ಕನ್ನಡ ಸುದ್ದಿ  /  Nation And-world  /  Indian Railways New Milestone 100 Vande Bharat Express Trains Running In The Country Rmy

Vande Bharat Express: ಭಾರತೀಯ ರೈಲ್ವೆ ಹೊಸ ಮೈಲುಗಲ್ಲು; ದೇಶದಲ್ಲಿ 100 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ

2019ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಫೋಟೊ-ಹಿಂದೂಸ್ತಾನ್ ಟೈಮ್ಸ್)
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ಫೋಟೊ-ಹಿಂದೂಸ್ತಾನ್ ಟೈಮ್ಸ್)

ಕಳೆದ ಹಲವು ವರ್ಷಗಳಲ್ಲಿ ಹೊಸ ರೈಲುಗಳ ಸಂಚಾರ, ರೈಲು ನಿಲ್ದಾಣಗಳು ಮೇಲ್ದರ್ಜೆಗೆ ಸೇರಿದಂತೆ ಭಾರತೀಯ ರೈಲ್ವೆಯಲ್ಲಿ (Indian Railway) ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದೀಗ ಇಂಡಿಯನ್ ರೈಲ್ವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ (Vande Bharat Express Train) ಸಂಚಾರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಪ್ರಸ್ತುತ ದೇಶದಲ್ಲಿ ಬರೋಬ್ಬರಿ 100 ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. ರೈಲುಗಳಿಗೆ ಹೊಸ ಸ್ಪರ್ಶ, ಹೈ ಸ್ಪೀಡ್ ಸೇರಿದಂತೆ ರೈಲು ಸೇವೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ರೈಲುಜಾಲವನ್ನು ಆಧುನೀಕರಣಗೊಳಿಸಿರುವ ರಾಷ್ಟ್ರದ ಪ್ರಮುಖ ಕಾರ್ಯಕ್ರಮಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಮುಖ ಗುರುತಾಗಿದೆ. ರೈಲ್ ನೆಟ್‌ವರ್ಕ್‌ನಲ್ಲಿ ಪ್ರಸ್ತುತ ದೇಶದಲ್ಲಿ ಸಂಚರಿಸುತ್ತಿರುವ 100 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 250ಕ್ಕೂ ಅಧಿಕ ಜಿಲ್ಲೆಗಳನ್ನು ಸಂಪರ್ಕಿಸುತ್ತಿವೆ ಎಂದು ರೈಲ್ವೆ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

10 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ಲೋಕಸಭೆ ಚುನಾವಣೆ ಹೊಸಲಿಲ್ಲಿರುವ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಮಾರ್ಚ್ 12) 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಕಲಬುರಗಿ-ಶ್ರೀ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ), ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಿಂದ್ರಾಬಾದ್-ವಿಶಾಖಪಟ್ಟಣಂ, ಪಾಟ್ನಾ-ಲಕ್ನೋ, ಜಲಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣ, ಲಕ್ನೌ-ಡೆಹ್ರಾಡೂನ್, ರಾಂಚಿ-ವಾರಣಾಸಿ, ಖಜುರೋ-ಡೆಲ್ಲಿ (ನಿಜಾಮುದ್ದೀನ್) ಮಾರ್ಗದ ಹೊಸ ರೈಲುಗಳಿಗೆ ಹಸಿರು ನಿಶಾಲೆ ತೋರಿದ್ದರು. 2029 ರ ಫೆಬ್ರವರಿ 15 ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದ ಮೊದಲ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಮಧ್ಯಮ ಅಂತರದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಗಳನ್ನು ಒದಗಿಸುತ್ತಿವೆ. ಈ ಸೆಮಿ ಹೈಸ್ಪೀಡ್ ರೈಲುಗಳು ಹೈಸ್ಪೀಡ್, ಪ್ರಮಾಣಿಕರಿಗೆ ಆರಾಮದಾಯಕ ಅನುಭವ ಹಾಗೂ ಸುರಕ್ಷತಾ ಮಾನದಂಡಗಳ ಸುಧಾರಿತ ವೈಶಿಷ್ಟ್ಯಗಳಿಗೆ ಪೂರಕವಾಗಿವೆ. ಈ ರೈಲುಗಳು ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತಿದ್ದು, ಪ್ರಮಾಣಿಯಕರು ಇತರೆ ಪ್ರಯಾಣಗಳಿಗಿಂತ ರೈಲು ಸೇವೆಯನ್ನು ಹೆಚ್ಚಾಗಿ ಬಳಸಲು ಪ್ರೋತ್ಸಾಹಿಸುತ್ತಿವೆ.

ವಂದೇ ಭಾರತ್ ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿಲೋ ಮೀಟರ್ ಆಗಿದ್ದು, ಸುಧಾರಿತ ಬ್ರೇಕಿಂಗ್ ವ್ಯವಸ್ಥೆ, ಪ್ರತಿ ಕೋಚಿನಲ್ಲಿ ಸ್ವಯಂ ಚಾಲಿತ ಬಾಗಿಲು, ಜಿಪಿಎಸ್ ಆಧಾರಿತ ಆಡಿಯೊ, ವಿಡಿಯೊ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನೆಗಾಗಿ ವೈಫೈ, ಹಾಟ್‌ಸ್ಪಾಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ರೈಲಿನಲ್ಲಿ ಕಾಣಬಹುದು. ದೇಶದಲ್ಲಿ ಸಂಚರಿಸುತ್ತಿರುವ 100 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪೈಕಿ ಕರ್ನಾಟಕಕ್ಕೆ ನೀಡಿರುವ ಪಾಲು ಶೇಕಡಾ 8 ರಷ್ಟಿದೆ. ಅಂದರೆ ಇತ್ತೀಚೆಗೆ ಚಾಲನೆ ನೀಡಿರುವ ಕಲಬುರಗಿ-ಸರ್ ಎಂ ವಿ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಮೈಸೂರು-ಡಾ ಎಂಜಿಆರ್ ಸೆಂಟ್ರಲ್ (ಚೆನ್ನೈ) ರೈಲು ಸೇರಿ ರಾಜ್ಯದಲ್ಲಿ ಒಟ್ಟು 8 ರೈಲುಗಳು ಸಂಚರಿಸುತ್ತಿವೆ. ದೂರದ ಪ್ರಯಾಣ, ಸಮಯ ಉಳಿತಾಯ, ಸುರಕ್ಷತೆಯ ದೃಷ್ಟಿಯಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ರೈಲುಗಳಲ್ಲಿ ಸಂಚರಿಸುತ್ತಾರೆ. ರಾಜ್ಯಕ್ಕೆ ಮತ್ತಷ್ಟು ವಂದೇ ಭಾರತ್ ರೈಲು ಸೇವೆಯ ಅಗತ್ಯವಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point