Baltimore Bridge Collapse: ಅಮೆರಿಕದಲ್ಲಿ ಭೀಕರ ದುರಂತ; ಹಡುಗು ಡಿಕ್ಕಿಯಾಗಿ ನದಿಗೆ ಕುಸಿದ ಬಾಲ್ಟಿಮೋರ್ ಸೇತುವೆ, ಹಲವರ ಸಾವಿನ ಶಂಕೆ-international news baltimore bridge collapsed in america many people are suspected to death rmy ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Baltimore Bridge Collapse: ಅಮೆರಿಕದಲ್ಲಿ ಭೀಕರ ದುರಂತ; ಹಡುಗು ಡಿಕ್ಕಿಯಾಗಿ ನದಿಗೆ ಕುಸಿದ ಬಾಲ್ಟಿಮೋರ್ ಸೇತುವೆ, ಹಲವರ ಸಾವಿನ ಶಂಕೆ

Baltimore Bridge Collapse: ಅಮೆರಿಕದಲ್ಲಿ ಭೀಕರ ದುರಂತ; ಹಡುಗು ಡಿಕ್ಕಿಯಾಗಿ ನದಿಗೆ ಕುಸಿದ ಬಾಲ್ಟಿಮೋರ್ ಸೇತುವೆ, ಹಲವರ ಸಾವಿನ ಶಂಕೆ

ಸರಕು ತುಂಬಿದ್ದ ಹಡುಗು ಡಿಕ್ಕಿಯಾಗಿ ಸೇತುವೆ ನದಿಗೆ ಕುಸಿದು ಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ದುರಂತದಲ್ಲಿ ಹಲವರು ಸಾವನ್ನಪ್ಪಿರುವ ಶಂಕೆ ಇದೆ. ಬಾಲ್ಟಿಮೋರ ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಕುಸಿತದ ವಿಡಿಯೊ ವೈರಲ್ ಆಗಿದೆ.

ಅಮೆರಿಕದಲ್ಲಿ ಬಾಲ್ಟಿಮೋರ್ ಸೇತುವೆ ಕುಸಿಯುತ್ತಿರುವ ದೃಶ್ಯ.
ಅಮೆರಿಕದಲ್ಲಿ ಬಾಲ್ಟಿಮೋರ್ ಸೇತುವೆ ಕುಸಿಯುತ್ತಿರುವ ದೃಶ್ಯ.

ನ್ಯೂಯಾರ್ಕ್: ಅಮೆರಿಕಾದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸರಕು ತುಂಬಿದ್ದ ಹಡಗು ಸೇತುವೆಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಗಾತ್ರದ ಸೇತುವೆ ನದಿಗೆ ಕುಸಿದು ಬಿದ್ದಿರುವ ಘಟನೆ ಬಾಲ್ಟಿಮೋರ್‌ನಲ್ಲಿ ಸಂಭವಿಸಿದೆ. ಹಡಗಿನಲ್ಲಿದ್ದ ಕೆಲವರು ಸೇತುವೆಯ ಅವಶೇಷಗಳಡಿ ಸಿಲುಕಿದ್ದು, ಸಾವಿನ ಶಂಕೆ ವ್ಯಕ್ತವಾಗಿದೆ. ಇಂದು (ಮಾರ್ಚ್ 26, ಮಂಗಳವಾರ) ಮುಂಜಾನೆ 1.30ಕ್ಕೆ ಈ ದುರಂತ ಸಂಭವಿಸಿದೆ. ಹಡಗಿನಲ್ಲಿದ್ದ 22 ಮಂದಿ ಸಿಬ್ಬಂದಿ ಭಾರತೀಯರು ಎಂದು ವರದಿಯಾಗಿದೆ. ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ 3 ಕಿ.ಮೀ ಉದ್ದವಿದೆ. ಇದು ಐ -95 ಅಂತಾರಾಜ್ಯದ ಭಾಗವಾಗಿದೆ. ಯುಎಸ್‌ನ ಪೂರ್ವ ಕರಾವಳಿಯ ಮುಖ್ಯ ಉತ್ತರ-ದಕ್ಷಿಣ ಹೆದ್ದಾರಿಯಾಗಿದ್ದು, ಮಿಯಾಮಿ, ಫ್ಲೋರಿಡಾದಿಂದ ಮೈನೆವರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಹಡಗು ಡಿಕ್ಕಿಯ ಬಳಿಕ ಸೇತುವೆ ಕುಸಿದು ಬೀಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ ಹೊಡೆದ ನಂತರ ಕುಸಿದು, ಪಟಾಪ್ಸ್ಕೊ ನದಿಗೆ ಬಿದ್ದಿತು. "ಐ -695 ಕೀ ಸೇತುವೆಯಲ್ಲಿ ನಡೆದ ಘಟನೆಗಾಗಿ ಎಲ್ಲಾ ಪಥಗಳು ಎರಡೂ ದಿಕ್ಕುಗಳನ್ನು ಮುಚ್ಚಿವೆ. ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ" ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಘಟನೆಯ ಬಳಿಕ ಸಂಚಾರ ಹಠಾತ್ತನೆ ಸ್ಥಗಿತಗೊಂಡಿತು. ವಾಹನಗಳನ್ನು ಬೇರೆ ಕಡೆಗೆ ತಿರುಗಿಸಲಾಗಿದೆ. ಕೋಸ್ಟ್ ಗಾರ್ಡ್ ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವಾರು ಏಜೆನ್ಸಿಗಳು ಸಾವು ನೋವಿನ ಮಾಹಿತಿಯನ್ನು ವರದಿ ಮಾಡಿವೆ. ಬಾಲ್ಟಿಮೋರ್ ನಗರದ ಅಗ್ನಿಶಾಮಕ ಇಲಾಖೆಯ ವಕ್ತಾರರು ಸೇತುವೆ ಕುಸಿತದಿಂದ ಸಾವು ನೋವು ಸಂಭವಿಸಿದೆ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಬಾಲ್ಟಿಮೋರ್ ಸೇತುವೆ ಕುಸಿದ 7 ಜನರು ಹಾಗೂ ಹಲವಾರು ವಾಹನಗಳು ನದಿಗೆ ಬಿದ್ದಿವೆ ಎಂದು ಬಾಲ್ಟಿಮೋರ್ ನಗರ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಚೀಫ್ ಕೆವಿನ್ ಕಾರ್ಟ್ರೈಟ್ ಬಿಬಿಸಿಗೆ ದೃಢಪಡಿಸಿದ್ದಾರೆ. ಶೀಪ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಯುಎಸ್ ಕೋಸ್ಟ್ ಗಾರ್ಡ್, ಅಗ್ನಿಶಾಮಕ ಇಲಾಖೆ ಹಾಗೂ ಮೇರಿಲ್ಯಾಂಡ್ ಇತರೆ ಏಜೆನ್ಸಿಗಳು ಸಹಕರಿಸುತ್ತಿದೆ ಎಂದು ಹೇಳಿದ್ದಾರೆ.

ಬಾಲ್ಟಿಮೋರ್ ಮೇಯರ್ ಬ್ರಾಂಡನ್ ಸ್ಕಾಟ್ ಅವರು ದುರಂತದ ಬಗ್ಗೆ ಮಾತನಾಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ತುರ್ತು ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದಾರೆ. ರಕ್ಷಣಾ ಕಾರ್ಯಗಳು ಮುಂದುವರಿದಿವೆ ಎಂದು ವಿವವರಿಸಿದ್ದಾರೆ. ಮತ್ತೊಂದೆಡೆ ಬಾಲ್ಟಿಮೋರ್ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಸೇತುವೆ ಕುಸಿದ ನಂತರ ಕೆಲವು ಕಾರ್ಮಿಕರು ನೀರಿನಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಬಾಲ್ಟಿಮೋರ್ ನಗರ ಪೊಲೀಸರು ತಿಳಿಸಿದ್ದಾರೆ.

ಬಾಲ್ಟಿಮೋರ್ ಕೌಂಟಿ ಕಾರ್ಯನಿರ್ವಾಹಕ ಜಾನಿ ಓಲ್ಸ್ಜಿವಿಸ್ಕಿ ಜೂನಿಯರ್, ತುರ್ತು ಕಾರ್ಯಾಚರಣೆ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಹಾಗೂ ಮೇಯರ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ದುರಂತದಲ್ಲಿ ಸಿಲುಕಿರುವವರಿಗಾಗಿ ಪ್ರಾರ್ಥಿಸಿ ಎಂದಿದ್ದಾರೆ.

ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಸೇತುವೆ ಕುಸಿದ ದುರಂತದಲ್ಲಿ ಓರ್ವ ಮೃತಪಟ್ಟಿದ್ದಾನೆಂದು ವರದಿಯಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.