ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Vandebharat Sleeper: ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಪರೀಕ್ಷೆ ಆಗಸ್ಟ್‌15 ರೊಳಗೆ: ಏನಿದರ ವಿಶೇಷ

Vandebharat Sleeper: ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಪರೀಕ್ಷೆ ಆಗಸ್ಟ್‌15 ರೊಳಗೆ: ಏನಿದರ ವಿಶೇಷ

Indian Railways ವಂದೇ ಭಾರತ್‌ ಸ್ಲೀಪರ್‌ ರೈಲು ಕೋಚ್‌ಗಳ ( Vande bharat Sleeper Coach) ತಯಾರಿ ನಡೆದಿದೆ. ಇಲ್ಲಿದೆ ಅದರ ಮಾಹಿತಿ.

ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಹೀಗಿರಲಿದೆ.
ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಹೀಗಿರಲಿದೆ.

ದೆಹಲಿ: ಭಾರತದಲ್ಲಿಎರಡು ವರ್ಷದಿಂದ ವಂದೇ ಭಾರತ್‌ ಹಗಲು ರೈಲುಗಳ ಸಂಚಾರ ಯಶಸ್ವಿಯಾಗಿದೆ. ಈಗಾಗಲೇ 50 ಕ್ಕೂ ಅಧಿಕ ವಂದೇ ಭಾರತ್‌ ರೈಲುಗಳ ಭಾರತದ ನಾನಾ ಭಾಗಗಗಳಲ್ಲಿ ಸಂಚರಿಸುತ್ತಿವೆ. ಪ್ರಮುಖ ನಗರಗಳ ಸಂಪರ್ಕ ಸೇತುವೆಯಾಗಿ ಅದೇ ದಿನ ಸಂಚರಿಸಲು ಅನುಕೂಲ ಮಾಡಿಕೊಟ್ಟಿವೆ. ಇದರೊಟ್ಟಿಗೆ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಸೇವೆಗೂ ಸಿದ್ದತೆ ನಡೆದಿದೆ. ಇದಕ್ಕಾಗಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ಗಳ ತಯಾರಿಯೂ ಅಂತಿಮ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ಆಗಸ್ಟ್‌ 15 ರೊಳಗೆ ಪ್ರಾಯೋಗಿಕ ಸಂಚಾರವೂ ಆಗಬಹುದು. ಭಾರತೀಯ ರೈಲ್ವೆಯು ಇದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಮೊದಲ ಹಂತದಲ್ಲಿ ವಂದೇ ಭಾರತ್‌ ಸ್ಲೀಪರ್‌ ಎರಡು ರೈಲುಗಳ ಪ್ರಯೋಗ ನಡೆಯಲಿದೆ. ಈಗಾಗಲೇ ಸಂಚರಿಸುತ್ತಿರುವ ರಾಜಧಾನಿ ರೈಲುಗಳಿಗಿಂತಲೂ ವಂದೇ ಭಾರತ್‌ ಸ್ಲೀಪರ್‌ ರೈಲುಗಳು ಸೇವೆಯನ್ನು ನೀಡಲಿವೆ ಎಂದು ಭಾರತೀಯ ರೈಲ್ವೆ ಮೂಲಗಳು ಖಚಿತಪಡಿಸಿವೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ವಂದೇ ಭಾರತ್‌ ಸ್ಲೀಪರ್‌ ಕೋಚ್‌ಗಳ ತಯಾರಿ ನಡೆಯುತ್ತಿದೆ. ಚೇರ್‌ ಕಾರ್‌ ವಂದೇ ಭಾರತ್‌ ರೈಲಿಗೆ ಸಿಗುತ್ತಿರುವ ಪ್ರತಿಕ್ರಿಯೆ ಆಧರಿಸಿ ಸ್ಲೀಪರ್‌ ಕೋಚ್‌ಗಳ ಸೇವೆ ನೀಡಲಾಗುತ್ತಿದೆ. ರಾತ್ರಿ ಸಂಚರಿಸುವ ಕಾರಣಕ್ಕೆ ಮಲಗುವ ಅತ್ಯುತ್ತಮ ವ್ಯವಸ್ಥೆ ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ ಇರಲಿದೆ. ಬಿಇಎಂಎಲ್‌ ಈ ಸ್ಲೀಪರ್‌ ರೈಲು ಬೋಗಿಗಳನ್ನು ಸಿದ್ದಪಡಿಸುತ್ತಿದೆ.

ವಂದೇ ಭಾರತ್‌ ಸ್ಲೀಪರ್‌ ರೈಲಿನಲ್ಲಿ 16 ಅತ್ಯಾಧುನಿಕ ಕೋಚ್‌ಗಳು ಇರಲಿವೆ. ಇದರಲ್ಲಿ 11 ಎಸಿ 3 ಟಯರ್‌ ಕೋಚ್‌ಗಳು. ಉಳಿಕೆ 4 ಎಸಿ 2 ಟಯರ್‌ ಕೋಚ್‌ಗಳು. ಒಂದು ಎಸಿ 1 ಟಯರ್‌ ಕೋಚ್‌ ಇರಲಿದೆ. ಒಟ್ಟು ಸ್ಲೀಪರ್‌ ರೈಲಿನಲ್ಲಿ 823 ಪರಯಾಣಿಕರು ಸಂಚರಿಸಬಹುದು, ಇದರಲ್ಲಿ 611 ಮಂದಿ ಎಸಿ 3 ಟಯರ್‌, 188 ಮಂದಿ ಎಸಿ 2 ಟಯರ್‌ ಹಾಗೂ ಉಳಿಕೆ 24 ಪ್ರಯಾಣಿಕರು ಎಸಿ 1 ಟಯರ್‌ನಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತದೆ.

ರಾಜಧಾನಿ ರೈಲಿಗಿಂತಲೂ ಸುರಕ್ಷಿತ ಹಾಗೂ ವಿಭಿನ್ನ ಕುಳಿತುಕೊಳ್ಳುವ ಆಸನಗಳು ಇದರಲ್ಲಿ ಇರಲಿವೆ. ಇದು ಖಂಡಿತವಾಗಿಯೂ ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ. ವಿವಿಧ ಬಣ್ಣಗಳ, ಕ್ರೀಂ ಹಾಗು ಹಳದಿ ಬಣ್ಣದ ಪಟ್ಟಿಗಳು ಇಡೀ ರೈಲಿನ ಒಳಗಿನ ವಾತಾವರಣವನ್ನು ಆಹ್ಲಾದಕರವಾಗಿಸಲಿದೆ.

ಪ್ರಯಾಣಿಕರು ಮೇಲಿನ ಹಾಗೂ ಮಧ್ಯದ ಬರ್ತ್‌ ಅನ್ನು ಸುಲಭವಾಗಿ ತಲುಪುವ ವ್ಯವಸ್ಥೆ ಇದರಲ್ಲಿ ಇರಲಿದೆ. ಇದಕ್ಕಾಗಿ ವಿಶೇಷ ಹಗ್ಗವನ್ನು ರೂಪಿಸಲಾಗಿದೆ. ಇನ್ನು ಬೋಗಿಗಳಲ್ಲಿ ವಿದ್ಯುತ್‌ ಸೌಲಭ್ಯವೂ ಸೆನ್ಸರ್‌ ಆಧರಿತವಾಗಿ ಇರಲಿದೆ. ಇದರಿಂದ ವಿದ್ಯುತ್‌ ಬಳಕೆ ಅನಗತ್ಯವಾಗಿ ತಪ್ಪಿಸಲು ನೆರವಾಗಲಿದೆ.

ಬೆಳಕಿನ ಸಂಯೋಜನೆಯೂ ಸ್ಲೀಪರ್‌ ಬೋಗಿಯಲ್ಲಿ ಭಿನ್ನವಾಗಿ ಇರಲಿದೆ. ರಾತ್ರಿ ಹೊತ್ತಲ್ಲಿ ನೆಲಹಾಸಿನ ಮೇಲೆ ನಡೆಯುವಾಗ ತೊಂದರೆಯಾಗದಂತೆ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳಲಾಗಿದೆ.

ಅಲ್ಲದೇ ಒಳಗಿನ ಬಾಗಿಲುಗಳು ಕೂಡ ಸೆನ್ಸರ್‌ ಆಧರಿತವಾಗಿಯೇ ಇರಲಿವೆ. ಶಬ್ದ ಮಾಲಿನ್ಯಕ್ಕೂ ಅವಕಾಶವಿರದ ಹಾಗೆ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಇನ್ನು ಶೌಚಾಲಯಗಳೂ ಕೂಡ ಜನ ಸ್ನೇಹಿಯಾಗಿ ಇರಲಿವೆ.ವಿಕಲಚೇತನ ಸ್ನೇಹಿಯಾಗಿಯೂ ರೂಪಿಸಲಾಗಿದೆ. ಕೋಚ್‌ಗಳ ನಡುವೆ ಸಂಚರಿಸಲು ವ್ಯವಸ್ಥೆಯೂ ಇರಲಿದೆ.

ಇಡೀ ರೈಲು ಎಸಿಯಾಗಿರುವುದರಿಂದ ಅದನ್ನು ನಾವೇ ನಿರ್ವಹಣೆ ಮಾಡಿಕೊಳ್ಳಬಹುದಾದ ರೀತಿಯಲ್ಲಿ ರೂಪಿಸಲಾಗಿದೆ. ಇನ್ನು ಬಿಸಿಲು, ಮಳೆ, ಧೂಳಿನಿಂದ ಆಗಬಹುದಾದ ಸಮಸ್ಯೆ ತಡೆಯುವ ವಾತಾವರಣವನ್ನು ಇದು ಸೃಷ್ಟಿಸಲಿದೆ.

ಸ್ಲೀಪರ್‌ ರೈಲಿನ ಹೊರ ಭಾಗದಲ್ಲಿ ಗರುಡನ ಚಿತ್ರದೊಂದಿಗೆ ಆಕರ್ಷಕವಾಗಿರಲಿದೆ. ವಂದೇ ಭಾರತ್‌ ಸ್ಲೀಪರ್‌ ರೈಲು ಗಂಟೆಗೆ 160 ಕಿಮಿ ವೇಗವಾಗಿ ಓಡುವ ವ್ಯವಸ್ಥೆ ಇರಲಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.