Earthquake: ಮತ್ತೆ ನೇಪಾಳದಲ್ಲಿ ಪ್ರಬಲ ಭೂಕಂಪ; ದೆಹಲಿಯಲ್ಲೂ ಮತ್ತೆ ಕಂಪನದ ಅನುಭವ, ಆತಂಕದಲ್ಲಿ ಜನರು
ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ಎನ್ಸಿಎಸ್ ಹೇಳಿದೆ. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಹಲವೆಡೆ ಪೀಠೋಪಕರಣಗಳು ಜೋರಾಗಿ ಅಲುಗಾಡಿವೆ. ಮೂರು ದಿನದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ.
ಈಗಾಗಲೇ ಭೂಕಂಪದಿಂದಾಗಿ 153 ಜನರು ಸಾವನ್ನಪ್ಪಿರುವ ನೇಪಾಳದಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ಈ ಬಾರಿಯೂ ಕೂಡ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ನೇಪಾಳದಲ್ಲಿ ಇಂದು ಮಧ್ಯಾಹ್ನ 2:16ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ.
ಉತ್ತರ ಪ್ರದೇಶದ ಅಯೋಧ್ಯೆಯ ಉತ್ತರಕ್ಕೆ 233 ಕಿಲೋಮೀಟರ್ ದೂರದಲ್ಲಿ 10 ಕಿಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ ಎಂದು ಎನ್ಸಿಎಸ್ ಹೇಳಿದೆ. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಹಲವೆಡೆ ಪೀಠೋಪಕರಣಗಳು ಜೋರಾಗಿ ಅಲುಗಾಡಿವೆ. ಮೂರು ದಿನದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿದ್ದಾರೆ.
ನವೆಂಬರ್ 3 ರಂಧು ಮಧ್ಯರಾತ್ರಿ ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪವಾಗಿದ್ದು, 153 ಮಂದಿ ಮೃತಪಟ್ಟಿದ್ದರು. ಭೂಕಂಪದ ಕೇಂದ್ರ ಬಿಂದು ದಾಖಲಾದ ಜಾಜರಕೋಟ್ ಜಿಲ್ಲೆಯಲ್ಲಿಯೇ 100 ಮಂದಿ ಮೃತಪಟಿದ್ದಾರೆ. 8 ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ್ದು, ಸುಮಾರು 8 ಸಾವಿರ ಮನೆಗಳು ಧ್ವಂಸವಾಗಿವೆ.
ನೂರಾರು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದು ನೇಪಾಳದಲ್ಲಿನ ಭೂಕಂಪಕ್ಕೆ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು.
ಬೀದರ್ನಲ್ಲಿ ಭೂಕಂಪ
ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಇಂದು ಮುಂಜಾನೆ (ನ.6 ಸೋಮವಾರ) ಎರಡು ಬಾರಿ ಲಘು ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 1.9 ಮತ್ತು 2.1ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ಬೀದರ್ ಜಿಲ್ಲೆಯ ಮದರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಕೇರಾ ಗ್ರಾಮದಲ್ಲಿ ಮೊದಲು 1.9 ತೀವ್ರತೆಯ ಭೂಕಂಪನವಾಗಿದೆ. ಎರಡು ಗಂಟೆಗಳ ನಂತರ, ಅದೇ ಸ್ಥಳದಲ್ಲಿ 2.1 ತೀವ್ರತೆಯ ಮತ್ತೊಂದು ಕಂಪನವಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ.