ಈ ರೂಟ್‌ನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಭಾರಿ ಬೇಡಿಕೆ; ಟಿಕೆಟ್‌ಗಾಗಿ ಪ್ರಯಾಣಿಕರ ಪರದಾಟ
ಹೊಸದಾಗಿ ಪರಿಚಯಿಸಿರುವ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನ ಜನಪ್ರಿಯತೆ ಗಗನಕ್ಕೇರಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಟಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಮಾಲ್ಡಾ ಟೌನ್-ಎಸ್‌ಎಮ್‌ವಿಟಿ ಬೆಂಗಳೂರು ರೈಲಿನ ಏಪ್ರಿಲ್ 7ರವರೆಗಿನ ಎಲ್ಲಾ ಟಿಕೆಟ್‌ಗಳು ಬುಕ್ ಆಗಿದ್ದು ಇದರ ಜನಪ್ರಿಯತೆಯನ್ನುತೋರಿಸುತ್ತಿದೆ.

ಭಾರತೀಯ ರೈಲ್ವೆ ಇತ್ತೀಚೆಗೆ ಪರಿಚಯಿಸಿರುವ ಮಾಲ್ಡಾ ಟೌನ್–ಎಸ್‌ಎಮ್‌ವಿಟಿ ಬೆಂಗಳೂರು ಅಮೃತ್ ಬಾರತ್ ಎಕ್ಸ್‌ಪ್ರೆಸ್ ರೈಲ್ವೆಗೆ ಪ್ರಯಾಣಕರು ಹೆಚ್ಚು ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ. ಸಾಪ್ತಾಹಿಕ ಎಕ್ಸ್‌ಪ್ರೆಸ್ ಆದ ಈ ರೈಲಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಪೂರ್ವ ರೈಲ್ವೆಯ ಅಧಿಕಾರಿಯೊಬ್ಬರು ಈ ರೈಲಿನ ಟಿಕೆಟ್‌ಗಳಿಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ ಎಂದು ಹೇಳಿದ್ದಾರೆ. ಪೂರ್ವ ರೈಲ್ವೆಯ ಅಧಿಕೃತ ಹೇಳಿಕೆಯ ಪ್ರಕಾರ ಕೋಲ್ಕತ್ತಾದ ಸಮೀಪದಲ್ಲಿರುವ ದಂಕುಣಿ ರೈಲು ನಿಲ್ದಾಣ ಮತ್ತು ಬೆಂಗಳೂರಿನ ಎಸ್‌ಎಂವಿಟಿ ನಡುವಿನ ಜನವರಿ 21 ರಿಂದ ಏಪ್ರಿಲ್ 7 ರವರೆಗೆ ಸಂಚರಿಸುವ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎಲ್ಲಾ ಸೀಟುಗಳು ಈಗಾಗಲೇ ಬುಕ್ ಆಗಿದೆ. ಜೊತೆಗೆ ವೇಟ್‌ಲಿಸ್ಟ್ ಟಿಕೆಟ್‌ಗಳ ಸಂಖ್ಯೆಯು ಗಣನೀಯವಾಗಿ ಏರುತ್ತಿದೆ ಎಂದು ಅದು ಹೇಳಿದೆ. ಎರಡೂ ತುದಿಗಳಲ್ಲಿ ಲೊಕೊಮೊಟಿವ್‌ಗಳನ್ನು ಹೊಂದಿಸಬಹುದಾದ ಈ ರೈಲು ಪುಲ್–ಪುಶ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸ್ಲೀಪರ್ ಮತ್ತು ಜನರಲ್ ಕ್ಲಾಸ್ ಕೋಚ್‌ಗಳನ್ನು ಹೊಂದಿದೆ.
ಮಾಲ್ಡಾ ಟೌನ್–ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು
ಕಳೆದ ವರ್ಷ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾಲ್ಡಾ ಟೌನ್–ಎಸ್‌ಎಂವಿಟಿ ಬೆಂಗಳೂರು ಒಂದಾಗಿದೆ. ಈಗ ಈ ರೈಲಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದು ದಿನೇದಿನೇ ಜನಪ್ರಿಯತೆ ಗಳಿಸುತ್ತಿದೆ. ಹೊಸದಾಗಿ ಪರಿಚಯಿಸಿರುವ ಈ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್‌ಗೆ ಭಾರಿ ಬೇಡಿಕೆ ಉಂಟಾಗಿದೆ. ಜೊತೆಗೆ ಇದು ಎಕ್ಸ್‌ಪ್ರೆಸ್ ರೈಲ‌್ ಆಗಿರುವುದರಿಂದ ಪ್ರಯಾಣಿಕರು ಸೀಟು ಕಾಯ್ದಿರಿಸುವ ಸಲುವಾಗಿ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ.
ಸ್ಲೀಪರ್ ಮತ್ತು ಜನರಲ್ ಕ್ಲಾಸ್ ಕೋಚ್ ಹೊಂದಿರುವ ಈ ಎಕ್ಸ್‌ಪ್ರೆಸ್ ರೈಲು ಮಾರ್ಗದುದ್ದಕ್ಕೂ ಪ್ರಯಾಣಿಕರ ಪ್ರಯಾಣದ ಮುಖ್ಯ ಅಗತ್ಯಗಳನ್ನು ಪೂರೈಸುತ್ತದೆ. ಈಗಾಗಲೇ ಬುಕ್ ಆಗಿರುವ ಸೀಟ್‌ಗಳನ್ನು ಮತ್ತು ವೇಯ್ಟ್‌ಲಿಸ್ಟ್ ಟಿಕೆಟ್‌ಗಳ ಸಂಖ್ಯೆಯನ್ನು ನೋಡಿದರೆ ಈ ರೈಲು ಪ್ರಯಾಣಿಕರಿಗೆ ನೀಡುವ ಸೇವೆಯ ಮಹತ್ವವನ್ನು ತೋರಿಸುತ್ತದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಆಸಕ್ತಿದಾಯಕ ಸಂಗತಿಗಳು
* ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲಾಗಿದೆ.
* ಪುಶ್–ಪುಲ್ ಎಂಬ ವಿಭಿನ್ನ ಹೊಸ ತಂತ್ರಜ್ಞಾನ ಇದರಲ್ಲಿದ್ದು, ಹೆಚ್ಚಿನ ಸುರಕ್ಷತೆ ನೀಡುತ್ತದೆ.
* ಒಂದು ಪ್ರಯಾಣ ಮುಗಿದ ನಂತರ ಲೋಕೋಮೋಟಿವ್ ಅನ್ನು ಮತ್ತೊಂದು ಪ್ರಯಾಣಕ್ಕಾಗಿ ತಿರುಗಿಸುವ ಅಗತ್ಯ ಇದರಲ್ಲಿಲ್ಲ. ಏಕೆಂದರೆ ಈ ರೈಲು ಎರಡೂ ತುದಿಗಳಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
* ಇದು ಎಸಿ ಕೋಚ್ ಹೊಂದಿರದಿದ್ದರೂ ಕೂಡಾ ಪ್ರಯಾಣಿಕರಿಗೆ ವಿಶಿಷ್ಟವಾದ ಅನುಭವ ನೀಡುತ್ತದೆ.
* ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ರೈಲನ್ನು ವಿನ್ಯಾಸ ಮಾಡಲಾಗಿದೆ ಎನ್ನುವುದು ಇದರ ವಿನ್ಯಾಸದಲ್ಲಿ ಗೋಚರಿಸುತ್ತದೆ. ಆಕರ್ಷಕವಾದ ಸೀಟ್ ಲೇಔಟ್‌ಗಳು, ನವೀಕರಿಸಿದ ಲಗೇಜ್ ರ್ಯಾಕ್‌ಗಳು ಮತ್ತು ಸೂಕ್ತವಾದ ಹೋಲ್ಡರ್‌ಗಳನ್ನು ಹೊಂದಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಇದರಲ್ಲಿ ಕಾಣಬಹುದಾಗಿದೆ.
* ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಇತ್ತೀಚೆಗಿನ ಎಲ್ಲಾ ರೀತಿಯ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಅಳವಡಿಸಿರುವುದನ್ನು ನೋಡಬಹುದು. ಎಲ್‌ಇಡಿ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು, ಸಮಗ್ರ ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದವುಗಳು ಇದರಲ್ಲಿವೆ.
* ಸ್ಲೈಡಿಂಗ್ ಕಿಟಿಕಿಗಳು, ಧೂಳಿನಿಂದ ರಕ್ಷಣೆ ಪಡೆಯಲು ವಿಶಾಲವಾದ ಗ್ಯಾಂಗ್‌ವೇಗಳು, ಅಗ್ನಿಶಾಮಕ ವ್ಯವಸ್ಥೆ, ತುರ್ತು ವಿಪತ್ತು ನಿರ್ವಹಣಾ ಬೆಳಕು, ಫ್ಲೋರೊಸೆಂಟ್ ಸ್ಟ್ರಿಪ್‌ಗಳು ಮತ್ತು ಹೆಂಗಸರು, ಮಹಿಳೆಯರು, ಹಿರಿಯ ನಾಗರಿಕರಿಗಾಗಿ (LWS) ಬೇಂಚ್ ಮಾದರಿಯ ವಿನ್ಯಾಸ ಮುಂತಾದವುಗಳನ್ನುಇದರಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸುವ ಪ್ಲಾನ್ ಇದೆಯಾ; ಈ 5 ಸಿಂಪಲ್ ಟಿಪ್ಸ್ ಅನುಸರಿಸಿ
(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ