ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿಗೆ ಸಿಕ್ಕಿದೆ 3 ಸರ್ಕಾರಿ ಉದ್ಯೋಗ, ಐಎಎಸ್‌ ಕಡೆಗೆ ಆಕೆಯ ನೋಟ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿಗೆ ಸಿಕ್ಕಿದೆ 3 ಸರ್ಕಾರಿ ಉದ್ಯೋಗ, ಐಎಎಸ್‌ ಕಡೆಗೆ ಆಕೆಯ ನೋಟ

ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿಗೆ ಸಿಕ್ಕಿದೆ 3 ಸರ್ಕಾರಿ ಉದ್ಯೋಗ, ಐಎಎಸ್‌ ಕಡೆಗೆ ಆಕೆಯ ನೋಟ

Government Jobs: ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುದು ಬಹುತೇಕ ಕನಸು. ಅದು ಅಷ್ಟು ಸುಲಭ ಅಲ್ಲ. ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿಗೆ 3 ಸರ್ಕಾರಿ ಉದ್ಯೋಗ ಸಿಕ್ಕಿದೆ. ಈಗ ಆಕೆಯ ನೋಟ ಐಎಎಸ್‌ ಕಡೆಗೆ ಇದೆ. ಇಲ್ಲಿದೆ ಆಕೆಯ ಸಾಧನೆಯ ಹಾದಿಯ ವಿವರ.

ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿ ಭೋಗಿ ಸಮ್ಮಕ್ಕ (ಬಲ ಚಿತ್ರ) ಅವರಿಗೆ 3 ಸರ್ಕಾರಿ ಉದ್ಯೋಗ ಸಿಕ್ಕಿದೆ. ಸದ್ಯ ಅವರು ಐಎಎಸ್‌ ಕಡೆಗೆ ನೋಟ ಇಟ್ಟು ಪರಿಶ್ರಮಪಡುತ್ತಿದ್ದಾರೆ.
ಒಂದು ಸರ್ಕಾರಿ ಉದ್ಯೋಗ ಸಿಗೋದೇ ಕಷ್ಟ, ಅಂಥದ್ರಲ್ಲಿ ತೆಲಂಗಾಣದ ಈ ಹಳ್ಳಿ ಹುಡುಗಿ ಭೋಗಿ ಸಮ್ಮಕ್ಕ (ಬಲ ಚಿತ್ರ) ಅವರಿಗೆ 3 ಸರ್ಕಾರಿ ಉದ್ಯೋಗ ಸಿಕ್ಕಿದೆ. ಸದ್ಯ ಅವರು ಐಎಎಸ್‌ ಕಡೆಗೆ ನೋಟ ಇಟ್ಟು ಪರಿಶ್ರಮಪಡುತ್ತಿದ್ದಾರೆ. (pexel/ ANI)

Government Jobs: ಎಲ್ಲರೂ ಒಂದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಕಷ್ಟಪಡುತ್ತಿದ್ದರೆ, ತೆಲಂಗಾಣದ ಹಳ್ಳಿ ಹುಡುಗಿ ಮೂರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಈಗ ಐಎಎಸ್ ಅಧಿಕಾರಿಯಾಗಬೇಕು ಎಂಬ ಗುರಿಯೊಂದಿಗೆ ಮುನ್ನಡೆಯುತ್ತಿದ್ದಾರೆ. ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ಪಡಬೇಕು. ಸೂಕ್ತ ರೀತಿಯ ಸಿದ್ದತೆಯೂ ಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಹಳ್ಳಿಯ ಹುಡುಗಿಯೊಬ್ಬಳು ಅಂತಹ ಸಾಹಸ ಮಾಡಿದ್ದು, ಒಂದಲ್ಲ ಮೂರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಈಗ ಐಎಎಸ್‌ ಅಧಿಕಾರಿಯಾಗಬೇಕು ಎಂಬ ಮಹದಾಸೆಯೊಂದಿಗೆ ಅದರತ್ತ ಕಣ್ಣು ನೆಟ್ಟು ಪರಿಶ್ರಮಿಸುತ್ತಿದ್ದಾರೆ. ಅವರ ಸಾಧನೆಯ ಹಾದಿ ಆ ರೀತಿ ಪ್ರಯತ್ನಿಸುತ್ತಿರುವ ಇತರರಿಗೂ ಪ್ರೇರಣೆಯಾದೀತು. ಇಲ್ಲಿದೆ ಹಳ್ಳಿ ಹುಡುಗಿಯ ಸಾಧನಾ ಪಥದ ವಿವರ.

ತೆಲಂಗಾಣದ ಈ ಹಳ್ಳಿ ಹುಡುಗಿಗೆ ಸಿಕ್ಕಿದೆ 3 ಸರ್ಕಾರಿ ಉದ್ಯೋಗ

ಹಳ್ಳಿ ಹುಡುಗಿಯೊಬ್ಬಳು ಮೂರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ಭೋಗಿ ಸಮ್ಮಕ್ಕ ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ದಮ್ಮಪೇಟ ಗ್ರಾಮದ ನಿವಾಸಿ. ತಮ್ಮ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾರೆ. ಸಮ್ಮಕ್ಕ ಅವರ ಮುಂದಿನ ಗುರಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗುವುದು. ಈ ಉನ್ನತ ಗುರಿಯೊಂದಿಗೆ ಅವರ ಪ್ರಯತ್ನಗಳು ಮುಂದುವರೆದಿದೆ.

‘ಮನೆಯಲ್ಲಿಯೇ ಕುಳಿತು ತಯಾರಿ ನಡೆಸಿ ಈ ಮೂರು ಕೆಲಸಗಳನ್ನು ಸಾಧಿಸಿದ್ದೇನೆ. ನಾನು ಯಾವುದೇ ಸಂಸ್ಥೆಯಿಂದ ಕೋಚಿಂಗ್ ತೆಗೆದುಕೊಂಡಿಲ್ಲ. ಸರ್ಕಾರಿ ನೌಕರಿ ಪಡೆಯಲು ಕೋಚಿಂಗ್ ಅಗತ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ, ಹಾಗಲ್ಲ. ಅಧ್ಯಯನವು ಮುಖ್ಯ. ಮನೆಯಲ್ಲಿಯೇ ಕುಳಿತು ಚೆನ್ನಾಗಿ ತಯಾರಿ ಮಾಡಬಹುದು ಎಂಬುದನ್ನು ನಿರೂಪಿಸಿದ್ದೇನೆ ಎಂದು ಸಮ್ಮಕ್ಕ ಎಎನ್‌ಐ ಪ್ರತಿನಿಧಿಗೆ ತಿಳಿಸಿದ್ದಾರೆ.

ತೆಲಂಗಾಣದ ಭೋಗಿ ಸಮ್ಮಕ್ಕ ಯಾರು; ಆಕೆಯ ಹಿನ್ನೆಲೆ ಏನು

'ನನ್ನ ತಾಯಿಯ ಹೆಸರು ಭೋಗಿ ರಮಣ ಮತ್ತು ನನ್ನ ತಂದೆಯ ಹೆಸರು ಭೋಗಿ ಸತ್ಯಂ. ನನ್ನ ತಂದೆ ಕಾರ್ಮಿಕರು ಮತ್ತು ನನ್ನ ತಾಯಿ ಅಂಗನವಾಡಿಯಲ್ಲಿ ಕಲಿಸುತ್ತಾರೆ. ನಾನು ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಆಯೋಗದಿಂದ (ಟಿಜಿಪಿಎಸ್‌ಸಿ) ಇಂಗ್ಲಿಷ್ ಜೂನಿಯರ್ ಉಪನ್ಯಾಸಕಳಾಗಿ ಆಯ್ಕೆಯಾದೆ. ತೆಲಂಗಾಣ ರಾಜ್ಯ ಪೊಲೀಸ್ ನೇಮಕಾತಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ ನಾನು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾದೆ. ಟಿಜಿಪಿಎಸ್‌ಸಿಯ ಗ್ರೂಪ್ IVರ ಪರೀಕ್ಷೆಯಲ್ಲಿ ಉತ್ತೀರ್ಣಳಾದ ನಂತರ, ಜೂನಿಯರ್ ಸಹಾಯಕಳಾಗಿಯೂ ಆಯ್ಕೆಯಾದೆ. ಈಗ ನನ್ನ ಐಎಎಸ್‌ನ ಕನಸು ನನಸು ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ ಎಂದು ಸಮ್ಮಕ್ಕ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪೂರೈಸಿದೆ. ಗ್ರಾಮದ ಸಮೀಪದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ಮತ್ತು ಪದವಿ ಪೂರ್ವ ಶಿಕ್ಷಣ ಮುಗಿಸಿದೆ. ಅದಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದೆ ಎಂದು ಹೇಳಿದ ಸಮ್ಮಕ್ಕ, 'ಡಿಗ್ರಿ ಮುಗಿಸಿ ಊರಿಗೆ ಮರಳಿದೆ. ಅಜ್ಜಿಯ ಮನೆಯಲ್ಲಿದ್ದ ಪ್ರತ್ಯೇಕ ಕೋಣೆಯನ್ನು ನನ್ನ ಓದಿಗಾಗಿ ಆರಿಸಿಕೊಂಡೆ. ಈ ಕೋಣೆಯಲ್ಲಿ ಉಳಿದುಕೊಂಡು ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಮತ್ತು ನನಗೆ ತುಂಬಾ ಖುಷಿಯಾಗಿದೆ. ಆದರೆ, ನನ್ನ ಗಮ್ಯಸ್ಥಾನ ಇನ್ನೂ ದೂರವಿದೆ ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ. ಐಎಎಸ್ ಅಧಿಕಾರಿಯಾದ ನಂತರವೇ ನನ್ನ ತಯಾರಿ ಸಾರ್ಥಕವಾಗಲಿದೆ ಎಂದು ತೆಲಂಗಾಣದ ಸಮ್ಮಕ್ಕ ಭರವಸೆಯೊಂದಿಗೆ ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.