತು.
ಪರ್ಯಾಯಕ್ಕೆ ಯತ್ನ
ಇದರಿಂದ ವೆಬ್‌ಸೈಟ್‌ಗೆ ಪ್ರವೇಶಿಸಲು ಯತ್ನಿಸಿದವರಿಗೆ ಅವಕಾಶ ಸಿಗಲಿಲ್ಲ. ಅಲ್ಲಿಯೇ ಸಂದೇಶವೂ ಇದ್ದುದರಿಂದ ಹಲವರು ಒಂದು ಗಂಟೆಯ ನಂತರ ಬುಕ್ಕಿಂಗ್ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಲು ಮುಂದಾದರು.
ನಿರ್ವಹಣಾ ಚಟುವಟಿಕೆಯಿಂದಾಗಿ, ಇ-ಟಿಕೆಟಿಂಗ್ ಸೇವೆಯು ಮುಂದಿನ ಒಂದು ಗಂಟೆಯವರೆಗೆ ಲಭ್ಯವಿರುವುದಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ ಎನ್ನುವ ಸಂದೇಶ ಗಮನಿಸಿದವರು ಅನಿವಾರ್ಯವಾಗಿ ನಂತರ ಪ್ರಯತ್ನಿಸಬೇಕಾಯಿತು.
ರದ್ದತಿ/ಫೈಲ್ ಟಿಡಿಆರ್‌ಗಾಗಿ, ದಯವಿಟ್ಟು ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ. 14646, 0755-6610661 & 0755-4090600 ಅಥವಾ etickets@irctc.co.in ಗೆ ಮೇಲ್ ಮಾಡಿ" ಎಂದು ಐಆರ್‌ಸಿಟಿಸಿ ಹೇಳಿದೆ.
ಕಾರಣವಾದರೂ ಏನು
ಏತನ್ಮಧ್ಯೆ, ಭಾರತೀಯ ರೈಲ್ವೇ ವಿವಿಧ ಪ್ರಯಾಣಿಕ ಸೇವೆಗಳನ್ನು ಸಂಯೋಜಿಸಲು "ಸೂಪರ್ ಅಪ್ಲಿಕೇಶನ್" ಅನ್ನು ಅಭಿವೃದ್ಧಿಪಡಿಸುತ್ತಿದೆ. ಐಆರ್‌ಸಿಟಿಸಿ ಎರಡನೇ ತ್ರೈಮಾಸಿಕದಲ್ಲಿ ₹305.50 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ, ಇಂಟರ್ನೆಟ್ ಟಿಕೆಟಿಂಗ್ ಗಣನೀಯ ಕೊಡುಗೆ ನೀಡಿದೆ. ಇದರ ಭಾಗವಾಗಿಯೇ ಈ ಚಟುವಟಿಕೆ ನಡೆಯುತ್ತಿರಬಹುದು ಎನ್ನಲಾಗುತ್ತಿದೆ.
ಇತ್ತೀಚೆಗೆ, ಭಾರತೀಯ ರೈಲ್ವೇ ತನ್ನ "ಸೂಪರ್ ಅಪ್ಲಿಕೇಶನ್" ನಲ್ಲಿ ಡಿಸೆಂಬರ್‌ಗೆ ಗಡುವು ನೀಡುತ್ತಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಕನಾಮಿಕ್ಸ್ ಟೈಂಸ್ ವರದಿ ಮಾಡಿದೆ. ಈ ಆಲ್-ಇನ್-ಒನ್ ಅಪ್ಲಿಕೇಶನ್ ಟಿಕೆಟ್ ಬುಕಿಂಗ್, ಪ್ಲಾಟ್‌ಫಾರ್ಮ್ ಪಾಸ್ ಖರೀದಿಗಳು ಮತ್ತು ರೈಲು ಟ್ರ್ಯಾಕಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಒಂದೇ ಪ್ಲಾಟ್‌ಫಾರ್ಮ್ ಮೂಲಕ ಪ್ರವೇಶಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಡುತ್ತದೆ. ಸೆಂಟರ್ ಫಾರ್ ರೈಲ್ವೇ ಇನ್ಫರ್ಮೇಷನ್ ಸಿಸ್ಟಮ್ಸ್ (CRIS) ಅಭಿವೃದ್ಧಿಪಡಿಸಿದ ಅಪ್ಲಿಕೇಶನ್, ಪ್ರಯಾಣಿಕರಿಗೆ ತಡೆರಹಿತ ಅನುಭವವನ್ನು ನೀಡಲು ಕಾರ್ಯನಿರ್ವಹಿಸುತ್ತದೆ.
ವಿಭಾಗ